ಬಡವರಿಗೆ ಆಸರೆಯಾಗದ ಆಶ್ರಯ ಯೋಜನೆ

ಸಾಲ ಮಾಡಿ ಮನೆ ಕಟ್ಟಿಕೊಂಡವರು ಅತಂತ್ರ

Team Udayavani, Jul 24, 2020, 9:02 AM IST

ಬಡವರಿಗೆ ಆಸರೆಯಾಗದ ಆಶ್ರಯ ಯೋಜನೆ

ನವಲಗುಂದ: ಕೋವಿಡ್ ಪ್ರಾರಂಭದಿಂದ ಒಂದಿಲ್ಲೊಂದು ಕಷ್ಟಗಳು ಸಾರ್ವಜನಿಕರ ಮೇಲೆ ಬೀಳುತ್ತಿದೆ. ಅದರಲ್ಲಿಯೂ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ವಾಜಪೇಯ ವಸತಿ ಯೋಜನೆಯ ಫಲಾನುಭವಿಗಳು ಹೇಳಲಾರದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವಸತಿ ರಹಿತ ಕುಟುಂಬಗಳಿಗೆ ಆಸರೆಯಾಗಲಿ ಎಂದು ರಾಜ್ಯ ಹಾಗೂ ಕೇಂದ್ರ ಸರಕಾರ ಸೇರಿ ಸ್ವಂತ ಜಾಗೆಯುಳ್ಳವರಿಗೆ ವಾಜಪೇಯಿ-ಡಾ| ಬಿ.ಆರ್‌. ಅಂಬೇಡ್ಕರ್‌ ನಿವಾಸ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು 2.70 ಲಕ್ಷ ರೂ. ಹಾಗೂ ಎಸ್‌ಸಿ-ಎಸ್‌ಟಿಯವರಿಗೆ 3.70 ಲಕ್ಷ ರೂ. ಸಹಾಯಧನ ನೀಡುತ್ತದೆ. ಆದರೆ ಇದು ಹೆಸರಿಗೆ ಮಾತ್ರ. ಫಲಾನುಭವಿಗಳು ಹಣ ಮಂಜೂರಾತಿಗೆ ವರ್ಷಪೂರ್ತಿ ಕಾಯುವಂತಾಗಿದೆ.

ಸಾಲವೇ ಶೂಲವಾಯ್ತು: ಪುರಸಭೆ ವ್ಯಾಪ್ತಿಯಲ್ಲಿ 2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಆಯ್ಕೆಯಾದವರು ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಮನೆಯ ಬುನಾದಿಯಿಂದ ಹಂತ ಹಂತವಾಗಿ ಜಿಪಿಎಸ್‌ ಆದ ಮೇಲೆಯೇ ಸರಕಾರ ಅವರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ. ಆದರೆ, ಅಂತಹ ಫಲಾನುಭವಿಗಳಿಗೆ ಈವರೆಗೆ 1.20 ಲಕ್ಷ ರೂ ಮಾತ್ರ ಬಂದಿದೆ. ಇನ್ನುಳಿದ 1.50 ಲಕ್ಷ ರೂ. ಸಹಾಯಧನಕ್ಕಾಗಿ ಫಲಾನುಭವಿಗಳು ಪುರಸಭೆಗೆ ಅಲೆದಾಡುವಂತಾಗಿದೆ. ಇನ್ನು ಎಸ್‌ಸಿ-ಎಸ್‌ ಟಿಯವರಿಗೆ ಮನೆ ಮಂಜೂರಾತಿ ದೊರೆತರೂ 3.70 ಲಕ್ಷ ರೂ. ಪೈಕಿ ನಯಾಪೈಸೆ ಬಂದಿಲ್ಲ. ಸಾಲ ಮಾಡಿಕೊಂಡಿ ಮನೆ ಕಟ್ಟಿಕೊಂಡಿದ್ದು, ಸಾಲ ಮರುಪಾವತಿ ಮಾಡುವುದು ಹೇಗೆ ಎಂಬುದು ತಿಳಿಯುತ್ತಿಲ್ಲ ಎಂದು ನಿಂಗವ್ವ ಕುಳಗೇರಿ ನೋವನ್ನು ತೋಡಿಕೊಂಡರು.

ಇದೊಂದು ರೀತಿಯಾದರೆ ಇನ್ನು 2018-19ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಆಯ್ಕೆಯಾದ 150 ಫಲಾನುಭವಿಗಳ ಯಾದಿ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಮುಂದೆಯೇ ಹೋಗದ ಕಾರಣ ಫಲಾನುಭವಿಗಳು ಕಾಯುತ್ತ ಕೂರುವಂತಾಗಿದೆ. ವಸತಿ ಮುಕ್ತ ರಾಜ್ಯ-ರಾಷ್ಟ್ರವೆಂದು ಸರಕಾರ ಘೋಷಣೆ ಮಾಡುತ್ತದೆ. ಆದರೆ, ನೈಜವಾಗಿ ಪರೀಕ್ಷೆ ಮಾಡಿದರೆ ಬಡವರು ಸೂರಿಗಾಗಿ ಕಚೇರಿಗಳಿಗೆ ಅಲೆದಾಡುವದು ತಪ್ಪಿಲ್ಲ.

