ಸುರೇಶ್‌ ಶೆಟ್ಟಿಯವರದ್ದು ಅಪರೂಪದ ವ್ಯಕ್ತಿತ್ವ: ಐಕಳ ಹರೀಶ್‌ ಶೆಟ್ಟಿ

ಥಾಣೆಯಲ್ಲಿ ಸಮಾಜ ಸೇವಕ ಮರಾಠ ಸುರೇಶ್‌ ಶೆಟ್ಟಿ ಅವರ ಶೋಕ ಸಭೆ-ನುಡಿನಮನ

Team Udayavani, Feb 17, 2021, 11:17 AM IST

ಸುರೇಶ್‌ ಶೆಟ್ಟಿಯವರದ್ದು ಅಪರೂಪದ ವ್ಯಕ್ತಿತ್ವ: ಐಕಳ ಹರೀಶ್‌ ಶೆಟ್ಟಿ

ಥಾಣೆ: ಇತ್ತೀಚೆಗೆ ನಿಧನ ಹೊಂದಿದ ಮುಲುಂಡ್‌ ಮತ್ತು ಥಾಣೆ ಪರಿಸರದ ಪ್ರಸಿದ್ಧ ಹೊಟೇಲ್‌ ಉದ್ಯಮಿ, ಥಾಣೆ ಪಶ್ಚಿಮದ ಮರಾಠ ಹೊಟೇಲ್‌ ಮಾಲಕ, ಥಾಣೆ ಮತ್ತು ಮುಂಬಯಿಯ ವಿವಿಧ ಸಂಘಟನೆಗಳ ಪದಾಧಿಕಾರಿ, ದಾನಿ, ಸಮಾಜ ಸೇವಕ, ಕಲಾ ಪ್ರೋತ್ಸಾಹಕ ಮರಾಠ ಸುರೇಶ್‌ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮವು ಫೆ. 13ರಂದು ಥಾಣೆ ಪಶ್ಚಿಮದ ಮುಲುಂಡ್‌ ಚೆಕ್‌ನಾಕಾ ಸಮೀಪದ ವುಡ್‌ಲ್ಯಾಂಡ್‌ ಹೊಟೇಲ್‌ ಸಭಾಗೃಹದಲ್ಲಿ ನಡೆಯಿತು.

ಥಾಣೆ ಬಂಟ್ಸ್‌, ಮುಲುಂಡ್‌ ಬಂಟ್ಸ್‌, ಮುಲುಂಡ್‌ ಹೊಟೇಲಿಯರ್ಸ್‌, ಥಾಣೆ ಹೊಟೇಲ್‌ ಓನರ್ಸ್‌ ಅಸೋಸಿಯೇಶನ್‌ ಹಾಗೂ ತಿರುಪತಿ ಬಳಗ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಪಾಲ್ಗೊಂಡು ಸಂತಾಪ ಸೂಚಿಸಿದರು. ನಗರದ ಗಾಯಕ ಗಣೇಶ್‌ ಎರ್ಮಾಳ್‌ ಅವರಿಂದ ಪ್ರಾರಂಭದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ನುಡಿನಮನ ಸಲ್ಲಿಸಿ, ಎಲ್ಲರೊಂದಿಗೆ ಅಣ್ಣ- ತಮ್ಮಂದಿ ರಂತೆ ಬಹಳಷ್ಟು ಅನ್ಯೋನ್ಯತೆಯೊಂದಿಗೆ ಬೆರೆಯುವ ಸುರೇಶ್‌ ಶೆಟ್ಟಿಯವರ ವ್ಯಕ್ತಿತ್ವವೇ ಒಂದು ವಿಶೇಷತೆ. ಅಂತಹ ವ್ಯಕ್ತಿತ್ವದವರು ಸಿಗುವುದು ಬಹಳ ವಿರಳ. ಅವ ರನ್ನು ನಾವಿಂದು ಅಕಾಲಿಕವಾಗಿ ಕಳೆದು ಕೊಂಡಿರುವುದುವುದು ದುಃಖದ ವಿಷಯ. ಅವರ ಪರಿವಾರಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

ಥಾಣೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ವೇಣುಗೋಪಾಲ್‌ ಎಲ್‌. ಶೆಟ್ಟಿ  ಮಾತನಾಡಿ, ನಾನು ಸುರೇಶ ಣ್ಣನನ್ನು ಕಳೆದ 32 ವರ್ಷಗಳಿಂದ ಹತ್ತಿರದಿಂದ ಬಲ್ಲವನು. ಅವರೊಂದಿಗೆ ಅನ್ಯೋನ್ಯತೆಯಿಂದ ಬೆಳೆದಿ ದ್ದೇನೆ. ಅವರೋರ್ವ ಬಹಳಷ್ಟು ತಿಳಿವಳಿಕೆಯ ವ್ಯಕ್ತಿ. ಅವರಲ್ಲಿ ಎಲ್ಲ ವಿಷಯಗಳ ಬಗ್ಗೆ ಅಪಾರ ಜ್ಞಾನ ಶಕ್ತಿ ಇತ್ತು. ಮತ್ತೂಬ್ಬರ ಬಗ್ಗೆ ನಿರಂತರ ಕಾಳಜಿ ವಹಿ ಸುತ್ತಾ ಬಂದ ಅವರು ಮಾತ್ರ ತನ್ನ ಸ್ವಂತ ಬದುಕಿನಲ್ಲಿ ಕಾಳಜಿ ವಹಿಸಲಿಲ್ಲ. ಅದರ ಪರಿಣಾಮ ನಾವಿಂದು ಅವರನ್ನು ಕಳೆದುಕೊಳ್ಳುವಂತಾಗಿದೆ. ಯಕ್ಷಗಾನದ ಬಗ್ಗೆ ಅವರು ತೋರಿಸುತ್ತಿದ್ದ ಅಪಾರ ಅಭಿಮಾನ, ಕಲಾಭಿಮಾನಿಗಳನ್ನು ಸದಾ ನೆನಪಿಡುವ ನಿಟ್ಟಿನಲ್ಲಿ ಥಾಣೆ ಬಂಟ್ಸ್‌ ಮುಂದಿನ ದಿನಗಳಲ್ಲಿ ಅವರ ಸ್ಮರಣಾರ್ಥ ಯಕ್ಷಗಾನ ಅಥವಾ ತಾಳಮದ್ದಳೆಯನ್ನು ಪ್ರತೀ ವರ್ಷ ಆಯೋಜಿಸುವ ನಿರ್ಧಾರವನ್ನು ಕೈಗೊಳ್ಳಲಿದೆ ಎಂದರು.

ಸುರೇಶ್‌ ಶೆಟ್ಟಿ ಅವರ ಅಗಲಿಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಯಾವಾಗಲೂ ನಗುತ್ತಾ, ತಮ್ಮ ಸುತ್ತಮುತ್ತಲಿ ನವರನ್ನೂ ನಗಿಸುವ ಸ್ವಭಾವದ ಅವರು ಬಹು ಬೇಗನೆ ಭಗವಂತನ ಪಾದ ಸೇರಿದರು. ಓರ್ವ ಕಲಾಪೋಷಕ, ಅಪ್ರತಿಮ ಕಲಾಭಿಮಾನಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ವರ್ತಕ್‌ ನಗರ ಕನ್ನಡ ಸಂಘದ ಅಧ್ಯಕ್ಷ ಜಯಂತ್‌ ಶೆಟ್ಟಿ ಅವರು ತಿಳಿಸಿದರು.

