ಗಡಿಯಲ್ಲಿ ಚೀನದ ಹೊಸ ಕಾನೂನಿನ ಮೊಂಡಾಟ; ಏನಿದು ಹೊಸ ಕಾನೂನು?
ಭಾರತ ಸೇರಿದಂತೆ ಇತರ ದೇಶಗಳಿಗೆ ಕಂಟಕವಾಗಬಲ್ಲದು ಎಂದೇ ವಿಶ್ಲೇಷಿಸಲಾಗುತ್ತಿದೆ.
Team Udayavani
ಚೀನದ ಈ ವರ್ತನೆ ಬಹು ಹಿಂದಿನಿಂದಲೂ ಇದೆ. ಇದಕ್ಕೆ ಹೊಸ ಕಾನೂನಿನ ಬಲ ಸಿಕ್ಕಿದೆಯಷ್ಟೇ. ಸದ್ಯದ ಮಾಹಿತಿ ಪ್ರಕಾರ, ಚೀನಕ್ಕೆ ಭಾರತದ ಜತೆಗೆ ಸ್ನೇಹಪೂರ್ವಕ ಸಂಬಂಧ ಬೇಡ. ಇದಕ್ಕಾಗಿಯೇ ಇಂಥ ಹುಚ್ಚುತನದ ಹೊಸ ಕಾನೂನುಗಳನ್ನು ತಂದಿದೆ. ಈ ಮಧ್ಯೆ, ಚೀನ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿಗಳಲ್ಲಿ ಹೊಸ ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಇದರ ಮುಖ್ಯ ಉದ್ದೇಶ, ಈ ಗ್ರಾಮಗಳನ್ನು ಸೇನಾ ಮತ್ತು ನಾಗರಿಕ ಸೇವೆಗೆ ಬಳಸಿಕೊಳ್ಳುವುದು. ಅಂದರೆ ಗಡಿಯಲ್ಲಿ ಮಾದರಿ ಗ್ರಾಮಗಳು ಸಿದ್ಧವಾಗಿದ್ದರೆ, ಯುದ್ಧದಂಥ ಸಂದರ್ಭದಲ್ಲಿ ಇಲ್ಲಿನ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಿ...