ಚಿಣ್ಣರ ಕಲರವ ಸೂಕ್ತ ವ್ಯವಸ್ಥೆ ಯಾವಾಗ?


Team Udayavani, Jan 4, 2021, 1:34 PM IST

bng-tdy-1

ಲಾಕ್‌ಡೌನ್‌ ಹಾಗೂ ಕೋವಿಡ್ ಕಾರಣದಿಂದ ಮುಚ್ಚಿದ್ದ ಶಾಲೆಗಳು ಈಗ ಶೈಕ್ಷಣಿಕ ಚಟುವಟಿಕೆ ಆರಂಭಿಸಿವೆ. ನಗರದ ಬಹುತೇಕ ಎಲ್ಲ ಶಾಲೆಗಳಲ್ಲಿಯೂ ಚಿಣ್ಣರ ಕಲರವ ಕೇಳಲಾರಂಭಿಸಿದೆ. ಕೆಲವೆಡೆ ವ್ಯವಸ್ಥೆ ಅಚ್ಚುಕಟ್ಟಾಗಿದ್ದರೆ, ಅನೇಕ ಕಡೆಗಳಲ್ಲಿ ವ್ಯವಸ್ಥೆ, ಮೂಲಸೌಕರ್ಯ ಇನ್ನಷ್ಟು ಸುಧಾರಿಸಬೇಕಿದೆ. ಮಕ್ಕಳು ಮಾಸ್ಕ್ ಧರಿಸಿ ಬರುತ್ತಿದ್ದಾರೆ. ಒಟ್ಟಾರೆಯಾಗಿ ರಾಜಧಾನಿ ಬೆಂಗಳೂರಿನ ಶಾಲೆಗಳಲ್ಲಿ ಕೈಗೊಂಡಿರುವ ಕ್ರಮ, ವ್ಯವಸ್ಥೆ ಸೇರಿದಂತೆ ವಾಸ್ತವ ಪರಿಸ್ಥಿತಿ ತಿಳಿಸುವ ಸುತ್ತಾಟ.

ನಗರದಲ್ಲಿ ಹೊಸ ವರ್ಷದಿಂದ ಶಾಲೆಗಳು ಆರಂಭವಾಗಿವೆ. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಸೇರಿದಂತೆ ವಿದ್ಯಾಗಮ ತರಗತಿಗಳುವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲಿ ಹೊಸ ಭರವಸೆಮೂಡಿಸಿವೆ. ಆದರೂ ಕೆಲವು ಶಾಲೆಗಳಲ್ಲಿ ಕೋವಿಡ್‌ ಮುಂಜಾಗ್ರತ ಕ್ರಮಗಳೊಟ್ಟಿಗೆ ಸೂಕ್ತ ವ್ಯವಸ್ಥೆ ಅವಶ್ಯವಿದೆಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಜತೆಗೆಸರ್ಕಾರಿ ಶಾಲೆಗಳಲ್ಲಿ ಪರಿಷ್ಕೃತ ವಿದ್ಯಾಗಮಆರಂಭವಾಗಿದೆ. ಖಾಸಗಿ ಹಾಗೂ ಅನುದಾನಿತ ಶಾಲಾಡಳಿತ ಮಂಡಳಿಗಳಲ್ಲಿ ಕೆಲವು 6ರಿಂದ 9ನೇತರಗತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಗಮವನ್ನೇಅನುಷ್ಠಾನ ಮಾಡಿಕೊಂಡಿವೆ.

ಇನ್ನು ಕೆಲವು ಶಾಲಾಡಳಿತಮಂಡಳಿಗಳು ತಮ್ಮದೇಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿವೆ.ವಿದ್ಯಾರ್ಥಿಗಳ ಪ್ರತ್ಯೇಕಗುಂಪು ರಚಿಸಿ ವಾರಕ್ಕೆಎರಡು-ಮೂರು ದಿನ ಅವರನ್ನು ಶಾಲೆಗೆ ಕರೆಸಿ ಪಾಠಕಲಿಸುವ ಮತ್ತು ಪರ್ಯಾಯದಿನಗಳಲ್ಲಿ ಆನ್‌ಲೈನ್‌ ತರಗತನಡೆಸುವ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಕೊಂಡಿವೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾಗಮ ಕಾರ್ಯಕ್ರಮ ಇನ್ನಷ್ಟೇ ಟೇಕ್‌ ಅಪ್‌ ಆಗಬೇಕಿದೆ.

