ನಾಲವಾರ-ವಾಡಿ ವಲಯದಲ್ಲಿ ಹತ್ತಿ ಬಿತ್ತನೆ

ತೊಗರಿಯೂ ಈ ಭಾಗದ ಪ್ರಮುಖ ಬೆಳೆ ನಾಲವಾರ ವಲಯದಲ್ಲಿ 66 ಮಿ.ಮೀ ಮಳೆ

Team Udayavani, Jul 2, 2020, 10:51 AM IST

02-July-02

ವಾಡಿ: ನಾಲವಾರ ವಲಯದ ಕೊಂಚೂರು ಗ್ರಾಮದ ಜಮೀನೊಂದರಲ್ಲಿ ರೈತ ಮಹಿಳೆಯರು ಹತ್ತಿ ಬೀಜವನ್ನು ಭೂಮಿಗೆ ಹಾಕುತ್ತಿರುವುದು.

ವಾಡಿ: ಮುಂಗಾರು ಆರ್ಭಟಿಸಿದ ನಂತರ ನಾಲವಾರ ಹಾಗೂ ವಾಡಿ ವಲಯದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರು ಬಿತ್ತನೆ ಕಾಯಕದಲ್ಲಿ ತೊಡಗಿದ್ದಾರೆ.

ಸನ್ನತಿ ಭೀಮಾ ತೀರದ ಕಪ್ಪು ಭೂಮಿಯ ಸಾಲುಗಳಲ್ಲಿ ಈ ವರ್ಷವೂ ಹತ್ತಿ ಬೀಜವನ್ನೇ ಹೆಚ್ಚಿನ ಪ್ರಮಾಣದಲ್ಲಿ ಉತ್ತುತ್ತಿರುವುದು ಕಂಡುಬಂದಿದೆ. ಉಳಿದಂತೆ ತೊಗರಿ ಈ ಭಾಗದ ಪ್ರಮುಖ ಬೆಳೆಯಾಗಿದೆ. ನಾಲವಾರ ವಲಯದಲ್ಲಿ ಈಗಾಗಲೇ 66 ಎಂ.ಎಂ ಮಳೆಯಾಗಿದೆ. ಸನ್ನತಿ, ರಾಂಪುರಹಳ್ಳಿ, ಮಾರಡಗಿ, ಅಳ್ಳೊಳ್ಳಿ, ಭೀಮನಳ್ಳಿ, ಕೊಲ್ಲೂರು, ಉಳಂಡಗೇರಾ, ಕನಗನಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಭೀಮಾ ನದಿ ಬ್ಯಾರೇಜ್‌ ವ್ಯಾಪ್ತಿಯ ಸನ್ನತಿ ಭೂಮಿಯಂತೂ ಹಸಿರಿನಿಂದ ಆವರಿಸಿ ಮಲೆನಾಡಿನಂತೆ ಕಂಗೊಳಿಸುತ್ತಿವೆ. ಕಳೆದ ಮೂರ್‍ನಾಲ್ಕು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಈಗಾಗಲೇ ಬಿತ್ತಿದ ಬೆಳೆಗೆ ಮತ್ತು ಬಿತ್ತಲಿರುವ ಭೂಮಿಗೂ ಹೆಚ್ಚು ಅನುಕೂಲಕರವಾಗಿದೆ. ಕೋವಿಡ್ ಆತಂಕದಿಂದಾಗಿ ರೈತರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಧಿಕಾರಿಗಳ ಆದೇಶದಂತೆ ನಾಲವಾರ ರೈತ ಸಂಪರ್ಕ ಕೇಂದ್ರ ಸಹಿತ ಕೊಲ್ಲೂರು, ಅಳ್ಳೊಳ್ಳಿ ಮತ್ತು ಭೀಮನಳ್ಳಿ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿರುವುದು ಆಯಾಭಾಗದ ರೈತರಿಗೆ ತುಸು ಅನುಕೂಲವಾಗಿದೆ ಎನ್ನಬಹುದು.

ಸನ್ನತಿ ಭೀಮಾ ನದಿಯಲ್ಲಿ ಬ್ಯಾರೇಜ್‌ ಹಿನ್ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹವಿದ್ದು, ಸನ್ನತಿ ಸೇರಿದಂತೆ ಬನ್ನೇಟಿ, ಕನಗನಹಳ್ಳಿ, ಕೊಲ್ಲೂರು, ಉಳಂಡಗೇರಾ, ತರ್ಕಸ್‌ಪೇಟೆ ಗ್ರಾಮಗಳಲ್ಲಿ ಮಲೆನಾಡು ರೂಪದ ನೀರಾವರಿ ಕೃಷಿ ಭೂಮಿಗಳಿದ್ದು, ಆ ಭಾಗದಲ್ಲಿ ಭತ್ತ ನಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ತೊಗರಿ ಮತ್ತು ಹತ್ತಿ ಬಿತ್ತನೆಯಲ್ಲಿ ತೊಡಗಿರುವ ಒಣ ಭೂಮಿ ರೈತರು ಮೋಡಗಳನ್ನೆ ನೆಚ್ಚಿ ಬೇಸಾಯಕ್ಕಿಳಿದಿದ್ದಾರೆ. 14 ಪಂಚಾಯತಿ ವ್ಯಾಪ್ತಿಯ ರೈತರ ಮಧ್ಯೆ ಕೇವಲ ಮೂವರು ಸಹಾಯಕ ಕೃಷಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಮೂರು ಸಹಾಯಕ ಕೃಷಿ ಅಧಿಕಾರಿಗಳ ಕೊರತೆ ನಾಲವಾರ ರೈತ ಸಂಪರ್ಕ ಕೇಂದ್ರವನ್ನು ಕಾಡುತ್ತಿದೆ.

ನಾಲವಾರ ವಲಯದಲ್ಲಿ ಇದುವರೆಗೂ ಟಿಎಸ್‌-3ಆರ್‌ ತೊಗರಿ ಬೀಜಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರೈತರಿಗೆ ಜಿಆರ್‌ಜಿ-811 ತೊಗರಿ ಬೀಜಗಳ ವಿತರಣೆ ಮಾಡಲಾಗಿದೆ. ಈ ಹೊಸ ಬೀಜ ತಳಿ ಕುರಿತು ರೈತರಲ್ಲಿ ಭರವಸೆ ಮೂಡಿಸುವುದರ ಜತೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟು 80 ಕ್ವಿಂಟಲ್‌ ತೊಗರಿ, 60 ಕ್ವಿಂಟಲ್‌ ಹೆಸರು, 64 ಕ್ವಿಂಟಲ್‌ ಭತ್ತ ಬೀಜ ವಿತರಣೆ ಮಾಡಲಾಗಿದೆ. ನಾಲವಾರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಗೆ ಬರುವ ಒಟ್ಟು 14 ಗ್ರಾ.ಪಂಗಳ ಆಧೀನದ ಒಟ್ಟು 25000 ಹೆಕ್ಟೇರ್‌ ಕೃಷಿ ಭೂಮಿಗೆ ಈಗಾಗಲೇ ಬೀಜಗಳ ವಿತರಣೆಯಾಗಿದ್ದು, ಬಿತ್ತನೆ ಕಾರ್ಯ ಶುರುವಾಗಿದೆ.
ರಮೇಶ ಕೆಲ್ಲೂರ,
ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ

ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.