ಮುಂಬೈ-ರಾಜಸ್ಥಾನ್ ಸೆಣೆಸಾಟ : ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ
Team Udayavani, Oct 6, 2020, 6:59 PM IST
ಅಬುಧಾಬಿ : ಐಪಿಎಲ್ 13 ನೇ ಆವೃತ್ತಿಯ 20 ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಮುಂಬೈ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇದುವರೆಗೆ 5 ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ 3 ಪಂದ್ಯಗಳಲ್ಲಿ ಗೆದ್ದು 2 ಪಂದ್ಯದಲ್ಲಿ ಸೋತು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.ಈ ಆವೃತಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಮೇಲುಗೈ ಸಾಧಿಸಿ ಇನ್ನೆರೆಡರಲ್ಲಿ ಮುಗ್ಗರಿಸಿಕೊಂಡು ಸದ್ಯ ಅಂಕಪಟ್ಟಿಯಲ್ಲಿ 5 ನೇ ಸ್ಥಾನಿಯಾಗಿ ನಿಂತಿದೆ.
ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ದ 34 ರನ್ ಗಳ ಅಂತರದೊಂದಿಗೆ ಪಂದ್ಯವನ್ನು ಗೆದ್ದಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ಕಳೆದ ಪಂದ್ಯದಲ್ಲಿ ಬೆಂಗಳೂರು ವಿರುದ್ದ ಸೋಲು ಅನುಭವಿಸಿತ್ತು. ಸೋಲಿನಿಂದ ಕೆಂಗೆಟ್ಟಿರುವ ರಾಜಸ್ಥಾನ್ ಗೆ ಗೆಲುವಿನ ಹಾದಿಗೆ ಮರಳಲು ಹಾಗೂ ಮುಂಬೈಗೆ ಗೆಲುವಿನ ನಾಗಲೋಟದಲ್ಲಿ ಮುಂದುವರೆಯಲು ಇಂದಿನ ಪಂದ್ಯ ರೋಚಕವಾಗಿ ನಡೆಯುವ ಸಾಧ್ಯತೆಯಿದೆ.
ಮುಂಬೈ ಇಂಡಿಯನ್ಸ್ (ಇಲೆವೆನ್ ಪ್ಲೇಯಿಂಗ್): ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ಕೀಪರ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ರಾಜಸ್ಥಾನ್ ರಾಯಲ್ಸ್ (ಇಲೆವೆನ್ ಪ್ಲೇಯಿಂಗ್): ಜೋಸ್ ಬಟ್ಲರ್ (ಕೀಪರ್), ಯಶಸ್ವಿ ಜೈಸ್ವಾಲ್, ಸ್ಟೀವನ್ ಸ್ಮಿತ್ (ಸಿ), ಸಂಜು ಸ್ಯಾಮ್ಸನ್, ಮಹಿಪಾಲ್ ಲೋಮರ್, ರಾಹುಲ್ ತಿವಾಟಿಯಾ, ಟಾಮ್ ಕರನ್, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಾಜ್ಪೂತ್, ಕಾರ್ತಿಕ್ ತ್ಯಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
IPL: ಪ್ಲೇ ಆಫ್ ರೇಸ್ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್ ಬೌಲರ್
RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್
NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್ ಭಾಗಿ ಅನುಮಾನ
MUST WATCH
ಹೊಸ ಸೇರ್ಪಡೆ
H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ
IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್ಗಳ ಜಯ
Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