ಚಂದ್ರನಲ್ಲಿ ಮೊದಲ ಮಹಿಳೆ ಇಳಿಸಲು ನಾಸಾ ಸಿದ್ಧತೆ
Team Udayavani, Sep 23, 2020, 6:08 AM IST
ವಾಷಿಂಗ್ಟನ್: 2024ಕ್ಕೆ ಮಾನವ ಸಹಿತ ಚಂದ್ರಯಾನದ ಗುರಿ ಹಾಕಿಕೊಂಡಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಚಂದ್ರನ ಅಂಗಳದಲ್ಲಿ ಮೊದಲ ಮಹಿಳೆಯನ್ನು ಇಳಿಸಲು ಸಿದ್ಧವಾಗುತ್ತಿದೆ. ಈ ಐತಿಹಾಸಿಕ ಯೋಜನೆಗಾಗಿ ಸಿದ್ಧವಾಗುತ್ತಿರುವ ಲ್ಯಾಂಡರ್ನಲ್ಲಿ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಗಗನಯಾತ್ರಿಗಳು ಇರಲಿದ್ದಾರಂತೆ.
ಈ ಮಾನವಸಹಿತ ಚಂದ್ರಯಾನ ಯೋಜನೆಗೆ ಒಟ್ಟು 28 ಶತಕೋಟಿ ಅಮೆರಿಕನ್ ಡಾಲರ್ ಖರ್ಚಾಗಲಿದ್ದು, ಕೇವಲ ಲ್ಯಾಂಡರ್ ಮಾದರಿಗೆ 16 ಶತಕೋಟಿ ಡಾಲರ್ ವ್ಯಯಿಸ ಲಾಗುತ್ತದಂತೆ.
ಚಂದ್ರನ ಮೇಲೆ ಮೊದಲ ಮಾನವನನ್ನು ಇಳಿಸಿದ ಗರಿಮೆ ಅಮೆರಿ ಕಕ್ಕಿದೆ. ಆದರೆ, ಈ ಬಾರಿ ಮೂನ್ ಮಿಷನ್ ಹಿಂದಿನ ಬಾರಿ ಯಂತೆ ಚಂದ್ರನ ಸಮಭಾಜಕದಲ್ಲಿ ಇಳಿಯುವುದಿಲ್ಲ, ಬದಲಾಗಿ ದಕ್ಷಿಣ ತುದಿಯಲ್ಲಿ ಇಳಿಯಲಿದೆ ಎಂದು ನಾಸಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಮ್ ಬ್ರಿಡೆನ್ಸ್ಟೈನ್ ಹೇಳುತ್ತಾರೆ.
ಚಂದ್ರನ ಅಂಗಳದಲ್ಲಿ ಇಳಿಯಲಿರುವ ಮೊದಲ ಮಹಿಳೆ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಜೆಫ್ ಬೆಜೋಸ್ರ ಬ್ಲೂ ಒರಿಜಿನ್, ಎಲಾನ್ ಮಸ್ಕ್ರ ಸ್ಪೇಸ್ ಎಕ್ಸ್ನಂಥ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಸಾ ಈ ಯೋಜನೆಗೆ ಸಿದ್ಧತೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು