ಪ್ರದರ್ಶನಕ್ಕೆ ಸಿದ್ಧಗೊಂಡ ಚಿತ್ರಮಂದಿರಗಳು

ಹೊಸ ಚಿತ್ರ ಬಿಡುಗಡೆಗೆ ಕಾಯುತ್ತಿರುವ ಚಿತ್ರಪ್ರೇಮಿಗಳು

Team Udayavani, Oct 13, 2020, 3:51 PM IST

TK-TDY-1

ಕೋವಿಡ್ ಆರ್ಭಟ ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿದೆ, ಈ ನಡುವೆ ಎಲ್ಲವೂ ಪ್ರಾರಂಭವಾದರೂ ಕಳೆದ ಆರೇಳು ತಿಂಗಳಿನಿಂದ ಸ್ಥಗಿತವಾಗಿದ್ದ ಚಿತ್ರಮಂದಿರಗಳು ಮಾತ್ರ ಆರಂಭ ವಾಗಿರಲಿಲ್ಲ. ಈಗ ಸಿನಿ ಮಂದಿರಗಳ ಆರಂಭಕ್ಕೆಕೇಂದ್ರ ಸರ್ಕಾರ ವಿನಾಯ್ತಿ ನೀಡಿರುವುದರಿಂದಕಲ್ಪತರು ನಾಡಿನಲ್ಲಿಯೂ ಸಿನಿಮಾ ಮಂದಿರಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಅ.15ರ ನಂತರ ಚಿತ್ರ ಪ್ರದರ್ಶನ ಆರಂಭವಾಗುತ್ತಾ?

ತುಮಕೂರು: ಕೋವಿಡ್‌ -19ನಿಂದಾಗಿ ಸ್ಥಗಿತ ಗೊಂಡಿದ್ದ ಸಿನಿಮಾ ಮಂದಿರಗಳಲ್ಲಿ ಶೋ ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಳೆದ ಆರೇಳು ತಿಂಗಳಿನಿಂದ ಚಟುವಟಿಕೆ ಇಲ್ಲದೇ ಧೂಳಿಡಿದಿದ್ದ ಚಿತ್ರಮಂದಿರಗಳ ಸ್ವಚ್ಛತಾ ಕಾರ್ಯ ಆರಂಭಿಸಿ ಸಿನಿ ಮಂದಿರಗಳನ್ನು ಆರಂಭಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅ.15 ರ ನಂತರ ಚಿತ್ರ ಪ್ರದರ್ಶನ ಆರಂಭ ವಾದರೆ ಯಾವ ಹೊಸಚಿತ್ರ ಬಿಡುಗಡೆಯಾಗುತ್ತದೆ ಎನ್ನುವ ಕುತೂಹಲ ಚಿತ್ರ ಪ್ರೇಮಿಗಳಲ್ಲಿ ಮೂಡಿದೆ.

ಮಾಲೀಕರ ತಯಾರಿ: ಕೇಂದ್ರ ಸರ್ಕಾರ ಕೋವಿಡ್ ಹೆಚ್ಚಳ ವಾಗುತ್ತಿದ್ದರೂ ಚಿತ್ರಮಂದಿರಗಳನ್ನು ನಿಯಮಾನುಸಾರ ಆರಂಭ ಮಾಡಬಹುದು ಎಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅ.15 ರ ನಂತರ ಚಿತ್ರ ಮಂದಿರ ಆರಂಭಿಸಲು ನಿರ್ಧಾರ ಮಾಡಿದೆ. ಜಿಲ್ಲೆಯಲ್ಲಿಇರುವ ಚಿತ್ರಮಂದಿರದ ಮಾಲೀಕರು ಚಿತ್ರ ಮಂದಿರಗಳನ್ನು ಆರಂಭಿಸಲು ತಯಾರಿ ನಡೆಸುತ್ತಿದ್ದಾರೆ.