ಆರೋಗ್ಯ ಇಲಾಖೆ ಮಾರ್ಗದರ್ಶನದಂತೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳು ಪ್ರವೇಶದ್ವಾರ ಮೂಲಕ ಒಳಾಂಗಣಕ್ಕೆ ಪ್ರವೇಶ ಮಾಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ 6 ಅಡಿಗಳ ಅಂತರದಲ್ಲಿ ಮಾರ್ಕ್‌ ಮಾಡಲಾಗಿದೆ. ಆದರೆ, ಮಕ್ಕಳ ಶಾಲಾ ಆವರಣದಿಂದ ಹೊರಗೆ ಹೋಗುತ್ತಿದ್ದಂತೆ ಸಾಮಾಜಿಕಅಂತರ ಮಾಯವಾಗುತ್ತಿದೆ. ಈ ಬಗ್ಗೆ ಇನ್ನಷ್ಟು ತಿಳಿ ಹೇಳುವ ಕಾರ್ಯ ಶಾಲಾ ಶಿಕ್ಷಕರಿಂದ ಆಗಬೇಕಿದೆ.

ಮಾಸ್ಕ್ ಇದ್ದರಷ್ಟೇ ಪ್ರವೇಶ: ಮಕ್ಕಳಿಗೆ ಮನೆಯಿಂದಲೇ ಮಾಸ್ಕ್ ಧರಿಸಿ ಕಳುಹಿಸಬೇಕು. ಮಾಸ್ಕ್ ಇಲ್ಲದೇ ಇದ್ದರೆ ತರಗತಿಯ ಒಳಗೆ ಪ್ರವೇಶವಿಲ್ಲ ಎಂಬ ಸ್ಪಷ್ಟ ನಿರ್ದೇಶನವನ್ನು ಶಾಲಾ ಆಡಳಿತ ಮಂಡಳಿಗಳು ನೀಡಿವೆ. ಸರ್ಕಾರಿ ಶಾಲಾ ಮಕ್ಕಳಿಗೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬಸೂಚನೆಯಿದೆ. ಆದರೆ, ನಾನಾ ಕಾರಣಕ್ಕಾಗಿ ಮಾಸ್ಕ್ ಧರಿಸದೇ ಬಂದ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುವ ಕಾರ್ಯವನ್ನು ಮುಖ್ಯಶಿಕ್ಷಕರು ಮಾಡುತ್ತಿದ್ದಾರೆ.

ಕಠಿಣ ನೀತಿ ಅನುಷ್ಠಾನ: ವಿದ್ಯಾರ್ಥಿಗಳ ಊಟ ಮತ್ತು ತಿಂಡಿ ವಿಷಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಎಸ್‌ಒಪಿ ಅನ್ವಯ ಟಫ್ ರೂಲ್ಸ್‌ ಅನುಷ್ಠಾನ ಮಾಡಿವೆ. ಈ ಹಿಂದೆ ಖಾಸಗಿ ಶಾಲೆಗಳಲ್ಲಿ ಬೆಳಗ್ಗಿನ ಎರಡು ಅವಧಿಯ ನಂತರ ಮನೆಯಿಂದ ತಂದಿರುವ ತಿಂಡಿಗಳನ್ನು ತಿನ್ನಲು 10ರಿಂದ 15

