ಸೊರಗಿದ ಸಾರಿಗೆ ಕ್ಷೇತ್ರದ ಪುನಶ್ಚೇತನಕ್ಕೆ ಉಪಕ್ರಮಗಳು ಅಗತ್ಯ

ನೆರವಿನ ನಿರೀಕ್ಷೆಯಲ್ಲಿ ದ . ಕ .ಆರ್ಥಿಕತೆ ಸರಕಾರ ಏನು ಮಾಡಬೇಕು ?

Team Udayavani, Jul 20, 2020, 10:35 AM IST

ಸೊರಗಿದ ಸಾರಿಗೆ ಕ್ಷೇತ್ರದ ಪುನಶ್ಚೇತನಕ್ಕೆ ಉಪಕ್ರಮಗಳು ಅಗತ್ಯ

ಕೋವಿಡ್ ವೈರಸ್‌ನ ಹಾವಳಿಯಿಂದ ಸಾರಿಗೆ ಕ್ಷೇತ್ರಕ್ಕೂ ತೀವ್ರ ಹೊಡೆತ ಬಿದ್ದಿದೆ. ಲಾಕ್‌ಡೌನ್‌ ತೆರವಿನ ಬಳಿಕವೂ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಸಾರಿಗೆ ಕ್ಷೇತ್ರ ಇನ್ನೂ ಪೂರ್ಣ ರೀತಿಯಲ್ಲಿ ಚೇತರಿಸಿಕೊಂಡಿಲ್ಲ. ಇದರಿಂದಾಗಿ ಈ ಕ್ಷೇತ್ರವನ್ನು ಅವಲಂಬಿಸಿರುವವರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಾರಿಗೆ ಕ್ಷೇತ್ರದ ಪುನಶ್ಚೇತನಕ್ಕೆ ಸರಕಾರ ಇನ್ನಾದರೂ ಮುಂದಾಗುವುದು ಅತ್ಯಗತ್ಯವಾಗಿದೆ. 

ಸಾರಿಗೆ ಕ್ಷೇತ್ರ ಜನಜೀವನದ ಜೀವನಾಡಿ. ಒಂದೆಡೆ ಇದು ಮೂಲಸೌಕರ್ಯವಾದರೆ ಇನ್ನೊಂದೆಡೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವ ಕ್ಷೇತ್ರಗಳಲ್ಲಿ ಒಂದಾಗಿದೆ. ರಾಜ್ಯದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಗಣನೀಯ ಪ್ರಮಾಣದಲ್ಲಿ ಆದಾಯ ನೀಡುವ ಮೂಲವೂ ಆಗಿದೆ.

ಚೇತರಿಕೆಗೆ 6 ತಿಂಗಳು ಬೇಕು
ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸುಮಾರು ನಾಲ್ಕೂವರೆ ತಿಂಗಳುಗಳಿಂದ ಸಾರಿಗೆ ಕ್ಷೇತ್ರ ಸಂಪೂರ್ಣ ಸ್ತಬ್ಧವಾಗಿತ್ತು. ಮತ್ತೆ ಆರಂಭಗೊಂಡಿದ್ದರೂ ಚೇತರಿಸಿಕೊಳ್ಳಲು ಇನ್ನೂ ಕನಿಷ್ಠ 6 ತಿಂಗಳು ಬೇಕು. ಪ್ರಸ್ತುತ ಬಸ್‌ಗಳಲ್ಲಿ ಶೇ. 50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಉತ್ಪಾದನಾ ವಲಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಲಾರಿಗಳಿಗೆ ಅಷ್ಟೊಂದು ಬೇಡಿಕೆ ಕುದುರಿಲ್ಲ. ಪ್ರವಾಸೋದ್ಯಮ ಸಂಪೂರ್ಣವಾಗಿ ಸ್ತಬ್ಧವಾಗಿರುವುದರಿಂದ ಕಾರು, ಮ್ಯಾಕ್ಸಿ ಕ್ಯಾಬ್‌ಗಳಿಗೆ ಬೇಡಿಕೆಯಿಲ್ಲ. ವಾಣಿಜ್ಯ ಕ್ಷೇತ್ರಗಳಲ್ಲಿ, ನಿರ್ಮಾಣ ಚಟುವಟಿಕೆಗಳಲ್ಲಿ ಆಗಿರುವ ಹಿನ್ನಡೆಯಿಂದ ಗೂಡ್ಸ್‌ ಟೆಂಪೊಗಳು ಬಾಡಿಗೆ ಸಮಸ್ಯೆ ಎದುರಿಸುತ್ತಿವೆ.

