Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Team Udayavani, May 5, 2024, 6:14 PM IST

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

ಬೆಳಗಾವಿ: ಜಿಲ್ಲೆಯ ಆಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಅದೇ ಬಿಜೆಪಿ ಸಾಧನೆಯ ದೊಡ್ಡ  ಪಟ್ಟಿಯೇ ಇದೆ. ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್ ಮತದಾರರಿಗೆ ಹಣ ಹಂಚುವ ಕಾರ್ಯ ಆರಂಭಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆರೋಪ ಮಾಡಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ  ಮತದಾರರಿಗೆ ಹಣ ಹಂಚುವಾಗ ನಮ್ಮ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ.  ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಇದರ ಹಿಂದೆ ಇರುವುದು ಗೊತ್ತಾಗಿದೆ ಎಂದು ಹೇಳಿದರು.

ಬೆಳಗಾವಿಯ  ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ನಮ್ಮವರು ಹೋದಾಗ  ಹಣ  ಹಿಡಿದುಕೊಟ್ಟವರ ಮೇಲೆಯೇ ಪ್ರಕರಣ ದಾಖಲಿಸುವ  ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ನವರಿಂದ ಅಧಿಕಾರ ದುರುಪಯೋಗವಾಗುತ್ತಿದೆ. ನಾವು ಈ ಸಂಬಂಧ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದರು.

ಈ ಚುನಾವಣೆ  ಎರಡನೇ ಸ್ವಾತಂತ್ರ‍್ಯ ಹೋರಾಟವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಏನೇನೋ  ಹೇಳುತ್ತಾರೆ.  ಇದು ಬ್ರಿಟಿಷರ ವಿರುದ್ಧದ ಹೋರಾಟವೇ ಎಂದು ಮರು ಪ್ರಶ್ನೆ ಹಾಕಿದರು.

ಕೊರೊನಾ ಸೋಂಕಿನಿಂದ ದೆಹಲಿಯಲ್ಲಿ ಮೃತಪಟ್ಟ ಸುರೇಶ ಅಂಗಡಿ ಅವರ ಮೃತದೇಹವನ್ನು ಬಿಜೆಪಿಯವರು ಬೆಳಗಾವಿಗೆ ತರಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಮೃತದೇಹ ತರಲು ಸಾಕಷ್ಟು ಪ್ರಯತ್ನ ಮಾಡಿದೆವು. ಆಗ ಕಾನೂನು ತೊಡಕಿತ್ತು. ನಿಯಮಗಳು ಬಹಳ ಕಠಿಣವಾಗಿದ್ದವು. ಇದರ ಅರಿವಿಲ್ಲದೆ ಶಿವಕುಮಾರ ಇದರಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು.

ಟಾಪ್ ನ್ಯೂಸ್

ಭಾರತದ ಚುನಾವಣೆಯಲ್ಲಿ ಮತ್ತೆ; ಮೂಗು ತೂರಿಸಿದ ಪಾಕ್‌ ನಾಯಕ!

ಭಾರತದ ಚುನಾವಣೆಯಲ್ಲಿ ಮತ್ತೆ; ಮೂಗು ತೂರಿಸಿದ ಪಾಕ್‌ ನಾಯಕ!

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Wild Elephant ಕೊಡಗಿನಲ್ಲಿ 2 ಕಾಡಾನೆಗಳ ಸಾವು

Wild Elephant ಕೊಡಗಿನಲ್ಲಿ 2 ಕಾಡಾನೆಗಳ ಸಾವು

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

43

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಾನೂ ಸಿದ್ಧ: ರಾಜಣ್ಣ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ರಾಜ್ಯದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ : ಅಶೋಕ್‌

ರಾಜ್ಯದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ : ಅಶೋಕ್‌

27

H. Vishwanath: ವಿಧಾನಸೌಧವೂ ಮಾಲ್‌ ಆಗಿ ಪರಿವರ್ತನೆ

26

Road mishap: ಅಯೋಧ್ಯೆ ಸಮೀಪ ಅಪಘಾತ; ಕಲಬುರಗಿಯ ಮೂವರ ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಭಾರತದ ಚುನಾವಣೆಯಲ್ಲಿ ಮತ್ತೆ; ಮೂಗು ತೂರಿಸಿದ ಪಾಕ್‌ ನಾಯಕ!

ಭಾರತದ ಚುನಾವಣೆಯಲ್ಲಿ ಮತ್ತೆ; ಮೂಗು ತೂರಿಸಿದ ಪಾಕ್‌ ನಾಯಕ!

PV Sindhu: ಮಲೇಷ್ಯಾ ಬ್ಯಾಡ್ಮಿಂಟನ್‌; ಸಿಂಧು-ವಾಂಗ್‌ ನಡುವೆ ಇಂದು ಫೈನಲ್‌

PV Sindhu: ಮಲೇಷ್ಯಾ ಬ್ಯಾಡ್ಮಿಂಟನ್‌; ಸಿಂಧು-ವಾಂಗ್‌ ನಡುವೆ ಇಂದು ಫೈನಲ್‌

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

French Open:‌ ಇಂದಿನಿಂದ ಫ್ರೆಂಚ್‌ ಓಪನ್‌; ಕಣದಲ್ಲಿ ಸುಮಿತ್‌ ನಾಗಲ್‌

French Open:‌ ಇಂದಿನಿಂದ ಫ್ರೆಂಚ್‌ ಓಪನ್‌; ಕಣದಲ್ಲಿ ಸುಮಿತ್‌ ನಾಗಲ್‌

43

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಾನೂ ಸಿದ್ಧ: ರಾಜಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.