ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಈಗ ಸುಲಭ
Team Udayavani, Jul 22, 2020, 6:22 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಪ್ರತೀವರ್ಷ ಆದಾಯ ತೆರಿಗೆ ಹಿಂಪಾವತಿ (ಐಟಿಆರ್) ಸಲ್ಲಿಕೆ ಸಮಯ ಬಂತೆಂದರೆ ಹಲವರು ತಲೆಕೆಡಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಅಷ್ಟು ಜಟಿಲವಾಗಿರುವುದೇ ಅದಕ್ಕೆ ಕಾರಣ.
ಪ್ರಸ್ತುತ ಕೇಂದ್ರ ಸರಕಾರ ಬಿಡುಗಡೆ ಮಾಡಲಿರುವ ಹೊಸ 26 ಎಎಸ್ ಪತ್ರಕದಲ್ಲಿ ಈ ಪ್ರಕ್ರಿಯೆ ಬಹಳ ಸರಳವಾಗಿರಲಿದೆ.
ಈ ಪತ್ರಕದಲ್ಲಿ ಹಿಂಪಾವತಿಗಾಗಿ ಸಲ್ಲಿಸಬೇಕಾದ ಎಲ್ಲ ಮಾಹಿತಿಗಳು ಅಡಕವಾಗಿ, ಸಿದ್ಧ ರೀತಿಯಲ್ಲಿ ನಿಮ್ಮ ಕೈಗೆ ಬರುತ್ತದೆ.
ಆದ್ದರಿಂದ ನಿಮ್ಮ ಸಲ್ಲಿಕೆ ಪ್ರಕ್ರಿಯೆ ಬಹಳ ಸುಲಭವಾಗುತ್ತದೆ.
ಇದಕ್ಕೆ ಕಾರಣವೇನೆಂದರೆ ಬೇರೆ ಬೇರೆ ವಿಭಾಗಗಳಲ್ಲಿ ನಡೆದಿರುವ ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಮಾಹಿತಿ ಇಲ್ಲಿ ಸಿಗುತ್ತದೆ.
ಅಂದರೆ 61 ಎ ಪತ್ರಕದಲ್ಲಿರುವ ಮಾಹಿತಿಗಳನ್ನೂ ಇಲ್ಲಿಯೇ ಲಗತ್ತಿಸಲಾಗಿರುತ್ತದೆ.
ಹಿಂದೆ ಟಿಡಿಎಸ್, ಟಿಸಿಎಸ್, ಇತರೆ ತೆರಿಗೆಗಳನ್ನು ಕಟ್ಟಿರುವ ವಿವರ, ಇನ್ನಿತರೆ ಸಂಗತಿಗಳ ಬಗ್ಗೆ ನಾವೇ ಮಾಹಿತಿ ನೀಡಬೇಕಾಗಿತ್ತು.
ಈಗ ಆ ಎಲ್ಲ ಮಾಹಿತಿಗಳು 26 ಎಎಸ್ನಲ್ಲೇ ಸಿದ್ಧವಾಗಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್