ಮಂಗಳೂರಿನಲ್ಲಿ ಸುಮಾರು 325 ಸಿಟಿ ಬಸ್‌ಗಳು ಸಂಚರಿಸುತ್ತವೆ. ಅದೇ ರೀತಿ 900 ಸರ್ವಿಸ್‌ ಬಸ್‌ಗಳು, ಸುಮಾರು 70ರಷ್ಟು ಒಪ್ಪಂದದ ಮೇರೆಗಿನ ಸಾರಿಗೆ ಮತ್ತು 150ಕ್ಕೂ ಮಿಕ್ಕಿ ಟೂರಿಸ್ಟ್‌ ಬಸ್‌ಗಳಿವೆ. ಸಿಟಿ ಬಸ್‌ಗಳಿಗೆ 23,000 ರೂ. ರಸ್ತೆ ತೆರಿಗೆ, ಗ್ರಾಮಾಂತರ ಬಸ್‌ಗಳಿಗೆ 48,000 ರೂ., ತೆರಿಗೆ ಕಟ್ಟಬೇಕು. ವಿಮೆ ವಾರ್ಷಿಕವಾಗಿ ಸುಮಾರು 80,000ದಿಂದ 90,000 ರೂ. ವರೆಗೆ ಬರುತ್ತದೆ. ಬಸ್‌ಗಳು ನಷ್ಟದಲ್ಲಿ ಸಂಚಾರ ನಡೆಸುತ್ತಿರುವುದರಿಂದ ತೆರಿಗೆ ಮನ್ನಾ ಅಥವಾ ಶೇ. 50 ತೆರಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆ ಇದೆ.

ಸರಕಾರಿ ಬಸ್‌ ಸೇವೆಗೂ ಸಂಕಷ್ಟ
ಜಿಲ್ಲೆಯಲ್ಲಿ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರಿ ಬಸ್‌ ಸಾರಿಗೆ ಜೀವನಾಡಿಯಾಗಿದೆ. ಜಿಲ್ಲೆಯ ಕೆಲವು ಮಾರ್ಗಗಳು ರಾಷ್ಟ್ರೀಕರಣಗೊಂಡಿದ್ದು, ಇಲ್ಲಿ ಸರಕಾರಿ ಬಸ್‌ಗಳ ಏಕಸ್ವಾಮ್ಯವಿದೆ. ಆದರೆ ಕೊರೊನಾದಿಂದಾಗಿ ಪ್ರಸ್ತುತ ಶೇ. 25ರಷ್ಟು ಬಸ್‌ಗಳು ಮಾತ್ರ ಸಂಚಾರ ನಡೆಸಲು ಸಾಧ್ಯವಾಗಿದ್ದು, ಸಂಕಷ್ಟದ ಸ್ಥಿತಿಯಲ್ಲಿವೆ.

ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿ 7 ಡಿಪೋಗಳಿದ್ದು, ಒಟ್ಟು 870 ಬಸ್‌ಗಳು ಕೊರೊನಾ ಪೂರ್ವದಲ್ಲಿ ಸಂಚರಿಸುತ್ತಿದ್ದವು. ಲಾಕ್‌ಡೌನ್‌ ಬಳಿಕ 200 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಮಂಗಳೂರು ವಿಭಾಗದಲ್ಲಿ ಮೂರು ಡಿಪೋಗಳಿದ್ದು ಕೊರೊನಾ ಮೊದಲು ದಿನವೊಂದಕ್ಕೆ ಸುಮಾರು 390 ಸರಕಾರಿ ಬಸ್‌ಗಳು ಓಡಾಡುತ್ತಿದ್ದವು. ಮಾಸಿಕವಾಗಿ ಸುಮಾರು 24ರಿಂದ 26 ಕೋ.ರೂ. ಆದಾಯ ಬರುತ್ತಿತ್ತು. ಲಾಕ್‌ಡೌನ್‌ ತೆರವು ಬಳಿಕ ಕೇವಲ 70ರಿಂದ 90 ಬಸ್‌ಗಳು ಓಡಾಡುತ್ತಿವೆ. ಪುತ್ತೂರು ವಿಭಾಗದಲ್ಲಿ 4 ಡಿಪೋಗಳು ಇದ್ದು ಕೊರೊನಾ ಪೂರ್ವದಲ್ಲಿ ದಿನಕ್ಕೆ 480 ಬಸ್‌ಗಳು ಸಂಚಾರ ನಡೆಸುತ್ತಿದ್ದವು.

