2030 ರೊಳಗೆ ಏಡ್ಸ್‌ ಮುಕ್ತ ಜಿಲ್ಲೆ ಗುರಿ

ಸೋಂಕು ತಡೆಗಾಗಿ ಜಾಗತಿಕ ಒಗ್ಗಟ್ಟು, ಜವಾಬ್ದಾರಿ ಹಂಚಿಕೆ ಘೋಷಣೆಯೊಂದಿಗೆ ವಿಶ್ವ ಏಡ್ಸ್‌ ದಿನಾಚರಣೆ

Team Udayavani, Dec 2, 2020, 2:08 PM IST

2030 ರೊಳಗೆ ಏಡ್ಸ್‌ ಮುಕ್ತ ಜಿಲ್ಲೆ ಗುರಿ

ತುಮಕೂರು: ಜನರಲ್ಲಿ ಎಚ್‌ಐವಿ ಏಡ್ಸ್‌ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ವಿಶ್ವಾದ್ಯಂತ ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್‌ ದಿನವನ್ನಾಗಿಆಚರಿಸಲಾಗುತ್ತಿದ್ದು, ಈ ವರ್ಷವೂ ಎಚ್‌ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂಜವಾಬ್ಟಾರಿಯ ಹಂಚಿಕೆ ಎಂಬ ಘೋಷವಾಕ್ಯದೊಂದಿಗೆ ಎಲ್ಲಾಕಡೆ ವಿಶ್ವ ಏಡ್ಸ್‌ ದಿನ ಆಚರಿಸಲಾಗಿದ್ದು, ನಿರಂತರ ಜಾಗೃತಿ ಪರಿಣಾಮಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಏಡ್ಸ್‌ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು2030 ರೊಳಗೆ ಸಂಪೂರ್ಣಏಡ್ಸ್‌ ಜಿಲ್ಲೆಯಾಗುವ ಗುರಿ ಹೊಂದಲಾಗಿದೆ.

ಎಚ್‌ಐವಿ ಸೋಂಕು ಮನುಕುಲಕ್ಕೆ ಬಂದೊದಗಿದ ವಿಪತ್ತು. ಎಚ್‌ಐವಿಸೋಂಕನ್ನು ಬರದಂತೆ ತಡೆಯಲು ಯಾವ ಲಸಿಕೆಯೂ ಇಲ್ಲ. ಪೂರ್ಣಮಟ್ಟದಲ್ಲಿ ಗುಣಪಡಿಸುವ ಔಷಧಿಗಳೂ ಇಲ್ಲ.ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೊಂದೇ ಈಸೋಂಕಿನ ತಡೆಗಿರುವ ಏಕೈಕ ಮಾರ್ಗ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏಡ್ಸ್‌ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸಲು ಡಿ. 1ರಂದು ವಿಶ್ವ ಏಡ್ಸ್‌ ದಿನಾಚರಣೆ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿತು.ಏಡ್ಸ್‌ ರೋಗದ ಲಕ್ಷಣ: ಈ ರೋಗಕ್ಕೆ ನಿರ್ದಿಷ್ಠವಾದ ಚಿಹ್ನೆಗಳಿಲ್ಲ. ಆದರೆ ಬಹುಮಟ್ಟಿಗೆ ಯಾವುದೇ ಕಾರಣವಿಲ್ಲದೆ ಒಂದು ತಿಂಗಳ ಅವಧಿಯಲ್ಲಿ ಶೇ.10ಕ್ಕಿಂತಲೂ ಹೆಚ್ಚು ಶರೀರದ ತೂಕ ಕಡಿಮೆಯಾಗುತ್ತದೆ.ಯಾವುದೇ ಚಿಕಿತ್ಸೆಗೆ ಗುಣವಾಗದೇ ಒಂದು ತಿಂಗಳಿಗಿಂತಲೂ ಹೆಚ್ಚು ಕಂಡು ಬರುವ ಜ್ವರ ಹಾಗೂಬೇಧಿ ಏಡ್ಸ್‌ ರೋಗದ ಮುಖ್ಯ ಲಕ್ಷಣಗಳಾಗಿವೆ. ಈ ರೋಗ ಅಸುರಕ್ಷಿತ ಲೈಂಗಿಕ ಕ್ರಿಯೆ, ಸೋಂಕಿರುವ ವ್ಯಕ್ತಿಯ ರಕ್ತ ಪಡೆಯುವುದು, ಸೋಂಕಿರುವ ವ್ಯಕ್ತಿಯು ಉಪಯೋಗಿಸಿದ ಸಿರಿಂಜ್‌ ಸೂಜಿ ಮತ್ತು ಉಪಕರಣಗಳನ್ನು ಸಂಸ್ಕರಿಸದೆ ಬಳಸುವುದು, ಸೋಂಕಿರುವ ತಾಯಿಯುಮಗುವಿಗೆ ಜನ್ಮ ನೀಡುವುದರಿಂದ ಎಚ್‌ ಐವಿ ಸೋಂಕು ಹರಡುತ್ತದೆ.