ಮಾರ್ಗಸೂಚಿ ಅನ್ವಯ: ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಸೋಂಕು ಹೆಚ್ಚುತ್ತಲೇ ಇದೆ, ಸೋಂಕು ಜನಸಮುದಾಯಕ್ಕೆ ಹೆಚ್ಚು ಹರಡ ಬಾರದು ಎಂದುಜನಸಂದಣಿ ಪ್ರದೇಶಗಳ ಲಾಕ್‌ಡೌನ್‌ ಮಾಡಲಾಗಿತ್ತು. ಆದರೆ ಈಗ ಹಂತ ಹಂತವಾಗಿ ಎಲ್ಲವನ್ನೂ ಪ್ರಾರಂಭ ಮಾಡಲಾಗಿತ್ತು ಸಿನಿಮಾ ಮಂದಿರಗಳು ಮಾತ್ರ ಪ್ರಾರಂಭ ಮಾಡಿರಲಿಲ್ಲ, ಆದರೆ ಕೆಲವು ಮಾರ್ಗಸೂಚಿಗಳ ಅನ್ವಯ ಸಿನಿಮಾ ಮಂದಿರ ಪ್ರಾರಂಭಿಸಲು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಅನುಸರಿಸಿ ಚಿತ್ರ ಮಂದಿರ ಆರಂಭಿಸಲು ಚಿತ್ರ ಮಂದಿರಗಳ ಮಾಲೀಕರು ಸಿದ್ಧತೆ ನಡೆಸುತ್ತಿದ್ದಾರೆ.

ಚಿತ್ರ ಮಂದಿರ ಆರಂಭಿಸಲು ನಿರ್ಬಂಧ ಏನು ?: ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಹೆಚ್ಚು ಜನಸೇರುತ್ತಾರೆ, ಒಬ್ಬರ ಪಕ್ಕದಲ್ಲಿ ಒಬ್ಬರು ಕೂರುತ್ತಾರೆ ಇದರಿಂದ ಸೋಂಕು ಹೆಚ್ಚು ಹರಡುತ್ತದೆ ಎನ್ನುವ ಭೀತಿ ಇರುವುದರಿಂದ ಚಿತ್ರ ಮಂದಿರ ಆರಂಭಿಸಲು ಸರ್ಕಾರ ಹಲವು ಮಾರ್ಗ ಸೂಚಿಗಳನ್ನು ನೀಡಿದೆ.

ಅದರಂತೆ ಚಿತ್ರಮಂದಿರಗಳಿಗೆ ಶೇ.50 ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಬೇಕು, ಇಬ್ಬರ ಮಧ್ಯ ಒಂದು ಸೀಟು ಖಾಲಿ ಬಿಟ್ಟು ಕುಳಿತು ಕೊಳ್ಳುವ ವ್ಯವಸ್ಥೆ ಮಾಡಬೇಕು, ಸಿನಿಮಾಕ್ಕೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇ ಬೇಕು, ಜೊತೆಗೆ ಸ್ಯಾನಿಟೈಸರ್‌ ಮಾಡಿ ಕೊಳ್ಳಬೇಕು, ಟಿಕೆಟ್‌ ಖರೀದಿಗೆ ಡಿಜಿಟಲ್‌ ಪೇಮೆಂಟ್‌ ಮಾಡಿ ಜನಜಂಗುಳಿ ತಪ್ಪಿಸಬೇಕು. ಸಿನಿಮಾ ಮಂದಿರಗಳ ಎಸಿ ಟೆಂಪರೇಚರ್‌ 24 ರಿಂದ 30 ಡಿಗ್ರಿ ಸೆಲ್ಸಿಯಸ್‌ ನಿಗದಿ ಮಾಡಬೇಕು, ಚಿತ್ರಮಂದಿರಕ್ಕೆ ಎಲ್ಲರನ್ನೂ ಒಟ್ಟಿಗೆ ಬರುವಂತಿಲ್ಲ, ಸಿನಿಮಾ ಮುಗಿದ ಮೇಲೆ ಎಲ್ಲರನ್ನೂ ಒಟ್ಟಿಗೆ ಆಚೆ ಕಳುಹಿಸುವಂತಿಲ್ಲ, ಚಿತ್ರಮಂದಿರಗಳಲ್ಲಿ ಇಂಟರ್ವಲ್‌ ಸಮಯ ಹೆಚ್ಚು ಮಾಡಬೇಕು, ಚಿತ್ರಮಂದಿರದ ಒಳಗಡೆ ಪುಡ್‌ ಸ್ಟಾಲ್‌ ಹೆಚ್ಚು ಮಾಡಬೇಕು, ಚಿತ್ರಮಂದಿರಗಳಲ್ಲಿ ಇಡೀ ದಿನ ಟಿಕೆಟ್‌ ಮಾರಾಟ, ಅಡ್ವಾನ್ಸ್‌ ಬುಕ್ಕಿಂಗ್‌ಗೆ ಅವಕಾಶ ಮಾಡಬೇಕು. ಬುಕ್ಕಿಂಗ್‌ ಮಾಡುವವರ ದೂರವಾಣಿ ಸಂಖ್ಯೆ ಪಡೆಯಬೇಕು ಇದು ಸರ್ಕಾರದ ನಿಯಮದಲ್ಲಿ ಇರುವುದರಿಂದ ಚಿತ್ರಮಂದಿರದ ಮಾಲೀಕರು ತಮ್ಮ ಚಿತ್ರಮಂದಿರಗಳಲ್ಲಿ ಸರ್ಕಾರದಮಾರ್ಗಸೂಚಿಯನ್ನು ಚಾಚೂತಪ್ಪದೇ ಪಾಲಿಸಲು ಸನ್ನದ್ಧರಾಗಿದ್ದಾರೆ.

