ಬಿಹಾರ: ಭಾರೀ ಮಳೆ, ಪ್ರವಾಹಕ್ಕೆ 8 ಜಿಲ್ಲೆ ಜಲಾವೃತ, ಜನಜೀವನ ಅಸ್ತವ್ಯಸ್ತ
8 ಜಿಲ್ಲೆಗಳ 38 ಬ್ಲಾಕ್ಸ್ ಗಳಲ್ಲಿನ 217 ಪಂಚಾಯತ್ ವ್ಯಾಪ್ತಿಯಲ್ಲಿ 4,13,952 ಜನಸಂಖ್ಯೆ ಹೊಂದಿದೆ.
Team Udayavani, Jul 22, 2020, 11:10 PM IST
ನವದೆಹಲಿ:ಕೋವಿಡ್ 19 ವೈರಸ್ ಹಾವಳಿ ನಡುವೆಯೇ ಇದೀ ಭಾರೀ ಮಳೆ, ಪ್ರವಾಹದಿಂದ ಬಿಹಾರದ ಹಲವಾರು ಜಿಲ್ಲೆಗಳು ತತ್ತರಿಸಿಹೋಗಿವೆ ಎಂದು ವರದಿ ತಿಳಿಸಿದ್ದು, ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಬಿಹಾರದ 8 ಜಿಲ್ಲೆಗಳ 38 ಬ್ಲಾಕ್ಸ್ ಗಳಲ್ಲಿನ 217 ಪಂಚಾಯತ್ ವ್ಯಾಪ್ತಿಯಲ್ಲಿ 4,13,952 ಜನಸಂಖ್ಯೆ ಹೊಂದಿದೆ. ಈ ಎಲ್ಲಾ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದೆ. ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವ 13,585 ಜನರನ್ನು ಜಿಲ್ಲಾಡಳಿತ ರಕ್ಷಿಸಿರುವುದಾಗಿ ವರದಿ ವಿವರಿಸಿದೆ.
ಬಿಹಾರದ ಸೀತಾಮರಾಹಿ ಜಿಲ್ಲೆಯಲ್ಲಿ 39,000 ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಶಿವ್ ಹರ್ ಜಿಲ್ಲೆಯಲ್ಲಿ 5178 ಜನರಿಗೆ ಕೋವಿಡ್ 19 ತಗುಲಿರುವುದು ದೃಢವಾಗಿದೆ.