ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?


Team Udayavani, Sep 23, 2020, 12:44 PM IST

ಅಂಪೈರ್ ವಿರುದ್ಧ ಮತ್ತೆ ಗರಂ ಆದ ಕ್ಯಾಪ್ಟನ್ ಕೂಲ್ ಧೋನಿ : ಆಗಿದ್ದೇನು ಗೊತ್ತಾ ?

ಶಾರ್ಜಾ: ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮಂಗಳವಾರ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯ ವೀಕ್ಷಕರಿಗೆ ಭರಪೂರ ಮನರಂಜನೆ ನೀಡಿ ಮುಕ್ತಾಯ ಕಂಡಿದೆ. ಅಂತಿಮವಾಗಿ ಚೆನ್ನೈ ಹೋರಾಟ ಮಾಡಿ ಸೋಲೊಪ್ಪಿಕೊಂಡಿದ್ದು,ರಾಜಸ್ಥಾನ್ ಗೆಲುವಿನ ನಗೆಬೀರಿದೆ.

ಟಾಸ್ ಸೋತು ಬ್ಯಾಟಿಂಗ್ ಗೀಳಿದ ರಾಜಸ್ಥಾನ್ ರಾಯಲ್ಸ್ ಆರಂಭದಿಂದಲೇ ಸಂಜು ಸ್ಯಾಮ್ಸನ್ ಹಾಗೂ  ಸ್ಟಿವ್ ಸ್ಮಿತ್ ಜೊತೆಯಾಟ ದೊಂದಿಗೆ ಕ್ರಿಕೆಟ್ ಪ್ರಿಯರಿಗೆ ಮನರಂಜನೆ ನೀಡಿದರು. ಮೊದಲ ಇನ್ನಿಂಗ್ಸ್ ನ 18 ನೇ ಓವರ್ ನಲ್ಲಿ ಕ್ರಿಸ್ ನಲ್ಲಿದ್ದ ಟಾಮ್ ಕರನ್ ಗೆ ದೀಪಕ್ ಚಹಾರ್ ಎಸೆದ ಚೆಂಡು ಬ್ಯಾಟಿನ ತುದಿ ತಾಗಿ ಕೀಪರ್ ಎಂ.ಎಸ್.ಧೋನಿ ಕೈಗೆ ಸೇರುತ್ತದೆ. ಔಟಿನ ಮನವಿ ಮಾಡಿದ ಎಸತೆಗಾರನ ಧ್ವನಿಗೆ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಾರೆ. ದಾಂಡಿಗ ಟಾಮ್ ಕರನ್ ರಿವ್ಯೂ ಗಾಗಿ ಹೋದರೆ, ಇದ್ದ  ರಿವ್ಯೂ ಬಳಸಿದ್ದರಿಂದ ಟಾಮ್ ಕರನ್ ಪೆವಿಲಿಯನ್ ಅತ್ತ ಹೋಗುತ್ತಿದ್ದರು, ಆ ಕೂಡಲೇ ಲೆಗ್ ಅಂಪೈರ್ ಮುಖ್ಯ ತೀರ್ಪುಗಾರರೊಂದಿಗೆ ಚರ್ಚಿಸಿ ಟಾಮ್ ಕರನ್ ರನ್ನು ನಿಲ್ಲುವಂತೆ ಹೇಳುತ್ತಾರೆ.

