ಒಲಿಂಪಿಕ್ ಚಾಂಪಿಯನ್ ಟಕಹಾಶಿ ನಿವೃತ್ತಿ
Team Udayavani, Aug 20, 2020, 9:57 PM IST
ಟೋಕಿಯೊ: ಜಪಾನಿನ ಒಲಿಂಪಿಕ್ ವನಿತಾ ಡಬಲ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಅಯಾಕಾ ಟಕಹಾಶಿ ಮುಂದಿನ ವರ್ಷ ಈ ಕಿರೀಟವನ್ನು ಉಳಿಸಿಕೊಳ್ಳುವ ರೇಸ್ನಲ್ಲಿ ಕಾಣಸಿಗುವುದಿಲ್ಲ. ಅವರು ಗುರುವಾರ ಬ್ಯಾಡ್ಮಿಂಟನ್ ಬಾಳ್ವೆಗೆ ವಿದಾಯ ಘೋಷಿಸಿದರು. 2016ರ ರಿಯೋ ಒಲಿಂಪಿಕ್ ವನಿತಾ ಡಬಲ್ಸ್ ಚಾಂಪಿ ಯನ್ಶಿಪ್ ಫೈನಲ್ನಲ್ಲಿ ಅಯಾಕಾ ಟಕಹಾಶಿ- ಮಿಸಾಕಿ ಮಟ್ಸುಟೊಮೊ ಸೇರಿಕೊಂಡು ಡೆನ್ಮಾರ್ಕ್ನ ಕ್ರಿಸ್ಟಿನಾ ಪೆಡರ್ಸೆನ್-ಕಮಿಲ್ಲಾ ರೈಟರ್ ಜೋಡಿಯನ್ನು ಹಿಮ್ಮೆಟ್ಟಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
ದೈಹಿಕ ಕ್ಷಮತೆ ಅಸಾಧ್ಯ
ಕೊರೊನಾ ಕಾರಣದಿಂದ ಟೋಕಿಯೊ ಒಲಿಂಪಿಕ್ಸ್ ಒಂದು ವರ್ಷ ಮುಂದೂಡಲ್ಪಟ್ಟ ಕಾರಣ ಟಕಹಾಶಿ ವಿದಾಯದ ನಿರ್ಧಾರ ತೆಗೆದುಕೊಂಡಿದ್ದಾರೆ. 30 ವರ್ಷದ ತನಗೆ ಇನ್ನೊಂದು ವರ್ಷ ಕಾಲ ದೈಹಿಕ ಕ್ಷಮತೆಯನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗದು ಎಂದು ಅವರು ಹೇಳಿದ್ದಾರೆ. ಟಕಹಾಶಿ ಕೊನೆಯ ಸಲ ಮಾರ್ಚ್ನಲ್ಲಿ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಆಡಲಿಳಿದಿದ್ದರು. ಮಿಸಾಕಿ ಮಟ್ಸುಟೊಮೊ ಅವರೇ ಟಕಹಾಶಿ ಜತೆಗಾರ್ತಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