ತೇಲುವ ವಿದ್ಯುತ್‌ ಸ್ಥಾ ವರ ನಿರ್ಮಾಣಕ್ಕೆ ಮುಂದಾದ ಬಿಎಂಸಿ

Team Udayavani, Dec 3, 2020, 8:37 PM IST

ತೇಲುವ ವಿದ್ಯುತ್‌ ಸ್ಥಾ ವರ ನಿರ್ಮಾಣಕ್ಕೆ ಮುಂದಾದ ಬಿಎಂಸಿ

ಮುಂಬಯಿ, ಡಿ. 2: ಮಧ್ಯ ವೈತರಣಾ ಅಣೆಕಟ್ಟಿನ ಹಿನ್ನೀರಿನಲ್ಲಿ 80 ಮೆಗಾವ್ಯಾಟ್‌ ಸಾಮರ್ಥ್ಯದ ತೇಲುವ ಸೌರ ವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ಮುಂಬಯಿ ಮಹಾನಗರ ಪಾಲಿಕೆ ಮುಂದಾಗಿದೆ.

ಈ ತೇಲುವ ಸೌರ ವಿದ್ಯುತ್‌ ಸ್ಥಾವರವು ರಾಷ್ಟ್ರೀಯ ಇಂಧನ ಭದ್ರತಾ ಕಾರ್ಯಕ್ರಮದಡಿ ಅಣೆಕಟ್ಟಿನ ಮೇಲೆ ಹೈಬ್ರಿಡ್‌ ಇಂಧನ ಸೌಲಭ್ಯಗಳ ಅಭಿವೃದ್ಧಿಯ ಭಾಗವಾಗಲಿದೆ. ಎಂಟು ವರ್ಷಗಳ ಹಿಂದೆ ಬಿಎಂಸಿ ಮಧ್ಯ ವೈತರಣಾ ಅಣೆಕಟ್ಟಿನ ಮೇಲೆ ಜಲವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ಪ್ರಸ್ತಾವಿಸಿತ್ತು. ಬಳಿಕ ಈ ವರ್ಷ ಮತ್ತೂಮ್ಮೆ ಬಿಎಂಸಿ ತನ್ನ ಬಜೆಟ್‌ನಲ್ಲಿ ಇದನ್ನು ಉಲ್ಲೇಖೀಸಿದ್ದು, ತೇಲುವ ಸೌರ ವಿದ್ಯುತ್‌ ಸ್ಥಾವರವನ್ನು ನಿರ್ಮಿಸಲು ನಿರ್ಧರಿಸಿದೆ.

ಸಂಯೋಜಿತ ಟೆಂಡರ್‌ಗಳ ಆಹ್ವಾನ :

ಚರ್ಚೆಯ ಸಮಯದಲ್ಲಿ ಜಲ ಯೋಜನೆ ನಿಗಮವು ನವೀಕರಿಸಬಹುದಾದ ಇಂಧನ ಮೂಲಗಳತ್ತ ಗಮನ ಹರಿಸಬೇಕು ಎಂದು ತಿಳಿಸಲಾಗಿತ್ತು. ಇದರ ಬಳಿಕ ನೀರು ಸರಬರಾಜು ಮಾಡುವ ಸರೋವರಗಳಲ್ಲಿ ತೇಲುವ ಸೌರ ಫಲಕಗಳನ್ನು ಸ್ಥಾಪಿಸುವಂತಹ ಆಯ್ಕೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದ್ದೇವೆ. ಕಾರ್ಯಸಾಧ್ಯತೆಯನ್ನು ಪರಿಶೀಲಿಸಲಾಗಿದ್ದು, ಮಧ್ಯ ವೈತರಣಾ ಅಣೆಕಟ್ಟಿನಲ್ಲಿ ಈಗಾಗಲೇ ಜಲ ವಿದ್ಯುತ್‌ ಯೋಜನೆಯನ್ನು ಸ್ಥಾಪಿಸುತ್ತಿರುವುದರಿಂದ ತೇಲುವ ಸೌರ ಫಲಕಗಳನ್ನು ಅಲ್ಲಿ ಸ್ಥಾಪಿಸಬಹುದು ಎಂದು ಕಂಡುಬಂದಿದೆ. ಇದರ ಬಳಿಕ ಎರಡೂ ವಿದ್ಯುತ್‌ ಸ್ಥಾವರಗಳಿಗೆ ಸಂಯೋಜಿತ ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಡಬ್ಲ್ಯುಎಸ್‌ಪಿ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

