69 ಜನರಿಗೆ ಸೋಂಕು; 37 ಗುಣಮುಖ

ಸೋಂಕಿತರ ಸಂಖ್ಯೆ 319ಕ್ಕೇರಿಕೆ ಜಿಂದಾಲ್‌ನಲ್ಲಿ 178ಕ್ಕೇರಿಕೆಜಿಲ್ಲೆಯಲ್ಲಿ 225 ಪ್ರಕರಣಗಳು ಸಕ್ರಿಯ

Team Udayavani, Jun 18, 2020, 12:49 PM IST

18-June-10

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್‌ ಕಾರ್ಖಾನೆಯ 30ಸೇರಿ ಒಂದೇ ದಿನ 69 ಕೋವಿಡ್‌ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 319ಕ್ಕೆ ಏರಿಕೆಯಾಗಿದೆ. ಇದು ಒಂದೆಡೆ ಜನರಲ್ಲಿ ಆತಂಕ ಮೂಡಿಸಿದರೆ ಮತ್ತೊಂದೆಡೆ ಸೋಂಕಿನಿಂದ ಗುಣಮುಖರಾದ 37 ಜನರು ಬಿಡುಗಡೆಯಾಗಿರುವುದು ಕೊಂಚಮಟ್ಟಿಗೆ ಸಮಾಧಾನ ಮೂಡಿಸಿದೆ.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಜೂ. 16ರಂದು 30 ಸೋಂಕು ಪತ್ತೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಜೂ. 17ರಂದು ಬುಧವಾರ ಒಂದೇ ದಿನ 69 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 30 ಸೋಂಕಿತರು ಜಿಂದಾಲ್‌ ಕಾರ್ಖಾನೆ ನೌಕರರರಾಗಿದ್ದು, ಈ ಮೂಲಕ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ 172ಕ್ಕೆ ಏರಿಕೆಯಾಗಿದೆ. ಸೋಂಕಿತರ ಪ್ರಥಮ ಸಂಪರ್ಕ ಹೊಂದಿದ್ದ 722, ದ್ವಿತೀಯ ಸಂಪರ್ಕ ಹೊಂದಿದ್ದ 269 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಬುಧವಾರ ಪತ್ತೆಯಾದ 69 ಪ್ರಕರಣಗಳ ಪೈಕಿ ಸಂಡೂರು ತಾಲೂಕು ಒಂದರಲ್ಲೇ 41 ಪಾಸಿಟಿವ್‌ ಪತ್ತೆಯಾಗಿದ್ದು, ಬಳ್ಳಾರಿಯಲ್ಲಿ 18, ಹಗರಿಹೊಮ್ಮನಹಳ್ಳಿಯಲ್ಲಿ 5, ಹೊಸಪೇಟೆಯಲ್ಲಿ 1, ನೆರೆಯ ಆಂಧ್ರ ಪ್ರದೇಶದಿಂದ ಹಿಂದುರುಗಿದ್ದ 4 ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಂದಾಲ್‌ ಕಾರ್ಖಾನೆಯೊಂದರಲ್ಲೇ ಸೋಂಕಿತರ ಸಂಖ್ಯೆ 176ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 319ಕ್ಕೆ ಹೆಚ್ಚಳವಾಗಿದೆ.

37 ಜನರು ಬಿಡುಗಡೆ: ನಗರದ ಕೋವಿಡ್‌ (ಜಿಲ್ಲಾ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 37 ಜನರು ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಬಿಡುಗಡೆಗೊಳಿಸಲಾಯಿತು. ಈ ಮೂಲಕ ಗುಣಮುಖರಾದವರ ಸಂಖ್ಯೆ 92ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 225ಕ್ಕೆ ಇಳಿಕೆಯಾಗಿದೆ. ಬಿಡುಗಡೆಯಾದವರಲ್ಲಿ ಬಹುತೇಕರು ಜಿಂದಾಲ್‌ ನೌಕರರಾಗಿರುವುದು ವಿಶೇಷ.