ಐಸಿಟಿಸಿ ಪರೀಕ್ಷಾ ಸೌಲಭ್ಯ: ಎಚ್‌ಐವಿ ಪರೀಕ್ಷೆಯನ್ನು ವ್ಯಕ್ತಿಯು ಇಷ್ಟ ಪಟ್ಟಲ್ಲಿ ಸಮಗ್ರ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ಐಸಿಟಿಸಿ ಪರೀಕ್ಷಿಸಿ ಕೊಳ್ಳಬಹುದು. ಇದಲ್ಲದೆ ತುಮಕೂರು ಜಿಲ್ಲೆಯಲ್ಲಿನ ಎಲ್ಲಾ 24/7 ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಐಸಿಟಿಸಿ ಪರೀಕ್ಷಾ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು.

ಎ.ಆರ್‌.ಟಿ. ಚಿಕಿತ್ಸೆಯು ಎಚ್‌ .ಐ.ವಿ ಸೋಂಕನ್ನು ವಾಸಿ ಮಾಡುವಚಿಕಿತ್ಸೆಯಲ್ಲ. ಆದರೆ ಸೋಂಕಿತರ ಜೀವಿತಾವಧಿ ಯನ್ನುಹೆಚ್ಚಿಸಿಕೊಳ್ಳುವಂತ ದ್ದಾಗಿರುತ್ತದೆ. ಜಿಲ್ಲಾ ಆಸ್ಪತ್ರೆ, ತಿಪಟೂರು ತಾಲೂಕು ಆಸ್ಪತ್ರೆಯಲ್ಲಿಎ.ಆರ್‌.ಟಿ ಕೇಂದ್ರ ಹಾಗೂ 12 ಕಡೆ ಲಿಂಕ್‌ ಎ.ಆರ್‌.ಟಿ. ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಈಕೇಂದ್ರದಲ್ಲಿ ಎ.ಆರ್‌.ಟಿ. ಚಿಕಿತ್ಸೆ ನೀಡಲಾಗುವುದು.

ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕದ ಕಾರ್ಯ ಚಟುವಟಿಕೆ: ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ ತುಮ  ಕೂರು 2008ರ ಆಗಸ್ಟ್‌ 27ರಿಂದಕಾರ್ಯರಂಭವಾಗಿದ್ದು, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಮೇಲ್ವಿಚಾರಕರು, 3 ಜಿಲ್ಲಾ ‌ ಸಹಾಯಕರು ಹಾಗೂ ಒಬ್ಬ ಕಚೇರಿ ಸಹಾಯಕರು ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಜಿಲ್ಲೆಯಲ್ಲಿ 17 ಐಸಿಟಿಸಿ ಕೇಂದ್ರಗಳು,144 ಪ್ರಾಥಮಿಕ ಆರೋಗ್ಯ ಕೇಂದ್ರಗ ‌ಳು, 1 ಮೊಬೈಲ್‌ ಐ.ಸಿ.ಟಿ.ಸಿ ಕೇಂದ್ರ ಹಾಗೂ 18ಖಾಸಗಿ ಆಸ್ಪತ್ರೆಗಳಲ್ಲಿ ಐಸಿಟಿಸಿ ಸೇವೆ ಲಭ್ಯವಿರುತ್ತದೆ. ಈ ಕೇಂದ್ರಗಳಲ್ಲಿ 25 ಮಂದಿ ಆಪ್ತ ಸಮಾಲೋಚಕರು ಮತ್ತು 20 ಮಂದಿ ಪ್ರಯೋಗ ಶಾಲಾ ತಂತ್ರಜ್ಞರು ಕಾರ್ಯನಿರ್ವಹಿ ಸುತಿದ್ದು, ಜಿಲ್ಲೆಯಲ್ಲಿ 3 ಎ.ಆರ್‌.ಟಿ. ಕೇಂದ್ರಗಳು, 12 ಲಿಂಕ್‌ ಎ.ಆರ್‌.ಟಿ ಕೇಂದ್ರಗಳು ಕಾರ್ಯ ನಿರ್ವಹಿಸಿ ಸೋಂಕಿತರಿಗೆ ಚಿಕಿತ್ಸೆಯನ್ನು  ‌ತಲುಪಿಸುವಲ್ಲಿ ಯಶಸ್ವಿಯಾಗಿವೆ.

ಕಳೆದ 5 ವರ್ಷಗಳಲ್ಲಿ ಸೋಂಕು ಇಳಿಕೆ : ಜಿಲ್ಲೆಯಲ್ಲಿ ಒಟ್ಟು 29 ಲಕ್ಷ ಜನಸಂಖ್ಯೆಯಿದ್ದು, 2015ರ ಎಚ್‌.ಐ.ವಿ ಸೆಂಟಿನಲ್‌ ಸರ್ವೆಲೆನ್ಸ್‌ಪ್ರಕಾರ ಎಚ್‌.ಐ.ವಿ ಪ್ರಿವಿಲೆನ್ಸ್‌ ರೇಟ್‌ ಶೇ.0.25 ರಷ್ಟಿತ್ತು. ಕಳೆದ 5 ವರ್ಷದ ಅಂಕಿ ಅಂಶಗಳನ್ನು ಗಮನಿಸಿದರೆ ಜಿಲ್ಲೆಯಲ್ಲಿ ಏಡ್ಸ್‌ ಪೀಡಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿ ಶೇ.1 ರಷ್ಟು ಆಗಿದೆ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಸನತ್‌ ತಿಳಿಸಿದ್ದಾರೆ.

