ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌  ಸ್ಕೀಂನಲ್ಲಿದೆ 8.5% ಬಡ್ಡಿ


Team Udayavani, Mar 13, 2017, 10:56 AM IST

Senior.jpg

ಬ್ಯಾಂಕುಗಳ ಬಡ್ಡಿದರ ಇಳಿಕೆ ಕಾಣುತ್ತ ಬಂದು ಈಗ ಒಂದು ಹಂತದಲ್ಲಿ ಸ್ಥಿರಗೊಂಡಿದೆ. ಈಗ ಬ್ಯಾಂಕ್‌ ಎಫ್ಡಿ ಮಾಡಿದರೆ ಲಾಭಕರವಲ್ಲ, ಪರ್ಯಾಯ ಹೂಡಿಕೆಯ ಮಾರ್ಗ ಯಾವುದಿದೆ ಎಂದು ಹುಡುಕುವವರಿಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆ ಒಂದು ಉತ್ತಮ ಆಯ್ಕೆಯಾಗಿ ಕಾಣಬಹುದು. ಆದರೆ ಇದು ಹೆಸರೇ ಹೇಳುವಂತೆ ಹಿರಿಯ ನಾಗರಿಕರಿಗೆ ಮಾತ್ರ.

ಕಳೆದ ಒಂದೆರಡು ವರ್ಷಗಳಿಂದ ಸತತವಾಗಿ ಬಡ್ಡಿದರ ಇಳಿಕೆಯಾಗಿ ಈಗ ಸರಿಸುಮಾರು ಕನಿಷ್ಠ ಎನ್ನಬಹುದಾದ ಮಟ್ಟದಲ್ಲಿ ಬಂದು ನಿಂತಿದೆ. ದೇಶದ ಕೇಂದ್ರೀಯ ಬ್ಯಾಂಕಾದ ರಿಸರ್ವ್‌ ಬ್ಯಾಂಕು ಈ ಬಡ್ಡಿ ದರಗಳು ಸದ್ಯೋಭವಿಷ್ಯದಲ್ಲಿ ಇದರಿಂದ ಕೆಳಗೆ ಇಳಿಯಲಾರದು ಎನ್ನುವುದರ ಇಷಾರಾ ನೀಡಿದೆ.

ಅದೇನೇ ಇರಲಿ, ಬಾಂಕುಗಳಲ್ಲಿ ಈಗ ಎಫ್ಡಿ ಮಾಡಿ ಸುಖವಿಲ್ಲವೆಂದು ಎಲ್ಲರೂ ಹೇಳುತ್ತಾರೆ. ಬಡ್ಡಿ ದರಗಳು ಇಳಿದಿವೆ. ಸುಮಾರು 7% ಆಸುಪಾಸಿನಲ್ಲಿ ಸಿಗುವ ಬಡ್ಡಿದರ ಹಿರಿಯ ನಾಗರಿಕರಿಗೆ 7.5% ಸಿಗಬಹುದು. ಅಂಥದ್ದರಲ್ಲಿ ಬ್ಯಾಂಕಿನಿಂದ ಬೆಟರು ಹೂಡಿಕೆ ಆವುದಯ್ನಾ ಎನ್ನುವುದು ಎಲ್ಲರ ಮನಸ್ಸಿನಲ್ಲಿ ಕುಣಿದಾಡುವ ಪ್ರಶ್ನೆ. 

ಹಿರಿಯ ನಾಗರಿಕರ ಮಟ್ಟಿಗೆ ಪೋಸ್ಟಾಪೀಸಿನ ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸೀನಿಯರ್‌ ಸಿಟಿಜ®Õ… ಸೇವಿಂಗÕ… ಸ್ಕೀಂ ಎನ್ನುವುದು ಒಂದೊಳ್ಳೆ ಯೋಜನೆ. ಎಸ್‌ಸಿಎಸ್‌ಎಸ್‌ ಎನ್ನುವ ಹೃಸ್ವ ಹೆಸರಿನಿಂದ ಕರೆಯಲ್ಪಡುವ ಈ ಯೋಜನೆ ಹಿರಿಯ ನಾಗರಿಕರಿಗರ ಪಾಲಿಗೆ ಒಂದು ವರದಾನವೇ ಆಗಿದೆ. ಇದೀಗ ಎಸ್‌ಸಿಎಸ್‌ಎಸ್‌ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