ಸಂಕಷ್ಟದಲ್ಲಿ ರಿಕ್ಷಾ ಚಾಲಕರು
ದ.ಕ.ಜಿಲ್ಲೆಯಲ್ಲಿ ಸುಮಾರು 25,000 ರಿಕ್ಷಾಗಳಿವೆ. ಲಾಕ್‌ಡೌನ್‌ ಬಳಿಕ ಸಂಚಾರಕ್ಕೆ ಅನುಮತಿ ನೀಡಲಾಗಿದ್ದರೂ ಜನರ ಮಿತಿ ಸಹಿತ ಜನರ ಓಡಾಟ ವಿರಳವಾಗಿದ್ದುದರಿಂದ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ ಅವರಿಗೆ 5,000 ರೂ.ಸಹಾಯಧನ ಘೋಷಿಸಿದರೂ ಅದಕ್ಕೂ ಕೆಲವು ಶರತ್ತುಗಳನ್ನು ವಿಧಿಸಲಾಗಿದೆ. ತೆರಿಗೆ ಹಾಗೂ ವಿಮೆಯಲ್ಲಿ ರಿಯಾಯಿತಿ, ರಿಕ್ಷಾಗಳ ಬಿಡಿಭಾಗಗಳನ್ನು ರಿಯಯಿತಿ ದರದಲ್ಲಿ ನೀಡಬೇಕು, ಮರುಪಾವತಿ ಕಂತುಗಳ ಪಾವತಿ ಮುಂದೂಡಿಕೆ ವಿಸ್ತರಣೆ, ಬಡ್ಡಿ ಮನ್ನಾ ಮುಂತಾದ ಉಪಕ್ರಮಗಳನ್ನು ಸರಕಾರದಿಂದ ನಿರೀಕ್ಷಿಸುತ್ತಿದ್ದಾರೆ.

ಶುಭ ಸಮಾರಂಭ ವಿರಳ
ಪ್ರವಾಸಿಗರ ಆಗಮನದಲ್ಲಿ ಭಾರೀ ಇಳಿಮುಖ ಹಾಗೂ ಮದುವೆ ಮುಂತಾದ ಶುಭ ಸಮಾರಂಭಗಳು ವಿರಳವಾಗಿರುವುದರಿಂದ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್‌ಗಳಲ್ಲಿ ದುಡಿಯುತ್ತಿರುವವರು ತೀವ್ರ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 5,500ಕ್ಕೂ ಅಧಿಕ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ಗಳು ಇವೆ. ಟ್ಯಾಕ್ಸಿಗಳು ಹಾಗೂ ಮ್ಯಾಕ್ಸಿಕ್ಯಾಬ್‌ಗಳು ಮೂರು ತಿಂಗಳು ಮುಂಗಡವಾಗಿ ತೆರಿಗೆ ಪಾವತಿಸುತ್ತವೆ. ಇದು ಸುಮಾರು 6,000 ರಿಂದ 10,000 ರೂ.ವರೆಗೆ ಇರುತ್ತದೆ. ಕೆಲವು ಅವಧಿಯವರೆಗೆ ತೆರಿಗೆ ಮನ್ನಾ ಅಥವಾ ಶೇ.50ರಷ್ಟು ತೆರಿಗೆ ವಸೂಲಿ, ಬಡ್ಡಿ ದರದಲ್ಲಿ ರಿಯಾಯತಿ ಹಾಗೂ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು ಮತ್ತು ಮ್ಯಾಕ್ಸಿ ಕ್ಯಾಬ್‌ಗಳಿಗೂ ಸಹಾಯಧನ ಘೋಷಿಸಬೇಕು ಎಂಬ ಆಗ್ರಹ ಇವರದಾಗಿದೆ.

