24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು


Team Udayavani, Jul 8, 2020, 6:20 AM IST

24 ಸಿಐಎಸ್‌ಎಫ್‌ ಜವಾನರಿಗೆ ಸೋಂಕು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸುರತ್ಕಲ್‌: ಸುರತ್ಕಲ್‌ ಪ್ರದೇಶದಲ್ಲಿ ಒಟ್ಟು 33 ಮಂದಿಗೆ ಕೋವಿಡ್ 19 ಪಾಸಿಟಿವ್‌ ಕಂಡು ಬಂದಿದೆ.

ಇಲ್ಲಿನ ಸಿಐಎಸ್‌ಎಫ್‌ ಯೂನಿಟ್‌ನ 24 ಜವಾನರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲಾಡಳಿತದ ವತಿಯಿಂದ ಸೀಲ್‌ಡೌನ್‌ ಮಾಡಲಾಗಿಲ್ಲ. ಆದರೆ ಎಚ್ಚರಿಕೆಯ ಸ್ಟಿಕ್ಕರ್‌ ಅಂಟಿಸಿ ಜಾಗೃತರಾಗಿರುವಂತೆ ಸೂಚಿಸಲಾಗಿದೆ.

ಸೋಂಕಿತರಲ್ಲಿ 1 ವರ್ಷದ ಮಗು
ಸಿಐಎಸ್‌ಎಫ್ ಯೂನಿಟ್‌ನ 25 ಮಂದಿ ಸೋಂಕಿತರಲ್ಲಿ ಒಂದು ವರ್ಷದ ಮಗುವು ಸೇರಿದೆ. ಈ ಹಿಂದೆ ಸಿಬಂದಿಗೆ ಪಾಸಿಟವ್‌ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಇದೀಗ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಹೋಂ ಕ್ವಾರಂಟೈನ್‌ ಮೂಲಕ ಚಿಕಿತ್ಸೆ ನೀಡಲು ಸರಕಾರ ಆದೇಶ ನೀಡಿದೆ. ಇಲ್ಲಿಯೂ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಕೈಗೊಳ್ಳುವ ಸಾಧ್ಯತೆಯಿದೆ.

ಸುರತ್ಕಲ್‌ ಇಡ್ಯಾದ ವಸತಿ ಸಮುಚ್ಚಯದಲ್ಲಿ ಮೂವರಿಗೆ, ಜೆ.ಎಂ. ರಸ್ತೆ ಸಮೀಪ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರ ಮನೆಯನ್ನು ಸೀಲ್‌ ಡೌನ್‌ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಪ್ರಾಥಮಿಕ ಸಂಪರ್ಕ ಇದ್ದವರಿಗೆ ಹೆಚ್ಚಿನ ಸೋಂಕು ತಗಲುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಮಂಗಳ ಪೇಟೆಯಲ್ಲಿ ಓರ್ವರಿಗೆ ಕೋವಿಡ್ 19 ಸೋಂಕು ದೃಢ

ಪಟ್ಟಿದ್ದು ಅಧಿಕಾರಿಗಳು ಯಾರೂ ಸೋಂಕಿತರ ಮನೆ ಪ್ರವೇಶಿಸದಂತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಮಾಹಿತಿ ಅಂಟಿಸಿದ್ದಾರೆ.

ಬಂಟ್ವಾಳ: 11 ತಿಂಗಳ ಮಗುವಿಗೆ ಸೋಂಕು
ಪುದು ಗ್ರಾಮದ ಮಾರಿಪಳ್ಳದಲ್ಲಿ 11 ತಿಂಗಳ ಮಗು ಹಾಗೂ ಮೇರಮಜಲು ಗ್ರಾಮದಲ್ಲಿ ಒಂದೇ ಮನೆಯ ಐವರು ಸೇರಿ ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ 10ಕ್ಕೂ ಅಧಿಕ ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಮಾರಿಪಳ್ಳದಲ್ಲಿ 28 ವರ್ಷದ ಮಹಿಳೆ ಮತ್ತು 11 ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ.  ಕೆಲವು ದಿನಗಳ ಹಿಂದೆ ಅವರ ಕುಟುಂಬ ಸದಸ್ಯರೊಬ್ಬರಿಗೆ ಸೋಂಕು ತಗಲಿತ್ತು. ಹೀಗಾಗಿ ಅವರ ಮನೆಯವರ ಗಂಟಲ ದ್ರವ ಪರೀಕ್ಷೆ ಮಾಡಿದ ವೇಳೆ ತಾಯಿ-ಮಗುವಿಗೆ ಸೋಂಕು ಕಂಡುಬಂದಿದೆ.

ಮೇರಮಜಲು ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಸೋಂಕಿನ ಪ್ರಕರಣ ಕಂಡು ಬಂದವರ ಮನೆಯ 25 ವರ್ಷದ ಪುರುಷ, 32 ವರ್ಷದ ಮಹಿಳೆ, 52 ವರ್ಷದ ಪುರುಷ, 25 ವರ್ಷದ ಯುವತಿ ಹಾಗೂ 27 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.

