ಸೋಂಕು ಹೆಚ್ಚಾದರೂ, ಪಾಸಿಟಿವಿಟಿ ದರ ಕುಸಿತ

ಜುಲೈನಲ್ಲಿ ಶೇ.24 ಇದ್ದ ಪಾಸಿಟಿವಿಟಿ ದರ 12ಕ್ಕೆ ಇಳಿಕೆ

Team Udayavani, Sep 24, 2020, 1:22 PM IST

ಸೋಂಕು ಹೆಚ್ಚಾದರೂ, ಪಾಸಿಟಿವಿಟಿ ದರ ಕುಸಿತ

ಬೆಂಗಳೂರು: ನಗರದಲ್ಲಿ ನಿತ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜುಲೈನಿಂದೀಚೆಗೆ ಪ್ರಕರಣಗಳು ದುಪ್ಪಟ್ಟಾಗಿರಬಹುದು. ಆದರೆ, ಸೋಂಕು ಪರೀಕ್ಷೆಯ ಪಾಸಿಟಿವಿಟಿ ದರ ಮಾತ್ರ ಅರ್ಧಕ್ಕರ್ಧ ಕುಸಿದಿದೆ.

ಬೆಂಗಳೂರಿನಲ್ಲಿ ಜುಲೈ ಅಂತ್ಯಕ್ಕೆ 55 ಸಾವಿರ ಇದ್ದ ಕೋವಿಡ್ ಪ್ರಕರಣಗಳು, ಆಗಸ್ಟ್‌ ಅಂತ್ಯಕ್ಕೆ 1.29 ಲಕ್ಷ ತಲುಪಿದ್ದವು ‌. ಸದ್ಯ ಸೆಪ್ಟೆಂಬರ್‌ 22ಕ್ಕೆ ಎರಡು ಲಕ್ಷ ಗಡಿದಾಟಿವೆ. ಜುಲೈಗಿಂತಲೂ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಸೋಂಕಿ ಗೊಳಗಾದವರ ಸಂಖ್ಯೆ ದುಪ್ಪಟ್ಟಾಗಿದೆ ಎಂಬ ಲೆಕ್ಕಾಚಾರವಿದೆ. ಇದಕ್ಕೆ ಸೋಂಕು ಪರೀಕ್ಷೆಗಳು ಮೂರು ಪಟ್ಟು ಹೆಚ್ಚಳವಾಗಿರುವುದು ಕಾರಣ ಎನ್ನಲಾಗುತ್ತಿದೆ. ಆದರೆ,ಇನ್ನೊಂದೆಡೆ” ಸೋಂಕಿನ ತೀವ್ರತೆಯು ಪ್ರಕರಣಗಳ ಸಂಖ್ಯೆಯನ್ನು ಆಧರಿಸುವುದಿಲ್ಲ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಆಧರಿಸಿರುತ್ತದೆ’ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಈ ಪ್ರಕಾರ ಜುಲೈನಲ್ಲಿ ನಗರದಲ್ಲಿ ಶೇ.24 ರಷ್ಟಿದ್ದ ಸೋಂಕು ಪಾಸಿಟಿವಿಟಿ ದರ ಪ್ರಸ್ತುತ ಶೇ.12ಕ್ಕೆ ಕುಸಿದಿದೆ.

ಏನಿದು ಪಾಸಿಟಿವಿಟಿ ದರ?: ಸೋಂಕು ಪರೀಕ್ಷೆಯಲ್ಲಿ ಪಾಸಿಟಿವಿಟಿದರಎಂದರೆ,ಸೋಂಕುಪರೀಕ್ಷೆಗೊಳಪಟ್ಟವರ 100 ಮಂದಿಯಲ್ಲಿ ಪೈಕಿ ಶೇ. ಎಷ್ಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ (ಪಾಸಿಟಿವ್‌) ಎಂಬುದಾಗಿದೆ. ಬಿಬಿಎಂಪಿ ಬುಲಿಟಿನ್‌ ಪ್ರಕಾರ ಜುಲೈನಲ್ಲಿ ನಿತ್ಯ ಸರಾಸರಿ 7,223 ಮಂದಿಯ ಪರೀಕ್ಷೆಗೆ ಒಳಪಟ್ಟಿದ್ದಾರೆ.ಈಪೈಕಿ 1,736 ಮಂದಿಯಲ್ಲಿ ಪಾಸಿಟಿವ್‌ ವರದಿ ಬಂದಿದ್ದು, ಪಾಸಿಟಿವಿಟಿ ದರ ಶೇ.24.05 ಇತ್ತು. ಆಗಸ್ಟ್‌ನಲ್ಲಿ ಪರೀಕ್ಷೆ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳವಾಗಿದ್ದು, ನಿತ್ಯ ಸರಾಸರಿ 18,519 ಮಂದಿ ಪರೀಕ್ಷೆ ನಡೆದಿದೆ.ಈಪೈಕಿ 2,489 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ.13ಕ್ಕೆ ಕುಸಿದಿದೆ.