ನಿಮಿಷಗಳ ಕಾಲಾವಕಾಶ ನೀಡುತ್ತಿದ್ದರು. ಹಾಗೆಯೇ ಸರ್ಕಾರಿ ಶಾಲೆಗಳಲ್ಲಿ ಇದೇ ಅವಧಿಯಲ್ಲಿ ಕ್ಷೀರಭಾಗ್ಯದ ಹಾಲು ವಿತರಣೆ ಮಾಡುತ್ತಿದ್ದರು. ಈಗ ಮಕ್ಕಳು ಮನೆಯಿಂದ ತಿಂಡಿ, ಊಟ ಏನೂ ತರುವಂತಿಲ್ಲ.ಬೆಳಗ್ಗೆ ಮನೆಯಿಂದ ತಿಂಡಿತಿಂದು ಬಂದರೆ, ಮಧ್ಯಾಹ್ನ ಮನೆಗೆ ಹೋಗಿ ಊಟಮಾಡಬೇಕು. ಯಾವುದೇ ಶಾಲೆಯಲ್ಲೂ ಬಿಸಿಯೂಟ ಇಲ್ಲ. ಸರ್ಕಾರಿ ಶಾಲೆಯಲ್ಲಿಬಿಸಿಯೂಟದ ಬದಲಿಗೆ ಆಹಾರ ಧಾನ್ಯವನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ.

‌ನಗರದ ವಿದ್ಯಾರ್ಥಿಗಳು :

ಬೆಂ.ಉತ್ತರ ಜಿಲ್ಲೆಯ ಸರ್ಕಾರಿ ಪ್ರಾಥಮಿಕಶಾಲೆಯಲ್ಲಿ ಸುಮಾರು 50 ಸಾವಿರಕ್ಕೂಅಧಿಕ ವಿದ್ಯಾರ್ಥಿಗಳು, ಪ್ರೌಢಶಾಲೆಯಲ್ಲಿ 10 ಸಾವಿರಕ್ಕೂಅಧಿಕ ವಿದ್ಯಾರ್ಥಿಗಳು, ಬೆಂ.ದಕ್ಷಿಣ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿಸುಮಾರು 1 ಲಕ್ಷ ವಿದ್ಯಾರ್ಥಿಗಳು, ಪ್ರೌಢಶಾಲೆಯಲ್ಲಿ 15 ಸಾವಿರವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಬೆಂ.ಉತ್ತರಜಿಲ್ಲೆಯ ಅನುದಾನಿತ ಪ್ರಾಥಮಿಕಶಾಲೆಯಲ್ಲಿ ಸುಮಾರು 40 ಸಾವಿರ, ಪ್ರೌಢಶಾಲೆಯಲ್ಲಿ 17 ಸಾವಿರ,ಬೆಂ.ದಕ್ಷಿಣ ಜಿಲ್ಲೆಯ ಅನುದಾನಿತಶಾಲೆಯಲ್ಲಿ ಸುಮಾರು 50 ಸಾವಿರ,ಪ್ರೌ ಢಶಾಲೆಯಲ್ಲಿ 24 ಸಾವಿರ ವಿದ್ಯಾರ್ಥಿಗಳುವ್ಯಾಸಂಗ ಮಾಡುತ್ತಿದ್ದಾರೆ. ಬೆಂ.ಉತ್ತರ ಜಿಲ್ಲೆಯಖಾಸಗಿ ಪ್ರಾಥಮಿಕ ಶಾಲೆಯಲ್ಲಿ 4.50 ಲಕ್ಷಕ್ಕೂ ಅಧಿಕ,ಪ್ರೌಢಶಾಲೆಯಲ್ಲಿ 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳುವ್ಯಾಸಂಗ ಮಾಡುತ್ತಿದ್ದಾರೆ. ಬೆಂ.ದಕ್ಷಿಣ ಜಿಲ್ಲೆಯ ಪ್ರಾಥಮಿಕ ಖಾಸಗಿಶಾಲೆಯಲ್ಲಿ 7 ಲಕ್ಷಕ್ಕೂ ಅಧಿಕ, ಪ್ರೌಢಶಾಲೆಯಲ್ಲಿ 1.20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಶಾಲೆಗೊಂದು ಎಸ್‌ಒಪಿ, ಹೆಲ್ತ್‌ ಕ್ಲಬ್‌ ಇನ್ನೂ ರಚನೆಯಾಗಿಲ್ಲ  :  ಎಲ್ಲ ಶಾಲೆಗಳು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತುಕೋವಿಡ್ ಸಂಬಂಧಿಸಿದ ಸುರಕ್ಷತಾ ನಿಯಮಗಳಮಾಹಿತಿಯನ್ನು ಆಗಿಂದಾಗೆ ವಿದ್ಯಾರ್ಥಿಗಳಿಗೆ ಒದಗಿಸಲು ಶಿಕ್ಷಕರು, ವಿದ್ಯಾರ್ಥಿಗಳನ್ನು ಒಳಗೊಂಡಿರುವ ಹೆಲ್ತ್‌ ಕ್ಲಬ್‌ ರಚನೆಮಾಡಬೇಕು. ಆದರೆ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಹೆಲ್ತ್‌ಕ್ಲಬ್‌ ರಚನೆಯಾಗಿಲ್ಲ. ಇನ್ನು ಶಾಲೆಗೊಂದು ಎಸ್‌ಒಪಿ ರಚನೆ ಮಾಡಬೇಕು ಎಂಬ ಸೂಚನೆಯೂ ಅನುಷ್ಠಾನಕ್ಕೆ ಬಂದಿಲ್ಲ.ಆದರೆ, ಈ ಎರಡು ವಿಚಾರದಲ್ಲಿ ಖಾಸಗಿ ಶಾಲೆಗಳು ಸಾಕಷ್ಟು ಕ್ರಮ ತೆಗೆದುಕೊಂಡಿವೆ.

