ಮತಯಾಚನೆಗೆ ನೂತನ ತಂತ್ರಗಾರಿಕೆ

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಜಾಲತಾಣದ ಮೂಲಕವೂ ಪಂಚಾಯತ್‌ ಚುನಾವಣೆ ಪ್ರಚಾರ

Team Udayavani, Dec 24, 2020, 4:08 PM IST

ಮತಯಾಚನೆಗೆ ನೂತನ ತಂತ್ರಗಾರಿಕೆ

ಸಿಂದಗಿ: ಜಾಲತಾಣದಲ್ಲಿ ಹರಿದಾಡುತ್ತಿರುವ ಮತಪತ್ರ.

ಸಿಂದಗಿ: ತಾಲೂಕಿನಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್‌ ಚುನಾವಣೆ ಪ್ರಚಾರ ರಂಗೇರಿದೆ. ಮನೆ ಮನೆಗೆ ಹೋಗಿ ಮತಯಾಚನೆ ಮಾಡುವುದಲ್ಲದೇ ಸಾಮಾಜಿಕ ಜಾಲತಾಣ ಬಳಸಿಕೊಂಡು ಮತ ಸೆಳೆಯಲು ಮುಂದಾಗಿದ್ದಾರೆ ಉಮೇದುವಾರರು.

ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿ ಕೊಳ್ಳುವ ಮೂಲಕ ಮತದಾರರ ವಿಶ್ವಾಸ ಗಳಿಸುವತ್ತಲೂ ಸ್ಪ ರ್ಧಿಗಳು ಚಿಂತನೆ ನಡೆಸಿದ್ದಾರೆ. ದೂರದ ಊರುಗಳಲ್ಲಿರುವ ಬಂಧುಗಳು, ನೆರೆ ಹೊರೆಯವರನ್ನು ಸೆಳೆದು ಮತನೀಡುವಂತೆ ವಿನಂತಿಸಿಕೊಳ್ಳುವ ಉಮೇದಿನಲ್ಲಿ ಜಾಲತಾಣದಲ್ಲೇ ಸಕ್ರಿಯರಾಗಿದ್ದಾರೆ ಅಭ್ಯರ್ಥಿಗಳು.ಈಗ ಎಲ್ಲರ ಬಳಿಯೂ ಸ್ಮಾರ್ಟ್‌ ಮೊಬೈಲ್‌ಗ‌ಳಿವೆ.ಪ್ರತಿ ಕ್ಷಣವೂ ಜನರು ಮೊಬೈಲ್‌ ಸಂದೇಶಗಳಿಗೆ ಅಪ್‌ಡೇಟ್‌ ಆಗುತ್ತಾರೆ. ಈ ತಂತ್ರವನ್ನು ಗೆಳೆಯನಂತೆ ಮಾಡಿಕೊಂಡ ಅಭ್ಯರ್ಥಿಗಳು ಮತ ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದು, ಜನಮನ ಗೆಲ್ಲುವ ಆಪ್ತ ಬರಹಗಳು ಗಮನ ಸೆಳೆಯುತ್ತಿವೆ.

ಈಗಾಗಲೇ ಸ್ಪರ್ಧಿಗಳಿಗೆ ಚುನಾವಣಾ ಆಯೋಗದ ಚಿಹ್ನೆಗಳು ದೊರಕಿದ್ದು, ಕನ್ನಡವರ್ಣಮಾಲೆಗೆ ಅನುಸಾರ ಮತ ಪತ್ರದಲ್ಲಿಅಭ್ಯರ್ಥಿಗಳ ಹೆಸರು, ಗುರುತು ನೀಡಿದೆ.ಇದಕ್ಕೆ ಅನುಸಾರ ಉಮೇದುವಾರರುತಮ್ಮ ಕ್ರಮ ಸಂಖ್ಯೆ ಮತ್ತು ತಮ್ಮ ಭಾವ ಚಿತ್ರಗಳನ್ನುಕರಪತ್ರದಲ್ಲಿ ಮುದ್ರಣ ಮಾಡಿಸಿದ್ದಾರೆ. ಇಂತಹ ಪತ್ರಗಳ ಚಿತ್ರ ತೆಗೆದು, ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌ ಮೂಲಕ ಪೋಸ್ಟ್‌ ಮಾಡಿ, ಮತ ಯಾಚಿಸುವ ಪರಿ ಗಮನ ಸೆಳೆಯುತ್ತಿದೆ.

ಸ್ಪರ್ಧಿಗಳ ಸ್ನೇಹಿತರು, ಕುಟುಂಬಸ್ಥರ ವಾಟ್ಸ್‌ ಆ್ಯಪ್‌ ಗ್ರೂಪ್‌, ಫೇಸ್‌ಬುಕ್‌ ಖಾತೆಗಳಲ್ಲಿ ಕರಪತ್ರಗಳ ಚಿತ್ರವನ್ನು ಹರಿಬಿಟ್ಟು, ಆರ್ಥಿಕ ಸಂದೇಶ ಕಳಿಸುತ್ತಿದ್ದಾರೆ. ಸ್ನೇಹಿತರು ಜನ ಸೇವೆಗೆ ಮುಂದಾಗಿದ್ದು, ಮಾದರಿ ಗ್ರಾಮವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ಮತ ನೀಡಬೇಕು ಎಂತಲೂ, ಮತ್ತೆ ಕೆಲವರು ಆಕರ್ಷಕ ವಿಡಿಯೋ ತುಣುಕುಗಳ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

