ವಸತಿ ಯೋಜನೆ ಹಗರಣ: ತಪ್ಪಿತಸ್ಥರ ಮೇಲೆ ಕ್ರಿಮಿನಲ್‌ ಮೊಕದ್ದಮೆ


Team Udayavani, Oct 17, 2020, 5:43 PM IST

vp-tdy-1

ಮುದ್ದೇಬಿಹಾಳ: ತಾಲೂಕಿನ ಕೋಳೂರು ಗ್ರಾಮ ಪಂಚಾಯತ್‌ ವತಿಯಿಂದ ಕೋಳೂರು ತಾಂಡಾದಲ್ಲಿ ನಡೆದಿದೆ ಎನ್ನಲಾದ ವಸತಿ ಯೋಜನೆಗಳ ಹಗರಣ, ಅವ್ಯವಹಾರ ತನಿಖೆಯ ವೇಳೆ ಸತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ಮೇಲೆ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದರ ಜೊತೆಗೆ ದಂಡವನ್ನೂ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಪಂ ಇಒ ಶಶಿಧರ ಶಿವಪುರೆ ತಿಳಿಸಿದ್ದಾರೆ.

ಶುಕ್ರವಾರ ತಾಂಡಾಕ್ಕೆ ಭೇಟಿ ನೀಡಿ, ದೂರುದಾರ ಜಗದೀಶ ಚವ್ಹಾಣ ಅವರೊಂದಿಗೆ ಮನೆ ಹಂಚಿಕೆ ದಾಖಲೆ, ನೈಜತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನದು ತನಿಖೆಯ ಮೊದಲ ದಿನವಾಗಿದೆ. 15-20 ಮನೆಗಳ ಫಲಾನುಭವಿಗಳ ನೈಜತೆ ಪರಿಶೀಲಿಸಲಾಗಿದೆ. ವಿವಿಧ ವಸತಿ ಯೋಜನೆಗಳಡಿ ಒಟ್ಟು 135 ಮನೆಗಳ ಅವ್ಯವಹಾರ ನಡೆದಿದೆ ಎಂದು ದೂರುದಾರರು ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಇಂದಿನ ಪರಿಶೀಲನೆಯಲ್ಲಿ 4-5 ಮನೆಗಳು ಮಾತ್ರ ನೈಜತೆಯಿಂದ ಕೂಡಿದ್ದು ಉಳಿದೆಲ್ಲವೂ ಭೋಗಸ್‌ ಎನ್ನುವುದು ಪತ್ತೆ ಆಗಿದೆ ಎಂದರು.

ವಸತಿ ಯೋಜನೆ ಅಡಿ ಹಂಚಿಕೆಯಾದ ಬಹಳಷ್ಟು ಮನೆಗಳ ಜಿಪಿಎಸ್‌ ಮಾಡಿಲ್ಲ. ಕೆಲವರು ಮನೆ ಕಟ್ಟಿಕೊಂಡು ವಾಸವಾಗಿದ್ದರೂ ಅವರಿಗೆ ಅದು ವಸತಿ ಯೋಜನೆಯಡಿ ಮಂಜೂರಾದ ಮನೆ ಎನ್ನುವುದು ಗೊತ್ತಿಲ್ಲ. ಇನ್ನೂ ಕೆಲವರು ಸ್ವಂತ ಹಣ ಖರ್ಚು ಮಾಡಿಮನೆ ಕಟ್ಟಿಕೊಂಡಿದ್ದರೂ ಸರ್ಕಾರದ ಸಹಾಯಧನ ಅವರ ಹೆಸರಿಗೆ ಬರದೆ ಬೇರೆಯವರ ಹೆಸರಲ್ಲಿ ಖರ್ಚು ಹಾಕಲಾಗಿದೆ. ಮನೆಗಳು ಇಲ್ಲದೇ ಬಿಲ್‌ ಎತ್ತಿರುವ ಪ್ರಕರಣಗಳೂ ಕಂಡು ಬಂದಿವೆ. ಹೀಗಾಗಿ ಇದೊಂದು ಭಾರೀ ಹಗರಣ ಎನ್ನಿಸಿಕೊಂಡಿದೆ.