ಅರ್ಹತೆ: ಈ ಯೋಜನೆಯಲ್ಲಿ ಹೂಡುವಿಕೆ ಮಾಡಲು ಕನಿಷ್ಠ ವಯೋಮಾನ 60 ಆಗಿರಬೇಕು. 60 ದಾಟಿದ ಎಲ್ಲ ನಾಗರಿಕರಿಗೂ ಇದರಲ್ಲಿ ತೊಡಗಿಸಿಕೊಳ್ಳುವ ಅರ್ಹತೆ ಬರುತ್ತದೆ. ಆದರೆ 55 ವರ್ಷ ದಾಟಿದ್ದು, ಸ್ವಯಂ ನಿವೃತ್ತಿ (ವಿಆರ್‌ಎಸ್‌) ಪಡೆದಿರುವ ನಾಗರಿಕರೂ ಕೈಗೆ ಬಂದ ನಿವೃತ್ತಿ ಮೊತ್ತವನ್ನು ಮಿತಿಯೊಳಗೆ ಇದರಲ್ಲಿ ಹೂಡಬಹುದು. ಅಂತಹ ಮೊತ್ತ ಕೈಸೇರಿದ ಒಂದು ತಿಂಗಳ ಒಳಗಾಗಿ ಹೂಡಿಕೆ ನಡೆಯಬೇಕು ಮತ್ತು ವಿಆರ್‌ಎಸ್‌ ಬಗ್ಗೆ ಪುರಾವೆಯನ್ನುಒದಗಿಸಬೇಕು.

ಒಬ್ಟಾತ ಒಂದೇ ಖಾತೆಯನ್ನು ತೆರೆಯಬಹುದು ಅಥವಾ ತನ್ನ ಪತ್ನಿ/ಪತಿಯೊಡನೆ ಜಂಟಿಯಾಗಿ ಇನ್ನೊಂದು ಖಾತೆಯನ್ನೂ ತೆರೆಯಬಹುದು. ಜಂಟಿಖಾತೆಯ ಸಂದರ್ಭಗಳಲ್ಲಿ ಎರಡನೆಯ ಹೂಡಿಕೆದಾರರ ವಯಸ್ಸು ಮುಖ್ಯವಲ್ಲ. 

ಎಲ್ಲಿ?: ಮೊದಲು ಈ ಯೋಜನೆ ಕೇವಲ ಪೋಸ್ಟಾಫೀಸಿನಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಇದನ್ನು ಸ್ಟೇಟ್‌ ಬ್ಯಾಂಕ್‌, ಕಾರ್ಪೊರೇಶನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಇತ್ಯಾದಿ ಬ್ಯಾಂಕುಗಳಲ್ಲಿ ಕೂಡ ತೆರೆಯುವ ಅವಕಾಶವನ್ನುಕಲ್ಪಿಸಲಾಗಿದೆ. ಆದರೆ ಈ ಯೋಜನೆಗೆ ಬ್ಯಾಂಕುಗಳು ಸಾಕಷ್ಟು ಪ್ರಚಾರ ನೀಡುತ್ತಿಲ್ಲವಾದ ಕಾರಣ ಜನಸಾಮಾನ್ಯರಿಗೆ ಬ್ಯಾಂಕುಗಳೂ ಈ ಯೋಜನೆಯನ್ನು ಒದಗಿಸುವುದು ಗೊತ್ತೇ ಇಲ್ಲ. 