ಮುಲುಂಡ್‌ ಬಂಟ್ಸ್‌ನ ಮಾಜಿ ಅಧ್ಯಕ್ಷ ಡಾ| ಸತ್ಯಪ್ರಕಾಶ್‌ ಶೆಟ್ಟಿ  ಮಾತನಾಡಿ, ಓರ್ವ ಮನುಷ್ಯನಿಗೆ 56 ವರ್ಷ ಸಾಯುವ ಪ್ರಾಯವಲ್ಲ. ತನ್ನ ಗೃಹಸ್ಥ ಜೀವನದಲ್ಲಿ ಸಾಧನೆ ಮಾಡುವ ಕಾಲವದು. ಅರುವತ್ತರ ಬಳಿಕ ತಾನು ಮಾಡಿದ ಸಾಧನೆಯನ್ನು ಅನುಭವಿಸುವ ಕಾಲ. ಆದರೆ ಸುರೇಶ್‌ ಶೆಟ್ಟಿ ಅವರಿಗೆ ಮಾತ್ರ ಆ ಭಾಗ್ಯ ಸಿಗಲಿಲ್ಲ. ಜೀವನ ಪೂರ್ತಿ ಸಾಧನೆಗೈದು ನಮ್ಮಿಂದ ಮರೆಯಾಗಿದ್ದಾರೆ. ದಾನಿಯಾಗಿ, ಕಲಾ ಪೋಷಕರಾಗಿ ಸಲ್ಲಿಸಿರುವ ಅವರ ಸೇವೆ ಸ್ವರಣೀಯವಾಗಿದೆ ಎಂದರು.

ಉದ್ಯಮಿ ರತ್ನಾಕರ್‌ ಜಿ. ಶೆಟ್ಟಿ ಮಾತನಾಡಿ, ಸುರೇಶ್‌ ಶೆಟ್ಟಿ ಮುಂಬಯಿ ಮಾತ್ರವಲ್ಲ ಊರಲ್ಲೂ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದರು ಎಂಬುವುದಕ್ಕೆ ಅವರ ಅಂತಿಮ ಯಾತ್ರೆಯಲ್ಲಿ ಸೇರಿದ ಜನಸಾಗರ ಸಾಕ್ಷಿಯಾಗಿದೆ ಎಂದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಉಪಾಧ್ಯಕ್ಷ ದಯಾನಂದ ಪೂಜಾರಿ, ಜಾಸ್ಮಿನ್‌ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಶೆಟ್ಟಿ, ರಂಗಕರ್ಮಿ ಲೀಲಾಧರ ಶೆಟ್ಟಿ ಕಾಪು, ಪತ್ರಕರ್ತ ದಯಾಸಾಗರ್‌ ಚೌಟ ಅವರು ನುಡಿನಮನ ಸಲ್ಲಿಸಿದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಸುರೇಶ್‌ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಗೈದು ಶ್ರದ್ಧಾಂಜಲಿ ಸಲ್ಲಿಸಿದರು. ಉದ್ಯಮಿಗಳಾದ ಕರಿಯಣ್ಣ ಶೆಟ್ಟಿ, ಅಶೋಕ್‌ ಅಡ್ಯಂತಾಯ, ಉದಯ ಶೆಟ್ಟಿ, ಜಯ ಶೆಟ್ಟಿ, ಬಂಟ್ವಾಳ ಬಂಟರ ಸಂಘದ  ಅಧ್ಯಕ್ಷ ನಗ್ರಿಗುತ್ತು ವಿವೇಕ್‌ ಶೆಟ್ಟಿ, ಉದ್ಯಮಿ ಸುರೇಶ್‌ ಶೆಟ್ಟಿ, ಥಾಣೆ ಬಂಟ್ಸ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇವತಿ ಶೆಟ್ಟಿ, ಮುಲುಂಡ್‌ ಬಂಟ್ಸ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಾಂತಿ ಶೆಟ್ಟಿ ಮೊದಲಾದವರು ನುಡಿನಮನ ಸಲ್ಲಿಸಿದರು.

