ಮೂಲ್ಕಿಯ ಡಾ| ಹಂಸರಾಜ್ ಶೆಟ್ಟಿ ಅವರಿಗೆ ಬ್ರಿಟನ್ನ ಎಂಬಿಇ ಪ್ರಶಸ್ತಿ
Team Udayavani, May 25, 2024, 10:48 PM IST
ಮೂಲ್ಕಿ: ಬ್ರಿಟನ್ನ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಮೆಂಬರ್ ಆಫ್ ದಿ ಆರ್ಡರ್ ಆಫ್ ಬ್ರಿಟಿಷ್ ಎಂಪಾಯರ್ ಪ್ರಶಸ್ತಿಗೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯವರಾದ ಡಾ| ಹಂಸರಾಜ್ ಶೆಟ್ಟಿ ಜಿ.ಎಂ. ಪಾತ್ರರಾಗಿದ್ದಾರೆ.
ಮೂಲ್ಕಿಯ ನಿವೃತ್ತ ಪ್ರಾಂಶುಪಾಲ ದಿ| ಗುಂಡಾಲು ಮಹಾಬಲ ಶೆಟ್ಟಿ, ರತ್ನಾ ಜಿ.ಎಂ. ಶೆಟ್ಟಿ ದಂಪತಿಯ ಪುತ್ರನಾಗಿರುವ ಹಂಸರಾಜ್ ಯುನೈಟೆಡ್ ಕಿಂಗ್ಡಂನ 137 ವರ್ಷಗಳ ಇತಿಹಾಸವಿರುವ ಕಾರ್ಡಿಫ್ ಯುನಿವರ್ಸಿಟಿ ಹಾಸ್ಪಿಟಲ್ ಆಫ್ ವೇಲ್ಸ್ನಲ್ಲಿ ಸೀನಿಯರ್ ಕನ್ಸಲ್ಟೆಂಟ್ ಫಿಜಿಶಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿಯನ್ನು ಬ್ರಿಟನ್ ಮಹಾರಾಜರ ಅಧಿಕೃತ ಅರಮನೆ ವಿಂಡ್ಸರ್ ಕಾಸ್ಟೆಲ್ನಲ್ಲಿ ಮಹಾರಾಜ ಚಾರ್ಲ್ಸ್ ಅವರಿಂದ ಸ್ವೀಕರಿಸಿದರು. ಪತ್ನಿ ಲತಾ ಎಚ್. ಶೆಟ್ಟಿ, ಪುತ್ರ ಹಾಗೂ ಪುತ್ರಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ತೈಲ ದರ ಏರಿಕೆ ಖಂಡಿಸಿ ಬೈಕ್- ಕಾರು ಎಳೆದು ಪ್ರತಿಭಟನೆ
Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ
Gundlupete: ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ
Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.