ಮಂಗಗಳ ಉಪಟಳ: ಜನರ ಕಳವಳ

ನಿರಂತರ ಹಾವಳಿಯಿಂದ ಜನತೆ ಕಂಗಾಲು

Team Udayavani, Oct 18, 2020, 7:51 PM IST

Ballary-tdy-1

ಕೂಡ್ಲಿಗಿ: ಮನೆ ಕಾಂಪೌಂಡ ಮೇಲೆ ವಿಶ್ರಾಂತಿ ಪಡೆಯುತ್ತಿರುವ ವಾನರ ಸೈನ್ಯ.

ಕೂಡ್ಲಿಗಿ: ಪಟ್ಟಣದಲ್ಲೀಗ ಮಂಗಗಳದ್ದೇ ಕಾರುಬಾರು. ಮಂಗಗಳ ನಿರಂತರ ಹಾವಳಿಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ.

ಪಟ್ಟಣ ಸೇರಿದಂತೆ ಸುತ್ತಲಿನ ಹಲವು ವಾರ್ಡ್‌ಗಳಲ್ಲಿ ಇವುಗಳದ್ದೇ ಕಾರುಬಾರು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಬಹಳ ವರ್ಷದಿಂದ ಮಂಗಗಳ 3-4 ಗುಂಪು ಬೀಡು ಬಿಟ್ಟಿದ್ದು ದಿನ ಬೆಳಗಾದರೆ ಸಾಕು ಈ ಮಂಗಗಳು ನಾನಾ ಓಣಿಗಳಲ್ಲಿ, ಮನೆಗಳ ಮೇಲೆ ಹಿಂಡು ಹಿಂಡಾಗಿ ಜಿಗಿದು ಹೆಂಚುಗಳನ್ನು ಒಡೆದು

ಚೂರು ಚೂರು ಮಾಡುತ್ತಿವೆ. ಮನೆಗಳ ಸುತ್ತಲಲ್ಲಿನ ಪೇರಲ, ಹುಣಸೆ, ಪಪ್ಪಾಯಿ ಹಣ್ಣಿನ ಮತ್ತು ಹೂವಿನ ಗಿಡಗಳನ್ನು ಹಾಗೂ ತೆಂಗಿನ ಗಿಡಗಳನ್ನು ಹಾಳು ಮಾಡುತ್ತಿವೆ ಎನ್ನುತ್ತಾರೆ ಸಾರ್ವಜನಿಕರು. ಒಂದು ಮನೆಯಿಂದ ಮತ್ತೂಂದು ಮನೆಗೆ ಜಿಗಿಯುತ್ತ ಕೇಬಲ್‌ ನಾಶ ಮಾಡಿ ಟೆಲಿಫೋನ್‌, ವಿದ್ಯುತ್‌ ಕಂಬದ ತಂತಿ ಮೇಲೆ ಸರ್ಕಸ್‌ ಮಾಡುತ್ತವೆ. ಇದರಿಂದಾಗಿ ಒಮ್ಮೊಮ್ಮೆ ವಿದ್ಯುತ್‌ ಹರಿಯುವಿಕೆ ನಿಂತು ಹೋಗಿ ವಿದ್ಯುತ್‌ನಿಂದಲೇ ನಡೆಯುವ ಬಹುತೇಕ ಕಾರ್ಯಗಳು ನಿಂತು ಹೋಗುತ್ತಿವೆ. ಕುಡಿಯುವ ನೀರು ಬಾರದೆ, ಗಿರಣಿ ಆರಂಭವಾಗದೆ ಜನತೆ ಪರಿತಪಿಸುವಂತಾಗುತ್ತಿದೆ.

ಬೆಳೆ ಹಾಳು ಮಾಡುವ ಮಂಗಗಳು ಮನುಷ್ಯರನ್ನೂ ಕಾಡುತ್ತಿವೆ. ಒಬ್ಬಿಬ್ಬರು ಮಹಿಳೆಯರು, ಮಕ್ಕಳು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರೆ ಹಿಂದಿನಿಂದ ಹತ್ತಾರು ಮಂಗಗಳು ಮೈಮೇಲೆ ಬರುತ್ತಿವೆ. ರೈತರು ಕವಣೆ ಬೀಸಿದರೂ ಕಂಠ ಹರಿಯುವಂತೆ ಕೂಗಿದರೂ, ಪಟಾಕಿ ಸಿಡಿಸಿದರೂ ಕ್ಯಾರೆ ಎನ್ನದೆ ತಮ್ಮ ಚಲ್ಲಾಟ ಮುಂದುವರಿಸುತ್ತಿವೆ. ಇನ್ನಾದರೂ ಅರಣ್ಯ ಇಲಾಖೆ ಪಟ್ಟಣ ಪಂಚಾಯಿತಿ ಜಂಟಿಯಾಗಿ ವಿಶೇಷ ತಂಡ ರಚಿಸಿ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಮಂಗಗಳನ್ನು ಹಿಡಿದು ಕಾಡಿಗೆ ಕಳಿಸುವ ಕೆಲಸ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಸಾಲ ಮಾಡಿ ರೈತರು ಬೋರವೆಲ್‌ ನಲ್ಲಿದ್ದ ಅಲ್ಪ ಸ್ವಲ್ಪ ನೀರಿನಿಂದ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಈಗ ಮಂಗಗಳಹಾವಳಿಯು ತರಕಾರಿ ತೋಟಗಳವರೆಗೆ ಹಬ್ಬಿದ್ದು, ಸವತೆ, ಹೀರೆ, ಬೆಂಡೆ, ಟೊಮೆಟೊ, ಬದನೆಕಾಯಿ, ಕುಂಬಳಕಾಯಿ ಇನ್ನಿತರ ಬೆಳೆಗಳನ್ನು ಮಂಗಗಳಿಂದ ರಕ್ಷಿಸುವುದು ರೈತರಿಗೆ ಸವಾಲಾಗಿದೆ. –ತಿಂದಪ್ಪ, ರೈತ

ಪಟ್ಟಣದ ವಾರ್ಡಿನ ನಿವಾಸಿಗಳಿಗೆ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಈಗಾಗಲೇ ಮಂಗಗಳ ಹಾವಳಿಗೆ ಜನರು ಹೈರಾಣಾಗಿದ್ದಾರೆ. ಆದಕಾರಣ ಪಪಂ ಇಲಾಖೆ ಮತ್ತು ಅರಣ್ಯ ಇಲಾಖೆ ಸಮನ್ವಯತೆ ಸಾಧಿ ಸಿ ಮಂಗಗಳ ಹಾವಳಿಗೆ ಮುಕ್ತಿ ಕಾಣಿಸಬೇಕಿದೆ. – ಶಿವರಾಜ್‌ ಪಾಲೂ¤ರ್‌, ಕೂಡ್ಲಿಗಿ ತಾಲೂಕು ಸ.ನೌ.ಸಂ ಅಧ್ಯಕ್ಷ

ಗಂಗಾವತಿಯಿಂದ ಮಂಗಗಳನ್ನು ಹಿಡಿಯುವ ತಜ್ಞರನ್ನು ಕೂಡ್ಲಿಗಿಗೆ ಕರೆಯಿಸುತ್ತೇವೆ. ಆ ವ್ಯಕ್ತಿಗಳ ಖರ್ಚು ವೆಚ್ಚವನ್ನು ಪಟ್ಟಣ ಪಂಚಾಯಿತಿ ಭರಿಸಬೇಕು. ಮಂಗಗಳನ್ನು ಹಿಡಿಯುವಾಗ ನಮ್ಮ ಇಲಾಖೆಯಿಂದ ಏನು ಸಹಕಾರ ಬೇಕು ನಾವು ಮಾಡುತ್ತೇವೆ.  –ರೇಣುಕಮ್ಮ. ಎ, ವಲಯ ಅರಣ್ಯಾಧಿಕಾರಿಗಳು ಕೂಡ್ಲಿಗಿ

ಮಂಗಗಳ ಹಾವಳಿ ಬಗ್ಗೆ ಗಮನಕ್ಕೆ ಬಂದಿದ್ದು, ಇದರ ಬಗ್ಗೆ ಅರಣ್ಯ ಇಲಾಖೆಗೆ ಪತ್ರವನ್ನು ಬರೆದಿದ್ದೇನೆ. ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ. ಹಾಗಾಗಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ಮಂಗಗಳ ಹಾವಳಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.  –ಪಕೃದ್ದೀನ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

 

-ಕೆ.ನಾಗರಾಜ್‌

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.