ಬಿಸಿನೀರು ವ್ಯವಸ್ಥೆಯಾಗಿಲ್ಲ  :

ಬಹುತೇಕ ಶಾಲೆಗಳು ಮಕ್ಕಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಇನ್ನು ಮಾಡಿಲ್ಲ. ಖಾಸಗಿ ಶಾಲೆಯ ಬಹುತೇಕ ಮಕ್ಕಳು ಮನೆಯಿಂದಲೇಬಿಸಿನೀರು ಮತ್ತು ತರಗತಿ ಕೊಠಡಿಯಲ್ಲಿ ಆಗಿಂದಾಗೇ ಸ್ಯಾನಿಟೈಜರ್‌ ಮಾಡಿಕೊಳ್ಳಲು ಮನೆಯಿಂದಲೇ ಹ್ಯಾಂಡ್‌ ಸ್ಯಾನಿಟೈಜರ್‌ ಬ್ಯಾಟಲಿ ತೆಗೆದುಕೊಂಡು ಬರುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ತುರ್ತಾಗಿ ಬಿಸಿನೀರಿನ ವ್ಯವಸ್ಥೆ ಆಗಬೇಕಿದೆ.

ಐಸೋಲೇಷನ್‌ ಕೊಠಡಿಯಿದೆ, ವ್ಯವಸ್ಥೆಯಿಲ್ಲ? :

ಎಲ್ಲ ಶಾಲೆಗಳು ಒಂದು ಕೊಠಡಿಯನ್ನು ಐಸೋಲೇಷನ್‌ ಕೊಠಡಿಯಾಗಿರೂಪಿಸಿವೆ. ಆದರೆ, ಕೊಠಡಿಯ ಒಳಗೆ ದಿಢೀರ್‌ ಅಸ್ವಸ್ಥಗೊಳ್ಳುವ ಮಕ್ಕಳ ತುರ್ತು ಚಿಕಿತ್ಸೆಗೆ ಬೇಕಾದ ಯಾವುದೇ ವ್ಯವಸ್ಥೆ ಇಲ್ಲ. ಖಾಸಗಿ ಶಾಲೆಗಳಲ್ಲಿ ರೂಪಿಸಿರುವಐಸೋಲೇಷನ್‌ ಕೊಠಡಿಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿ ದಂತೆ ತುರ್ತು ಚಿಕಿತ್ಸೆಗೆಅಗತ್ಯವಿರುವ ಸೌಕರ್ಯ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿರುವ ಐಸೋಲೇಷನ್‌ ಕೊಠಡಿಯಲ್ಲಿ ಏನೂ ಇಲ್ಲ. ಐಸೋಲೇಷನ್‌ ಕೊಠಡಿ ಇನ್ನಷ್ಟು ವ್ಯವಸ್ಥಿತ ರೀತಿಯಲ್ಲಿ ರೂಪುಗೊಳಿಸುವ ಅಗತ್ಯವಿದೆ.