31 ವರ್ಷದ ಪುರುಷ ಪಿ-5378 ಮೂಲತಃ ಎಂ.ಎಂ.ಹಳ್ಳಿ, 30 ವರ್ಷದ ಮಹಿಳೆ ಪಿ-5579 ಮೂಲತಃ ತಾಳೂರು ಗ್ರಾಮ, 21 ವರ್ಷದ ಯುವತಿ ಪಿ-6433 ಮೂಲತಃ ಹರಗಿನಡೋಣಿ, 51 ವರ್ಷದ ವ್ಯಕ್ತಿ ಪಿ-6439, 26 ವರ್ಷದ ಪಿ-6455 ಮೂಲತಃ ಹಗರಿಬೊಮ್ಮನಹಳ್ಳಿ, 29 ವರ್ಷದ ಪಿ-6466 ಮೂಲತಃ ಹೊಸಪೇಟೆಯ ಟಿ.ಬಿ ಡ್ಯಾಂ. ನಿವಾಸಿ, 32ವರ್ಷದ ಮಹಿಳೆ ಪಿ-6445 ಮೂಲತಃ ಬಳ್ಳಾರಿ ನಗರದ ಎಸ್‌.ಪಿ. ವೃತ್ತ, 63 ವರ್ಷದ ಮಹಿಳೆ ಪಿ-6497, 40 ವರ್ಷದ ಪಿ-6503, 10 ವರ್ಷದ ಬಾಲಕ ಪಿ-6504 ಇವರು ಮೂಲತಃ ಬಳ್ಳಾರಿ ನಗರದ ಶಂಕರ್‌ ಕಾಲೋನಿ ನಿವಾಸಿ. 38 ವರ್ಷದ ಮಹಿಳೆ ಪಿ-6421, 15 ವರ್ಷ ಮಗು ಪಿ-6422, 35 ವರ್ಷದ ವ್ಯಕ್ತಿ ಪಿ-6442 ಇವರು ಬಳ್ಳಾರಿಯ ಕೌಲ್‌ಬಜಾರ್‌ ಪ್ರದೇಶ ನಿವಾಸಿ. 25 ವರ್ಷದ ಯುವಕ ಪಿ-5957, 35 ವರ್ಷ ಪುರುಷ ಪಿ-4184, 32 ವರ್ಷದ ಪುರುಷ ಪಿ-6423, 22 ವರ್ಷದ ಯುವಕ ಪಿ-6425, 40 ವರ್ಷದ ವ್ಯಕ್ತಿ ಪಿ-6428, 41 ವರ್ಷದ ವ್ಯಕ್ತಿ ಪಿ-6429, 27 ವರ್ಷದ ಯುವಕ ಪಿ-6434, 32 ವರ್ಷದ ವ್ಯಕ್ತಿ ಪಿ-6436, 44 ವರ್ಷದ ವ್ಯಕ್ತಿ ಪಿ-6448, 32 ವರ್ಷದ ವ್ಯಕ್ತಿ ಪಿ-6449, 32 ವರ್ಷದ ವ್ಯಕ್ತಿ ಪಿ-6450, 50 ವರ್ಷದ ವ್ಯಕ್ತಿ ಪಿ-6451, 29 ವರ್ಷದ ಯುವಕ ಪಿ-6459, 31 ವರ್ಷದ ಯುವಕ ಪಿ-6462, 25 ವರ್ಷದ ಯುವಕ ಪಿ-6463, 47 ವರ್ಷದ ವ್ಯಕ್ತಿ ಪಿ-6464, 43 ವರ್ಷದ ವ್ಯಕ್ತಿ ಪಿ-6469, 31 ವರ್ಷದ ವ್ಯಕ್ತಿ ಪಿ-6470, 23 ವರ್ಷದ ಯುವಕ ಪಿ-6473, 24 ವರ್ಷದ ಯುವಕ ಪಿ-6474, 36 ವರ್ಷದ ವ್ಯಕ್ತಿ ಪಿ-6480, 20 ವರ್ಷದ ಯುವತಿ ಪಿ-6488, 30 ವರ್ಷದ ಪುರುಷ ಪಿ-6492, 18 ವರ್ಷದ ಯುವಕ ಪಿ-6502 ಇವರು ತೋರಣಗಲ್ಲು ನಿವಾಸಿಯಾಗಿದ್ದಾರೆ.

ಇವರೆಲ್ಲರೂ ಗುಣಮುಖರಾದ ಹಿನ್ನೆಲೆಯಲ್ಲಿ ಜಿಲ್ಲಾಶಸ್ತ್ರಚಿಕಿತ್ಸಕ ಡಾ| ಎನ್‌. ಬಸಾರೆಡ್ಡಿಯವರು, ಹೂವು, ಹಣ್ಣು ಮತ್ತು ಕಂದಾಯ ಇಲಾಖೆಯಿಂದ ಪಡಿತರ ಕಿಟ್‌ ಗಳನ್ನು ನೀಡಿ ಚಪ್ಪಾಳೆ ತಟ್ಟಿ ಅಂಬ್ಯುಲೆನ್ಸ್ ನಲ್ಲಿ ಮನೆಗೆ ಕಳುಹಿಸಿಕೊಟ್ಟರು. ಬಳಿಕ ಗುಣಮುಖರಾದವರನ್ನು ಉದ್ದೇಶಿಸಿ ಬಸಾರೆಡ್ಡಿಯವರು ಮಾತನಾಡಿದರು. ಗುಣಮುಖರಾಗಿ ಹೊರಬಂದವರಲ್ಲಿ ಕೆಲವರು ಮಾತನಾಡಿದರು. ಈ ವೇಲೆ ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಈಶ್ವರ್‌ ದಾಸಪ್ಪನವರ್‌ ಸ್ವಾಗತಿಸಿ, ವಂದಿಸಿದರು.

ಕೋವಿಡ್‌ ನೋಡಲ್‌ ಅಧಿಕಾರಿ ಡಾ| ದೈವಿಕ್‌, ಹಿರಿಯ ತಜ್ಞರಾದ ಡಾ| ಪ್ರಕಾಶ್‌ ಭಾಗವತಿ, ಡಾ| ಉದಯ್‌ ಶಂಕರ್‌, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ| ಚಿತ್ರಶೇಖರ ಸೇರಿದಂತೆ ಲ್ಯಾಬ್‌ ಟೆಕ್ನಿಷಿಯನ್ಸ್‌, ಎಕ್ಸ್‌-ರೇ, ಡಿ-ಗ್ರೂಪ್‌ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರ ಸಿಬ್ಬಂದಿಗಳು ಇದ್ದರು.

ಟಾಪ್ ನ್ಯೂಸ್

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.