ಜನಪ್ರತಿನಿಧಿಗಳೇ, ಬಡವರಿಗೆ ಸ್ಪಂದಿಸಿ :  ಸರಕಾರದ ವಸತಿ ಯೋಜನೆ ಪ್ರಯೋಜನ ಪಡೆಯುವ ಫಲಾನುಭವಿಗಳು ಅತೀ ಬಡ ಕುಟುಂಬಗಳಾಗಿವೆ. ಕೂಲಿ ಕಾರ್ಮಿಕರಾಗಿದ್ದು, ಕೊರೊನಾದಿಂದ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಕಷ್ಟದಾಯಕವಾಗಿದೆ. ಸರಕಾರ ವಸತಿ ಯೋಜನೆಗೆ ಮೀಸಲಿಟ್ಟ ಹಣವನ್ನು ವಸತಿ ಯೋಜನೆಯ ಫಲಾನುಭವಿಗಳಿಗೆ ಬಳಕೆ ಮಾಡದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಸ್ಥಳೀಯ ಜನಪ್ರತಿನಿಧಿ ಗಳು ಸರಕಾರದ ಗಮನಕ್ಕೆ ತಂದು ಮುತುವರ್ಜಿ ವಹಿಸಿ ಬಡವರ ಬಾಳಿಗೆ ಆಶಾಕಿರಣವಾಗಬೇಕಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ :  2017-18ರಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಮನೆ ಕಟ್ಟಲು ಆದೇಶ ಬಂದಿತ್ತು. ಆದರೆ ಇನ್ನೂ 1.50 ಲಕ್ಷ ರೂ. ಬರಬೇಕಾಗಿದೆ. ಸರಕಾರ ನೀಡುವ ಹಣ ಬರಬಹುದೆಂಬ ಆಸೆಯಿಂದ ಸಾಲ ಮಾಡಿ ಮನೆ ಪೂರ್ತಿಗೊಳಿಸಿದ್ದು, ಸಂಕಷ್ಟಕ್ಕೆ ಸಿಲುಕಿದ್ದೇನೆ. ಶಾಸಕರು, ಸಂಸದರು, ಮುಖ್ಯಮಂತ್ರಿಗಳಿಗೂ ಮನವಿ ನೀಡಿದ್ದೇನೆ. ಯಾರಿಂದಲೂ ಸ್ಪಂದನೆ ಇಲ್ಲ. ಪುರಸಭೆ ಅಧಿಕಾರಿಗಳು ಮಂಜೂರಾದ ಹಣವನ್ನು ನೀಡಿದ್ದೇವೆ, ಉಳಿದ ಹಣವನ್ನು ಸರಕಾರದಿಂದ ಮಂಜೂರಾದ ಮೇಲೆ ಕೊಡಲಾಗುವುದೆಂದು ಹೇಳಿದ್ದಾರೆ. ನಾನೊಬ್ಬ ಕಾರ್ಮಿಕನಾಗಿದ್ದು, ಇತ್ತ ಕೊರೊನಾದಿಂದ ದುಡಿಯಲು ಕೆಲಸವಿಲ್ಲ. ಮನೆಗಾಗಿ ಮಾಡಿದ ಸಾಲಕ್ಕೆ ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆಶ್ರಯ ಪ್ಲಾಟ್‌ ಫಲಾನುಭವಿ ಲಕ್ಷ್ಮಣ ಹನಮಂತಪ್ಪ ಶಿಂಧೆ ಅಳಲು ತೋಡಿಕೊಂಡರು.

2017-18ರಿಂದ ವಸತಿ ಯೋಜನೆಯಲ್ಲಿ ಮಂಜೂರಾತಿ ನೀಡಿದವರಿಗೆ ಅತಿವೃಷ್ಟಿ, ಕೋವಿಡ್ ದಿಂದ ಸರಕಾರದಿಂದ ಅನುದಾನ ಮಂಜೂರಾಗಿಲ್ಲ. ಸರಕಾರದಿಂದ ಅನುದಾನ ಬರುವವರಿಗೂ ಫಲಾನುಭವಿಗಳು ಕಾಯಬೇಕು.  ಎನ್‌.ಎಚ್‌. ಖುಂದಾನವರ, ಪುರಸಭೆ ಮುಖ್ಯಾಧಿಕಾರಿ

2019ರಲ್ಲಿ ಆಯ್ಕೆಯಾದ 150 ಬಡ ಕುಟುಂಬದ ಫಲಾನುಭವಿಗಳಿಗೆ ಒಂದು ವರ್ಷವಾದರೂ ಮಂಜೂರಾತಿ ದೊರೆತಿಲ್ಲ. ಸರಕಾರ ವಸತಿ ಯೋಜನೆಯಲ್ಲಿ ಕಷ್ಟಪಡುತ್ತಿರುವ ಬಡವರನ್ನು ನೋಡುತ್ತಿಲ್ಲ. ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಂಡವರು ಅನುದಾನ ಬರದೆ ತೊಂದರೆ ಅನುಭವಿಸುತ್ತಿದ್ದಾರೆ.  ಮಂಜು ಜಾಧವ,  ಪುರಸಭೆ ಸದಸ್ಯ

 

ಪುಂಡಲೀಕ ಮುಧೋಳೆ

ಟಾಪ್ ನ್ಯೂಸ್

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.