38% ಮಂದಿಯಲ್ಲಿ ಜನನ ಪ್ರಮಾಣ ಪತ್ರ ಇಲ್ಲ


Team Udayavani, Jan 11, 2020, 5:01 AM IST

54

ಸಾಂದರ್ಭಿಕ ಚಿತ್ರ

ನಮ್ಮ ಪೌರತ್ವವನ್ನು ಸಾಬೀತುಪಡಿಸುವಂತಹ ದಾಖಲೆಗಳಲ್ಲಿ ಪ್ರಮುಖವಾದ ಜನನ ಪ್ರಮಾಣ ಪತ್ರಗಳು ದೇಶದ ಸುಮಾರು ಶೇ. 38ರಷ್ಟು ಮಂದಿಯಲ್ಲಿ ಇಲ್ಲ. ಜನಿಸಿದ ದಾಖಲೆಗಾಗಿ ಕೊಡಲ್ಪಡುವ ಜನನ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಜನ ಉತ್ಸುಕರಾಗಿಲ್ಲ. 2000ನೇ ಇಸವಿ ಬಳಿಕ ಕಡಿಮೆಯಾಗಿದ್ದರೂ, ಶೇ. 100ರಷ್ಟು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ನಮ್ಮ ಪೌರತ್ವ ಸಾಬೀತು ಮಾಡುವ ಸಂದರ್ಭ ಬಂದಾಗ ಮಹತ್ವದ ದಾಖಲೆಯಿಂದ ವಂಚಿತರಾಗುತ್ತಿದ್ದಾರೆ.

2015-16ರಲ್ಲಿ ಜನಿಸಿದವರ ಪೈಕಿ ಕೇವಲ 62.3ರಷ್ಟು ಮಂದಿ ಯಲ್ಲಿ ಮಾತ್ರ ಜನನ ಪ್ರಮಾಣ ಪತ್ರ ಇದೆ ಎಂದು ವರದಿಯೊಂದು ಹೇಳಿದೆ. ಅಂದರೆ 5 ಮಕ್ಕಳಲ್ಲಿ 3 ಮಕ್ಕಳು ಮಾತ್ರ ಇದನ್ನು ಪಡೆಯುತ್ತಿದ್ದಾರೆ.

ಈ ಹಿಂದಿಗಿಂತ‌ ಚೇತರಿಕೆ
ಜನನ ದಾಖಲಾತಿಗಳಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ. 2000ನೇ ಇಸವಿ ಮತ್ತು 2017ರ ನಡುವೆ ಬಹುದೊಡ್ಡ ಬದಲಾವಣೆ ಆಗಿದೆ.

ದಾಖಲಾಗುತ್ತಿಲ್ಲ
ಜನನ ಮತ್ತು ಮರಣಗಳನ್ನು ದಾಖಲಾಗುವ ಸಂಖ್ಯೆಯೂ ಕಡಿಮೆಯಾಗಿದೆ. ಆಸ್ಪತ್ರೆಗಳಲ್ಲಿ ಹೆರಿಗೆಯಾದ ಸಂದರ್ಭ ಹೆತ್ತವರು ಜನನ ಪ್ರಮಾಣ ಪತ್ರವನ್ನು ಪಡೆಯಲು ನಿರಾಸಕ್ತಿ ತೋರಿ ಸುತ್ತಿದ್ದಾರೆ. ಇನ್ನು ಮನೆಯಲ್ಲೇ ಹೆರಿಗೆಗಳಾದ ಸಂದರ್ಭವೂ ಜನನ ಪ್ರಮಾಣ ಪತ್ರಗಳತ್ತ ಜನರ ಚಿತ್ತ ಹರಿಯುತ್ತಿಲ್ಲ. ಮರಣ ಪ್ರಮಾಣ ಪತ್ರ ಮಾಡಿಸುವುದು ಕಡ್ಡಾಯವಾಗಿದೆ.

21 ದಿನಗಳು
ಮಗುವೊಂದು ಜನಿಸಿದರೆ ಅಥವಾ ವ್ಯಕ್ತಿಯೊಬ್ಬ ಮೃತಪಟ್ಟ 21 ದಿನಗಳೊಳಗೆ ಸಂಬಂಧ ಪಟ್ಟ ಪ್ರಮಾಣ ಪತ್ರವನ್ನು ಮಾಡಿ ಸುವುದು ಕಡ್ಡಾಯವಾಗಿದೆ. ಬಳಿಕವೂ ತಾಲೂಕು ಕೇಂದ್ರದಲ್ಲಿ ಮಾಡಿಸಬಹುದಾಗಿದೆ.