ಇದನ್ನೂ ಓದಿ : ಯಾವದೇ ಪಕ್ಷದೊಂದಿಗೆ ವಿಲೀನವಿಲ್ಲ, 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಎಚ್ ಡಿಕೆ

ಎಲ್ಲದಕ್ಕೂ ಪ್ರತ್ಯೇಕ ವ್ಯವಸ್ಥೆ :

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ತಾಪಮಾನ ಪರೀಕ್ಷೆ ಹಾಗೂ ಮಕ್ಕಳಿಗೆ ಹ್ಯಾಂಡ್‌ ಸ್ಯಾನಿಟೈಜೇಷನ್‌ ನೀಡುವ ಕಾರ್ಯವನ್ನು ನಿತ್ಯ ಶಿಕ್ಷಕರೇ ಮಾಡುತ್ತಿದ್ದಾರೆ. ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ತಾಪಮಾನ ಪರೀಕ್ಷೆ ಹಾಗೂ ಹ್ಯಾಂಡ್‌ ಸ್ಯಾನಿಟೈಜೇಷನ್‌ ನೀಡುವ ಕೆಲಸವನ್ನು ಮುಖ್ಯದ್ವಾರದ ಬಳಿ ಇರುವ ಭದ್ರತಾ ಸಿಬ್ಬಂದಿ ಮಾಡುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ತರಗತಿಗಳಿಗೆ ಶೇ.40ಕ್ಕೂ ಅಧಿಕ ಹಾಜರಾತಿಯಿದೆ. ವಿದ್ಯಾಗಮದಲ್ಲೂ ಹಾಜರಾತಿ ಚೆನ್ನಾಗಿದೆ ಮತ್ತು ಕೋವಿಡ್‌ ಸೇವೆಯಲ್ಲಿರುವ ಪ್ರೌಢಶಾಲಾ ಶಿಕ್ಷಕರನ್ನು ಈಗಾಗಲೇ ತೆರವುಗೊಳಿಸಿ, ಶಾಲೆಗೆ ಕರೆಸಲಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ವಿಚಾರವಾಗಿ ಸೋಮ ವಾರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಬರುತ್ತಿದ್ದಾರೆ. ಎಲ್ಲ ರೀತಿಯ ಸುರಕ್ಷತಾ ವ್ಯವಸ್ಥೆಯನ್ನು ಮಾಡಿದ್ದೇವೆ. -ಎಸ್‌.ರಾಜೇಂದ್ರ, ಉಪನಿರ್ದೇಶಕ, ಬೆಂಗಳೂರು ದಕ್ಷಿಣ ಜಿಲ್ಲೆ

ಎಸ್‌ಒಪಿ ಕೇವಲ ಖಾಸಗಿ ಸಂಸ್ಥೆಗಳಿಗೆ ಸೀಮಿತವಾಗದೇ, ಸರ್ಕಾರಿ ಶಾಲೆಗಳಲ್ಲೂಅಚ್ಚುಕಟ್ಟಾಗಿ ಜಾರಿಗೆ ಬರಬೇಕು. ನಮ್ಮಲ್ಲಿ ಆನ್‌ಲೈನ್‌ ಶಿಕ್ಷಣ, ವಿದ್ಯಾಗಮ ಹಾಗೂ ಆಯಾ ಶಾಲೆಗಳ ಪ್ರತ್ಯೇಕವ್ಯವಸ್ಥೆಯಂತೆ ತರಗತಿಗಳು ನಡೆಯುತ್ತದೆ. ಡಿ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಶಾಲಾಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್‌)

ಮಹಾಮಾರಿ ಕೋವಿಡ್ ಓಡಿಸೋಣ, ವಿದ್ಯಾರ್ಥಿಗಳನ್ನು ಓದಿಸೋಣ ಎಂಬ ಸಂಕಲ್ಪದೊಂದಿಗೆಶಾಲೆಗಳು ಆರಂಭವಾಗಿದೆ. ಮಕ್ಕಳ ಸುರಕ್ಷತೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಪಾಲಕ, ಪೋಷಕರು ಆತಂಕವಿಲ್ಲದೆ, ನಿರಾತಂಕವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ. -ಸುರೇಶ್‌ ಕುಮಾರ್‌, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ

 

ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.