ಜಿಲ್ಲಾ ಕೇಂದ್ರಗಳಲ್ಲೇ ದ್ವಿತೀಯ ಪಿಯುಸಿ ಇಂಗ್ಲಿಷ್‌ ಮೌಲ್ಯಮಾಪನ


Team Udayavani, Jun 16, 2020, 7:39 AM IST

pu centres

ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್‌ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ವಿಕೇಂದ್ರಿತ ವ್ಯವಸ್ಥೆ ಮೂಲಕ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್‌ 19 ಹಿನ್ನೆಲೆ ದ್ವಿತೀಯ ಪಿಯುಸಿ ಮೌಲ್ಯಮಾಪನವನ್ನು ಜಿಲ್ಲಾ ಹಂತದಲ್ಲೇ ನಡೆಸಲು ಉಪನ್ಯಾಸಕರು, ಪ್ರಾಚಾರ್ಯರು ಆಗ್ರಹಿಸಿದ್ದರು. ಆದರೆ, ಸರ್ಕಾರ, ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇಂಗ್ಲಿಷ್‌ ಹೊರತುಪಡಿಸಿ ಬೇರೆಲ್ಲ ಪರೀಕ್ಷೆಮುಗಿದಿದ್ದು, ಮೌಲ್ಯಮಾಪನ  ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.

ಜೂ.18ರಂದು ಇಂಗ್ಲಿಷ್‌ ಪರೀಕ್ಷೆ ನಡೆಯಲಿದ್ದು, ಈ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ಜಿಲ್ಲಾ ಕೇಂದ್ರ ಗಳಲ್ಲೇ ನಡೆಸಲು ಇಲಾಖೆ ನಿರ್ದೇಶಿಸಿದೆ. ವಿಕೇಂದ್ರಿಕರಣಗೊಳಿಸಿದ್ದರೂ,  ಎಲ್ಲಾ ಜಿಲ್ಲೆಗೆ ಹಂಚಿಕೆ ಮಾಡಿಲ್ಲ. ಬೆಂ.ಉತ್ತರ, ಚಿಕ್ಕಬಳ್ಳಾಪುರ, ತುಮಕೂರಿನ ಉತ್ತರ ಪತ್ರಿಕೆ ಗಳ ಮೌಲ್ಯಮಾಪನ ಬೆಂಗಳೂರಿನಲ್ಲಿ ನಡೆ ಯಲಿದೆ. ಬೆಂ. ಗ್ರಾಮಾಂತರ, ಕೋಲಾರ, ಮಂಡ್ಯದ ಉತ್ತರ ಪತ್ರಿಕೆಗಳ ಮೌಲ್ಯಮಾಪ‌ನವೂ ಬೆಂಗಳೂರಿನ ಇನ್ನೊಂದು ಮೌಲ್ಯಮಾಪನ ಕೇಂದ್ರದಲ್ಲಿ ನಡೆಯಲಿದೆ.

ಹಾವೇರಿ ಮತ್ತು ಚಿಕ್ಕಮಗಳೂರಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದಾವಣಗೆರೆ ಯಲ್ಲಿ ನಡೆಯಲಿದೆ. ಧಾರವಾಡ ಮತ್ತು ರಾಯಚೂರಿನ ಉತ್ತರ ಪತ್ರಿಕೆ ಮೌಲ್ಯಮಾಪ‌ನ ಬೆಳಗಾವಿಯಲ್ಲಿ ನಡೆಯಲಿದೆ. ವಿಜಯಪುರದ ಮೌಲ್ಯಮಾಪನ ಕಲಬುರ ಗಿಯಲ್ಲಿ, ಬಾಗಲಕೋಟೆ ಉತ್ತರ ಪತ್ರಿಕೆ ಮೌಲ್ಯಮಾಪನ ವಿಜಯಪುರದಲ್ಲಿ, ಬೆಳ ಗಾವಿ ಉತ್ತರ ಪತ್ರಿಕೆ ಮೌಲ್ಯಮಾಪನ ಧಾರವಾಡದಲ್ಲಿ,  ಮೈಸೂರು ಮತ್ತು ಕೊಡಗಿನ ಉತ್ತರ ಪತ್ರಿಕೆ ಮೌಲ್ಯಮಾಪನ ಮಂಗಳೂರಿ ನಲ್ಲಿ, ಹಾಸನ, ಉಡುಪಿ, ರಾಮನಗರದ ಉತ್ತರ ಪತ್ರಿಕೆ ಮೌಲ್ಯಮಾಪನ ಮೈಸೂರಿ ನಲ್ಲಿ, ಚಿತ್ರದುರ್ಗದ ಉತ್ತರ ಪತ್ರಿಕೆ ಮೌಲ್ಯಮಾಪ ‌ನ ಬಳ್ಳಾರಿಯಲ್ಲಿ  ನಡೆಯಲಿದೆ.