ಹೂಡಿಕೆ ಮೊತ್ತ: ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಂನಲ್ಲಿ ಗರಿಷ್ಟ ರೂ. 15 ಲಕ್ಷಗಳಷ್ಟು ಮಾತ್ರ ಒಬ್ಟಾತನಿಗೆ ವೈಯಕ್ತಿಕ ಅಥವಾ ಜಂಟಿಖಾತೆಯಲ್ಲಿ ಒಟ್ಟಾಗಿ ಹೂಡಲು ಅನುಮತಿ ಇದೆ. ಜಂಟಿಖಾತೆಯ ಸಂದರ್ಭದಲ್ಲಿ ಹೂಡಿಕೆಯನ್ನು ಸಂಪೂರ್ಣವಾಗಿ ಮೊದಲನೆಯ ಹೂಡಿಕೆದಾರರೇ ಮಾಡಿದ್ದಾರೆ ಎಂದು ಭಾವಿಸಲಾಗುತ್ತದೆ. 

ಅವಧಿ: ಈ ಯೋಜನೆ 5 ವರ್ಷ ಅವಧಿ ಉಳ್ಳದ್ದು ಆಗಿರುತ್ತದೆ. 5 ವರ್ಷಗಳ ಅಂತ್ಯದಲ್ಲಿ ಖಾತೆ ಮೆಚೂÂರ್‌ ಆಗುತ್ತದೆ. ಆವಾಗ ಬೇಕೆಂದರೆ 3 ವರ್ಷಗಳ ಅವಧಿಗೆ ಅದೇ ಖಾತೆಯನ್ನು ಮುಂದುವರಿಸುವ ಅವಕಾಶವಿದೆ ಅಥವಾ ಆ ಖಾತೆಯನ್ನು ಮುಚ್ಚಿ ಇನ್ನೊಂದು ಹೊಸ ಖಾತೆಯನ್ನು 5 ವರ್ಷಗಳ ಮಟ್ಟಿಗೆ ತೆರೆಯಬಹುದು. 

ಅವಧಿಪೂರ್ವ ಹಿಂಪಡೆತ: ಖಾತೆ 5 ವರ್ಷದ್ದೆಂದು ಹೇಳಿದರೂ 1 ವರ್ಷದ ಬಳಿಕ ಖಾತೆಯನ್ನು ಮುಚ್ಚಿ ದುಡ್ಡನ್ನು ಹಿಂಪಡೆಯಬಹುದು. ಆದರೆ ಇದಕ್ಕೆ ಪೆನಾಲ್ಟಿ ಅಥವಾ ತಪ್ಪುದಂಡ ಬೀಳುತ್ತದೆ. ಎರಡು ವರ್ಷಗಳ ಒಳಗಾಗಿ ಖಾತೆಯನ್ನು ಮುಚ್ಚಿದರೆ 1.5% ತಪ್ಪು ದಂಡ ಹಾಗೂ ಎರಡು ವರ್ಷಗಳ ಬಳಿಕ ಖಾತೆಯನ್ನು ಮುಚ್ಚಿದರೆ 1% ತಪ್ಪುದಂಡವೂ ಬೀಳುತ್ತದೆ. 5 ವರ್ಷಗಳ ಬಳಿಕದ 3 ವರ್ಷಗಳ ಊರ್ಜಿತ ಅವಧಿಯಲ್ಲಿ ತಪ್ಪುದಂಡ ಇರುವುದಿಲ್ಲ. 

ಬಡ್ಡಿದರ: ಎಸ್‌ಸಿಎಸ್‌ಎಸ್‌ ಸ್ಕೀಮಿನ ಬಡ್ಡಿದರ ಈ ವರ್ಷ 8.5% ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಒಂದು ಉತ್ತಮ ಬಡ್ಡಿದರವೆಂದು ಪರಿಗಣಿಸಬಹುದು. ಸರಕಾರದ ಸ್ಮಾಲ್‌ ಸೇವಿಂಗ್ಸ್‌ ವಿಭಾಗದಲ್ಲಿ ಬರುವ ಈ ಯೋಜನೆಯ ಬಡ್ಡಿದರ ಈ ವರ್ಗದ ಇತರ ಯೋಜನೆಗಳಂತೆಯೇ ಪ್ರತಿ ತ್ತೈಮಾಸಿಕ ಬದಲಾಗುತ್ತದೆ. ಬ್ಯಾಂಕು ಬಡ್ಡಿದರಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ 8.5% ಚೆನ್ನಾಗಿದೆ ಮತ್ತು ಸದ್ಯೋಭವಿಷ್ಯದಲ್ಲಿ ಇನ್ನೂ ಇಳಿಯುವ ಸಾಧ್ಯತೆ ಇಲ್ಲ. ಬಡ್ಡಿದರ ಸರಕಾರದ 5 ವರ್ಷದ ಬಾಂಡುಗಳ ಮೇಲಿನ ಬಡ್ಡಿದರಗಳಿಂದ 1% ಜಾಸ್ತಿ ಇರುತ್ತದೆ. ಪ್ರತಿಬಾರಿಯೂ  ಬಡ್ಡಿದರ ಈ ಫಾರ್ಮ್ಯುಲಾ ಪ್ರಕಾರ ನಿಗದಿಯಾಗುತ್ತದೆ.
 
