ಡ್ರೈ ಫ್ರುಟ್ಸ್ ಖರೀದಿ ನೆಪ: 200 ಕೋಟಿ ರೂ. ವಂಚನೆ ಬಯಲು
Team Udayavani, Jan 13, 2021, 7:25 AM IST
ನೋಯ್ಡಾ: ಕರ್ನಾಟಕ ಸಹಿತ ದೇಶದ ಹಲವು ರಾಜ್ಯಗಳಲ್ಲಿರುವ ವ್ಯಾಪಾರಸ್ಥರಿಂದ ಡ್ರೈ ಫ್ರುಟ್ಸ್ ಗಳನ್ನು ಖರೀದಿಸುವ ವಾಗ್ಧಾನ ಮಾಡಿ ಬರೋಬ್ಬರಿ 200 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅದಕ್ಕೆ ಸಂಬಂಧಿಸಿ ಮೋಹಿತ್ ಗೋಯಲ್ ಮತ್ತು ಇತರ ನಾಲ್ವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಗೋಯಲ್ ಬಳಿಯಿಂದ 60 ಕೆಜಿ ಡ್ರೈ ಫ್ರುಟ್ಸ್, ಒಂದು ಆಡಿ ಕಾರು, ಕೆಲವೊಂದು ದಾಖಲೆ ಪತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಈತ ನೋಯ್ಡಾದ ಸೆಕ್ಟರ್ 62ರಲ್ಲಿರುವ ವೈಭವೋಪೇತ “ಕೋರೆಂತಮ್’ ಕಾಂಪ್ಲೆಕ್ಸ್ನಲ್ಲಿ ಪ್ರತಿ ತಿಂಗಳು 3 ಲಕ್ಷ ರೂ. ಬಾಡಿಗೆ ನೀಡಿ ಕಚೇರಿಯನ್ನೂ ತೆರೆದಿದ್ದ. ಅದಕ್ಕೆ ಆತ “ದುಬಾೖ ಡ್ರೈ ಫ್ರುಟ್ಸ್ ಆ್ಯಂಡ್ ಸ್ಪೈಸಸ್ ಹಬ್’ ಎಂಬ ಹೆಸರನ್ನೂ ಇರಿಸಿದ್ದ.
2017ರಲ್ಲಿಯೂ ಈತ “ಫ್ರೀಡಂ 251′ ಎಂಬ ಮೊಬೈಲ್ ನೀಡುವ, ಅತ್ಯಂತ ಕಡಿಮೆ ಬೆಲೆಗೆ ಎಲ್ಸಿಡಿ ಟಿವಿ ನೀಡುವ ಆಫರ್ ನೀಡಿ ಮರುಳು ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಗೋಯಲ್ನನ್ನು ಬಂಧಿಸಲಾಗಿತ್ತು. ಕರ್ನಾಟಕ ಸಹಿತ ಹಲವು ರಾಜ್ಯಗಳಿಂದ ಆತನ ವಿರುದ್ಧ 40ಕ್ಕೂ ಹೆಚ್ಚು ಲಿಖೀತ ದೂರುಗಳು ಸಲ್ಲಿಕೆಯಾಗಿದ್ದವು. ಗೋಯಲ್ ಜತೆಗೆ ಇತರ ನಾಲ್ವರೂ ಇದ್ದರು. ಜತೆಗೆ ಮೂವರು ವಿದೇಶಿ ಪ್ರಜೆಗಳು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಆತನ ಕಾರ್ಯವೈಖರಿ ಹೇಗಿತ್ತೆಂದರೆ ಮೊದಲು ಡ್ರೈ ಫ್ರುಟ್ಸ್ ಖರೀದಿಸಿ ಕ್ಲಪ್ತ ಸಮಯಕ್ಕೆ ಪಾವತಿ ಮಾಡಿ ವ್ಯಾಪಾರಸ್ಥರ ವಿಶ್ವಾಸ ಗಳಿಸುತ್ತಿದ್ದ. ಜತೆಗೆ ಮುಂಗಡ ಹಣವನ್ನೂ ನೀಡುತ್ತಿದ್ದ. ಬಾಕಿ ಉಳಿದ ಹಣಕ್ಕೆ ಆತ ನೀಡುತ್ತಿದ್ದ ಚೆಕ್ಗಳು ಬೌನ್ಸ್ ಆಗುತ್ತಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
MUST WATCH
ಹೊಸ ಸೇರ್ಪಡೆ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು