ಕಡಬ: ರಸ್ತೆಯಲ್ಲಿಯೇ ಹರಿದ ಮಳೆನೀರು
Team Udayavani, Jun 22, 2020, 5:37 AM IST
ಕಡಬ: ಇಲ್ಲಿನ ಕಾಲೇಜು ರಸ್ತೆ ಅಡ್ಡಗದ್ದೆ ಪ್ರದೇಶದಲ್ಲಿ ರವಿವಾರ ಸಂಜೆ ಸುರಿದ ಭಾರೀ ಮಳೆಗೆ ಮಳೆನೀರು ರಸ್ತೆಯಲ್ಲಿಯೇ ಹರಿದು ಸ್ಥಳೀಯರು ತೊಂದರೆ ಅನುಭವಿಸುವಂತಾಯಿತು.
ಚರಂಡಿ ನಿರ್ವಹಣೆ ಮಾಡದ ಕಾರಣ ಮಳೆನೀರು ಹರಿದು ಹೋಗಲು ತಡೆಯುಂಟಾಗಿ ಕೆಲವು ಕಡೆ ರಸ್ತೆ ಪಕ್ಕದ ಮನೆಗಳ ಅಂಗಳಕ್ಕೆ ಮಳೆ ನೀರು ನುಗ್ಗಿತು. ಹಲವು ವರ್ಷಗಳಿಂದ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಸ್ಥಳೀಯಾ ಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ.
ಕೆಲವು ಮಂದಿ ತಮ್ಮ ಮನೆಯ ಮುಂದೆ ಚರಂಡಿ ದುರಸ್ತಿಗೆ ಅಡ್ಡಿಪಡಿಸುತ್ತಿದ್ದಾರೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಚರಂಡಿ ದುರಸ್ತಿಗೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.