ಕಾಂಗ್ರೆಸ್‌ ತೆಕ್ಕೆಗೆ ಬಾಗೇಪಲ್ಲಿ ಪುರಸಭೆ

ಅಧ್ಯಕ್ಷರಾಗಿ ಗುಲ್ನಾಜ್ ‌ಬೇಗಂ, ಉಪಾಧ್ಯಕ್ಷೆಎ.ಶ್ರೀನಿವಾಸ್‌ ಅವಿರೋಧ ಆಯ್ಕೆ

Team Udayavani, Nov 7, 2020, 3:23 PM IST

ಕಾಂಗ್ರೆಸ್‌ ತೆಕ್ಕೆಗೆ ಬಾಗೇಪಲ್ಲಿ ಪುರಸಭೆ

ಬಾಗೇಪಲ್ಲಿ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗುಲ್ನಾಜ್‌ ಬೇಗಂ, ಉಪಾಧ್ಯಕ್ಷೆ ಸ್ಥಾನಕ್ಕೆ ಎ.ಶ್ರೀನಿವಾಸ್‌ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾ ಅಧಿಕಾರಿ ಹಾಗೂ ತಹಶೀಲ್ದಾರ್‌ ಎಂ.ನಾಗರಾಜು ಘೋಷಣೆ ಮಾಡಿದ್ದಾರೆ.

ಅವಿರೋಧ ಆಯ್ಕೆ: ಬಾಗೇಪಲ್ಲಿ ಪುರಸಭೆ ಅಧ್ಯಕ್ಷಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಹಾಗೂ ಹಿಂಪಡೆಯಲು ಚುನಾವಣಾಧಿಕಾರಿ ಚುನಾವಣಾ ವೇಳಾಪಟ್ಟಿ ಹಾಗೂ ಸಮಯ ನಿಗದಿಪಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಗುಲ್ನಾಜ್‌ ಬೇಗಂ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಶ್ರೀನಿವಾಸ್‌ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಹಾಜರಾಗಿರುವ ಸದಸ್ಯರ ಸಂಖ್ಯೆ ಪಡೆದುಕೊಂಡ ಚುನಾವಣಾಧಿಕಾರಿಗಳು ಅಧ್ಯಕ್ಷ ಸ್ಥಾನಕ್ಕೆ ಗುಲನ್ನಾಜ್‌ಬೇಗಂ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಶ್ರೀನಿವಾಸ್‌ರನ್ನು ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.

ಪಕ್ಷಗಳ ಬಲಾಬಲ: ಕಾಂಗ್ರೆಸ್‌ ಪಕ್ಷ 13, ಸಿಪಿಎಂ 2, ಜೆಡಿಎಸ್‌ 1 ಹಾಗೂ ಪಕ್ಷೇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಾಗೇಪಲ್ಲಿ ಪುರಸಭೆ 23 ಸದಸ್ಯರನ್ನೊಳಗೊಂಡಿದ್ದು, ಬಿಜೆಪಿ ಪಕ್ಷದ ಸಂಸದ ಬಿ. ಎನ್‌.ಬಚ್ಚೇಗೌಡ ಮತ್ತು ಕಾಂಗ್ರೆಸ್‌ ಪಕ್ಷದ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಸೇರಿ ಒಟ್ಟು 25 ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಿದ್ದಾರೆ. ಗದ್ದುಗೆಗೇರಲು 13 ಸದಸ್ಯರ ಸಂಖ್ಯಾಬಲ ಮಾತ್ರ ಅವಶ್ಯ ಇದ್ದರೂ,5 ಜನ ಪಕ್ಷೇತರರು, ಶಾಸಕರು 1, 12 ಕಾಂಗ್ರೆಸ್‌ ಪಕ್ಷದ ಸದಸ್ಯರು ಸೇರಿ ಒಟ್ಟು 18 ಸದಸ್ಯರು ಚುನಾವಣಾ ಕೇಂದ್ರಕ್ಕೆ ಹಾಜರಾಗಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಬೆಂಬಲ ಸೂಚಿಸಿದ್ದಾರೆ.

ಹಾಜರಾದ ಸದಸ್ಯರು: ಮತ ಚಲಾವಣೆ ಹಕ್ಕು ಹೊಂದಿರುವ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ, ಸದಸ್ಯ ರಾದ ಶ್ರೀನಿವಾಸರೆಡ್ಡಿ, ಅಶೋಕರೆಡ್ಡಿ, ಜಬೀವುಲ್ಲಾ, ಎ.ಶ್ರೀನಿವಾಸ್‌, ಶ್ರೀನಾಥ, ನಾಗರತ್ನಮ್ಮ, ಎ.ನಂಜುಂಡ, ಗುಲ್ನಾಜ್‌ ಬೇಗಂ, ಪದ್ಮ ಮಲ್ಲೇಶ್‌, ಎಸ್‌.ಸುನೀತಾ ರಮೇಶ್‌, ನಿಸಾರ್‌ ಅಹಮ್ಮದ್‌, ಹಸೀನಾ ಮನ್ಸೂರ್‌, ಶಭಾನಾ ಪರ್ವಿನ್‌, ರೇಷ್ಮಭಾನು, ಪಿ..ಮಧುಸೂದನ ರೆಡ್ಡಿ, ಗಡ್ಡಂ ರಮೇಶ್‌, ಎಸ್‌ .ನೂರುಲ್ಲಾ ಹಾಜರಾಗಿದ್ದವರು.

