ಇ ವಾಹನಗಳದೇ ಕಾರು-ಬಾರು

2024 ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಏರಿಕೆ

Team Udayavani, Jan 22, 2020, 1:09 AM IST

ದೇಶದೆಲ್ಲೆಡೆ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಗಳ ಎಲೆಕ್ಟ್ರಿಕ್‌ ಆವೃತ್ತಿಗಳ ಉತ್ಪಾ ದನೆ ಪ್ರಾರಂಭವಾಗಿದ್ದು, 2024ರ ವೇಳೆಗೆ ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಏರಿಕೆಯಾಗಲಿದೆ ಎಂದು ಕ್ರಿಸೆಲ್‌ ಸಂಶೋಧನೆ ಅಭಿಪ್ರಾಯಪಟ್ಟಿದೆ. ಕೇಂದ್ರ ಸರಕಾರವೂ ಇತ್ತೀಚಿನ ವರ್ಷಗಳ ಬಳಿಕ ಎಲೆಕ್ಟ್ರಾನಿಕ್‌ ವಾಹನಗಳನ್ನು ಕೊಂಡುಕೊಳ್ಳುವವರನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

ಶೇ. 5 ಇ-ವಾಹನ
2024ರ ಸುಮಾರಿಗೆ ದೇಶದಲ್ಲಿ ಮಾರಾಟವಾಗುವ ಒಟ್ಟು ವಾಹನಗಳ ಪೈಕಿ ಶೇ. 5ರಷ್ಟು ವಾಹನಗಳು ಎಲೆಕ್ಟ್ರಿಕ್‌ ವಾಹನಗಳಾಗಿರಲಿವೆ.

2 ಚಕ್ರ
ಶೇ. 0.6ರಷ್ಟು ದ್ವಿಚಕ್ರ ವಾಹನಗಳು ಬಳಕೆಯಾಗುತ್ತಿದ್ದು, 2024ರ ಅವಧಿಗೆ ಇದರ ಪ್ರಮಾಣದಲ್ಲಿ ಶೇ. 12ರಿಂದ 17ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇ-ಬಸ್‌ಗಳ ಪ್ರಮಾಣದಲ್ಲೂ ಹೆಚ್ಚಳ
ಪ್ರಸ್ತುತ ಶೇ. 0.5ರಷ್ಟು ಮಾತ್ರ ಇ-ಬಸ್‌ಗಳು ಕಾರ್ಯಾಚರಿಸು ತ್ತಿದ್ದು, 2024ರ ವೇಳೆಗೆ ಶೇ. 2-4ರಷ್ಟು ಹೆಚ್ಚಾಗಲಿವೆ.

ದ್ವಿಚಕ್ರ ವಾಹನ
ದೇಶದ 5 ಅತ್ಯುತ್ತಮ ದ್ವಿ ಚಕ್ರ ವಾಹನ ಉತ್ಪಾದಕರು ಇ-ವಾಹನ ಗಳ ಸಾಮರ್ಥ್ಯವನ್ನು ನಾಲ್ಕು ಲಕ್ಷ ಯೂನಿಟ್‌ಗಳನ್ನು ಹೆಚ್ಚಿಸುವ ಯೋಜನೆ ಹಾಕಿಕೊಂಡಿದ್ದು, 2024ಕ್ಕೆ 30 ಲಕ್ಷ ಯೂನಿಟ್‌ಗಳನ್ನು ಹೊಂದುವ ಗುರಿಯನ್ನು ಹಾಕಿಕೊಂಡಿದೆ. ಇನ್ನೂ ಇ ವಾಹನಗಳಿಗಿಂತ ಐಸಿಇ ಮೋಟಾರ್‌ ಬೈಕ್‌ಗಳು ಕಡಿಮೆ ದರಕ್ಕೆ ಇರಲಿವೆ.

ಆಟೋಗಳ ಕಥೆ ಏನು ?
ಈಗ ಕೇವಲ ಶೇ. 0.01ರಷ್ಟು ಎಲೆಕ್ಟ್ರಿಕ್‌ ಆಟೋಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 2024ರ ವೇಳೆಗೆ ಶೇ. 43-48ರಷ್ಟು ಅಧಿಕವಾಗಲಿದೆ.

4 ಚಕ್ರ
ಸದ್ಯ ಶೇ.0.1ರಷ್ಟು ಎಲೆಕ್ಟ್ರಿಕ್‌ ಆವೃ ತ್ತಿಯ 4 ಚಕ್ರ ವಾಹನಗಳು ಮಾರಾಟ ವಾಗುತ್ತಿದ್ದು, 2024ರ ವೇಳೆಗೆ ಇವುಗಳ ಪ್ರಮಾಣದಲ್ಲಿ ಶೇ. 3ರಿಂದ 4ರಷ್ಟು ಏರಿಕೆ ಕಾಣುವ ಸಾಧ್ಯತೆ.

ಇ-ರಿಕ್ಷಾಗಳದೇ ಅಗ್ರ ಪಾಲು
ಕ್ರಿಸೆಲ್‌ ಸಂಶೋಧನೆ ಮಾಹಿತಿಯ ಪ್ರಕಾರ ಸದ್ಯ ದೇಶದೆ ಲ್ಲೆಡೆ 4.5 ಲಕ್ಷ ಇ-ರಿಕ್ಷಾಗಳಿದ್ದು, 4 ವರ್ಷಗಳ ಅನಂತರ ಇದರ ಪಾಲು 8.8 ಲಕ್ಷಕ್ಕೆ ಏರಲಿದೆ. ಸಿಎನ್‌ಜಿ ಆಟೋಗಳಿಗೆ ಹೋಲಿ ಸಿದ್ದರೆ ಇ-ಆಟೋಗಳು ಕಡಿಮೆ ದರಕ್ಕೆ ಲಭ್ಯವಾಗ ಲಿದ್ದು, ಇವುಗಳ‌ ನಿರ್ವಹಣೆ ವೆಚ್ಚ ಕಡಿಮೆ ಮೊತ್ತದಲ್ಲಿ ಆಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