ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

Team Udayavani, Jan 26, 2021, 6:40 AM IST

ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

ಸಾಂದರ್ಭಿಕ ಚಿತ್ರ

ಬದುಕಿನಲ್ಲಿ ಗೆಲ್ಲುವುದಕ್ಕೆ ಹೆಚ್ಚು ಧೈರ್ಯ ಬೇಡ. ಗೆಲುವನ್ನು ಎಲ್ಲರೂ ಸುಲಲಿತವಾಗಿ ಎದುರಿಸಬಲ್ಲವರು. ಸೋಲನ್ನು ಎದುರಿಸುವುದು, ತಾಳಿ ಕೊಳ್ಳುವುದಕ್ಕೆ ಬೇಕಾಗುವ ಧೈರ್ಯ, ಸ್ಥೈರ್ಯ ಸಣ್ಣದಲ್ಲ. ಸೋಲನ್ನು ಎದುರಿ ಸುವವರು ಜಯಶಾಲಿಗಳಿಗಿಂತ ಹೆಚ್ಚು ಧೀರರಾಗಿರುತ್ತಾರೆ. ಸೋತವರೇ ಗೆದ್ದವ ರಾಗುವ ವಿಚಿತ್ರ ಇದಾದರೂ ನಿಜ.

ಒಂದೂರಿನಲ್ಲಿ ಒಂದು ಕುಸ್ತಿ ಪಂದ್ಯ ಆಯೋಜನೆಗೊಂಡಿತ್ತು. ಆ ಪ್ರಾಂತ್ಯದ ಹಲವು ಹೆಸರಾಂತ ಜಗಜಟ್ಟಿಗಳು ಆ ಕೂಟದಲ್ಲಿ ಭಾಗವಹಿಸಿ ದ್ದರು. ಪಂದ್ಯದಲ್ಲಿ ಅಪ ರಿಚಿತ ಕುಸ್ತಿಪಟು ವೊಬ್ಬ ಆ ಪ್ರದೇಶದ ಬಲಾಡ್ಯ ಕುಸ್ತಿಪಟುವನ್ನು ಮಣ್ಣು ಮುಕ್ಕಿಸಿ ಬಿಟ್ಟ.

ಪ್ರೇಕ್ಷಕರು ಈ ವಿಚಿತ್ರ ಫ‌ಲಿತಾಂಶಕ್ಕೆ ಬೆರಗಾ ದರು. ನಾಲ್ಕು ಸುತ್ತು ಗಳಿಂದ ಹರ್ಷೋದ್ಗಾರ, ಕೇಕೇ, ಸಿಳ್ಳೆಗಳು ಕೇಳಿಬಂದವು. ಅದೊಂದು ರೋಮಾಂಚಕಾರಿ ಪಂದ್ಯವಾಗಿತ್ತು, ಫ‌ಲಿತಾಂಶವೂ ಅಷ್ಟೇ ಬೆರಗಿನಿಂದ ಕೂಡಿತ್ತು. ಹೀಗಾಗಿ ನೆರೆದವರ ಕೂಗಾ ಟಕ್ಕೆ ಮಿತಿಯೇ ಇರಲಿಲ್ಲ.

ಹೀಗೆ ಭಾರೀ ಹರ್ಷೋದ್ಗಾರದ ನಡುವೆಯೇ ಅಲ್ಲಿ ಒಮ್ಮೆಲೆ ನೀರವ ಮೌನ ಆವರಿಸಿತು. ಎಲ್ಲರೂ ಬೆಕ್ಕಸ ಬೆರಗಾದರು. ಏಕೆಂದರೆ ಕಣದಲ್ಲಿ ಸೋತುಹೋಗಿದ್ದ ಜಗಜಟ್ಟಿಯೂ ಚಪ್ಪಾಳೆ ತಟ್ಟುತ್ತ, ನಗುತ್ತ ಪ್ರೇಕ್ಷಕರ ಘೋಷಕ್ಕೆ ಧ್ವನಿ ಸೇರಿಸಲು ಆರಂಭಿಸಿದ್ದ!

ಪ್ರೇಕ್ಷಕರು ದಿಗ್ಭ್ರಮೆಗೊಂಡು ಮೌನ ವಾದುದು ಇದನ್ನು ಕಂಡು. ಸೋತು ಹೋದವನು ತನ್ನ ಸೋಲನ್ನು ಧೀರೋ ದಾತ್ತವಾಗಿ ಸ್ವೀಕರಿಸಿ ಹರ್ಷ ವ್ಯಕ್ತಪಡಿ ಸುವುದನ್ನು ಕಂಡು ಪ್ರೇಕ್ಷಕ ವರ್ಗ ಮೂಕವಾಗಿತ್ತು.

ಪಂದ್ಯಕ್ಕೆ ಸಾಕ್ಷಿಯಾಗಿದ್ದ ಆ ಊರಿನ ಒಬ್ಬ ಬಾಲಕ ಪಂದ್ಯದ ಬಳಿಕ ಆ ಕುಸ್ತಿಪಟುವಿನ ಮನೆಗೆ ಹೋದ. “ಸೋಲಿಗೆ ನಿಮ್ಮ ಪ್ರತಿಕ್ರಿಯೆ ಅಪೂರ್ವ ವಾದುದಾಗಿತ್ತು. ಬಹಳ ಅನಿರೀಕ್ಷಿತ ವಾದ ನಿಮ್ಮ ಪ್ರತಿಕ್ರಿಯೆ ನನಗೆ ಬಹಳ ಇಷ್ಟವಾಯಿತು’ ಎಂದು ಬಾಲಕ ಹೇಳಿದ.