80 ಮೆಗಾವ್ಯಾಟ್‌ ವಿದ್ಯುತ್‌ ಸಾಮರ್ಥ್ಯ :

ದೀರ್ಘ‌ಕಾಲ ಇರುವ ಜಲವಿದ್ಯುತ್‌ ಸ್ಥಾವರವು 20 ಮೆಗಾವ್ಯಾಟ್‌ ಸಾಮರ್ಥ್ಯ ಹೊಂದಿದ್ದರೆ, ತೇಲುವ ಸೌರ ವಿದ್ಯುತ್‌ ಸ್ಥಾವರವು 80 ಮೆಗಾವ್ಯಾಟ್‌ ವಿದ್ಯುತ್‌ ಅನ್ನು ಉತ್ಪಾದಿಸಬಹುದು. ಯೋಜನೆ ಪೂರ್ಣಗೊಳ್ಳಲು 31 ತಿಂಗಳು ತೆಗೆದುಕೊಳ್ಳುತ್ತದೆ. ಒಟ್ಟು 100 ಮೆಗಾವ್ಯಾಟ್‌ಗಳಲ್ಲಿ ದ್ವೀಪ ನಗರ ಮತ್ತು ಅದರ ಸ್ವಂತ ಕಚೇರಿಗಳಲ್ಲಿ ಬೆಸ್ಟ್‌ ವಿದ್ಯುತ್‌ ಸರಬರಾಜನ್ನು  ಹೆಚ್ಚಿಸಲು ಯೋಜಿಸಿದೆ.

25 ವರ್ಷಗಳ ನಿರ್ವಹಣೆಯ ಜವಾಬ್ದಾರಿ :

ಯೋಜನೆಗಾಗಿ ಅಂತಿಮಗೊಳಿಸಿದ ಏಜೆನ್ಸಿ 25 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವ ಹಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಪುರಸಭೆ ಹೈಬ್ರಿಡ್‌ ವಿದ್ಯುತ್‌ ಯೋಜನೆಯನ್ನು ಕಾರ್ಯಗತ ಗೊಳಿ ಸು ತ್ತಿರು ವುದು ಇದೇ ಮೊದಲು. ಜಗತ್ತು ನವೀಕರಿ ಸಬಹು ದಾದ ಶಕ್ತಿಯತ್ತ ಸಾಗುತ್ತಿದ್ದು, ಸೌರ ವಿದ್ಯುತ್‌ ಸ್ಥಾವರ ವನ್ನು ಸ್ಥಾಪಿಸುವ ಮೂಲಕ ಬಿಎಂಸಿ ಈಗಾಗಲೇ ಭಾಂಡೂಪ್‌ ವಾಟರ್‌ ಕಾಂಪ್ಲೆಕ್ಸ್‌ನಲ್ಲಿ ಶುದ್ಧ ಶಕ್ತಿಯನ್ನು ಬಳಸಲಾರಂಭಿಸಿದೆ. ಯೋಜನೆಗೆ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಡಬ್ಲ್ಯುಎಸ್‌ಪಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿ¨ªಾರೆ.

