ಟಿವಿ-ಮೊಬೈಲ್‌ ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ


Team Udayavani, Aug 13, 2020, 11:02 AM IST

ಟಿವಿ-ಮೊಬೈಲ್‌ ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ

ಕುಷ್ಟಗಿ: ತಾಲೂಕಿನ ಲಿಂಗದಳ್ಳಿ ಗ್ರಾಮದ ರೈತ ಯಂಕಪ್ಪ ವಡ್ರಕಲ್‌ ಅವರ ಪುತ್ರ ಬಾಳಪ್ಪ ವಡ್ರಕಲ್‌ ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 97.12 ಅಂಕ ಪಡೆದು ತಾಲೂಕಿಗೆ ಟಾಪರ್‌ ಆಗಿ ಹೊರ ಹೊಮ್ಮಿದ್ದಾನೆ. ಲಿಂಗದಳ್ಳಿ ಗ್ರಾಮದ ಸೀಮಾದಲ್ಲಿ 4
ಎಕರೆ ಜಮೀನಿನಲ್ಲಿ ಅಂತರ್ಜಲ ಕೊರತೆ ಹಿನ್ನೆಲೆಯಲ್ಲಿ ಎರಡೇ ಎಕರೆ ನೀರಾವರಿ ಇನ್ನುಳಿದ ಜಮೀನಿನಲ್ಲಿ ಮಳೆಯಾಧಾರಿತ
ಕೃಷಿ ಮಾಡುವ ಯಂಕಪ್ಪ ಬಂಡ್ರಗಲ್‌ ಹಾಗೂ ಶರಣಮ್ಮ ದಂಪತಿ ಜಮೀನಿನಲ್ಲೇ ವಾಸವಾಗಿದ್ದಾರೆ. ಇವರಿಗೆ ಪುತ್ರಿ, ಇಬ್ಬರು
ಪುತ್ರರಿರುವ ಕುಟುಂಬದಲ್ಲಿ ರೈತ ಯಂಕಪ್ಪ ವಡ್ರಕಲ್‌ ಅವರು ಕಷ್ಟಕರ ಪರಿಸ್ಥಿತಿಯಲ್ಲೂ ತಮ್ಮ ಮೂವರು ಮಕ್ಕಳ ಶಿಕ್ಷಣಕ್ಕಾಗಿ
ಶ್ರಮಿಸುತ್ತಿದ್ದಾರೆ. ಈ ರೈತ ದಂಪತಿ ಅವಿರತ ಶ್ರಮಕ್ಕೆ ಅವರ ದ್ವಿತೀಯ ಪುತ್ರ ಬಾಳಪ್ಪ, ಪ್ರಸಕ್ತ ಎಸ್ಸೆಸ್ಸೆಲ್ಸಿಯಲ್ಲಿ ಶೇ.97.12 ಅಂಕಗಳ ಸಾಧನೆಯ ಸಾರ್ಥಕತೆ ತಂದಿದ್ದಾನೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತಮ್ಮ ಜಮೀನಿನಿಂದ ಎರಡೂವರೆ ಕಿ.ಮೀ. ದೂರ ಕಾಲ್ನಡಿಗೆ ಇಲ್ಲವೇ 8ನೇ ತರಗತಿಯಲ್ಲಿ
ಸರ್ಕಾರ ನೀಡಿದ ಸೈಕಲ್‌ನಲ್ಲಿ ಹೋಗಿ ಬರುತ್ತಿದ್ದ ಬಾಳಪ್ಪನ ಆಸಕ್ತಿ ಗುರುತಿಸಿ, ಶಾಲೆಯ ಶಿಕ್ಷಕರು, ಪ್ರಾಥಮಿಕ ಶಿಕ್ಷಕರು
ಮಾರ್ಗದರ್ಶನ ನೀಡಿದ್ದಾರೆ. ಯಾವೂದೇ ಟ್ಯೂಷನ್‌ಗೆ ಹೋಗದೇ ವಿಶೇಷ ತರಗತಿಗಳನ್ನು ತಪ್ಪಿಸಿಕೊಳ್ಳದೇ ಅಭ್ಯಾಸದಲ್ಲಿ ನಿರತನಾಗಿದ್ದ. ನಿತ್ಯದ ಅಭ್ಯಾಸದ ಕ್ರಮದಲ್ಲಿ ಮನೆಯಲ್ಲಿ ಟಿವಿ ಇಲ್ಲ, ಆ್ಯಂಡ್ರೈಡ್‌ ಮೊಬೈಲ್‌ ಇಲ್ಲದ ಕೊರತೆಯಲ್ಲೂ ಬೇರೊಬ್ಬರ ಮನೆಯಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಿವ ಟಿವಿ ಪಾಠ, ಶಿಕ್ಷಕರ ಮೊಬೈಲ್‌ ಪಡೆದುಕೊಂಡು ಕೊರತೆ ನೀಗಿಸಿಕೊಂಡಿದ್ದಾನೆ. ಶೇ. 98  ಅಂಕಗಳ ನಿರೀಕ್ಷೆಯೊಂದಿಗೆ ಓದಿದ್ದೇ ಆದರೆ ಶೇ. 97.12 ಅಂಕ ಬಂದಿರುವುದು ತೃಪ್ತಿ ಇದೆ. ಮುಂದೆ ಪಿಯು ಕಲಾ ಶಿಕ್ಷಣ ಆಯ್ಕೆ ಮಾಡಿಕೊಂಡು ಮುಂದೆ ಐಎಎಸ್‌ ಮಾಡುವ ಗುರಿ ಹೊಂದಿದ್ದೇನೆ. ಪಿಯು ಕಲಾ ಶಿಕ್ಷಣ
ಮುಂದುವರಿಸಬೇಕೆಂದು ಇನ್ನು ನಿರ್ಧರಿಸಿಲ್ಲ.

ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಈ ಪರಿಸ್ಥಿತಿಯಲ್ಲಿ ಯಾರಾದರೂ ನೆರವಿಗೆ ಬರುವ ವಿಶ್ವಾಸವಿದೆ ಎನ್ನುತ್ತಾನೆ ಬಾಳಪ್ಪ ಬಂಡ್ರಕಲ್‌.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.