ಲಾರಿಗಳಿಗೂ ಸಮಸ್ಯೆ
ಸುಮಾರು ಮೂರು ತಿಂಗಳುಗಳ ಬಳಿಕ ಇದೀಗ ಲಾರಿಗಳ ಸಂಚಾರಕ್ಕೆ ಅನುಮತಿ ಲಭಿಸಿದರೂ ಕೈಗಾರಿಕೆಗಳು, ವಾಣಿಜ್ಯ ವ್ಯವಹಾರಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಸರಕು ಸಾಗಣೆ ಇನ್ನೂ ಚುರುಕುಗೊಂಡಿಲ್ಲ. ಜಿಲ್ಲೆಯಲ್ಲಿ ಸುಮಾರು 5,000ಕ್ಕಿಂತಲೂ ಅಧಿಕ ಲಾರಿಗಳಿವೆ. ಬಹುತೇಕ ಲಾರಿಗಳು ಬ್ಯಾಂಕ್‌ ಸಾಲಗಳನ್ನು ಹೊಂದಿವೆ. ಇದಕ್ಕೆ ತಿಂಗಳಿಗೆ ಸುಮಾರು 60,000 ರೂ.ಕಂತು. ಬರುತ್ತದೆ. ಪ್ರತಿ ಮೂರು ತಿಂಗಳಿಗೆ 10,000 ರೂ. ರಸ್ತೆ ತೆರಿಗೆ ಬರುತ್ತದೆ. ಲಾರಿ ಸಂಚಾರವಿಲ್ಲದೆ ನಿಂತರೂ ಇದನ್ನು ಪಾವತಿಸಲೇಬೇಕಾಗುತ್ತದೆ. ಇವೆಲ್ಲ ಸೇರಿ ತಿಂಗಳಿಗೆ ಸುಮಾರು 1 ಲಕ್ಷ ರೂ. ನಿರ್ವಹಣೆಗೆ ಬೇಕಾಗುತ್ತದೆ. ಹೊರಜಿಲ್ಲೆಗಳ ಚಾಲಕರು ತಮ್ಮ ಊರುಗಳಿಗೆ ತೆರಳಿದ್ದು ಚಾಲಕರ ಕೊರತೆಯೂ ಎದುರಾಗಿದೆ. ಇಎಂಐ ಕಂತು ಮುಂದೂಡಿಕೆ ಮಾಡಿದರೆ ಸಾಲದು ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು. ಕ್ಷೇತ್ರಕ್ಕೆ ಸರಕಾರದಿಂದ ಸಹಾಯಧನ ಸಹಿತ ಕೆಲವು ಪ್ರೋತ್ಸಾಹಕ ಯೋಜನೆ ಘೋಷಿಸಬೇಕು ಎಂಬುದು ಬೇಡಿಕೆಯಾಗಿದೆ.

ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?
ಕೇಂದ್ರ ಸರಕಾರ ಪ್ರಸ್ತುತ ಎಂಎಸ್‌ಎಂಇಗಳಿಗೆ ಕೋವಿಡ್‌ ಸಾಲ ಸೌಲಭ್ಯ ನೀಡಿದೆ. ಈ ಸೌಲಭ್ಯ ಕಂಪೆನಿ ಸ್ವರೂಪ ಹೊಂದಿರುವ ಸಾರಿಗೆ ಮಾಲಕರಿಗೆ ಮಾತ್ರ ಅನ್ವಯವಾಗುತ್ತದೆ. ಈ ಸೌಲಭ್ಯ ವೈಯಕ್ತಿಕ ನೆಲೆಯಲ್ಲಿ ವಾಹನಗಳನ್ನು ಓಡಿಸುವ ಮಾಲಕರಿಗೂ ದೊರೆತರೆ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ.

