ಇಳಿಯುತ್ತಿರುವ ಬಡ್ಡಿಯುಗದಲ್ಲಿ ಅಂಚೆಯಣ್ಣನ ಕೃಪಾಕಟಾಕ್ಷ


Team Udayavani, Oct 14, 2019, 5:18 AM IST

krupakataksha

ದಿನ ಬೆಳಗಾದರೆ ಬಡ್ಡಿ ದರ ಎಲ್ಲಿ ಇನ್ನಷ್ಟು ಇಳಿದೀತು ಎನ್ನುವ ಆಸೆ ಕೆಲವರಿಗಾದರೆ ಅದೇ ಭಯ ಇನ್ನು ಕೆಲವರಿಗೆ. ಒಬ್ಟಾತನ ಆಹಾರ ಇನ್ನೊಬ್ಟಾತನ ಆತಂಕ. ಬಡ್ಡಿ ದರ ಇಳಿಕೆ ಸಾಲ ಕೊಂಬುವರಿಗೆ ವರದಾನ, ಆದರೆ ಕುಡಿಕೆ ಕಾಸನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿ ಪಡೆವವರಿಗೆ ಅದೊಂದು ಸಮಸ್ಯೆಯೇ ಸರಿ. ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಬಡ್ಡಿ ದರ ಒಂದೇ ಸವನೆ ಇಳಿಯುತ್ತಿದೆ. ಅಂಥದ್ದರಲ್ಲಿ ಅಂಚೆಯಣ್ಣನ ಸಣ್ಣ ಉಳಿತಾಯದ ಬಡ್ಡಿ ದರಗಳು ಮಾತ್ರ ಸರಿ ಸುಮಾರು ಅದೇ ಮಟ್ಟವನ್ನು ಕಾಯ್ದುಕೊಂಡಿವೆ. ಹಾಗಾಗಿ ಪೋಸ್ಟಲ್‌ ಯೋಜನೆಗಳ ಮೇಲೆ ನಮ್ಮದೊಂದು ಕಾಕು ನಜರ್‌:

1.ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಂ (SCSS)
60 ವರ್ಷ ಮೀರಿದ ಸೀನಿಯರ್‌ ಸಿಟಿಜನ್‌ಗಳಿಗಾಗಿಯೇ (ವಿ.ಆರ್‌.ಎಸ್‌. ನಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ 55 ವರ್ಷ) ಸರಕಾರವು ಅಂಚೆ ಕಚೇರಿಗಳಲ್ಲಿ ಆರಂಭಿಸಿದ ಈ ನಿಗದಿತ ಆದಾಯದ ಸ್ಕೀಂ ಯಾವುದೇ ರಿಸ್ಕ್ ಇಲ್ಲದೆ ಶೇ.8.6 ಬಡ್ಡಿ ನೀಡುತ್ತದೆ. ಬಡ್ಡಿಯು ಪ್ರತಿ ತ್ತೈಮಾಸಿಕ ಕೈಸೇರುತ್ತದೆ. ಒಬ್ಬ ವ್ಯಕ್ತಿ ಕನಿಷ್ಠ ರೂ. 1000 ದಿಂದ ಆರಂಭಿಸಿ ರೂ.15 ಲಕ್ಷ ವರೆಗೆ ಇದರಲ್ಲಿ ಹೂಡಬಹುದು. (ವಿ.ಆರ್‌.ಎಸ್‌. ನಂತಹ ವಿಶೇಷ ಸಂದರ್ಭಗಳಲ್ಲಿ ರಿಟೈರ್‌ವೆುಂಟ್‌ ಮೊತ್ತ ಅಥವ 15 ಲಕ್ಷ, ಯಾವುದು ಕಡಿಮೆಯೋ ಅದು) ಇದು 5 ವರ್ಷಗಳ ಸ್ಕೀಂ ಆಗಿದ್ದು, ಅಂತ್ಯದಲ್ಲಿ ಇನ್ನೂ 3 ವರ್ಷಗಳಿಗೆ ಒಂದು ಬಾರಿ ನವೀಕರಿಸಬಹುದಾಗಿದೆ. ಈ ಖಾತೆಯಲ್ಲಿ ಹೂಡಿದ ಮೊತ್ತಕ್ಕೆ ಸೆಕ್ಷನ್‌ 80ಸಿ ಅಡಿಯಲ್ಲಿ ಆದಾಯ ವಿನಾಯತಿಯನ್ನು ಪಡೆಯಬಹುದಾಗಿದೆ. ಆದರೆ ಇದರಿಂದ ಪಡೆಯುವ ಬಡ್ಡಿ ಸಂಪೂರ್ಣವಾಗಿ ಆದಾಯ ತೆರಿಗೆಗೆ ಒಳಪಡುತ್ತದೆ.