ತನಿಖೆ ಸಮಗ್ರ ವರದಿಯನ್ನು ಜಿಪಂ ಸಿಇಒಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಕೆಲವು ಸರ್ಕಾರಿ ನೌಕರರಿಗೆ, ಸರ್ಕಾರದ ನಿಯಮಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿದವರಿಗೆ ಮನೆಗಳು ಹಂಚಿಕೆಯಾಗಿವೆ ಎನ್ನುವುದುಮೇಲ್ನೋಟಕ್ಕೆ ಕಂಡು ಬಂದಿದೆ. ಅರ್ಹತೆ ಇಲ್ಲದಿದ್ದರೂ ಇವರಿಗೆ ಮನೆ ಹಂಚಿಕೆ ಮಾಡಿದ್ದು ಕಾನೂನು ಬಾಹಿರ. ಮನೆ ಹಂಚಿಕೆ ಸಂದರ್ಭ ಕರ್ತವ್ಯದಲ್ಲಿದ್ದ ಪಿಡಿಒ, ಅಧಿಕಾರದಲ್ಲಿದ್ದ ಅಧ್ಯಕ್ಷರು, ಬಿಲ್‌ ಪಡೆದುಕೊಂಡಿರುವ ಖೊಟ್ಟಿ ಫಲಾನುಭವಿಗಳು ಹೀಗೆ ಹಲವರು ಹಗರಣದಲ್ಲಿ ಶಾಮೀಲಾಗಿರುವ ಶಂಕೆ ಇದ್ದು ಸಂಪೂರ್ಣ ತನಿಖೆಯ ನಂತರ ನಿಖರ ಮಾಹಿತಿ ಬೆಳಕಿಗೆ ಬರಲಿದೆ ಎಂದರು.

ಹೇಳಿಕೆ ದಾಖಲಿಸಿಕೊಂಡ ತಂಡ: ಇದಕ್ಕೂ ಮುನ್ನ ತಾಪಂ ಇಒ ಶಶಿಧರ ಶಿವಪುರೆ ನೇತೃತ್ವದ ತನಿಖಾ ತಂಡದಲ್ಲಿದ್ದ ಅಕ್ಷರ ದಾಸೋಹ ಎಡಿ ಸಂಗಮೇಶಹೊಲ್ದೂರ, ಪಿಡಿಒಗಳಾದ ಪಿ.ಎಸ್‌. ಕಸನಕ್ಕಿ, ವೀರೇಶ ಹೂಗಾರ, ನಿರ್ಮಲಾ ತೋಟದಅವರು ಫಲಾನುಭವಿಗಳ ಪಟ್ಟಿ ಹಿಡಿದುಕೊಂಡು ಮನೆಮನೆಗೆ ತೆರಳಿ ನೈಜತೆ ಪರಿಶೀಲಿಸಿ,ಹೇಳಿಕೆ ದಾಖಲಿಸಿಕೊಂಡರು. ಮನೆ ಹಂಚಿಕೆಗೆ ಸಂಬಂಧಿಸಿದ ಕಾಗದ ಪತ್ರಗಳ ಪ್ರತಿಗಳನ್ನು ಪಡೆದುಕೊಂಡರು. ವಸತಿಗಾಗಿ ಅರ್ಜಿ ಸಲ್ಲಿಸಿದ್ದರೂ ಸೌಲಭ್ಯವಂಚಿತರಾದವರ ಹೇಳಿಕೆ ದಾಖಲಿಸಿಕೊಂಡರು.

ತಾಪಂ ಸದಸ್ಯ ಪ್ರೇಮಸಿಂಗ್‌ ಚವ್ಹಾಣ, ದೂರುದಾರ ಜಗದೀಶ ಚವ್ಹಾಣ, ತಾಂಡಾದ ಪ್ರಮುಖರಾದ ತುಳಜಾರಾಮ ಚವ್ಹಾಣ, ವಿಕಾಸ ಚವ್ಹಾಣ, ಯಮನೂರಿ ಚವ್ಹಾಣ, ಭೀಮಸಿಂಗ್‌ ಚವ್ಹಾಣ, ಅನಿಲ ಜಾಧವ, ಸೋಮಸಿಂಗ ಚವ್ಹಾಣ, ನೇತಾಜಿ ಚವ್ಹಾಣ, ಪ್ರಕಾಶ ಚವ್ಹಾಣ, ದೀಪಕ ಚವ್ಹಾಣ, ಸುಭಾಷ್‌ ದಿಂಡವಾರ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.