ಬಡ್ಡಿದರದ ಬದಲಾವಣೆಯ ಬಗ್ಗೆ ಒಂದು ಮಾತು ಸ್ಪಷ್ಟವಾಗಿ ತಿಳಿದಿರಬೇಕು. ಎಸ್‌ಸಿಎಸ್‌ಎಸ್‌ ಯೋಜನೆ 5 ವರ್ಷದ ಒಂದು ಕರಾರು. ಹೂಡಿಕೆಯಾದಾಗಿನ ಬಡ್ಡಿದರವೇ ಮುಂದಿನ 5 ವರ್ಷಗಳಿಗೂ ಅನ್ವಯವಾಗುತ್ತದೆ. ಆ ಬಳಿಕ ಉಂಟಾಗುವ ಬಡ್ಡಿದರದ ಇಳಿಕೆ ಅಥವಾ ಏರಿಕೆ ಹೊಸ ಹೂಡಿಕೆಗಳಿಗೆ ಅನ್ವಯವಾಗುತ್ತದೆಯೇ ಹೊರತು ಹಳೆಯ ಹೂಡಿಕೆಗಳಿಗಲ್ಲ. ಇದು ಮುಖ್ಯವಾದ ಮಾತು. ಆದರೆ ಪಿಪಿಎಫ್ಖಾತೆಯಲ್ಲಿ ಈ ರೀತಿಯಿಲ್ಲ. ಪಿಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ ಅನ್ವಯವಾಗುವ ಬಡ್ಡಿದರವನ್ನು ಚಾಲ್ತಿಯಲ್ಲಿರುವ ಎಲ್ಲ ಖಾತೆಗಳ ಮೇಲೂ ಆ ವರ್ಷದ ಮಟ್ಟಿಗೆ ಹಾಕಲಾಗುತ್ತದೆ.

ಬಡ್ಡಿ ಪಾವತಿ: ಈ ಯೋಜನೆಯಲ್ಲಿ ಬಡ್ಡಿ ಪಾವತಿಯನ್ನು ಪ್ರತಿ ತ್ತೈಮಾಸಿಕದಲ್ಲಿ ಒಂದು ಬಾರಿ ಮಾಡಲಾಗುವುದು. ಅಂದರೆ ಪ್ರತಿ ಜನವರಿ, ಎಪ್ರಿಲ್‌, ಜುಲೈ ಹಾಗೂ ಅಕ್ಟೋಬರ್‌ ಒಂದನೇ ತಾರೀಕಿನಂದು ಬಡ್ಡಿ ಪಾವತಿ ನಡೆಯುತ್ತದೆ. ರೂ. 15 ಲಕ್ಷದ ಒಂದು ಖಾತೆಯಿದ್ದಲ್ಲಿ ಪ್ರತಿ ತ್ತೈಮಾಸಿಕದಂದು ರೂ.31,875 ನಿಮ್ಮ ಖಾತೆಗೆ ಪಾವತಿಯಾಗುತ್ತದೆ. ಈ ಸ್ಕೀಮಿನಲ್ಲಿ ಬಡ್ಡಿ ಪಾವತಿ ಕಡ್ಡಾಯವಾಗಿ ನಡೆಯುತ್ತದೆ ಹಾಗೂ ಮೆಚೂÂರಿಟಿಯವರೆಗೆ ಬಡ್ಡಿಯನ್ನು ಪೇರಿಸುತ್ತಾ ಹೋಗುವ ಚಕ್ರಬಡ್ಡಿ ಸೌಲಭ್ಯವಿಲ್ಲ. ಹಾಗಾಗಿ ಈ ಯೋಜನೆ ಆಗಾಗ್ಗೆ ದುಡ್ಡು ಆವಶ್ಯಕತೆ ಇರುವ ನಾಗರಿಕರಿಗೆ ಹೆಚ್ಚು ಸಹಕಾರಿ. 