ಯೋಜನೆ      ಬಡ್ಡಿದರ %
ಖಆ ಅ/c 4.0
ಖಈ   (1 ಠಿಟ 3 yrs) 6.9
ಖಈ (5 yrs) 7.7
Rಈ (5 yrs) 7.2
ಖಇಖಖ (5 yrs) 8.6
Mಐಖ (5 yrs) 7.6
Nಖಇ (5 yrs) 7.9
ಕಕಊ (15 yrs) 7.9
ಓVಕ (113 ಞಟnಠಿಜs) 7.6
ಖಖಖ (21 yrs) 8.4

2.ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್‌ (NSC)
ಅಂಚೆಯಣ್ಣನ ಇನ್ನೊಂದು ಭದ್ರ ಯೋಜನೆ. 5 ವರ್ಷಗಳ ಅವಧಿಯ ಈ ಸರ್ಟಿಫಿಕೇಟ್‌ ಅಂತ್ಯದಲ್ಲಿ ಮಾತ್ರ ದುಡ್ಡು ನೀಡುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ವಾರ್ಷಿಕ ಶೇ. 7.9 ಲೆಕ್ಕದಲ್ಲಿ ಬಡ್ಡಿ ಕ್ರೆಡಿಟ್‌ ಆಗುತ್ತದೆ. ಕನಿಷ್ಠ ಮೊತ್ತ ರೂ. 500 ಆಗಿದ್ದು ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಇದರಲ್ಲಿ ಹೂಡಿದ ಮೊತ್ತ ಸೆಕ್ಷನ್‌ 80ಸಿ ಅಡಿಯಲ್ಲಿ ಆದಾಯ ವಿನಾಯಿತಿ ಪಡೆಯುತ್ತದಲ್ಲದೆ, ಇದರಿಂದ ಉತ್ಪತ್ತಿಯಾಗುವ ವಾರ್ಷಿಕ ಬಡ್ಡಿ ಕೂಡಾ ಕೈಸೇರದಿದ್ದರೂ ಮರುಹೂಡಿಕೆಯೆಂಬ ಕಾರಣಕ್ಕೆ ಸೆಕ್ಷನ್‌ 80ಸಿ ಅಡಿಯಲ್ಲಿ ವಿನಾಯತಿ ಪಡೆಯುತ್ತದೆ. ಆದರೆ ಅಂತಹ ಬಡ್ಡಿಯನ್ನು ಆ ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಕಟ್ಟತಕ್ಕದ್ದು.