ಪ್ರತೀದಿನ 455 ಮಿಲಿಯನ್‌ ಲೀಟರ್‌ ನೀರು ಪೂರೈಕೆ :

ಕಳೆದ ವರ್ಷ ವಾರ್ಧಾ, ಬೆಬಾಲಾ, ಖಡಕ್ಪುರ ಮತ್ತು ಪೆಂಟಕ್ಲಿ ಅಣೆಕಟ್ಟುಗಳ ಹಿನ್ನೀರಿನಲ್ಲಿ ತೇಲುವ ಸೌರ ಫಲಕಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಯೋಜಿಸಿತ್ತು. ಮಧ್ಯ ವೈತರಣಾ ಅಣೆಕಟ್ಟಿನ ನಿರ್ಮಾಣ 2012ರಲ್ಲಿ ಪೂರ್ಣಗೊಂಡಿದೆ. ಅಣೆಕಟ್ಟಿನ ಎತ್ತರ 102.4 ಮೀ. ಇದ್ದು, ಈ ಅಣೆಕಟ್ಟಿನಿಂದ ಮುಂಬಯಿಗೆ ಪ್ರತೀದಿನ 455 ಮಿಲಿಯನ್‌ ಲೀಟರ್‌ ನೀರು ಸರಬರಾಜಾಗುತ್ತಿದೆ. ಬಿಎಂಸಿ ಮೊದಲಿನಿಂದಲೂ ಜಲ ಯೋಜನೆ ಬಗ್ಗೆ ಉತ್ಸುಕವಾಗಿದ್ದರೂ ರಾಜ್ಯವು ಅನುಮತಿ ನೀಡಲು ನಿರಾಕರಿಸಿತ್ತು. 2017ರಲ್ಲಿ ಬಿಎಂಸಿ ಯೋಜನೆಯ ಕುರಿತು ವರದಿ ತಯಾರಿಸಲು ನೇಮಕಗೊಂಡ ಸಲಹೆಗಾರರ ಒಪ್ಪಂದವನ್ನು ರದ್ದುಗೊಳಿಸಿತು. ಕಳೆದ ವರ್ಷ ಮಹಾ ವಿಕಾಸ್‌ ಅಘಾಡಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಬಗ್ಗೆ ಮತ್ತೆ ಚರ್ಚೆ ಪ್ರಾರಂಭವಾಯಿತು. 2019ರ ಡಿಸೆಂಬರ್‌ನಲ್ಲಿ ಅಣೆಕಟ್ಟಿನಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವ ಬಿಎಂಸಿ ಯೋಜನೆಯನ್ನು ಸಿಎಂ ಠಾಕ್ರೆ ಅನುಮೋದಿಸಿದರು.

ಟಾಪ್ ನ್ಯೂಸ್

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

DKSHI (2)

Pen drive case; ಮುಗಿಸೋದೇ ಕುಮಾರಸ್ವಾಮಿ ಕೆಲಸ: ಡಿ.ಕೆ.ಶಿವಕುಮಾರ್ ಆಕ್ರೋಶ

2–sscl-result

SSLC Result: ಮೇ.9 ರಂದು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

prahlad-joshi

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

Rajamouli: ʼಬಾಹುಬಲಿʼ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ; ನಿರ್ದೇಶಕ ರಾಜಮೌಳಿ

DKSHI (2)

Pen drive case; ಮುಗಿಸೋದೇ ಕುಮಾರಸ್ವಾಮಿ ಕೆಲಸ: ಡಿ.ಕೆ.ಶಿವಕುಮಾರ್ ಆಕ್ರೋಶ

ಬಡವರಿಗೆ ಆರ್ಥಿಕ ಬಲ ತುಂಬಿದ ಗ್ಯಾರಂಟಿ: ಗಡ್ಡದೇವರಮಠ

ಬಡವರಿಗೆ ಆರ್ಥಿಕ ಬಲ ತುಂಬಿದ ಗ್ಯಾರಂಟಿ: ಗಡ್ಡದೇವರಮಠ

2–sscl-result

SSLC Result: ಮೇ.9 ರಂದು ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.