ಪೂಜಾರಿ ಆರೋಗ್ಯದಲ್ಲಿ ಚೇತರಿಕೆ
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಹಾಗೂ ಅವರ ಮನೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಯಾವುದೇ ಆತಂಕವಿಲ್ಲ ಎಂದು ಅವರ ಆಪ್ತರ ಮೂಲಗಳು ತಿಳಿಸಿವೆ.

ವಿಟ್ಲ: ಮಹಿಳೆಗೆ ಪಾಸಿಟಿವ್‌
ವಿಟ್ಲದ ಬೊಬ್ಬೆಕೇರಿಯ ಮಹಿಳೆಗೆ ಕೋವಿಡ್ 19 ಸೋಂಕು ಪಾಸಿಟಿವ್‌ ಪತ್ತೆಯಾದ ಹಿನ್ನೆಲೆಯಲ್ಲಿ ವಿಟ್ಲದ ಬೊಬ್ಬೆಕೇರಿಯಲ್ಲಿರುವ ಮಹಿಳೆಯ ಪತಿಯ ಮನೆ ಸೀಲ್‌ಡೌನ್‌ ಮಾಡಲಾಗಿದೆ.

ಕಾರ್ನಾಡು ನಿವಾಸಿಗೆ ಕೋವಿಡ್ 19 ಸೋಂಕು
ಇಲ್ಲಿಯ ಕಾರ್ನಾಡು ಜಂಕ್ಷನ್‌ ಮನೆಯ 88 ವರ್ಷ ಪ್ರಾಯದ ಮಹಿಳಾ  ನಿವಾಸಿಯೋರ್ವರಿಗೆ ಕೊರೊನಾ ಪಾಸಿಟಿವ್‌ ಬಂದಿದೆ ಎಂದು ಮೂಲ್ಕಿ ತಹಶೀಲ್ದಾರ್‌ ಮಾಣಿಕ್ಯ ಎನ್‌. ಅವರು ತಿಳಿಸಿದ್ದಾರೆ.

ಕಿನ್ನಿಗೋಳಿ: ಓರ್ವರಿಗೆ ಸೋಂಕು
ಇಲ್ಲಿನ ಮೆನ್ನಬೆಟ್ಟು ಗ್ರಾ. ಪಂ. ವ್ಯಾಪ್ತಿಯ ರಾಜರತ್ನಪುರ ಬಳಿಯ ವಸತಿ ಗೃಹದಲ್ಲಿರುವ ನಿವಾಸಿಗೆ ಜ್ವರ ತಪಾಸಣೆ ವೇಳೆ ನಡೆಸಲಾದ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸತಿಗೃಹದ 11 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು 31 ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಸೋಂಕು
ಪಡುಬಿದ್ರಿ:
ಬೆಂಗಳೂರಿನಿಂದ ಎರ್ಮಾಳಿಗೆ ಬಂದಿದ್ದ 44 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ಸೋಂಕು ಪಾಸಿಟಿವ್‌ ವರದಿಯಾಗಿದೆ.  ಜ್ವರ ಬಾಧೆಯಿಂದ ಬಳಲುತ್ತಿದ್ದ ಅವರು ಮೊದಲಿಗೆ ಪ್ರಾ. ಆ. ಕೇಂದ್ರಕ್ಕೆ ತೆರಳಿದ್ದರು. ಜ್ವರ ಕಡಿಮೆಯಾಗದಿದ್ದಾಗ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು.

ಅಲ್ಲಿ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಅವರನ್ನು ಉಡುಪಿಯ ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪತ್ನಿ ಹಾಗೂ ಮಗನ ಜತೆಗೆ ಬಂದಿದ್ದ ಇವರ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕುಂದಾಪುರ: 10 ಮಂದಿಗೆ ಪಾಸಿಟಿವ್‌
ತಾಲೂಕಿನ 10 ಜನರಿಗೆ ಮಂಗಳವಾರ ಕೋವಿಡ್‌ -19 ಪಾಸಿಟಿವ್‌ ಬಂದಿದೆ. ಅವರನ್ನೆಲ್ಲ  ಸರಕಾರಿ ಕೋವಿಡ್‌ – 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆದೂರು, ಗುಜ್ಜಾಡಿ, ಹಟ್ಟಿಯಂಗಡಿ, ಕುಂದಾಪುರ ನಗರ (ತಲಾ 2 ಪ್ರಕರಣ), ವಕ್ವಾಡಿ, ಕೋಣಿ, ವಡೇರಹೋಬಳಿ, ವಂಡ್ಸೆ, ಬೆಳ್ಳಾಲದ ವ್ಯಕ್ತಿಗಳಿಗೆ ಪಾಸಿಟಿವ್‌ ಬಂದಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.