ಸಂಭ್ರಮ: ಚುನಾವಣಾ ಫ‌ಲಿತಾಂಶ ಘೋಷಣೆ ಮಾಡುತ್ತಿದ್ದಂತೆ ನೂರಾರು ಕಾಂಗ್ರೆಸ್‌ ಮುಖಂಡರು  ಕಾರ್ಯಕರ್ತರು ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಮರನಾಥರೆಡ್ಡಿ, ಎಸ್‌.ಎಸ್‌. ರಮೇಶ್‌ ಬಾಬು, ಜಯಪ್ರಕಾಶ್‌ ನಾರಾಯಣ್‌, ಕೋಚಿಮುಲ್‌ ನಿರ್ದೇಶಕ ಮಂಜುನಾಥರೆಡ್ಡಿ, ರಿಜ್ವಾನ್‌ ಬಾಷ ಮತ್ತಿತರರು ಇದ್ದರು.

ಸದಸ್ಯರಿಗೆ ಗೋವಾ ಟ್ರಿಪ್‌ :  ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲವನ್ನು ಕಾಂಗ್ರೆಸ್‌ ಪಡೆದುಕೊಂಡಿದ್ದರೂ ಕೆಲ ಕಾಂಗ್ರೆಸ್‌ ಸದಸ್ಯರು ಪಕ್ಷಾಂತರಗೊಳ್ಳುತ್ತಾರೆಂದು ಶಂಕಿಸಿದ್ದ ಕಾಂಗ್ರೆಸ್‌ ಮುಖಂಡರು ಚುನಾವಣೆಗೂ ಐದು ದಿನಗಳ ಮುಂಚಿತವಾಗಿ ನಾಲ್ವರು ಪಕ್ಷೇತರ, 12 ಕಾಂಗ್ರೆಸ್‌ ಸದಸ್ಯರನ್ನು ಸೇರಿಸಿಕೊಂಡು ಗೋವಾ ಪ್ರವಾಸಕ್ಕೆ ತೆರಳಿ ಸುರಕ್ಷತೆಕಾಪಾಡಿಕೊಂಡು ಚುನಾವಣೆ ಸಮಯಕ್ಕೆ ಸದಸ್ಯರನ್ನು ಚುನಾವಣಾ ಕೇಂದ್ರಕ್ಕೆಕರೆತಂದು, ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಸೂಚಿಸಿದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದರು.

ಗೈರಾದ ಸದಸ್ಯರು : ಸಂಸದ ಬಿ.ಎನ್‌.ಬಚ್ಚೇಗೌಡ, ಆ.ನ.ಮೂರ್ತಿ, ಸರೋಜಮ್ಮ, ಬಿ.ಎ.ನರಸಿಂಹಮೂರ್ತಿ, ವನಿತಾದೇವಿ, ಎಸ್‌.ಸುಜಾತಾ ನರಸಿಂಹನಾಯ್ಡು, ಸುಶೀಲಾ ಗೈರು ಆಗಿದ್ದಾರೆ.

ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದೇ ನೂತನ ಅಧ್ಯಕ್ಷರು, ಉಪಾಧ್ಯಕ್ಷರಕರ್ತವ್ಯ ಆಗಿರುತ್ತದೆ.ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿರುವ ಪಕ್ಷದ ಹಾಗೂ ಪಕ್ಷೇತರ ಸದಸ್ಯರಿಗೆ ಅಭಿನಂದನೆಗಳು. ಎಸ್‌.ಎನ್‌.ಸುಬ್ಟಾರೆಡ್ಡಿ, ಶಾಸಕರು

ಶಾಸಕರಹಾಗೂ ಸದಸ್ಯರ ಮಾರ್ಗ ದರ್ಶನದಂತೆ ಪಟ್ಟಣವ್ಯಾಪ್ತಿಯಲ್ಲಿ ರುವಕುಡಿಯುವ ನೀರಿನ ಸಮಸ್ಯೆಇತ್ಯರ್ಥಕ್ಕೆ ಮುಂದಾಗಿ ಸ್ವಚ್ಛತೆ ಆದ್ಯತೆ ನೀಡಿ ಪಾರದರ್ಶಕ ಆಡಳಿತ ನೀಡುತ್ತೇನೆ. ಗುಲ್ನಾಜ್‌ ಬೇಗಂ, ನೂತನ ಅಧ್ಯಕ್ಷರು, ಬಾಗೇಪಲ್ಲಿ ಪುರಸಭೆ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.