3.ಮಂಥ್ಲಿ ಇನ್ಕಂ ಸ್ಕೀಂ (MIS)
ಪ್ರತಿ ತಿಂಗಳೂ ಬಡ್ಡಿ ನೀಡುವ 5 ವರ್ಷಗಳ ಈ ಸ್ಕೀಂ ವಾರ್ಷಿಕ ಶೇ.7.6 ಬಡ್ಡಿ ನೀಡುತ್ತದೆ. ಕನಿಷ್ಠ ಡೆಪಾಸಿಟ್‌ ರೂ. 4,500 ಆಗಿದ್ದು ಗರಿಷ್ಠ ಮೊತ್ತ ರೂ. 4.5 ಲಕ್ಷ (ಸಿಂಗಲ್‌ ಎಕೌಂಟ್‌) ಹಾಗೂ ರೂ. 9 ಲಕ್ಷ (ಜಾಯಿಂಟ್‌ ಅಕೌಂಟ್‌). ಇಲ್ಲಿ ಪ್ರತಿ ತಿಂಗಳು ಬರುವ ಮಾಸಿಕ ಬಡ್ಡಿಯನ್ನು ಅದೇ ಅಂಚೆ ಕಚೇರಿಯಲ್ಲಿ ಆರ್‌.ಡಿ. ಮಾಡಿದರೆ ಒಟ್ಟಾರೆ ಪ್ರತಿಫ‌ಲ ಶೇ. 7.9 ಅಂದಾಜು ದೊರಕುತ್ತದೆ. ಹಲವಾರು ಅಂಚೆಯ ಏಜೆಂಟರು ಈ ರೀತಿ ಖಾತೆ ಮಾಡಿಸಿಕೊಡುತ್ತಾರೆ. ಉತ್ತಮ ಭದ್ರತೆ, ಬಡ್ಡಿದರ, ಮಾಸಿಕ ಬಡ್ಡಿಹರಿವು ಇರುವ ಈ ಯೋಜನೆ ತೆರಿಗೆಯಾರ್ಹ ಆದಾಯ. ಹೂಡಿಕೆಯ ಮೇಲೂ ಪ್ರತಿಫ‌ಲದ ಮೇಲೂ ಯಾವುದೇ ರೀತಿಯ ಕರವಿನಾಯತಿ ಇರುವುದಿಲ್ಲ.

4.ಕಿಸಾನ್‌ ವಿಕಾಸ ಪತ್ರ (KVP)
ಅಂಚೆ ಕಚೇರಿಯ ಇನ್ನೊಂದು ಯೋಜನೆ. 113 ತಿಂಗಳುಗಳಲ್ಲಿ ಡಬಲ್‌ ಆಗುವ ಈ ಸ್ಕೀಂ ವಾರ್ಷಿಕ ಶೇ. 7.6 ಪ್ರತಿಫ‌ಲ ನೀಡುತ್ತದೆ. ಕನಿಷ್ಠ ಮೊತ್ತ ರೂ. 100, ಗರಿಷ್ಠ ಮಿತಿಯಿಲ್ಲ. ಬಡ್ಡಿಯ ಮೇಲೆ ತೆರಿಗೆ ಇದೆ. ಇದರಲ್ಲಿ ಭದ್ರತೆಯೂ ಇದೆ, ರಿಟರ್ನೂ ಇದೆ. ಆದರೆ ದಿಢೀರ್‌ ದುಡ್ಡು ಬೇಕೆಂದಾಗ (ಲಿಕ್ವಿಡಿಟಿ ಅಥವಾ ದ್ರವ್ಯತೆ) ಸಿಗಲಿಕ್ಕಿಲ್ಲ ಮತ್ತು ಆದಾಯ ತೆರಿಗೆಯ ಮಟ್ಟಿಗೆ ಆಕರ್ಷಕವಲ್ಲ.

