ಗಾಂಧಿ ವೇಷಧಾರಿಯಿಂದ ಜಾಗೃತಿ

ಗ್ರಂಥ ಜೋಳಿಗೆ..ಮೋದಿ ಬಳಿಗೆ ಪಾದಯಾತ್ರೆ , 45ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಪ್ರೇರಣೆ

Team Udayavani, Oct 2, 2020, 5:20 PM IST

Gadaga-tdy-1

ಗದಗ: ದೆಹಲಿ ಕುತುಬ್‌ ಮಿನಾರ್‌ ಎದುರು ಗಾಂಧಿ ವೇಷಧಾರಿ ಮುತ್ತಣ್ಣ ತಿರ್ಲಾಪುರ.

ಗದಗ: ಗಾಂಧಿ ವೇಷ ಧರಿಸಿ ಸಾಮಾಜಿಕ ಸಮಸ್ಯೆಗಳು ಹಾಗೂ ಗ್ರಂಥ ಜೋಳಿಗೆ ಅಭಿಯಾನದ ಮೂಲಕ ಗಮನ ಸೆಳೆದಿರುವ ರೋಣ ತಾಲೂಕಿನ ಕರಕೀಕಟ್ಟಿ ಗ್ರಾಮದ ಮುತ್ತಣ್ಣ ತಿರ್ಲಾಪುರ ಗಾಂಧಿ  ಜಯಂತಿ ನಿಮಿತ್ತ “ಗ್ರಂಥ ಜೋಳಿಗೆ-ಮೋದಿ ಬಳಿಗೆ’ ಎಂಬ ಘೋಷಣೆಯೊಂದಿಗೆ ಪಾದಯಾತ್ರೆಯಲ್ಲಿ ದೆಹಲಿ ತಲುಪಿದ್ದಾರೆ. ಈ ನಡುವೆ ಸುಮಾರು 45ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗ್ರಂಥಾಲಯಗಳ ಸ್ಥಾಪನೆಗೆ ಪ್ರೇರಣೆಯಾಗಿದ್ದಾರೆ.

ಹೌದು. 51 ವರ್ಷದ ಮುತ್ತಣ್ಣ ತಿರ್ಲಾಪುರ ಶಾಲೆಯನ್ನೇ ಕಾಣದಿದ್ದರೂ ಸಾಮಾಜಿಕ ಸಮಸ್ಯೆಗಳು ಹಾಗೂ ಶಿಕ್ಷಣ ಪರ ಜಾಗೃತಿಗೆ ಎತ್ತಿದ ಕೈ. ಜಿಲ್ಲೆಯ ಕಪ್ಪತ್ತಗುಡ್ಡ ಮತ್ತು ಮಹದಾಯಿ ವಿಚಾರಗಳ ಕುರಿತು ಜನರು ಹೋರಾಟಕ್ಕಿಳಿಯುತ್ತಿದ್ದರೆ, ಗಾಂಧಿ ವೇಷ ಧರಿಸಿ, ಕೈಯಲ್ಲಿ ಕೋಲು ಹಿಡಿದು ಮುತ್ತಣ್ಣ ಪ್ರತ್ಯಕ್ಷವಾಗುತ್ತಿದ್ದರು. ಅದರಂತೆ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಕೋವಿಡ್ ತಡೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ನಿಷೇಧ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಕುರಿತು ಗಾಂಧಿ ವೇಷ ಧರಿಸಿ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದರು. ಇದೀಗ ಗ್ರಂಥ ಜೋಳಿಗೆ ಮೋದಿ ಬಳಿಗೆ ಎಂಬ ಘೋಷವಾಕ್ಯದೊಂದಿಗೆ ದೆಹಲಿಗೆ ಪಾದಯಾತ್ರೆ ಬೆಳೆಸಿದ್ದಾರೆ. ಸುಮಾರು 1,900 ಕಿ.ಮೀ. ದೂರವನ್ನು ಕೇವಲ ಒಂದು ತಿಂಗಳ ಅವ ಧಿಯಲ್ಲಿ ಕ್ರಮಿಸಿದ್ದು, ಕೆಲವೆಡೆ ಟ್ರಕ್‌ ಚಾಲಕರು ಹಾಗೂ ಖಾಸಗಿ ವಾಹನಗಳ ಸವಾರರು ನೆರವಾಗಿದ್ದಾರೆ.