ಸ್ವಚ್ಛವಾಗುತ್ತಿವೆ ಚಿತ್ರ ಮಂದಿರಗಳು: ಅ.15 ರ ನಂತರ ಸಿನಿಮಾ ಮಂದಿರ ಆರಂಭ ವಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಚಿತ್ರಮಂದಿರಗಳ ಸ್ವಚ್ಛತಾ ಕಾರ್ಯ ಭರ ದಿಂದ ನಡೆದಿದೆ. ಕಳೆದ ಏಳುತಿಂಗಳಿನಿಂದ ಪ್ರದರ್ಶನ ವಿಲ್ಲದೇ ಬಾಗಿಲು ಹಾಕಿದ್ದ ಚಿತ್ರ ಮಂದಿರಗಳು ಈಗ ಬಾಗಿಲು ಓಪನ್‌ ಮಾಡಿ ಸ್ವಚ್ಛತಾ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಧೂಳು ಹಿಡಿದಿದ್ದ ಚಿತ್ರ ಮಂದಿರದ ಸೀಟುಗಳನ್ನು ನೀಟಾಗಿ ತೊಳೆದು ಸ್ವಚ್ಛ ಮಾಡಿದ್ದಾರೆ. ಒಂದು ಸೀಟು ಬಿಟ್ಟು ಒಂದು ಸೀಟಿಗೆ ಕೂರಿಸಲು ಸಿದ್ಧ ಮಾಡಿ ಕೊಂಡಿದ್ದಾರೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಅಲ್ಲಲ್ಲಿ ಬ್ಯಾರಿ ಕೇಟ್‌ ಹಾಕಲು ಸಿದ್ಧತೆ ಮಾಡಿ ಕೊಂಡಿದ್ದಾರೆ.

ಚಿತ್ರ ಮಂದಿರಕ್ಕೆ ಗುಂಪು ಗುಂಪಾಗಿ ಬರ ಬಾರದು ಎನ್ನುವ ಉದ್ದೇಶ ದಿಂದ ಬಾಕ್ಸ್‌ಗಳನ್ನು ಮಾಡುತ್ತಿದ್ದು ಒಬ್ಬರು ಬಂದ ಮೇಲೆ ಒಬ್ಬರು ಬರುವಂತೆ ವ್ಯವಸ್ಥೆ ಮಾಡುತ್ತಿದ್ದಾರೆ. ಈವರೆಗೂ ಕೆಲಸವಿಲ್ಲದೇ ಇದ್ದ ಸಿನಿ ಮಂದಿರಗಳ ಸಿಬ್ಬಂದಿ ಸಂತಸ ಗೊಂಡಿದ್ದು ಸದ್ಯ ಸಿನಿಮಾ ಆರಂಭ ಆದರೆ ನಮ್ಮ ಜೀವನ ಉತ್ತಮವಾಗುತ್ತದೆ ಎನ್ನುವ ಆಶಾಭಾವನೆಯಲ್ಲಿ ಇದ್ದಾರೆ.