“ಅದು ನನಗೂ ಬಹಳ ಅನಿರೀಕ್ಷಿತ ವಾಗಿತ್ತು. ಹಾಗಾಗಿ ನಾನೂ ಹೃತೂ³ರ್ವಕ ವಾಗಿ ನಕ್ಕುಬಿಟ್ಟೆ, ನಾನೂ ಕೇಕೆ ಹಾಕಿದೆ. ಸಾಧಾರಣ ಮನುಷ್ಯನೊಬ್ಬನನ್ನನ್ನು ಸೋಲಿಸಬಲ್ಲ ಎಂದು ನಾನೆಂದೂ ನಿರೀಕ್ಷಿಸಿ ರಲಿಲ್ಲ. ಈ ಬೆರಗು ನನ್ನಲ್ಲಿ ನಗು ಉಕ್ಕಿಸಿತು’ ಎಂದು ಆ ಕುಸ್ತಿಪಟು ಉತ್ತರಿಸಿದ.

“ನನ್ನ ಪಾಲಿಗೆ ಇಂದಿನ ವಿಜಯ ನಿಮ್ಮದು. ನಿಮ್ಮ ಈ ಜಯ ನನಗೆ ಎಂದೆಂದಿಗೂ ನೆನಪಿನಲ್ಲಿರುತ್ತದೆ’ ಎಂದು ಬಾಲಕ ನುಡಿದ.

ಹಲವು ವರ್ಷಗಳು ಕಳೆದವು. ಆ ಬಾಲಕ ದೊಡ್ಡವನಾದ. ಊರಿನಿಂದ ಬಹುದೂರ ದೊಡ್ಡ ವ್ಯಕ್ತಿಯಾಗಿ ಬೆಳೆದ. ಆದರೂ ಕುಸ್ತಿಪಟುವಿನ ಅಪೂರ್ವ ವಿಜಯವನ್ನು ಆತ ಎಂದೂ ಮರೆ ಯಲಿಲ್ಲ. ಒಂದು ದಿನ ಆತ ಮತ್ತೆ ತನ್ನ ಹುಟ್ಟೂರಿಗೆ ಭೇಟಿ ಕೊಟ್ಟು ವಯೋ ವೃದ್ಧನಾಗಿದ್ದ ಕುಸ್ತಿಪಟುವನ್ನು ಮಾತ ನಾಡಿಸಿದ.

“ನಿಮ್ಮ ಮುಖವನ್ನು ಹೇಗೆ ಮರೆ ಯಲಿ! ಸಣ್ಣ ಬಾಲಕನೊಬ್ಬ ಬಂದು, ಪಂದ್ಯದಲ್ಲಿ ನೀವು ಸೋತಿರ ಬಹುದು. ಆದರೆ ನನ್ನ ಪಾಲಿಗೆ ಇಂದಿನ ವಿಜಯಿ ನೀವೇ ಎಂದು ಹೇಳಿದವನನ್ನು ಹೇಗೆ ಮರೆಯಲಿ’ ಎಂದು ಕುಸ್ತಿಪಟು ಉತ್ತರಿಸಿದ.

ಜೀವನದಲ್ಲಿ ಸೋಲುಗಳು ಬರುತ್ತವೆ, ಗೆಲುವುಗಳು ಎದುರಾಗು ತ್ತವೆ. ಎಲ್ಲದರ ನಡುವೆ ನಾವು ನಾವಾಗಿ ಇರುವುದಕ್ಕೆ ಬಹಳ ಧೈರ್ಯ ಬೇಕು. ಸೋಲು, ನಿಂದನೆ, ಟೀಕೆಗಳು, ಏರಿಳಿತ ಗಳನ್ನು ಎದುರಿಸಿ ನಮ್ಮತನವನ್ನು ಕಾಪಾ ಡಿಕೊಳ್ಳುವುದು ಸರಳ – ಸುಲಭವಲ್ಲ. ಸಾಮಾನ್ಯವಾಗಿ ಗೆಲುವಿನಲ್ಲಿ ಉಬ್ಬಿ ಕಳೆದುಹೋಗುತ್ತೇವೆ, ಸೋಲಿನಿಂದ ಜರ್ಝರಿತರಾಗುತ್ತೇವೆ. ನಾವಾಗಿ ನೆಲೆ ನಿಲ್ಲುವುದಕ್ಕೆ ಬಹಳ ಬಹಳ ಧೈರ್ಯ ಬೇಕು.

(ಸಾರ ಸಂಗ್ರಹ)

ಟಾಪ್ ನ್ಯೂಸ್

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ

LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ

Tollywood: ಜೂ.ಎನ್‌ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ

Tollywood: ಜೂ.ಎನ್‌ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

1

Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ

LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ

Tollywood: ಜೂ.ಎನ್‌ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ

Tollywood: ಜೂ.ಎನ್‌ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.