ಅರ್ಧದಷ್ಟು ಕಡಿಮೆ: ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ಸಂಖ್ಯೆ ಜೂನ್‌ಗಿಂತಲೂ ನಾಲ್ಕು ಪಟ್ಟು ನಡೆದಿವೆ. ನಿತ್ಯ ಸರಾಸರಿ ನಡೆದ 26,363 ಮಂದಿ ಪರೀಕ್ಷೆಗೊಳಗಾಗಿದ್ದು, 3,254 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪಾಸಿಟಿವಿಟಿ ದರ ಶೇ.12ಕ್ಕೆ ಇಳಿಕೆಯಾಗಿದೆ. ಜುಲೈಗಿಂತಲೂ ಪ್ರಕರಣಗಳು ದುಪ್ಪಟ್ಟಾದರೂ, ಪಾಸಿಟಿವಿಟಿ ದರ ಅರ್ಧದಷ್ಟುಕಡಿಮೆಯಾಗಿದೆ.

ಹತ್ತರಲ್ಲಿ ಒಬ್ಬರಿಗೆ ಸೋಂಕು! :  ಜುಲೈನಲ್ಲಿ ಪಾಸಿಟಿವಿ ದರ ಶೇ.24ರಷ್ಟಿತ್ತು. ಅಂದರೆ, ಸೋಂಕು ಪರೀಕ್ಷೆಗೊಳಗಾದರ ನಾಲ್ವರಲ್ಲಿ ಸರಾಸರಿ ಒಬ್ಬರಿಗೆ ಸೋಂಕು ದೃಢಪಡುತ್ತಿತ್ತು. ಪ್ರಸ್ತುತ ಪಾಸಿಟಿವಿಟಿ ದರ ಶೇ.12ಕ್ಕೆ ಇಳಿದ್ದು, ಪರೀಕ್ಷೆಗೊಳಗಾದರ 10 ಮಂದಿಯಲ್ಲಿ ಸರಾಸರಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ :  ಬೆಂಗಳೂರು: ನಗರದಲ್ಲಿ ಬುಧವಾರ3,547 ಮಂದಿಗೆ ಕೋವಿಡ್  ತಗುಲಿದೆ. ಸೋಂಕು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ3536 ಮಂದಿ ಗುಣಮುಖರಾಗಿದ್ದು,23 ಸೋಂಕಿತರ ಸಾವಾಗಿದೆ. ಈ ಮೂಲಕ ನಗರದ ಒಟ್ಟಾರೆ ಸೋಂಕು ಪ್ರಕರಣಗಳು2.04 ಲಕ್ಷಕ್ಕೆ ತಲುಪಿವೆ. ಈ ಪೈಕಿ ಈಗಾಗಲೇ1.61ಲಕ್ಷ ಮಂದಿ ಗುಣಮುಖರಾಗಿದ್ದು,2738 ಮಂದಿ ಮೃತಪಟ್ಟಿದ್ದಾರೆ. ಇಂದಿಗೂ 39,971 ಮಂದಿ

ಆಸ್ಪತ್ರೆ, ಮನೆಗಳಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಮಂಗಳವಾರಕ್ಕೆ ಹೋಲಿಸಿದರೆ ನಗರದಲ್ಲಿ ಸೋಂಕು ಪ್ರಕರಣಗಳು400 ಹೆಚ್ಚಳ ವಾಗಿದ್ದು, ಗುಣಮುಖರು 400ಕಡಿಮೆಯಾಗಿದ್ದಾರೆ. ಇದರಿಂದಾಗಿ ಸಕ್ರಿಯ ಸೋಂಕು ಪ್ರಕರಣಗಳು ತುಸು ಏರಿಕೆಯಾಗಿವೆ. ಸೋಂಕಿತರ ಸಾವು ಒಂದು ಹೆಚ್ಚಳವಾಗಿದೆ.24051 ಸೋಂಕು ಪ್ರಕರಣಗಳು ನಡೆದಿದ್ದು, ಒಟ್ಟಾರೆ ಪರೀಕ್ಷೆಗಳ ಸಂಖ್ಯೆ 14.8 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ನಗರದ ಗುಣಮುಖ ದರ ಶೇ. 79.1, ಮರಣ ದರ ಶೇ.1.34, ಸಕ್ರಿಯ ಪ್ರಕರಣಗಳು ಶೇ.19.5 ರಷ್ಟಿದೆ.

ಎರಡು ತಿಂಗಳಿಂದ ಸೋಂಕು ಪರೀಕ್ಷೆಗಳು ಹೆಚ್ಚಳವಾಗುತ್ತಿದ್ದು, ಅಂತೆಯೇ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗಿವೆ. ಆದರೆ, ಪರೀಕ್ಷೆಯಲ್ಲಿ ಸೋಂಕು ದೃಢವಾಗುತ್ತಿರುವ ಪ್ರಮಾಣ ಮೊದಲಿಗಿಂತಲೂ ಕಡಿಮೆಯಾಗಿದೆ.ನಗರದಲ್ಲಿ ನಡೆಯುತ್ತಿರುವಕೊರೊನಾ ಪರೀಕ್ಷೆಗಳಲ್ಲಿ ಶೇ.12 ಪಾಸಿಟಿವಿಟಿ ದರವಿದ್ದು, ಅದು ಶೇ.5ಕ್ಕಿಂತಲೂ ಕಡಿಮೆ ಬರಬೇಕು. ಆಗ ಮಾತ್ರ ಸೋಂಕು ನಿಯಂತ್ರಣದಲ್ಲಿದೆ ಎಂದರ್ಥ. ಡಾ.ವಿ.ರವಿ, ಮುಖ್ಯಸ್ಥರು, ವೈರಾಲಜಿ ವಿಭಾಗ ನಿಮ್ಹಾನ್ಸ್‌

-ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.