ಆತ್ಮೀಯರ ಮೂಲಕ ಸಂದೇಶಗಳನ್ನು ಟ್ಯಾಗ್‌ ಮಾಡಿ, ಮತ ಹಾಕುವಂತೆ ಒಲಿಸುವ ಪ್ರಯತ್ನವೂ ಸಾಗಿದೆ.ಅಭಿಮಾನಿ ಬಳಗ, ರಾಜಕಾರಣಿ ಗಳ ಗ್ರೂಪ್‌,ವಿದ್ಯಾರ್ಥಿ ಮತ್ತು ಮಹಿಳಾ ಸಂಘ-ಸಂಸ್ಥೆಗಳಸದಸ್ಯರಿಗೆ ಸಂದೇಶ ಕಳಿಸಿ, ತಮ್ಮ ಪರ ಮತ ನೀಡುವಂತೆ ವಿನಂತಿಸುವವರು ಇದ್ದಾರೆ. ಪಟ್ಟಣಗಳಲ್ಲಿ ನೆಲೆಸಿರುವ ಸಂಬಂಧಿಗಳು ಮತ್ತು ಶ್ರಮಿಕರಿಗೆ ಮತದಾರರ ಪಟ್ಟಿಯ ವಿವರ, ಸಂಖ್ಯೆ ಮತ್ತು ಚಿತ್ರಗಳನ್ನು ರವಾನಿಸಿ, ವಿಶ್ವಾಸ ಕುದುರಿಸುವ ಕೊಂಡಿಯಾಗಲು ಜಾಲತಾಣ ನೆರವಾಗಿದೆ ಎನ್ನುತ್ತಾರೆ ಉಮೇದುವಾರರು.

ಕಡಿಮೆ ಅವಧಿಯಲ್ಲಿ ಮತದಾರರನ್ನು ಮುಟ್ಟಲು ಫೇಸ್‌ಬುಕ್‌ ನೆರವಾಗಿದೆ. ಕರಪತ್ರ ಮುದ್ರಿಸಿ ನೀಡಿದರೂ, ಜೊತೆಯಲ್ಲಿ ಇಟ್ಟುಕೊಳ್ಳುವ ನಂಬಿಕೆಇಲ್ಲ. ಆದರೆ, ವಾಟ್ಸ್‌ಆ್ಯಪ್‌ ಮತ್ತು ಟೆಲಿಗ್ರಾಂ ಮೂಲಕ ಸಂದೇಶ ಗಳನ್ನು ಮತದಾರರಿಗೆ ಸುಲಭವಾಗಿ ಮುಟ್ಟಿಸಬಹುದು. ಮುದ್ರಿಸಿ ಹಂಚುವ ವೆಚ್ಚ ಹಾಗೂ ಸಮಯವೂ ಉಳಿಯುತ್ತದೆ ಎಂದು ರಾಂಪುರ ಪಿಎ ಗ್ರಾಪಂ ವಾರ್ಡ್‌ ನಂ.1ರ ಅಭ್ಯರ್ಥಿ ಮಲ್ಲಮ್ಮ ಹನುಮಂತ ಹೂಗಾರ ಹೇಳುತ್ತಾರೆ.ಉದ್ಯೋಗಕ್ಕಾಗಿ ಊರು ಬಿಟ್ಟು ತೆರಳಿರುವ ಮತದಾರರನ್ನು ಪೋನ್‌ ಮೂಲಕ ಸಂಪರ್ಕಿಸಿ, ನನ್ನಪರವಾಗಿ ಮತದಾನ ಮಾಡುವಂತೆ ವಿನಂತಿಸಿದ್ದೇನೆ. ಅವರಿಗೆ ನನ್ನ ಆಯ್ಕೆಯ ಚಿಹ್ನೆ, ಕ್ರಮ ಸಂಖ್ಯೆ ಮತ್ತು ಮತಗಟ್ಟೆ ಸಂಖ್ಯೆಯನ್ನು ವ್ಯಾಟ್ಸ್‌ಆ್ಯಪ್‌ ಮೂಲಕ ತಿಳಿಸಿದ್ದೇನೆ. ಆತ್ಮೀಯರು ನನ್ನ ಪರವಾಗಿ ಮತ ಚಲಾಯಿಸುವ ನಂಬಿಕೆ ಇದೆ. ಸಾಮಾಜಿಕ ಜಾಲತಾಣದಿಂದ ಸುಲಭ ಪ್ರಚಾರ ಸಾಧ್ಯವಾಗಿಸಿದೆ. ವಿವಿಧ ಕಾರಣಗಳಿಂದ ದೂರ ಇದ್ದವರನ್ನು ಹತ್ತಿರಕ್ಕೆಕರೆ ತಂದು ವಿಶ್ವಾಸ ಹೆಚ್ಚಿಸಿದೆ ಎನ್ನುತ್ತಾರೆ ಬೊಮ್ಮನಹಳ್ಳಿ ಗ್ರಾಪಂ ಗುಂದಗಿಯ ವಾರ್ಡ್‌ ನಂ. 4ರ ಅಭ್ಯರ್ಥಿ ಉಮಾಬಾಯಿ ರಾವುತಪ್ಪ ಬಿರಾದರ.

 

-ರಮೇಶ ಪೂಜಾರ

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.