ಏನಿದು “ಗ್ರಂಥ ಜೋಳಿಗೆ’? : ವೃತ್ತಿಯಲ್ಲಿ ಕೃಷಿ ಕಾರ್ಮಿಕ ಹಾಗೂ ಚಿಕ್ಕದೊಂದು ಹೋಟೆಲ್‌ ಹೊಂದಿರುವ ಮುತ್ತಣ್ಣ, ಭಿಕ್ಷೆ ರೂಪದಲ್ಲಿ ಬಂದಿರುವ ಪುಸ್ತಕಗಳನ್ನೇ ಮನೆಯಲ್ಲಿ ಅಚ್ಚುಕಟ್ಟಾಗಿ ಹೊಂದಿಸಿ, ಪುಟ್ಟದೊಂದು ಗ್ರಂಥಾಲಯವನ್ನಾಗಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ “ಗ್ರಂಥ ಜೋಳಿಗೆ-ಮೋದಿಯ ಬಳಿಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಹಾತ್ಮ ಗಾಂಧಿ ವೇಷಧಾರಿಯಾಗಿ ಪಾದಯಾತ್ರೆ ಬೆಳೆಸಿರುವ ಮುತ್ತಣ್ಣ, ಪ್ರತಿನಿತ್ಯ ಗರಿಷ್ಠ 50 ಕಿ.ಮೀ. ಗಳಂತೆ ಕ್ರಮಿಸಿದ್ದಾರೆ. ಈ ನಡುವೆ ರಾತ್ರಿ ವಾಸ್ತವ್ಯ ಮಾಡುವ ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಆರಂಭಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ಗ್ರಾಮದ ಯಾವುದಾದರೊಂದು ದೇವಸ್ಥಾನ ಹಾಗೂ ಸಮುದಾಯ ಭವನಗಳಲ್ಲಿ ಸಂಗ್ರಹಿಸಿ, ಗ್ರಂಥಾಲಯ ಆರಂಭಿಸಲು ಮುಂದೆ ಬಂದಿದ್ದಾರೆ. ಇದರಿಂದ ಮಕ್ಕಳು ಹಾಗೂ ಜನರ ಜ್ಞಾನಾರ್ಜನೆಗೆ ನೆರವಾಗುತ್ತದೆ ಎಂಬ ಪ್ರೇರಣಾದಾಯಕ ಮಾತುಗಳೊಂದಿಗೆ ಜನರಲ್ಲಿ ಸಾಕ್ಷರತೆಯ ಪ್ರಜ್ಞೆ ಮೂಡಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರದ ಗಿರಯಾಲಕೆಬಿ, ಎಂ.ಕೆ.ಹುಬ್ಬಳ್ಳಿ, ಕಿತ್ತೂರು, ಗೋಕಾಕ, ಕೊಳವಿ, ಉಪ್ಪಾರಟ್ಟಿ, ಬೆಡಕಿಹಾಳ, ಚಿಕ್ಕಬಾಗೇವಾಡಿ, ಹಿರೇಬಾಗೇವಾಡಿ, ಬೆಣಚಿನಮರಡಿ, ಅನಂತಪುರ, ಮಾಲಾಬಾದ, ಪಾರ್ತನಹಳ್ಳಿ, ಮಹಾರಾಷ್ಟ್ರದ ಹಿತ್ತಲಕಾರಂಜಿ ಸೇರಿದಂತೆ ಸುಮಾರು 45 ಗ್ರಾಮಗಳಲ್ಲಿ ಗ್ರಂಥಾಲಯಗಳು ಬಾಗಿಲು ತೆರೆದಿವೆ ಎನ್ನಲಾಗಿದೆ.

ಅ. 2 ರಂದು ದೆಹಲಿಯ ರಾಜಘಾಟ್‌ ನಲ್ಲಿರುವ ಬಾಪೂಜಿ ಸಮಾಧಿಯ ದರ್ಶನ ಪಡೆಯಬೇಕು. ಅವಕಾಶ ಸಿಕ್ಕರೆ, ಪ್ರಧಾನಮಂತ್ರಿಗಳನ್ನು ಕಂಡು, ಪುಸ್ತಕ ನೀಡಬೇಕೆಂಬ ಆಸೆಯಿತ್ತು. ಆದರೆ, ಕೋವಿಡ್‌-19 ಹಿನ್ನೆಲೆಯಲ್ಲಿ ಅದ್ಯಾವುದಕ್ಕೂ ಅನುತಿ ದೊರೆಯುವುದಿಲ್ಲ ಎಂಬುದು ಖಾತ್ರಿಯಾಗಿದ್ದರಿಂದ ಯಾರಿಗೂ ಮನವಿ ಸಲ್ಲಿಸಿಲ್ಲ. ಆದರೆ, ಪಾದಯಾತ್ರೆ ವೇಳೆ ಭಾಷೆ  ತಡಕಾದರೂ, ಸಾರ್ವಜನಿಕರು ಪ್ರೀತಿಯಿಂದ ಅನ್ನ, ಆಶ್ರಯ ಕಲ್ಪಿಸಿದರು. ಗ್ರಂಥಾಲಯ ಸ್ಥಾಪನೆಯೊಂದಿಗೆ ಗ್ರಾಮಕ್ಕೊಂದು ಲಕ್ಷ ವೃಕ್ಷ ಕಲ್ಪನೆ ಮೂಲಕ ಹಸಿರೀಕರಣ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಭವಿಷ್ಯದಲ್ಲಿ ಶಿಕ್ಷಣ ಮತ್ತು ಹಸಿರ ಸಿರಿಯಿಂದ ಸಮೃದ್ಧವಾಗಬೇಕು.  –ಮುತ್ತಣ್ಣ ಚನಬಸ್ಸಪ್ಪ ತಿರ್ಲಾಪೂರ, ಗಾಂಧಿ ವೇಷಧಾರಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.