ಈಡನ್ ಸಿಬಂದಿಗೆ ಸೋಂಕು; 7 ದಿನ ಕ್ಯಾಬ್ ಕಚೇರಿ ಬಂದ್
Team Udayavani, Jul 6, 2020, 5:25 AM IST
ಕೋಲ್ಕತಾ ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಸಿಬಂದಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವುದರಿಂದ ಬಂಗಾಲ ಕ್ರಿಕೆಟ್ ಮಂಡಳಿಯ (ಸಿಎಬಿ-ಕ್ಯಾಬ್) ಪ್ರಧಾನ ಕಚೇರಿಯನ್ನು 7 ದಿನ ಮುಚ್ಚಲು ತೀರ್ಮಾನಿಸಲಾಗಿದೆ.
“ಸಿವಿಲ್ ಇಂಜಿನಿಯರಿಂಗ್ ವಿಭಾಗದ ತಾತ್ಕಾಲಿಕ ನೆಲೆಯ ಉದ್ಯೋಗಿಯೊಬ್ಬರಿಗೆ ಶನಿವಾರ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರಕ್ಷತೆಯ ಕ್ರಮವಾಗಿ ಮುಂದಿನ ಒಂದು ವಾರ ಕಾಲ ಕಚೇರಿಯನ್ನು ಮುಚ್ಚಲಾಗುವುದು’ ಎಂದು ಸಿಎಬಿ ಅಧ್ಯಕ್ಷ ಅವಿಷೇಕ್ ದಾಲಿ¾ಯಾ ಹೇಳಿದರು.