ಕಲಬುರಗಿ ಮತ್ತು ಬೀದರ್‌ನ ಉತ್ತರ ಪತ್ರಿಕೆ ಮೌಲ್ಯಮಾಪನ ರಾಯಚೂರಿನಲ್ಲಿ, ಶಿವಮೊಗ್ಗದ ಉತ್ತರ ಪತ್ರಿಕೆ ಮೌಲ್ಯಮಾಪನ ಉತ್ತರ ಕನ್ನಡದಲ್ಲಿ, ಮಂಗಳೂರು ಮತ್ತು ಚಾಮರಾಜನಗರ ಉತ್ತರ ಪತ್ರಿಕೆ ಮೌಲ್ಯಮಾಪ‌ನ ಹಾಸನದಲ್ಲಿ, ಬೆಂಗಳೂರು ದಕ್ಷಿಣದ ಉತ್ತರ ಪತ್ರಿಕೆ ಮೌಲ್ಯಮಾಪನ ತುಮ ಕೂರಿನಲ್ಲಿ, ಕಾರವಾರದ ಮೌಲ್ಯಮಾಪನ ಹಾವೇರಿಯಲ್ಲಿ, ಚಿಕ್ಕೋಡಿ ಮತ್ತು ಗದಗದ ಉತ್ತರ ಪತ್ರಿಕೆ ಮೌಲ್ಯಮಾಪನ ಬಾಗಲ ಕೋಟೆಯಲ್ಲಿ, ಕೊಪ್ಪಳದ  ಉತ್ತರ ಪತ್ರಿಕೆ ಮೌಲ್ಯಮಾಪನ ಗದಗದಲ್ಲಿ, ಯಾದಗಿರಿ ಉತ್ತರ ಪತ್ರಿಕೆ ಮೌಲ್ಯಮಾಪನ ಬೀದರ್‌ ನಲ್ಲಿ,

ಬಳ್ಳಾರಿಯ ಉತ್ತರ ಪತ್ರಿಕೆ ಮೌಲ್ಯಮಾಪ‌ನ ಚಿತ್ರದುರ್ಗದಲ್ಲಿ ಹಾಗೂ ದಾವಣ ಗೆರೆ ಮೌಲ್ಯಮಾಪನ ಶಿವಮೊಗ್ಗದಲ್ಲಿ ನಡೆಯಲಿದೆ  ಎಂದು ಪಿಯು ಇಲಾಖೆ ತಿಳಿಸಿದೆ. ಪರೀಕ್ಷೆ ಮುಗಿದ ನಂತರವೇ ಉತ್ತರ ಪತ್ರಿಕೆಗಳ ಬಂಡಲುಗಳು ಸುರಕ್ಷಿತವಾಗಿ ಆಯಾ ಜಿಲ್ಲೆಗಳಿಗೆ ಕಳುಹಿಸುವ ಬಗ್ಗೆ ಮತ್ತು ಅದನ್ನು ಅತ್ಯಂತ ಸುರಕ್ಷಿತ ರೀತಿಯಲ್ಲಿ ಮೌಲ್ಯಮಾಪನ ಕೇಂದ್ರಕ್ಕೆ  ಕೊಂಡೊಯ್ಯುವ ಕುರಿತು ಆಯಾ ಜಿಲ್ಲಾ ಉಪನಿರ್ದೇಶಕರಿಗೆ ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಇಲಾಖೆ ಸೂಚನೆ ಹೊರಡಿಸಿದೆ.

ಟಾಪ್ ನ್ಯೂಸ್

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqeqw

Kushtagi:ಬಹಿರ್ದೆಸೆಗೆ ಕುಳಿತ ಇಬ್ಬರ ಬಲಿ ಪಡೆದ ಶೌಚಾಲಯದ ಗೋಡೆ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

1-eewewqe

Attack; ಹಾರ ಹಾಕುವ ನೆಪದಲ್ಲಿ ಕೈ ಅಭ್ಯರ್ಥಿ ಕನ್ಹಯ್ಯ ಮೇಲೆ ದಾಳಿ!

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.