5. ಪಬ್ಲಿಕ್‌ ಪ್ರಾವಿಡೆಂಟ್‌ ಫ‌ಂಡ್‌ (PPF)
15 ವರ್ಷಗಳ ಸಂಪೂರ್ಣ ತೆರಿಗೆ ವಿನಾಯತಿ ಇರುವ ಶೇ. 7.9 ಬಡ್ಡಿದರದ ಈ ಸಿಹಿ ಅಂಬಟೆಕಾಯಿಯ ಬಗ್ಗೆ ಸವಿವರವಾಗಿ ಕಾಕುವಿನಲ್ಲಿ ಹಲವಾರು ಬಾರಿ ಬರೆದಿದ್ದೇನೆ. ಇದರಲ್ಲಿ ರೂ. 1,50,000 ವರೆಗೆ ಸೆಕ್ಷನ್‌ 80ಸಿ ಹಾಗೂ ಪ್ರತಿಫ‌ಲ ಸಂಪೂರ್ಣವಾಗಿ ಸೆಕ್ಷನ್‌ 10 ರ ಅನ್ವಯ ಕರರಹಿತ. ಇದು ಭದ್ರತೆ, ರಿಟರ್ನ್, ತೆರಿಗೆ ವಿನಾಯತಿ ಮಟ್ಟಿಗೆ ಉತ್ತಮವಾದರೂ ಲಿಕ್ವಿಡಿಟಿಯ ಮಟ್ಟಿಗೆ ಅಷ್ಟು ಉತ್ತಮವಲ್ಲ. ಆದರೂ ಈ ಯೋಜನೆಯಲ್ಲಿ ಖಾತೆ ತೆರೆದ 3 ನೆಯ ವರ್ಷದಿಂದ ಸಾಲ ಸೌಲಭ್ಯವೂ 7 ನೆಯ ವರ್ಷದಿಂದ ಅಂಶಿಕ ಹಿಂಪಡೆತವೂ ಇದೆ.

6.ಪೋಸ್ಟಲ್‌ ಟೈಮ್‌ ಡೆಪಾಸಿಟ್‌ (TD):
ಚಾರಿತ್ರಿಕವಾಗಿ ಒಂದು ಉತ್ತಮ ಹೂಡಿಕಾ ಪದ್ಧತಿಯಾಗಿ ಬೆಳೆದು ಬಂದ ಖಜಿಞಛಿ ಈಛಿಟಟsಜಿಠಿಎಂಬ ಈ ಎಫಿx ಸ್ಕೀಂ ಸದ್ಯಕ್ಕೆ 5 ವರ್ಷಕ್ಕೆ ಶೇ. 7.7 ನೀಡುತ್ತದೆ ಹಾಗೂ 1, 2 ಹಾಗೂ 3 ವರ್ಷಗಳಿಗೆ ಶೇ. 6.9 ನೀಡುತ್ತದೆ. ಅಸಲಿನಲ್ಲಿ ಈ ಬಡ್ಡಿ ಪ್ರತಿ ತ್ತೈಮಾಸಿಕ ಕ್ರೆಡಿಟ್‌ ಆಗುವ ಕಾರಣ ನೈಜವಾದ ವಾರ್ಷಿಕ ಪ್ರತಿಫ‌ಲ ಅದರಿಂದ ತುಸು ಜಾಸ್ತಿಯೇ ಇರುತ್ತದೆ. 5 ವರ್ಷಗಳ ಟಿ.ಡಿ.ಗಳು ಮಾತ್ರ ಸೆಕ್ಷನ್‌ 80ಸಿ ಆದಾಯ ವಿನಾಯತಿಗೆ ಅರ್ಹ; ಅದರಿಂದ ಅಲ್ಪಕಾಲಿಕ ಡೆಪಾಸಿಟ್‌ಗಳು ಅಲ್ಲ. ಬ್ಯಾಂಕು ಎಫ್.ಡಿ.ಗಳ ಮೇಲಿನ ಬಡ್ಡಿ ಸಿಕ್ಕಾಪಟ್ಟೆ ಇಳಿದ ಸಂದರ್ಭದಲ್ಲಿ ಅಂಚೆಯಣ್ಣನೇ ಸದ್ಯಕ್ಕೆ ಉತ್ತಮ ಎನ್ನುವುದರಲ್ಲಿ ಸಂಶಯವಿಲ್ಲ.

