12 ಕಾರಿಡಾರ್ ‌ಕೆಆರ್‌ಡಿಸಿಎಲ್‌ಗೆ

191 ಕಿ.ಮೀಗೆ 477.29 ಕೋಟಿ ರೂ. ಹಸ್ತಾಂತರಕ್ಕೆ ತಜ್ಞರ ಆಕ್ಷೇಪ

Team Udayavani, Nov 30, 2020, 11:04 AM IST

12 ಕಾರಿಡಾರ್ ‌ಕೆಆರ್‌ಡಿಸಿಎಲ್‌ಗೆ

ಬೆಂಗಳೂರು: ಸಾಕಷ್ಟು ಪರ-ವಿರೋಧಗಳ ನಂತರ ಅಂತಿಮವಾಗಿ ನಗರದ 12 ಅಧಿಕ ದಟ್ಟಣೆ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಹಸ್ತಾಂತರಿಸಿ ಸರ್ಕಾರ ಈಚೆಗೆ ಆದೇಶ ಹೊರಡಿಸಿದೆ.

ಇದರೊಂದಿಗೆ ಅಭಿವೃದ್ಧಿ ಅನುಷ್ಠಾನಕ್ಕೆ ನೀಡಲಾದ “ಬೆಂಗಳೂರು ವಿಶೇಷ ಮೂಲಸೌಕರ್ಯ ಯೋಜನೆ’ಗೆ ಅಡಿ ನೀಡಲಾದ 477.29 ಕೋಟಿ ಕೂಡ ಕೆಆರ್‌ಡಿಸಿಎಲ್‌ಗೆ ವರ್ಗಾವಣೆ ಆಗಲಿದೆ. ಜತೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ನಿಗಮ ನೇಮಿಸಿದ್ದ ಖಾಸಗಿ ಯೋಜನಾ ಸಲಹೆಗಾರರ ಸೇವೆ ಮುಂದುವರಿಸಲು ಅನುಮೋದನೆ ನೀಡಲಾಗಿದ್ದು, ಅದರಂತೆ ಪ್ರತಿ ಕಾರಿಡಾರ್‌ ವ್ಯಾಪ್ತಿಗೆ ಒಂದು ಪ್ಯಾಕೇಜ್‌ ಮಾಡಿ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಅನುಮೋದನೆ ನೀಡಿದ ಮೊತ್ತದಲ್ಲಿ  ಸುಮಾರು 300 ಕೋಟಿ ರೂ. ಅಭಿವೃದ್ಧಿಗೆ ಹಾಗೂ ಉಳಿದ ಮೊತ್ತ ನಿರ್ವಹಣೆಗೆ ಮೀಸಲಿಡಬೇಕು. ಮುಂದಿನ 4 ವರ್ಷ ಅಂದರೆ 2021-22ರಿಂದ 2024-25ರವರೆಗೆ ಪ್ರತಿ ವರ್ಷ ನಿರ್ವಹಣೆಗಾಗಿ ನೂರು ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಲಿದೆ.

ಯೋಜನೆ ವೆಚ್ಚ ಒಂದು ವೇಳೆ ನಿಗದಿಪಡಿಸಿದ ಮೊತ್ತ ಮೀರಿದರೆ, ಆ “ಹೆಚ್ಚುವರಿ ಹಣ’ವನ್ನು ಬಿಬಿಎಂಪಿ ಭರಿಸಲಿದೆ ಎಂಬ ಷರತ್ತುಕೂಡ ವಿಧಿಸಲಾಗಿದೆ. ಆದರೆ, “ನಗರದ ರಸ್ತೆಗಳ ಅಭಿವೃದ್ಧಿ ಹೊಣೆ ಬೃಹತ್‌ ಬೆಂಗಳೂರುಮಹಾನಗರ ಪಾಲಿಕೆ (ಬಿಬಿಎಂಪಿ)ಯದ್ದು’ ಎಂದು ಹಿಂದೆ ಸಚಿವ  ಸಂಪುಟದಲ್ಲೇ ತೀರ್ಮಾನ ಆಗಿದೆ. ಅಲ್ಲದೆ, ಹೀಗೆ ರಸ್ತೆ ಅಭಿವೃದ್ಧಿ ಆಯಾ ಸ್ಥಳೀಯ ಆಡಳಿತದ ಜವಾಬ್ದಾರಿ ಕೂಡ ಆಗಿರುತ್ತದೆ. ಹೀಗಿರುವಾಗ, ಸಂಪುಟದ ನಿರ್ಣಯ ಬದಿಗೊತ್ತಿ ಸುಮಾರು 200 ಕಿ.ಮೀ. ಉದ್ದದ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಜವಾಬ್ದಾರಿಯನ್ನು ಕೆಆರ್‌ಡಿಸಿಎಲ್‌ಗೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ : ಅಂತಿಮ ಏಕದಿನ, ಟಿ 20 ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು13 ಸಾವಿರಕಿ.ಮೀ. ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ 191 ಕಿ.ಮೀ.ನಷ್ಟು 12 ಅಧಿಕ ದಟ್ಟಣೆ ಇರುವ ಕಾರಿಡಾರ್‌ ಮತ್ತು 474 ಕಿ.ಮೀ. ಉದ್ದದ ಪ್ರಮುಖ ಮತ್ತು ಉಪ ಪ್ರಮುಖ ರಸ್ತೆಗಳಿವೆ. ಈ ಕಾರಿಡಾರ್‌ಗಳ ನಿರ್ವಹಣೆ ಕಷ್ಟವಾಗಬಹುದು.ಹಾಗೂ ಬಿಬಿಎಂಪಿಯಲ್ಲಿ ರಸ್ತೆ ನಿರ್ವಹಣೆ ಮತ್ತು ಉನ್ನತೀಕರಣಕ್ಕೆ ಪ್ರತ್ಯೇಕ ಅನುದಾನದಡಿ ಕಾರ್ಯನಿರ್ವಹಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಅಭಿವೃದ್ಧಿಗೆ ಹಿನ್ನೆಡೆ ‌ ಉಂಟಾಗಿದೆ ಎಂಬ ಅಭಿಪ್ರಾಯ ಈ ಹಿಂದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಗಿತ್ತು. ಅದನ್ನು ಆಧರಿಸಿ ಈ ಹಸ್ತಾಂತರ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಅಶಕ್ತಗೊಳಿಸುವ ಪ್ರಯತ್ನ :  ಉದ್ದೇಶಿತ 12 ಕಾರಿಡಾರ್‌ಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಬಿಬಿಎಂಪಿ ಮೂಲಕವೇ ಕೈಗೆತ್ತಿಕೊಳ್ಳಲು ಈಚೆಗೆ ನಡೆದೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಇತ್ತೀಚೆಗೆ ಅಂತಿಮವಾಗಿ ಕೆಆರ್‌ಡಿಸಿಎಲ್‌ಗೆ ವ‌ ಹಿಸಲು ನಿರ್ಣಯ ಕೈಗೊಂಡು ಆದೇಶ ಹೊರಡಿಸಲಾಗಿದೆ.ಸುಮಾರು 3 ವರ್ಷಗಳ

ಹಿಂದೆ ಇದೇ ರೀತಿ ನಗರದ ಕೆಲವು ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು.  ಇದಕ್ಕಾಗಿ ಸುಮಾರು 800 ಕೋಟಿ ರೂ. ಖರ್ಚು ಮಾಡಲಾಗಿತ್ತು. ಆದರೆ, ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ಅನುಕೂಲ ಆಗಲಿಲ್ಲ ಎಂದು ತಜ್ಞರು ಹೇಳುತ್ತಾರೆ. “ಬಿಬಿಎಂಪಿ ಒಂದು ಸ್ಥಳೀಯ ಸರ್ಕಾರ ಕೆಆರ್‌ಡಿಸಿಎಲ್‌ ರಾಜ್ಯ ಸರ್ಕಾರದ ಅಡಿ ಬರುತ್ತದೆ. ಅಷ್ಟಕ್ಕೂ ಈ 12 ಕಾರಿಡಾರ್‌ಗಳು ನಗರದ ಮ  ಧ್ಯೆ ಹಾದು ಹೋಗುತ್ತವೆ. ಹಾಗಿದ್ದರೆ, ರಸ್ತೆಯ ಫ‌ುಟ್‌ಪಾತ್‌, ಬಸ್‌ ಪಥಗಳ ನಿರ್ವಹಣೆ ಯಾರು ಮಾಡುತ್ತಾರೆ? ಒಂದೆಡೆ ಸರ್ಕಾರ ಘನತ್ಯಾಜ್ಯ ನಿರ್ವಹಣೆಗೊಂದು ಪ್ರತ್ಯೇಕ ನಿಗಮ ಸ್ಥಾಪನೆ ಮಾಡಲುಹೊರಟಿದೆ. ಮತ್ತೂಂದಡೆ ರಸ್ತೆಗಳ ‌ ನಿರ್ವಹಣೆಯನ್ನು ಬೇರೆ ನಿಗಮಕ್ಕೆ ವಹಿಸುತ್ತಿದೆ. ಇದೆಲ್ಲವೂ ಸ್ಥಳೀಯ ಸಂಸ್ಥೆಯನ್ನು ಅಶಕ್ತಗೊಳಿಸುವ ಪ್ರಯತ್ನ. ಹೆಚ್ಚು ಸಂಸ್ಥೆಗಳಾದಷ್ಟೂ ಹೆಚ್ಚು ಸಮನ್ವಯ ಕೊರತೆ ಉಂಟಾಗುತ್ತದೆ. ಇದೆಲ್ಲದರಿಂದ ಜನ ಕಷ್ಟ ಎದುರಿಸಬೇಕಾಗುತ್ತದೆ ಅಷ್ಟೇ’ ಎಂದು ಜನಾಗ್ರಹ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸ್‌ ಆಲವಿಲ್ಲಿ ಆರೋಪಿಸುತ್ತಾರೆ.

 

ವಿಶೇಷವರದಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.