ಲೆಗ್ ಅಂಪೈರ್ ಮಾಡಿದ ಮನವಿನಿಂದ ದೀಪಕ್ ಚಹಾರ್ ಎಸತೆದಿಂದ ಧೋನಿ ಪಡೆದ ಕ್ಯಾಚ್ ನ್ನು ಮತ್ತೆ ಪರಿಶೀಲಿಸಿದಾಗ ಕ್ಯಾಚ್ ಪಡೆಯುವ ಮುನ್ನ ಚೆಂಡು ಪಿಚ್ ಆಗಿರುವುದರಿಂದ ನಿರ್ಣಯಕರು ತಮ್ಮ ತೀರ್ಮಾನವನ್ನು ಬದಲಾಯಿಸಿ ನಾಟ್ ಔಟ್ ಎಂದು ಹೇಳುತ್ತಾರೆ. ಈ ನಿರ್ಧಾರವನ್ನು ಪ್ರಶ್ನೆ ಮಾಡಿದ ಚೆನ್ನೈ ತಂಡದ ಕಪ್ತಾನ ಎಂ.ಎಸ್ ಧೋನಿ ನಿರ್ಣಾಯಕರ ಜೊತೆ ಒಂದಿಷ್ಟು ಹೊತ್ತು ನಿರ್ಧಾರದ ಕುರಿತು ಮಾತಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಾರೆ. ಧೋನಿಯವರ ಇಂಥ ವರ್ತನೆ ಸದ್ಯ ಅವರ ಕೂಲ್ ಕ್ಯಾಪ್ಟನ್ ಹಣೆಪಟ್ಟಿಯನ್ನು ಪ್ರಶ್ನೆ ಮಾಡಿದಂತೆ ಇದೆ.

ಧೋನಿ ನಿರ್ಣಾಯಕರೊಂದಿಗೆ ಈ ರೀತಿಯಾಗಿ ತಾಳ್ಮೆ ಕಳೆದುಕೊಂಡು ಚರ್ಚೆ ಮಾಡಿದ್ದು ಇದೇ ಮೊದಲಲ್ಲ.2019 ರಲ್ಲಿ ರಾಜಸ್ಥಾನ್ ವಿರುದ್ಧ  ಜೈಪುರದಲ್ಲಿ ನಡೆದ ಪಂದ್ಯದಲ್ಲೂ ಧೋನಿ ಅಂಪೈರ್ ನಿರ್ಣಾಯವನ್ನು ಪ್ರಶ್ನಿಸಿ ಮೈದಾನಕ್ಕೆ ಬಂದದ್ದನ್ನು ಸ್ಮರಿಸಿಕೊಳ್ಳಬಹುದು.

ಚೆನ್ನೈ ತಂಡಕ್ಕೆ ಅಂತಿಮ ಮೂರು ಎಸೆತದಲ್ಲಿ 8 ರನ್ ಗಳ ಅವಶ್ಯಕತೆಯಿದ್ದಾಗ ಮಿಚೆಲ್ ಸ್ಯಾಂಟ್ನರ್ ಅವರಿಗೆ ಪಂದ್ಯದ ಅಂತಿಮ ಓವರ್ ಎಸೆದ ಬೆನ್ ಸ್ಟೋಕ್ಸ್ ಅವರ ನಾಲ್ಕನೇ ಚೆಂಡು ಫುಲ್ ಟಾಸ್ ಆಗಿ ಬಿದ್ದಾಗ ಅದನ್ನು ಪಂದ್ಯದ ನಿರ್ಣಾಯಕರಲ್ಲಿ ಒಬ್ಬರಾಗಿದ್ದ ಉಲ್ಲಾಸ್ ಗಾಂಧೆ ನೋ ಬಾಲ್ಎಂದು ಸೂಚಿಸಿದ್ದರು. ಆದರೆ ಲೆಗ್ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಅಂತಿಮ ನಿರ್ಧಾರದಿಂದ ಎಮ್.ಎಸ್ ಧೋನಿ ತಾಳ್ಮೆ ಕಳೆದುಕೊಂಡು ನಿರ್ಣಾಯಕರೊಂದಿಗೆ ಚರ್ಚೆ ಮಾಡಿದ್ದರು.

ಟಾಪ್ ನ್ಯೂಸ್

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

1-reee

Chess: ಸೋತ ಕಾರಣಕ್ಕೆ ಕಂಪ್ಯೂಟರ್‌ ಸ್ಕ್ರೀನ್‌ ಒಡೆದ ಕಾರ್ಲ್ಸನ್‌

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

1-wqewqe

Impact player ನಿಯಮದಿಂದ ಬೌಲರ್‌ಗಳಿಗೆ ಹೊಡೆತ: ಶಾಬಾಜ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

1-eewewqe

Attack; ಹಾರ ಹಾಕುವ ನೆಪದಲ್ಲಿ ಕೈ ಅಭ್ಯರ್ಥಿ ಕನ್ಹಯ್ಯ ಮೇಲೆ ದಾಳಿ!

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.