ಕಳೆದ ಏಳು ವರ್ಷದ ಅಂಕಿ ಅಂಶವನ್ನು ಗಮನಿಸಿದರೆ 2014-15ರಲ್ಲಿ ಎಚ್‌.ಐ.ವಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 87,916 ಅದರಲ್ಲಿ ಸೋಂಕಿತರು-942, ಪರೀಕ್ಷೆಗೆ ಒಳಪಟ್ಟ ಗರ್ಭಿಣಿಯರು 54,159, ಅದರಲ್ಲಿ ಏಡ್ಸ್‌ ಸೋಂಕಿತರು 45, 2015-16ರಲ್ಲಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 81,063 ಅದರಲ್ಲಿ ಸೋಂಕಿತರು-887, ಪರೀಕ್ಷೆಗೆ ಒಳಪಟ್ಟ ಗರ್ಭಿಣಿಯರು 44,442, ಅದರಲ್ಲಿ ಏಡ್ಸ್‌ ಸೋಂಕಿತರು 44, 2016-17 ರಲ್ಲಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 88,751 ಅದರಲ್ಲಿ ಸೋಂಕಿತರು-780, ಪರೀಕ್ಷೆಗೆ ಒಳಪಟ್ಟಗರ್ಭಿಣಿಯರು 47,374, ಅದರಲ್ಲಿ ಏಡ್ಸ್‌ ಸೋಂಕಿತರು 25, 2017-18ರಲ್ಲಿ ಸಾಮಾನ್ಯ ಪರೀಕ್ಷೆ ಮಾಡಿಸಿ ಕೊಂಡವರು 96,469 ಅದರಲ್ಲಿಸೋಂಕಿತರು-769, ಪರೀಕ್ಷೆಗೆ ಒಳಪಟ್ಟ ಗರ್ಭಿಣಿಯರು 46,760, ಅದರಲ್ಲಿ ಏಡ್ಸ್‌

ಸೋಂಕಿತರು 44, 2017-18 ಸಾಮಾನ್ಯ ಪರೀಕ್ಷೆ ಮಾಡಿಸಿಕೊಂಡವರು 96,469 ಅದರಲ್ಲಿ ಸೋಂಕಿತರು 760 ಪರೀಕ್ಷೆಗೆ ಒಳಪಟ್ಟ

ಗ ‌ರ್ಭಿಣಿಯರು 46,760, ಅದರಲ್ಲಿ ಏಡ್ಸ್ ಸೋಂಕಿತರು 47 ಏಡ್ಸ್‌ ಸೋಂಕಿತರು,2018-19 ಸಾಮಾನ್ಯ ಪ‌ರೀಕ್ಷೆ ಮಾಡಿಸಿಕೊಂಡವರು 1,04,017 ಅದರಲ್ಲಿ ಸೋಂಕಿತರು 711, ಪರೀಕ್ಷೆಗೆ ಒಟ್ಟು ಗರ್ಭಿಣಿಯರು 50,754, ಅದರಲ್ಲಿ ಏಡ್ಸ್‌ ಸೋಂಕಿತರು ‌ರು 29 ಏಡ್ಸ್‌ಸೋಂಕಿತರು .2020 ಏಪ್ರಿಲ್‌ ನಿಂದ ಅಕ್ಟೋಬರ್‌ ವರೆಗೆ ಸಾಮಾನ್ಯ ಪರೀಕ್ಷೆ ಮಾಡಿಸಿಕೊಂಡವರು 33,136 ಅದರಲ್ಲಿ ಸೋಂಕಿತರು 198 ಪರೀಕ್ಷೆಗೆ ಒಳ ಪಟ್ಟ ಗರ್ಭಿಣಿಯರು 27,988, ಅದರಲ್ಲಿ ಏಡ್ಸ್‌ ಸೋಂಕಿತರು 19 ಮಾತ್ರ ಏಡ್ಸ್‌ ಸೋಂಕಿತರು ಇದ್ದಾರೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

2008 ರಿಂದ 2020 ರ ವರೆಗೆ 13,000 ಏಡ್ಸ್‌ ಸೋಂಕಿತರು ಕಂಡು ಬಂದಿದ್ದು ಅದರಲ್ಲಿ 6,954 ಜನರು ಚಿಕಿತ್ಸೆ ಪಡೆದಿದ್ದಾರೆ, 4500 ಜನರು ನಿಧನ ಹೊಂದಿದ್ದಾರೆ ಜಿಲ್ಲೆಯನ್ನು 2030 ರೊಳಗೆ ಸಂಪೂರ್ಣಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ. ಡಾ.ಸನತ್‌ ತಿಳಿಸಿದ್ದಾರೆ.

 

-ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.