ಭದ್ರತೆ: ಇದು ಭಾರತ ಸರಕಾರದ ಯೋಜನೆ ಮತ್ತು ಹಾಗಾಗಿ ಅತ್ಯಂತ ಭದ್ರ. ಯೋಜನೆಯ ಆರಂಭದಲ್ಲಿ ನಮೂದಿಸಿದ ಬಡ್ಡಿದರವನ್ನು ಕೊಡುವುದು ಸರಕಾರದ ಹೊಣೆಗಾರಿಕೆ. ಶೇರು ಮತ್ತು ಮ್ಯೂಚುವಲ್‌ ಫ‌ಂಡುಗಳ ಮಾರುಕಟ್ಟೆ ಆಧಾರಿತ ಪ್ರತಿಫ‌ಲದ ಹಂಗು ಈ ಯೋಜನೆಗೆ ಇಲ್ಲ. 

ಆದಾಯಕರ: ಈ ಯೋಜನೆಯ ಮೆಲಿನ ಆದಾಯಕರ ಸೌಲಭ್ಯವನ್ನು ಎರಡು ಮಜಲುಗಳಲ್ಲಿ ನೋಡಬಹುದು. ಮೊತ್ತಮೊದಲನೆಯದಾಗಿ, ಈ ಯೋಜನೆಯಲ್ಲಿ ಮಾಡಿದ ಹೂಡಿಕೆ ಸೆಕ್ಷನ್‌ 80ಸಿ ಅಡಿಯಲ್ಲಿ ಕರವಿನಾಯಿತಿಗೆ ಅರ್ಹವಾಗಿರುತ್ತದೆ.  ವಾರ್ಷಿಕ ರೂ.1.5 ಲಕ್ಷದವರೆಗಿನ ಪಿಪಿಎಫ್, ಎಲ್‌ಐಸಿ, ಎನ್‌ಎಸ್‌ಸಿ, ಇಎಲ್‌ಎಸ್‌ಎಸ್‌, ಗೃಹಸಾಲದ ಅಸಲು ಪಾವತಿ, ಮಕ್ಕಳ ಟ್ಯೂಶನ್‌ ಫೀ, ಮನೆಯ ರಿಜಿಸ್ಟ್ರೇಶನ್‌ ಫೀ, 5 ವರ್ಷದ ನಮೂದಿತ ಎಫ್ಡಿ ಇತ್ಯಾದಿ ಹಲವು ಹೂಡಿಕೆಗಳ ಜತೆಗೆ ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ ಕೂಡ ಕರವಿನಾಯಿತಿಗೆ ಸೇರಿದೆ. ಹಾಗಾಗಿ ಆದಾಯಕರಕ್ಕಾಗಿ ಹೂಡಿಕೆ ಮಾಡಿ ಕರವಿನಾಯಿತಿ ಪಡೆಯಲಿಚ್ಛಿಸುವವರು ಈ ಯೋಜನೆಯಲ್ಲಿ ಧಾರಾಳವಾಗಿ ಹೂಡಬಹುದು. ರೂ. 1.5 ಲಕ್ಷದ ಮಿತಿಯೊಳಗೆ ನಿಮ್ಮ ಹೂಡಿಕಾ ಮೊತ್ತವನ್ನು ಆದಾಯದಿಂದ ನೇರವಾಗಿ ಕಳೆದು ನಿಮಗೆ ಅಷ್ಟರ ಮಟ್ಟಿಗೆ ಕರ ವಿನಾಯಿತಿ ಲಭಿಸುತ್ತದೆ. ಒಟ್ಟು ಕರ ಲಾಭ ನಿಮ್ಮ ಆದಾಯದ ಸ್ಲಾಬ್‌ ಅನುಸಾರ ಇರುತ್ತದೆ (10%, 20% ಯಾ 30%).

