ಜಮ್ಮು-ಕಾಶ್ಮೀರ: ಹುರಿಯತ್ ಗೆ ರಾಜೀನಾಮೆ ಘೋಷಿಸಿದ ಪ್ರತ್ಯೇಕತಾವಾದಿ ಗಿಲಾನಿ
ಪ್ರಸ್ತುತ ಹುರಿಯತ್ ಕಾನ್ಫರೆನ್ಸ್ ನ ಪರಿಸ್ಥಿತಿ ಕುರಿತು ಹುರಿಯತ್ ಸದಸ್ಯರಿಗೆ ವಿವರವಾದ ಪತ್ರ
Team Udayavani, Jun 29, 2020, 3:25 PM IST
ನವದೆಹಲಿ:ಜಮ್ಮು-ಕಾಶ್ಮೀರದಲ್ಲಿ ಮಹತ್ತರ ಬೆಳವಣಿಗೆಯೊಂದು ನಡೆದಿದ್ದು, ಕಾಶ್ಮೀರ ಮೂಲದ ಪ್ರತ್ಯೇಕತಾವಾದಿ ಮುಖಂಡ ಅಲಿ ಶಾ ಗಿಲಾನಿ ಸಯ್ಯದ್ (90ವರ್ಷ) ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು, ಹುರಿಯತ್ ನ ಎಲ್ಲಾ ಕಾರ್ಯ ಚಟುವಟಿಕೆಯಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ.
ಪ್ರಕಟಣೆಯಲ್ಲಿ ತಿಳಿಸಿರುವಂತೆ, ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷರಾದ ಜನಾಬ್ ಅಲಿ ಗಿಲಾನಿ ಸಯ್ಯದ್ ಅವರು ಸಂಪೂರ್ಣವಾಗಿ ಅಲ್ ಪಾರ್ಟಿ ಹುರಿಯತ್ ನಿಂದ ಪ್ರತ್ಯೇಕಗೊಂಡಿರುವುದಾಗಿ ಘೋಷಿಸಿದ್ದಾರೆ. ಪ್ರಸ್ತುತ ಹುರಿಯತ್ ಕಾನ್ಫರೆನ್ಸ್ ನ ಪರಿಸ್ಥಿತಿ ಕುರಿತು ಹುರಿಯತ್ ಸದಸ್ಯರಿಗೆ ವಿವರವಾದ ಪತ್ರ ಬರೆದಿರುವುದಾಗಿ ತಿಳಿಸಿದೆ. ಅಲ್ಲದೇ ಹುರಿಯತ್ ನಿಂದ ಸಂಪೂರ್ಣ ಪ್ರತ್ಯೇಕಗೊಂಡಿರುವುದಾಗಿ ಘೋಷಿಸಿದ್ದೇನೆ ಎಂದು ತಿಳಿಸಿದ್ದಾರೆ.
2019ರ ಆಗಸ್ಟ್ ನಿಂದ ಗಿಲಾನಿ ಗೃಹ ಬಂಧನದಲ್ಲಿದ್ದಾರೆ. ಆದರೆ ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ಗಿಲಾನಿ ಅವರಿಂದ ಅಂತರ ಕಾಯ್ದುಕೊಂಡಿತ್ತು. ಈ ಕಾರಣಕ್ಕೆ ಅವರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ.