ಪ್ರವಾಸಿಗರ ಸ್ವರ್ಗ ಕವಲೇದುರ್ಗ

Team Udayavani, Nov 4, 2020, 6:59 PM IST

TOUR -SUSHANTH MANGALORE 31

ಮಳೆಯ ಚೆಲುವನ್ನು ಆಸ್ವಾದಿಸುವುದರ ಜತೆಗೆ ಮಂಜಿನ ವಾತಾವರಣದ ನಡುವೆ ಪ್ರವಾಸಿ ತಾಣಗಳನ್ನ ಕಣ್ತುಂಬಿಕೊಳ್ಳುವ ಬಯಕೆ ಎಲ್ಲರಿಗೂ ಸಾಮಾನ್ಯ.

ಅಂತಹ ಸ್ವರ್ಗ ಸದೃಶ ತಾಣ ಮಲೆನಾಡಿನ ಹೆಬ್ಟಾಗಿಲು ಶಿವಮೊಗ್ಗದಲ್ಲಿ ಬಹಳಷ್ಟಿವೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಹಸುರು ಹೊದ್ದಿರುವ ಪ್ರಕೃತಿ, ಮೋಡಗಳ ಕಣ್ಣಾಮುಚ್ಚಾಲೆ, ತಂಗಾಳಿ, ಮಂಜಿನಾಟ ಹಾಗೂ ಜಿಟಿ-ಜಿಟಿ ಮಳೆ ಇವೆಲ್ಲ ಸ್ವರ್ಗ ಸದೃಶ ಅನುಭವ ನೀಡುತ್ತವೆ. ಇಲ್ಲಿ ರಾಜರ ಕತೆ ಮಾತ್ರವಲ್ಲ, ಪ್ರಕೃತಿಯೂ ತನ್ನ ಕತೆಯನ್ನು ಬಿಚ್ಚಿಡುತ್ತದೆ.

ಒಂದು ಕಾಲದಲ್ಲಿ ರಾಜವೈಭೋಗದಲ್ಲಿ ಮುಳುಗಿದ್ದ ಕವಲೆದುರ್ಗ ಈಗ ಅಕ್ಷರಶಃ ಪಾಳುಬಿದ್ದ ಕೋಟೆ. ಆದರೆ ದಟ್ಟಾರಣ್ಯದ ಪ್ರಕೃತಿಯ ನಡುವೆ ಇಲ್ಲಿನ ಕೋಟೆ ಈಗಲೂ ರಾಜ, ರಾಣಿಯರ, ಅರಮನೆಯ ದರ್ಬಾರಿನ ಕಥೆಗಳನ್ನು ಪಿಸು ದನಿಯಲ್ಲಿ ಹೇಳುತ್ತದೆ; ಗತ ವೈಭವಕ್ಕೆ ಸಾಕ್ಷಿಯಾಗುತ್ತದೆ.

ಇತಿಹಾಸ
ಕವಲೇದುರ್ಗವು ಸುಮಾರು 600ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ. ವಿಶೇಷವಾಗಿ ಇಲ್ಲಿ ಮಳೆ ನೀರು ಕೊಯ್ಲು ಆಧಾರಿತ ತಾಂತ್ರಿಕ ಕೌಶಲಗಳನ್ನು ಬಳಸಿರುವುದು ಕಂಡಾಗ ಅಚ್ಚರಿಯಾಗುತ್ತದೆ.ಛತ್ರಪತಿ ಶಿವಾಜಿ ಮಹಾರಾಜರ ಮಗ ರಾಜರಾಮನಿಗೆ ರಾಣಿ ಚೆನ್ನಮ್ಮಾಜಿ ಆಶ್ರಯ ನೀಡಿದ್ದು ಕವಲೇದುರ್ಗದಲ್ಲಿ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ.

ಇದೇ ವಿಷಯವಾಗಿ ಮೊಘಲ್‌ ದೊರೆ ಔರಂಗಜೇಬನೊಂದಿಗೆ ಯುದ್ಧ ಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಮ್ಮಳಿಗೆ ಸಲ್ಲುತ್ತದೆ. 9ನೇ ಶತಮಾನದಲ್ಲಿ ನಿರ್ಮಿಸಲಾದ ಕವಲೇದುರ್ಗ ಮೂರು ಸುತ್ತಿನ ಕೋಟೆಯಾಗಿದ್ದು, ಬೆಟ್ಟದ ದಿಣ್ಣೆಗಳ ನೈಸರ್ಗಿಕ ಬಾಹ್ಯಗಳನ್ನು ಅನುಸರಿಸಿ ಬೃಹದ್‌ಗಾತ್ರದ ಪೆಡಸು ಕಲ್ಲುಗಳು ಇಟ್ಟಿಗೆಯನ್ನಾಗಿ ಉಪಯೋಗಿಸಿ ಈ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆಯ ಆವರಣದಲ್ಲಿ 16ನೇ ಶತಮಾನದಲ್ಲಿ ವೆಂಕಟಪ್ಪ ನಾಯಕ ಕಟ್ಟಿದ ಅರಮನೆಯ ಅವಶೇಷಗಳು ಇವೆ.

ಏಳು ಕೊಳಗಳ ಸಮೂಹ
ಈ ಕೋಟೆಯಲ್ಲಿ ಒಟ್ಟಾರೆ ಏಳು ಕೊಳಗಳಿದ್ದು, ಇವುಗಳಲ್ಲಿ ಸದಾ ನೀರಿರುವುದು ವಿಶೇಷ. ಅಲ್ಲದೆ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಭೂತಳದಿಂದಲೇ ನೀರು ವರ್ಗಾವಣೆ ಯಾಗುವಂತೆ ಮಾಡಲಾಗಿದೆ ಎನ್ನಲಾಗುತ್ತದೆ.

ಸೂರ್ಯಾಸ್ತ ವೀಕ್ಷಣೆ
ಕವಲೇದುರ್ಗದಲ್ಲಿ ಸೂರ್ಯಸ್ತ ವೀಕ್ಷಣೆಗೆ ಪ್ರತ್ಯೇಕ ತಾಣವಿದೆ. ಆಗುಂಬೆಯಲ್ಲಿ ಕಾಣಿಸುವಂತೆ ಸೂರ್ಯ ಕೆಂಬಣ್ಣದಲ್ಲಿ ಮುಳುಗುವುದನ್ನು ಇಲ್ಲಿಯೂ ಸವಿಯಬಹುದು.

 ಸುಶಾಂತ್‌ ಮಂಗಳೂರು, ವಿ.ವಿ. ಕಾಲೇಜು, ಮಂಗಳೂರು 

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.