ನಿರ್ದಿಷ್ಟ ಅವಧಿಯವರೆಗೆ ಡೀಸೆಲ್‌ ಮೇಲೆ ಸಬ್ಸಿಡಿ ಹಾಗೂ ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಕೆ ಮಾಡಿದರೆ ನಿರ್ವಹಣೆ ವೆಚ್ಚದಲ್ಲಿ ಒಂದಷ್ಟು ಕಡಿಮೆಯಾಗಲಿದೆ. ಇದು ಸಾರಿಗೆ ಕ್ಷೇತ್ರ ಚೇತರಿಸಿಕೊಳ್ಳಲು ಪೂರಕವಾಗುತ್ತದೆ.

ಪ್ರಸ್ತುತ ಮರುಪಾವತಿ ಕಂತುಗಳನ್ನು ಮುಂದೂಡಲಾಗಿದ್ದು ಇದನ್ನು ಇನ್ನೂ ಕೆಲವು ತಿಂಗಳು ವಿಸ್ತರಿಸಬೇಕು. ಇದೇ ರೀತಿಯಾಗಿ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕು.

ಕನಿಷ್ಠ ಮುಂದಿನ ಮೂರು ತಿಂಗಳು ತೆರಿಗೆ ಮನ್ನಾ, ಆರು ತಿಂಗಳವರೆಗೆ ತೆರಿಗೆಯಲ್ಲಿ ಶೇ. 50 ರಿಯಾಯಿತಿ ನೀಡಬೇಕು. ಇದರಿಂದ ಸಾರಿಗೆ ಕ್ಷೇತ್ರ ಚೇತರಿಸಿಕೊಳ್ಳಲು ನೆರವಾಗುತ್ತದೆ.

ಸರಕಾರ ಪ್ರಸ್ತುತ ಸಾರಿಗೆ ಕ್ಷೇತ್ರದಲ್ಲಿ ದುಡಿಯುವವರಿಗೆ ಘೋಷಿಸಿರುವ ಆರ್ಥಿಕ ನೆರವನ್ನು ಎಲ್ಲ ಸಾರಿಗೆಗಳಲ್ಲಿ ದುಡಿಯುವವರಿಗೆ ವಿಸ್ತರಿಸಬೇಕು.

ಸರಕಾರದ ನೆರವು ಅಗತ್ಯ
ಸಾರಿಗೆ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಹಾಗೂ ಸರಕಾರಕ್ಕೆ ಆದಾಯ ನೀಡುತ್ತಿರುವ ಕ್ಷೇತ್ರ. ಪ್ರಸ್ತುತ ಕೊರೊನಾದಿಂದಾಗಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಕ್ಷೇತ್ರದ ಪುನಶ್ಚೇತನಕ್ಕೆ ಸರಕಾರದ ನೆರವು ಅಗತ್ಯವಿದೆ. ತೆರಿಗೆಯಲ್ಲಿ ರಿಯಾಯಿತಿ, ಸಾಲ ಮರುಪಾವತಿ ಅವಧಿ ವಿಸ್ತರಣೆ ಸೇರಿದಂತೆ ಕೆಲವು ಸೌಲಭ್ಯಗಳನ್ನು ಈ ಕ್ಷೇತ್ರಕ್ಕೆ ನೀಡಬೇಕು.
 – ರಾಜವರ್ಮ ಬಲ್ಲಾಳ್‌,  ಅಧ್ಯಕ್ಷರು, ಕೆನರಾ ಬಸ್‌ಮಾಲಕರ ಸಂಘ

ಅಂಕಿ ಅಂಶ
ಖಾಸಗಿ ಬಸ್‌ಗಳು 1445
ಸರಕಾರಿ ಬಸ್‌ಗಳು 870
ರಿಕ್ಷಾಗಳು 25,000
ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ 5,500
ಲಾರಿಗಳು 5000
ದುಡಿಯುವ ವರ್ಗ 50,000 ಕ್ಕೂ ಅಧಿಕ

ಉದಯವಾಣಿ ಅಧ್ಯಯನ ತಂಡ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.