7.ಆರ್‌.ಡಿ.ಗಳು (RD)
ಅಂಚೆ ಕಛೇರಿಯ ರಿಕರಿಂಗ್‌ ಡೆಪಾಸಿಟ್‌ ಅಥವಾ ನಿರಂತರ ಠೇವಣಿಯಲ್ಲಿ ಪ್ರತಿ ತಿಂಗಳೂ ಒಂದು ನಿಗದಿತ ಮೊತ್ತ ಕಟ್ಟುವ ಕರಾರು. ಇದು 5 ವರ್ಷಗಳ ಸ್ಕೀಂ ಹಾಗೂ ಇದರಲ್ಲಿ ಶೇ. 7.2 ಬಡ್ಡಿದರ ಯಾವುದೇ ಕರ ವಿನಾಯತಿಗಳು ಇಲ್ಲದೆ ನೀಡಲಾಗುತ್ತದೆ. ಪ್ರತಿ ತ್ತೈಮಾಸಿಕದಲ್ಲಿ ಚಕ್ರೀಕೃತಗೊಳ್ಳುವ ಕಾರಣ ಈ ಬಡ್ಡಿ ವಾರ್ಷಿಕವಾಗಿ ಶೇ. 7.4 ಆಸುಪಾಸಿನಲ್ಲಿ ಪ್ರತಿಫ‌ಲ ನೀಡಿದಂತಾಯಿತು. ಇದು ಭದ್ರ. ಆದರೆ, ಬಡ್ಡಿದರ ಸಾಧಾರಣ ಮತ್ತು ಲಿಕ್ವಿಡಿಟಿ ಚೆನ್ನಾಗಿಲ್ಲ.

8.ಸುಕನ್ಯಾ ಸಮೃದ್ಧಿ ಯೋಜನೆ (SSS)
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗಾಗಿ ಮಾತ್ರ ಇರುವ ಈ ಯೋಜನೆ ಈಗ ಶೇ. 8.4 ಕರಮುಕ್ತ ಪ್ರತಿಫ‌ಲ ನೀಡುತ್ತದೆ. ಹೂಡಿಕೆಯ ಮೇಲೆಯೂ ಕರವಿನಾಯಿತಿ ಉಳ್ಳ ಈ ಯೋಜನೆ ನಿಗದಿತ ಆದಾಯದ ಯೋಜನೆಗಳ ಪೈಕಿ ಅತ್ಯುತ್ತಮ ವಾದ¨ªೆಂದು ಹೇಳಬಹುದು. ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ನಂತರ ಹೆಣ್ಣು ಮಗು ಸ್ವತಃ ಚಲಾಯಿಸಬಹುದಾಗಿದೆ. ಇದಕ್ಕಾಗಿ ಒಂದು ಪಾಸ್‌ಬುಕ್‌ ನೀಡಲಾಗುತ್ತದೆ. ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷಗಳವರೆಗೆ. ಆ ಮೊದಲೇ ಹೆಣ್ಣು ಮಗುವಿಗೆ 18 ತುಂಬಿದ್ದು ಮದುವೆಯಾದರೆ ಖಾತೆಯನ್ನು ಅಲ್ಲಿಗೇ ಕ್ಲೋಸ್‌ ಮಾಡಬಹುದು. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 14 ವರ್ಷಗಳು ಮಾತ್ರ. 21 ವರ್ಷಗಳ ಬಳಿಕ ಖಾತೆ ಮುಂದುವರಿದರೂ ಅದರ ಮೇಲೆ ಬಡ್ಡಿ ಸಿಗುತ್ತಲೇ ಇರುತ್ತದೆ. ಕನಿಷ್ಠ ರೂ. 1000ದೊಂದಿಗೆ ಈ ಖಾತೆಯ ಆರಂಭ ಮಾಡಬಹುದು. ಆ ಬಳಿಕ ವಾರ್ಷಿಕ ಕನಿಷ್ಠ ರೂ. 1,000 ಅಥವಾ ಗರಿಷ್ಠ ರೂ. 1,50,000 ವನ್ನು ಈ ಖಾತೆಗೆ ಕಟ್ಟಬಹುದು. ಕನಿಷ್ಠ ಪಾವತಿಯನ್ನು ಮಾಡದ ವರ್ಷ ರೂ. 50 ದಂಡ ತಗಲುತ್ತದೆ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.