ಆದರೆ, ಈ ಯೋಜನೆಯ ಹೂಡಿಕೆಯಿಂದ ಕೈಸೇರುವ ಬಡ್ಡಿಯ ಮೇಲೆ ಯಾವ ಕರವಿನಾಯಿತಿಯೂ ಇರುವುದಿಲ್ಲ. ಒಂದೊಂದು ಪೈಸೆಯೂ ನಿಮ್ಮ ಆದಾಯಕ್ಕೆ ಪರಿಗಣಿಸಲ್ಪಡುತ್ತದೆ. ಈ ಬಡ್ಡಿ ಆದಾಯವನ್ನು ನಿಮ್ಮ ಇತರ ಆದಾಯದೊಡನೆ ಸೇರಿಸಿ ನಿಮ್ಮ ನಿಮ್ಮ ಆದಾಯದ ಸ್ಲಾಬ್‌ ಅನುಸಾರ ತೆರಿಗೆ ಕಟ್ಟಬೇಕು. ಪಿಪಿಎಫ್ನಲ್ಲಿ ಇರುವಂತೆ ಕರಮುಕ್ತ ಬಡ್ಡಿ ಈ ಯೋಜನೆಯಲ್ಲಿ ಇಲ್ಲ. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆದರೆ ಮೂಲತಃ ಕರಾರ್ಹರಲ್ಲದ ವ್ಯಕ್ತಿಗಳಿಗೆ ಈ ವಿಚಾರ ಬಾಧಕವಾಗದು. 

ಇದರ ಮೇಲಿನ ಬಡ್ಡಿ ಕೇವಲ ಕರಾರ್ಹ ಮಾತ್ರವೇ ಅಲ್ಲ, ಅದರ ಮೇಲೆ ಟಿಡಿಎಸ್‌ ಕೂಡ ಇರುತ್ತದೆ. ಒಂದು ವಿತ್ತ ವರ್ಷದಲ್ಲಿ (ಎಪ್ರಿಲ್‌- ಮಾರ್ಚ್‌) ರೂ.10,000ಕ್ಕಿಂತ ಜಾಸ್ತಿ ಬಡ್ಡಿ ಆದಾಯ ಇದ್ದಲ್ಲಿ ಬ್ಯಾಂಕ್‌/ ಪೋಸ್ಟಾಫೀಸು ಅಂತಹ ಪೂರ್ತಿ ಬಡ್ಡಿಯ ಮೇಲೆ 10% ಟಿಡಿಎಸ್‌ ಕರಕಡಿತ ಮಾಡುತ್ತದೆ. ಮೂಲತಃ ಕರಾರ್ಹರಲ್ಲದವರು ತಾವು ಕರಾರ್ಹರಲ್ಲ ಎನ್ನುವ 15 ಎಚ್‌ ಫಾರ್ಮ್ ಅನ್ನು ತುಂಬಿದರೆ ಟಿಡಿಎಸ್‌ಕಡಿತ ಆಗಲಾರದು. ಆದರೆ ಕರಾರ್ಹರಾದವರು ಸುಖಾಸುಮ್ಮನೆ ಕರತಪ್ಪಿಸಲು 15 ಎಚ್‌ ತುಂಬುವುದು ಅಪರಾಧ. ಇತ್ತೀಚೆಗೆ ಕರ ಇಲಾಖೆ ಪ್ರತಿಯೊಬ್ಬರ 15 ಎಚ್‌ (ಹಾಗೂ 15ಜಿ) ಫಾರ್ಮುಗಳ ಜಾಡುಹಿಡಿಯುತ್ತಿದೆ. ಸುಳ್ಳು ಮಾಹಿತಿ ನೀಡಿದವರಿಗೆ ಈಗಾಗಲೇ ನೋಟೀಸು ಬರಲು ಆರಂಭವಾಗಿದೆ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.