ಜಿಲ್ಲೆಯಲ್ಲಿ 28 ಚಿತ್ರಮಂದಿರಗಳು  : ಜಿಲ್ಲೆಯಲ್ಲಿ28 ಚಿತ್ರಮಂದಿರಗಳಿದ್ದು ನಗರದಲ್ಲಿ ಆರು ಚಿತ್ರಮಂದಿರಗಳು ಸಿನಿಮಾ ಪ್ರದರ್ಶನಕ್ಕೆಸನ್ನದ್ಧವಾಗಿವೆ, ಸೋಮವಾರ ಚಿತ್ರಮಂದಿರಗಳ ಸ್ವತ್ಛತಾಕಾರ್ಯವನ್ನುಕಾರ್ಮಿಕರು ಮಾಡಿದ್ದು, ಎಲ್ಲಾ ಸೀಟುಗಳನ್ನುತೊಳೆಯಲಾಗಿದೆ. ಇಡೀ ಚಿತ್ರ ಮಂದಿರವನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಇಬ್ಬರ ಮಧ್ಯ ಒಂದು ಸೀಟು ಬಿಡಲು ಸಿದ್ಧತೆ ಮಾಡಿ ಕೊಂಡಿದ್ದಾರೆ. ಒಟ್ಟಾರೆ ಇಡೀ ಜಿಲ್ಲೆಯಚಿತ್ರ ಮಂದಿರದ ಮಾಲೀಕರು ಚಿತ್ರಮಂದಿರಗಳನ್ನು ಪ್ರದರ್ಶನಕ್ಕೆ ಯೋಗ್ಯಗೊಳಿಸಿದ್ದಾರೆ.

ಚಿತ್ರಮಂದಿರವನ್ನೂ ಅ.15ರ ನಂತರ ಪ್ರಾರಂಭ ಮಾಡಲು ಸರ್ಕಾರ ತಿಳಿಸಿದೆ ನಮಗೆ ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸುತ್ತಿದ್ದೇವೆ.ಚಿತ್ರಮಂದಿರಗಳನ್ನು ಸ್ವಚ್ಛಮಾಡಿದ್ದೇವೆ, ಚಿತ್ರ ಪ್ರದರ್ಶನ ಅ.16 ರಿಂದ ಆರಂಭ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದೇವೆ, ನಮ್ಮ ಸಿಬ್ಬಂದಿ ಆರೋಗ್ಯವೂ ಮುಖ್ಯ ಅದಕ್ಕೂ ಮುಂಜಾಗ್ರತಾಕ್ರಮಕೈಗೊಂಡಿದ್ದೇವೆ. ಭರತ್‌, ವ್ಯವಸ್ಥಾಪಕ ಕೃಷ್ಣ ಚಿತ್ರ ಮಂದಿರ, ತುಮಕೂರು.

ಸಿನಿಮಾ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಚಿತ್ರಮಂದಿರ ಸ್ವತ್ಛಮಾಡಿದ್ದೇವೆ. ಒಳ್ಳೆಯ ಸಿನಿಮಾ ಬಿಡುಗಡೆಯಾದರೆ ಅನುಕೂಲವಾಗುತ್ತದೆ. ಹಳೆ ಸಿನಿಮಾ ಹಾಕಿದರೆ ಜನ ಬರಲ್ಲ, ಹೊಸ ಸಿನಿಮಾ ಬಿಡುಗಡೆ ಬಗ್ಗೆ ಇನ್ನೂ ಯಾವುದೇ ಖಾತರಿ ಇಲ್ಲ,ಕನ್ನಡ ಬಿಟ್ಟರೆ ಬೇರೆ ಸಿನಿಮಾ ಹಾಕಲ್ಲ, ಈಗ ಟಾಕೀಸ್‌ ಚಿತ್ರ ಪ್ರದರ್ಶನಕ್ಕೆ ರೆಡಿ ಮಾಡಿದ್ದೇವೆ. ಒಂದು ಸೀಟು ಬಿಟ್ಟು ಒಂದು ಸೀಟಿಗೆ ಟೇಪ್‌ ಹಾಕಬೇಕು ಅಷ್ಟೇ ಉಳಿದಂತೆ ಎಲ್ಲವೂ ಸಿದ್ಧವಾಗಿದೆ. ಆದರೆ ಚಿತ್ರ ಬಿಡುಗಡೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ರುದ್ರೇಶ್‌, ಮಾಲೀಕರು, ಗಾಯತ್ರಿ ಚಿತ್ರಮಂದಿರ

 

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.