ಯುನಿಸೆಫ್ ವರದಿ
ಭಾರತ ಸೇರಿದಂತೆ ಕಾಂಗೋ, ಇಥಿಯೋಪಿಯಾ, ನೈಜೀರಿಯಾ ಮತ್ತು ಪಾಕಿಸ್ಥಾನದಲ್ಲಿ ಜನನ ನೋಂದಣಿಗಳು ಸರಿಯಾಗಿ ದಾಖಲಾಗುತ್ತಿಲ್ಲ. 5 ವರ್ಷಗಳಲ್ಲಿ ಈ ದೇಶಗಳ ಒಟ್ಟು 166 ಮಿಲಿಯನ್‌ ಮಕ್ಕಳ ಜನನ ನೋಂದಣಿಯಾಗಿಲ್ಲ ಎಂದು 2019ರ ಯುನಿಸೆಫ್ ಹೇಳಿತ್ತು.

ಎಲ್ಲಿ ಕಡಿಮೆ (ಶೇ.ಗಳಲ್ಲಿ)
ಉತ್ತರ ಪ್ರದೇಶ (61.5), ಬಿಹಾರ (73.7), ಮಧ್ಯಪ್ರದೇಶ (74.6) ಮತ್ತು ಜಮ್ಮು ಕಾಶ್ಮೀರ (78.6) ಇಲ್ಲಿ ದೇಶದ ಸರಾಸರಿ ಗಿಂತ ಕಡಿಮೆ ದರದಲ್ಲಿ ಜನನ ನೋಂದಣಿಗಳು (2017ರ ವರದಿ ಪ್ರಕಾರ) ನಡೆಯುತ್ತಿದೆ.


ಶೇ. 41.4
5ರಲ್ಲಿ 2 ಮಕ್ಕಳ ಹೆತ್ತವರು ಅನಕ್ಷರಸ್ಥರಾಗಿದ್ದು, ಅವರಲ್ಲಿ ಶೇ. 41.4ರಷ್ಟು ಮಂದಿ ಜನನ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಪದವಿ ವಿದ್ಯಾಭ್ಯಾಸ ಹೊಂದಿದವರಲ್ಲಿ ಶೇ. 77.6ರಷ್ಟು ಮಂದಿ ತಮ್ಮ ಮಕ್ಕಳ ಜನನ ನೋಂದಣಿ ಮಾಡಿಸಿದ್ದಾರೆ.

ಅಸ್ಸಾಂನಲ್ಲಿ ಜನನ ಪ್ರಮಾಣ ಪತ್ರ
ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ ಯಲ್ಲಿ ಜನನ ಪ್ರಮಾಣ ಪತ್ರಗಳನ್ನು ಕೇಳಲಾಗಿತ್ತು. ಇದರ ಜತೆಗೆ ಆಧಾರ್‌, ವೋಟರ್‌ ಐಡಿ, ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌, ವಿಮಾ ದಾಖಲೆಗಳು, ಶಾಲಾ ದಾಖಲಾತಿಗಳನ್ನು ನೀಡಲಾಗಿತ್ತು. ಇವುಗಳಿಗೆ ಮೂಲವಾಗಿ ಜನನ ಪ್ರಮಾಣ ಪತ್ರವನ್ನು ಬಳಸಲಾಗಿತ್ತು.

ಟಾಪ್ ನ್ಯೂಸ್

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basava

Desi Swara: Yoga Day-ಬಸವತತ್ತ್ವ ಮತ್ತು ಯೋಗತತ್ತ್ವ: ಅನುಸಂಧಾನ

KGF

Kolara: ಕೆಜಿಎಫ್ ಗಣಿಗಳಲ್ಲಿ ಮತ್ತೆ ಬಂಗಾರ ಬೇಟೆ!

1-KGF

KGF ಗಣಿ ತ್ಯಾಜ್ಯದಿಂದ ಚಿನ್ನ

11-Yoga

International Yoga Day: ಮಹಿಳೆಯರಿಗೆ 5 ಸರಳ ಯೋಗಾಸನಗಳು

10-Yoga

International Yoga Day 2024: ಸ್ತ್ರೀ ಸ್ವಾಸ್ಥ್ಯಕ್ಕಾಗಿ ಯೋಗ

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

19-fusion

Father: ನಮಗಾಗಿ ದುಡಿದ ನಾಯಕ ನಮ್ಮ ಜನಕ

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.