ಯುಪಿಐ ಪಾವತಿ 90.20 ಕೋಟಿ ವಹಿವಾಟು
Team Udayavani, Jan 28, 2021, 7:42 AM IST
ಫೋನ್ಪೇಗೆ ಮತ್ತೆ ಅಗ್ರಸ್ಥಾನ :
ಯುಪಿಐನ ಡಿಸೆಂಬರ್ನ ವಹಿವಾಟಿನಲ್ಲಿ ಫೋನ್ಪೇಯು ಗೂಗಲ್ ಪೇ ಅನ್ನು ಹಿಂದಿಕ್ಕಿದೆ. ಎನ್ಪಿಸಿಐನ ಮಾಹಿತಿಯ ಪ್ರಕಾರ, ಡಿಸೆಂಬರ್ನಲ್ಲಿ ಫೋನ್ಪೇ ಮೂಲಕ 90.20 ಕೋಟಿ ವಹಿವಾಟು ನಡೆದಿದೆ. ಇದು ತಿಂಗಳಿನ ಅತೀ ಹೆಚ್ಚಿನ ಪ್ರಮಾಣವಾಗಿದ್ದು ಗೂಗಲ್ಪೇ ಅನ್ನು ಹಿಂದಿಕ್ಕಿದೆ. ನವೆಂಬರ್ಗೆ ಹೋಲಿಸಿದರೆ ಫೋನ್ಪೇ ಡಿಸೆಂಬರ್ನಲ್ಲಿ ಶೇ. 3.87ರಷ್ಟು ಚೇತರಿಕೆ ಕಂಡಿದೆ.
ಗೂಗಲ್ ಪೇ 85.44 ಕೋಟಿ ವಹಿವಾಟು :
ಗೂಗಲ್ ಪೇ ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ನಲ್ಲಿ ಶೇ. 11ರಷ್ಟು ಕುಸಿತ ಕಂಡಿದೆ. ಡಿಸೆಂಬರ್ನಲ್ಲಿ 85.44 ಕೋಟಿ ವಹಿವಾಟು ನಡೆಸುವುದರ ಮೂಲಕ ಪೋನ್ ಪೇ ಬಳಿಕದ ಸ್ಥಾನ ಪಡೆಯಿತು. ಗೂಗಲ್ ಪೇನ ಡಿಸೆಂಬರ್ ತಿಂಗಳ ವಹಿವಾಟಿನ ಮೌಲ್ಯ 1.76 ಲಕ್ಷ ಕೋ. ರೂ. ನವೆಂಬರ್ ತಿಂಗಳಿನಲ್ಲಿ ಗೂಗಲ್ ಪೇ 1.61 ಲಕ್ಷ ಕೋ.ರೂ. ಮೌಲ್ಯದ 96 ಕೋಟಿ ವಹಿವಾಟು ನಡೆಸಿತ್ತು.
ಶೇ.78ರ ಪಾಲು :
ಗೂಗಲ್ ಮತ್ತು ಫೋನ್ಪೇ ಯುಪಿಐ ಮಾರುಕಟ್ಟೆಯನ್ನು ಬಹು ತೇಕ ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ. ಡಿಸೆಂಬರ್ನಲ್ಲಿ ನಡೆದ ಒಟ್ಟು ಯುಪಿಐ ವಹಿವಾಟಿನಲ್ಲಿ ಇವೆರಡು ಶೇ. 78ರಷ್ಟು ಪಾಲನ್ನು ಹೊಂದಿವೆ. 2,234.16 ಮಿಲಿಯನ್ ವ್ಯವಹಾರಗಳು ಯುಪಿಐ ಮೂಲಕ ನಡೆದಿದ್ದವು.
ಬಳಿಕದ ಸ್ಥಾನ ಯಾರ್ಯಾರಿಗೆ? :
ಮೂರನೇ ಸ್ಥಾನದಲ್ಲಿರುವ ಪೇಟಿಎಂ 25.63 ಕೋಟಿ ವಹಿವಾಟುಗಳ ನ್ನು ನಡೆಸಿದೆ. ಇದರ ಮೌಲ್ಯ 3.12 ಲಕ್ಷ ಕೋ. ರೂ. ಬಳಿಕದ ಸ್ಥಾನದಲ್ಲಿ 4 ಕೋಟಿ ವಹಿವಾಟು ನಡೆಸಿದ ಅಮೆಜಾನ್ ಮತ್ತು 2.4 ಕೋಟಿ ವಹಿವಾಟುಗಳನ್ನು ನಡೆಸಿದ ಭೀಮ್ ಆ್ಯಪ್ ಇವೆ.
ವಾಟ್ಸ್ಆ್ಯಪ್ ಪೇ :
ವಾಟ್ಸ್ಆ್ಯಪ್ ಪೇ ಒಟ್ಟು 29.7 ಕೋ. ರೂ. ಮೌಲ್ಯದ 8 ಲಕ್ಷ ವಹಿ ವಾಟುಗಳನ್ನು ಕಂಡಿದೆ. ನವೆಂಬರ್ ತಿಂಗಳಿನಲ್ಲಿ 3 ಲಕ್ಷದಷ್ಟು ವಹಿ ವಾಟು ಗಳನ್ನು ಮಾತ್ರ ನಡೆಸಿತ್ತು. ಯುಪಿಐ ಡಿಸೆಂಬರ್ನಲ್ಲಿ ಸತತ ಮೂರನೇ ತಿಂಗ ಳು 2 ಬಿಲಿಯನ್ ಗಡಿ ದಾಟಿದೆ. ಇದು ದಾಖಲೆಯ 4.16 ಟ್ರಿಲಿಯನ್ ರೂ. ಮೌಲ್ಯದ 2.23 ಬಿಲಿಯನ್ ವಹಿವಾಟುಗಳನ್ನು ನಿರ್ವಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