ಮುರಿದ ಮನೆಯಲ್ಲಿ ಹರಿದ ಬದುಕು!

ಆತಂಕದಲ್ಲಿ ಜೀವನ ಸಾಗಿಸುತ್ತಿದೆ ಅಂಗವಿಕಲ ಕುಟುಂಬ

Team Udayavani, Sep 20, 2020, 6:32 PM IST

ಮುರಿದ ಮನೆಯಲ್ಲಿ ಹರಿದ ಬದುಕು!

ಮರಿಯಮ್ಮನಹಳ್ಳಿ: ಹೊಸಪೇಟೆ ತಾಲೂಕಿನ ಕಟ್ಟಕಡೆಯ ಗ್ರಾಮವಾದ ಪೋತಕಟ್ಟೆ ಗ್ರಾಮದಲ್ಲಿ ಅರ್ಧ ಗೋಡೆ ಬಿದ್ದಿರುವ ತುಂಬಾ ಶಿಥಿಲಾವಸ್ಥೆಯಲ್ಲಿರುವ ಮನೆಯೊಂದರಲ್ಲಿ ಇಬ್ಬರು ಅಂಗವಿಕಲರನ್ನು ಒಳಗೊಂಡ ಕುಟುಂಬವೊಂದು ತೀವ್ರ ಆತಂಕದಲ್ಲಿ ಜೀವನ ದೂಡುತ್ತಿದೆ.

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪೋತಲಕಟ್ಟೆ ಗ್ರಾಮದಲ್ಲಿ 55 ವರ್ಷದ ಸೋಮಪ್ಪ ಅಂಗವಿಕಲ (ಕಿವುಡುತನ) ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳು ಒಬ್ಬ ಮಗಳಿಗೆ ಬುದ್ಧಿಮಾಂದ್ಯತೆ ಹಾಗೂ ಪೂರ್ಣ ಅಂಗವಿಕಲತೆ ಇದೆ. ಇವರ ಹದಿನೇಳು ವರ್ಷದ ಮಗ ಕೊಟ್ರೇಶ ದೈಹಿಕವಾಗಿ ಬೌದ್ಧಿಕವಾಗಿ ಚೆನ್ನಾಗಿದ್ದರೂ ಕುಟುಂಬ ನಿರ್ವಹಣೆಗಾಗಿ ನಾಲ್ಕನೇ ತರಗತಿ ಓದುವಾಗಲೇ ಶಾಲೆಬಿಟ್ಟು ತನ್ನ ಭವಿಷ್ಯದ ಬದುಕನ್ನೇ ಕತ್ತಲೆಗೆ ದೂಡಿ ತಾನೂ ಕೂಲಿ ಕೆಲಸಕ್ಕೆ ಹೋಗುತ್ತಾ ಕುಟುಂಬಕ್ಕೆ ಆಸರೆಯಾಗಿರುವ ಕತೆ ಕೇಳಿದರೆ ಎಂಥವರಿಗೂ ಕಣ್ಣೀರು ಬರುತ್ತದೆ.

ಸೋಮಪ್ಪನ ಹೆಂಡತಿ ನಾಗರತ್ನಮ್ಮ ಹುಟ್ಟಿನಿಂದಲೇ ಬುದ್ಧಿಮಾಂದ್ಯತೆ ಹಾಗೂ ಪೂರ್ಣ ಅಂಗವಿಕಲತೆಯಿಂದ ಬಳಲುತ್ತಿರುವ ಸುಮಾರು ಹದಿನಾರು ವರ್ಷದ ಮಗಳು ರೇಖಾಳ ಆರೈಕೆಯಲ್ಲಿಯೇ ಕಾಲದೂಡುವಂತಾಗಿದೆ. ನಮ್ಮಪ್ಪನಿಗೆ ವಯಸ್ಸಾಯಿತು ಸರ್‌ ಅವರಿಗೆ ಕಿವಿನೂ ಸರಿಯಾಗಿ ಕೇಳಸಲ್ಲ. ಅವರು ಕೆಲಸಮಾಡೋಕೆ ಆಗಲ್ಲ ಅಂತ ಮಗ ಕೊಟ್ರೇಶ ಶಾಲೆ ಓದೋದು ಬಿಟ್ಟು ಕೂಲಿ ಹೋಗುತ್ತಿದ್ದಾನೆ ಎಂಬ ಸಂಗತಿ ನಿಜಕ್ಕೂ ಎಂಥವರಿಗೂ ಮರುಕವುಂಟಾಗುತ್ತದೆ. ಕೆಲಸಮಾಡುವ ಕಡೆ ಹಣ ಪಡೆಯದೇ ಕಾಳು ಕಡಿ ಪಡೆಯುತ್ತಾನೆ ಕೆಲವೊಮ್ಮೆಬರುವ ಅಲ್ಪಾದಾಯದಲ್ಲೇ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಗಳ ಅಂಗವಿಕಲರ ಮಾಸಾಶನ 600 ರೂಪಾಯಿ ಬರುತ್ತಿದೆ ಆದರೂ ಜೀವನ ಸುಧಾರಣೆ ಆಗುತ್ತಿಲ್ಲ. ಕೊಟ್ರೇಶ್‌ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನಂತೆ ಅಂತಹ ಹುಡುಗ ಶಾಲೆಬಿಟ್ಟಿರುವುದು ಆತನ ಭವಿಷ್ಯವೇ ಹಾಳಾಗಿದೆ ಎನ್ನುತ್ತಾರೆ ಗ್ರಾಮದ ಸಮೂಹ ಶಕ್ತಿ ಸಂಘಟನೆ ದೇವರಾಜ್‌ ಅವರು.

ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಜೀವ ಭಯದಿಂದಲೇ ದಿನಗಳನ್ನು ದೂಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಮನೆಯ ಅರ್ಧ ಗೋಡೆ ಕುಸಿದಿದೆ. ಇಂತಹ ಕಡುಬಡವರು ಹಾಗೂ ಅಂಗವಿಕಲರ ಕುಟುಂಬಗಳಿಗೆ ಆಶ್ರಯ ಮನೆಗಳನ್ನು ಒದಗಿಸಲು ಸರ್ಕಾರ ವಿಶೇಷ ಕೋಟಾಗಳಲ್ಲಿ ಅವಕಾಶ ಕಲ್ಪಿಸಿದ್ದರೂ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇವರೆಲ್ಲಾ ಆತಂಕದಲ್ಲಿ ಬದುಕುವಂತಾಗಿದೆ. ಐದಾರು ವರ್ಷಗಳಿಂದ ಊರಾಗ ಗ್ರಾಮಸಭೆಗಳು ನಡೆದಾಗೆಲ್ಲಾ ಆಶ್ರಯ ಮನೆಕೊಡಿಸಿ ಅಂತಬೇಡಿಕೊಂಡ್ರೂ ಯಾರೂ ನಮ್ಮ ಮಾತಿಗೆ ಬೆಲೆಕೊಡ್ತಿಲ್ಲ ಅಂತ ಸೋಮಪ್ಪ ಅಳಲು ತೋಡಿಕೊಳ್ಳುತ್ತಾರೆ.

ನಾನು ಬುದ್ಧಿಮಾಂದ್ಯ ಮಗಳ ಚಾಕರಿ ಮಾಡಿಕೋತ ಮನ್ಯಾಗಾ ಇರ್ತಿನಿ ಸರಾ. ನಮ್ಮ ಮಗ ಸಾಲಿಬಿಟ್ಟು ದುಡಿಯಾಕ ಹೋಗಾದು ತಾಯಿಯಾದ ನನಗೆ ಹೊಟ್ಯಾಗ ಸಂಕಟಾಕೈತಿ. ಬಡತನ ಇದ್ರೂ ಪರವಾಗಿಲ್ಲ ನನ್ನ ಮಗಳಿಗೆ ಇಂಥ ಸ್ಥಿತಿ ಬರಬಾರದಿತ್ತು. ನಾನೂ ದುಡಿದು ನಮ್ಮ ಮಕ್ಕಳನ್ನ ಓದಿಸ್ತಿದ್ವಿ.ದೇವರಿಗೆ ನಮ್ಮ ಮ್ಯಾಗ ಕರುಣೀನಾ ಇಲ್ಲದಂಗಾಗೈತಿ ನನ್ನ ಮಗ ಬಾಳ ಜಾಣ ಅದಾನಂತ ಮೆಷ್ಟರು ಹೇಳ್ತಾ ಇದ್ರು ಆದರ ನಮ್‌ ಕಷ್ಟಕ್ಕ ಅವನೂ ಓದಾದು ಬಿಟ್ಟು ಕೂಲಿ ಹೋಗಾಕತ್ಯಾನ.-ನಾಗರತ್ನಮ್ಮ, ಸೋಮಪ್ಪನ ಹೆಂಡತಿ

ಇವರ ಮನೆ ಹಿಂಭಾಗದ ಗೋಡೆ ಅರ್ಧ ಕುಸಿದು ಬಿದ್ದಿದೆ. ಈ ಕುಟುಂಬಕ್ಕೆ ಆಶ್ರಯ ಮನಿ ಕೊಡುವಲ್ಲಿ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ಮಾಡಿದ್ದಾರೆ. ಅದಕ್ಕೆ ಈಗ ನಮ್ಮ ಸಮೂಹ ಶಕ್ತಿ ಸಂಘಟನೆಯಿಂದ ವಸತಿ ಸಚಿವರಿಗೆ ಅರ್ಜಿ ಬರೆದು ಕಳಿಸಿದ್ದೇವೆ. ಈ ಕುಟುಂಬಕ್ಕೆ ನ್ಯಾಯ ಒದಗಿಸುವವರೆಗೆ ಸಂಘಟನೆ ಜೊತೆಗಿರುತ್ತದೆ. – ದೇವರಾಜ್‌, ಸಮೂಹ ಶಕ್ತಿ ಸಂಘಟನೆ ಪ್ರತಿನಿಧಿ

 

-ಎಂ. ಸೋಮೇಶ್‌ ಉಪ್ಪಾರ

ಟಾಪ್ ನ್ಯೂಸ್

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

Hassan Pen Drive Case; ಕಾರ್ತಿಕ್‌ ಪೆನ್‌ಡ್ರೈವ್‌ ಕೊಟ್ಟಿದ್ದು ನಿಜ: ದೇವರಾಜೇಗೌಡ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.