ಕಲಾ ಸಂಘಟಕ ಕರ್ನೂರು ಮೋಹನ್‌ ರೈ ಅವರು ಮರಾಠ ಸುರೇಶ್‌ ಶೆಟ್ಟಿ ಅವರ ಸಾಧನೆಗಳನ್ನು ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೌನ ಪ್ರಾರ್ಥನೆಯ ಮೂಲಕ ಸೇರಿದ ನೂರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದರು. ಸಂಗೀತ ಕಾರ್ಯಕ್ರಮದಲ್ಲಿ ತಬಲಾದಲ್ಲಿ ಜನಾರ್ದನ ಸಾಲ್ಯಾನ್‌ ಸಹಕರಿಸಿದರು. ಸಭೆಯಲ್ಲಿ ಥಾಣೆಯ ಉದ್ಯಮಿ ಶಿವರಾಮ್‌ ಶೆಟ್ಟಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಮುಂಬಯಿ, ಥಾಣೆ, ನವಿಮುಂಬಯಿ ಪರಿಸರದ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಳೆದ ಸುಮಾರು 30 ವರ್ಷಗಳಿಂದ ನನ್ನ ಜತೆಗಿದ್ದ ಓರ್ವ ಆತ್ಮೀಯ ಮಿತ್ರ ಎನ್ನುವುದಕ್ಕಿಂತ ನನ್ನ ಸಹೋದರನ ಸ್ಥಾನದಲ್ಲಿದ್ದ ಜತೆಗಾರನನ್ನು ನಾನಿಂದು ಕಳೆದುಕೊಂಡಿದ್ದೇನೆ. ನಮ್ಮ ತಿರುಪತಿ ಬಳಗದ ಓರ್ವ ಸಕ್ರಿಯ ಸದಸ್ಯರಾಗಿ ಅವರ ಕೊಡುಗೆ ಅಪಾರ. ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿಯನ್ನು ಕರುಣಿಸಲಿ.  ಪಲಿಮಾರು ವಸಂತ್‌ ಎನ್‌. ಶೆಟ್ಟಿ  ಅಧ್ಯಕ್ಷರು, ಮುಲುಂಡ್‌ ಬಂಟ್ಸ್‌

ತ್ಯಾಗದ ಸಾಕಾರ ಮೂರ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ತನ್ನ ಸ್ವಂತ ಐಶ್ವರ್ಯವನ್ನು ನಿಸ್ವಾರ್ಥ ಮನಸ್ಸಿನಿಂದ ಸಮಾಜಕ್ಕೆ ದಾನ ಮಾಡಿದ ಓರ್ವ ಮಹಾನ್‌ ವ್ಯಕ್ತಿ ಮರಾಠ ಸುರೇಶ್‌ ಶೆಟ್ಟಿ. ಅವರು ಇನ್ನಷ್ಟು ಕಾಲ ಬಾಳಿ ಬದುಕಬೇಕಿತ್ತು. 56ರ ಹರೆಯದಲ್ಲೇ ವಿಧಿ ಅವರನ್ನು ನಮ್ಮಿಂದ ದೂರ ಮಾಡಿದೆ. ಪೊಲ್ಯ ಉಮೇಶ್‌ ಶೆಟ್ಟಿ , ಅಧ್ಯಕ್ಷರು, ಥಾಣೆ ಹೊಟೇಲ್‌ ಓನರ್ಸ್‌ ಅಸೋಸಿಯೇಶನ್‌

ಸುಮಾರು 32 ವರ್ಷಗಳಿಂದ ಒಡನಾಡಿಯಾಗಿದ್ದ ಆಪ್ತಮಿತ್ರನನ್ನು ನಾನು ಕಳೆದುಕೊಂಡಿದ್ದೇನೆ. ನಾನಿಂದು ಅದೇನೇ ಸಮಾಜಪರ ಸೇವೆ ಮಾಡಿದ್ದರೂ ಸುರೇಶ್‌ ಶೆಟ್ಟಿ ಅವರು ಅದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ವೈಯಕ್ತಿಕವಾಗಿ ಮತ್ತು ಬಂಟರ ಸಂಘ ಮುಂಬಯಿ ವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಶಾಂತಾರಾಮ್‌ ಶೆಟ್ಟಿ , ಕಾರ್ಯಾಧ್ಯಕ್ಷರು, ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.