ಮಕ್ಕಳಿಗೆ ಬೇಕು ಕೋಟಿ ಮಾಸ್ಕ್ !

ಸ್ಥಳೀಯಾಡಳಿತಗಳ ನೆರವು ಪಡೆಯಲು ಶಿಕ್ಷಣ ಇಲಾಖೆ ಇಂಗಿತ

Team Udayavani, Oct 6, 2020, 6:30 AM IST

ಮಕ್ಕಳಿಗೆ ಬೇಕು ಕೋಟಿ ಮಾಸ್ಕ್ !

ಬೆಂಗಳೂರು: ಒಂದು ವೇಳೆ ರಾಜ್ಯದಲ್ಲಿ ಶಾಲೆ ಆರಂಭವಾದರೆ ಸರಕಾರಿ ಶಾಲಾ ಮಕ್ಕಳಿಗೆ ವಾರವೊಂದಕ್ಕೆ ಸರಾಸರಿ ಒಂದು ಕೋಟಿಗೂ ಅಧಿಕ ಮಾಸ್ಕ್ ಅಗತ್ಯವಿದೆ! ದೊಡ್ಡ ಪ್ರಮಾಣದಲ್ಲಿ ಮಾಸ್ಕ್ ಇಲಾಖೆ ಯಿಂದಲೇ ನಿರಂತರ ಪೂರೈಕೆ ಕಷ್ಟಸಾಧ್ಯ. ಹೀಗಾಗಿ ಸ್ಥಳೀ ಯಾಡಳಿತಗಳ ನೆರವು ಪಡೆ ಯಲು ಶಿಕ್ಷಣ ಇಲಾಖೆ ಮುಂದಾ ಗಿದೆ. ಶಾಲಾರಂಭಕ್ಕೆ ಮುನ್ನವೇ ಶಾಲಾ ಮಕ್ಕಳಿಗೆ ಮಾಸ್ಕ್ ಪೂರೈ ಸುವ ಹೊಣೆಯನ್ನು ಸ್ಥಳೀಯ ಸಂಸ್ಥೆಗಳ ಹೆಗಲಿಗೆ ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.

ಕೊರೊನಾ ನಡುವೆ ಶಾಲಾ ರಂಭದ ಚರ್ಚೆ ಈಗಾಗಲೇ ಮುನ್ನೆಲೆಗೆ ಬಂದಿದೆ. ಕೇಂದ್ರ ಗೃಹ ಇಲಾಖೆಯು ಅ. 15ರ ಬಳಿಕ ಪರಿಸ್ಥಿತಿ ಆಧರಿಸಿ ಆಯಾ ರಾಜ್ಯ ಸರಕಾರಗಳು ಶಾಲಾರಂಭದ ನಿರ್ಧಾರ ತೆಗೆದು ಕೊಳ್ಳಲು ಅನುಮತಿ ನೀಡಿದೆ. ಹೀಗಾಗಿ ರಾಜ್ಯದಲ್ಲೂ ಸಿದ್ಧತೆ ಮಾಡಿಕೊಂಡಿರುವ ಶಿಕ್ಷಣ ಇಲಾಖೆಯು ಪ್ರಮಾಣಿತ ಕಾರ್ಯ ಸೂಚಿ ವಿಧಾನ (ಎಸ್‌ಒಪಿ)ವನ್ನು ರೂಪಿಸಿದೆ.

ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿ, ದಿನಕ್ಕೆ ಎರಡು ಮಾಸ್ಕ್ ಇರುವಂತೆ ವ್ಯವಸ್ಥೆ ಮಾಡ ಬೇಕು ಎಂದೂ ಎಸ್‌ಒಪಿಯಲ್ಲಿ ಉಲ್ಲೇಖೀಸಿದೆ. ಪ್ರತಿದಿನ ಎರಡು ಬಾರಿ ಮಾಸ್ಕ್ ಬದಲಿಸಬೇಕಾಗುತ್ತದೆ. ಅವು ಗಳನ್ನೇ ವಾರದ ಇತರ ದಿನಗಳಲ್ಲೂ ಬಳಸಬೇಕಾಗುತ್ತದೆ. ಹೀಗಾಗಿ ಪ್ರತಿ ಯೊಬ್ಬ ವಿದ್ಯಾರ್ಥಿಗೆ ವಾರಕ್ಕೆ ಕನಿಷ್ಠ ಎರಡು ಮಾಸ್ಕ್ ನೀಡಬೇಕಾಗುತ್ತದೆ. ನಿತ್ಯವೂ ಒಗೆದು ಬಳಸಿದರೆ ಒಂದು ಮಾಸ್ಕ್ ಒಂದು ವಾರವಷ್ಟೇ ಬಾಳಿಕೆ ಬರಲು ಸಾಧ್ಯ. ಹೀಗಾಗಿ ಮಕ್ಕಳಿಗೆ ಬೇಕಾಗುವಷ್ಟು ಮಾಸ್ಕ್ ಗಳನ್ನು ಆಯಾ ಸ್ಥಳೀಯ ಸಂಸ್ಥೆಗಳ ಮೂಲಕವೇ ಒದಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಇಲಾಖೆಯ ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.

50 ಲಕ್ಷ ವಿದ್ಯಾರ್ಥಿಗಳು
ರಾಜ್ಯದ ಸರಕಾರಿ ಶಾಲಾ ವ್ಯವಸ್ಥೆಯಲ್ಲಿ 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಪಠ್ಯಪುಸ್ತಕ, ಶೂ, ಸಾಕ್ಸ್‌, ಸಮವಸ್ತ್ರವನ್ನು ಉಚಿತವಾಗಿ ನೀಡುವ ಜತೆಗೆ ಮಾಸ್ಕ್ ಕೂಡ ನೀಡ ಬೇಕಾಗುವ ಸಾಧ್ಯತೆಯಿದೆ. ಹೀಗಾಗಿ ಸ್ಥಳೀಯವಾಗಿಯೇ ಮಾಸ್ಕ್ ವ್ಯವಸ್ಥೆ ಮಾಡಿಕೊಳ್ಳಲು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗೆ ಜವಾಬ್ದಾರಿ ವಹಿಸುವ ಜತೆಗೆ ಸ್ಥಳೀಯಾಡಳಿತ ಗಳು, ಸ್ವಯಂಸೇವಾ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳ ಗಮನ ಸೆಳೆಯಲು ಸೂಚನೆ ನೀಡುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 56.9 ಲಕ್ಷ ವಿದ್ಯಾರ್ಥಿಗಳಿಗೆ ವಾರಕ್ಕೆ ಸರಾಸರಿ 1 ಕೋಟಿಗೂ ಅಧಿಕ ಮಾಸ್ಕ್ ಬೇಕಾಗುತ್ತದೆ.

ನಿರಂತರ ಪೂರೈಕೆ ಅಗತ್ಯ
ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಗಿಂ ದಾಗ್ಗೆ ಮಾಸ್ಕ್ ಪೂರೈಕೆ ಇಲಾಖೆ ಮಾಡಬೇಕು ಅಥವಾ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಆದ್ದರಿಂದ ಇಲಾಖೆಯೇ ಮಾಸ್ಕ್ ಪೂರೈಕೆ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

ಶಾಲಾರಂಭ: ಕೇಂದ್ರದಿಂದ ಹೊಸ ನಿಯಮ
ಹಾಜರಾತಿಯಲ್ಲಿ ಸಡಿಲಿಕೆ, ಶಾಲೆಯ ಆವರಣ ಮತ್ತು ತರಗತಿ ಗಳ ಸೋಂಕು ನಿವಾರಣೆ, ಮೂರು ವಾರಗಳ ವರೆಗೆ ಪರೀಕ್ಷೆಗೆ ತಡೆ, ಮನೆಯಲ್ಲಿ ಆನ್‌ಲೈನ್‌ ಮೂಲಕ ಪಾಠ ನಡೆಯುತ್ತಿದ್ದ ಕಾರಣ ಶಾಲೆ ಶುರುವಾದಾಗ ವಿದ್ಯಾರ್ಥಿಗಳಿಗೆ ಒತ್ತಡವಾಗದಂತೆ ನೋಡಿಕೊಳ್ಳಿ.
-ಇವು ಕೇಂದ್ರ ಶಿಕ್ಷಣ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೊಸ ನಿಯಮಗಳು. ಅ. 15ರಿಂದ ಶಾಲೆಗಳು, ಕಾಲೇಜು ಗಳು, ಕೋಚಿಂಗ್‌ ಸಂಸ್ಥೆಗಳನ್ನು ಪುನರಾರಂಭಿಸುವ ಬಗ್ಗೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲು ರಾಜ್ಯ ಸರಕಾರ ಗಳಿಗೆ ಅಧಿಕಾರ ನೀಡಿರುವ ಹಿನ್ನೆಲೆಯಲ್ಲಿ ಮತ್ತೂಮ್ಮೆ ನಿಯಮ ಬಿಡುಗಡೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಯಮ ರಚಿಸಲೂ ಅವಕಾಶ ನೀಡಲಾಗಿದೆ.

ಶಾಲಾರಂಭದ ಅನಂತರ ಮಕ್ಕಳಿಗೆ ಮಾಸ್ಕ್ ವ್ಯವಸ್ಥೆ ಯನ್ನು ಸ್ಥಳೀಯಾಡ ಳಿತಗಳ ಮೂಲಕ ಮಾಡಲು ಚರ್ಚೆ ನಡೆಯುತ್ತಿದೆ. ಸರ ಕಾರ  ದಿಂದ ಶಾಲಾ ರಂಭದ ದಿನಾಂಕ ನಿಗದಿ ಯಾದ ಅನಂತರ ಈ ಬಗ್ಗೆ ಸ್ಪಷ್ಟ ವಾದ ಸೂಚನೆ ಯನ್ನು ನೀಡಲಿದ್ದೇವೆ.
-ಉಮಾಶಂಕರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

48,569
ಸರಕಾರಿ ಶಾಲೆಗಳು
40,000ಕ್ಕೂ ಅಧಿಕ ಗ್ರಾಮೀಣ ಶಾಲೆಗಳು
42,91,812
ಸರಕಾರಿ ಶಾಲಾ ಮಕ್ಕಳು
13,17,233
ಅನುದಾನಿತ ಶಾಲಾ ಮಕ್ಕಳು

 ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.