ಕನ್ನಡ ಬಳಕೆ: ಅಧಿಕಾರಿ ವರ್ಗ ಸ್ಪಂದಿಸುವುದೇ?

Team Udayavani, Nov 1, 2018, 12:30 AM IST

b-19.jpg

ನವೆಂಬರ್‌ 1ರಿಂದ  ಆಂಗ್ಲ ಭಾಷೆಯ ಟಿಪ್ಪಣಿ ಇರುವ ಕಡತಗಳಿಗೆ ಸಹಿ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಎಷ್ಟರ ಮಟ್ಟಿಗೆ ಸಹಕರಿಸುತ್ತದೆ ಎಂಬ ಪ್ರಶ್ನೆ ಮೂಡಿದೆ.  ಆಡಳಿತದಲ್ಲಿ ಕನ್ನಡ ಬಳಕೆ ಸಂಬಂಧ ಇದುವರೆಗೂ 305 ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಕೆಲವು ಅಧಿಕಾರಿಗಳನ್ನು ಹೊರತುಪಡಿಸಿದರೆ ಬಹುತೇಕ ಐಎಎಸ್‌-ಐಪಿಎಸ್‌ ಅಧಿಕಾರಿಗಳಿಗೆ ಇಂದಿಗೂ ಇಂಗ್ಲಿಷ್‌ ಪ್ರಿಯವಾದ ಭಾಷೆ. ಹೀಗಾಗಿ, ಕನ್ನಡ ಬಳಕೆ ಸುತ್ತೋಲೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ.

ಸಚಿವ ಸಂಪುಟದ ಟಿಪ್ಪಣಿಗಳು ಕನ್ನಡದಲ್ಲಿ ಸಿದ್ಧವಾಗಬೇಕು ಎಂಬ ಬೇಡಿಕೆ ಎರಡು ದಶಕಗಳಿಂದ ಇದೆ. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ  ಈ ಬಗ್ಗೆ ಚರ್ಚೆಯಾಗಿತ್ತು. ಆದರೆ, ಅದೂ ಸಹ ಇನ್ನೂ ಜಾರಿಯಾಗಿಲ್ಲ. ನವೆಂಬರ್‌ 1 ರಿಂದ ನನ್ನ ಮುಂದೆ ಬರುವ ಎಲ್ಲ ಕಡತಗಳೂ ಕನ್ನಡದಲ್ಲೇ ಇರಬೇಕು. ಆಂಗ್ಲ ಭಾಷೆಯಲ್ಲಿದ್ದರೆ ನಾನು ಸಹಿ ಮಾಡುವುದಿಲ್ಲ ಎಂದು ಕುಮಾರಸ್ವಾಮಿಯವರು ಮುಖ್ಯ ಕಾರ್ಯದರ್ಶಿ ಸಹಿತ ಎಲ್ಲ ಇಲಾಖಾ ಕಾರ್ಯದರ್ಶಿಗಳಿಗೆ ಹಾಗೂ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಜತೆಗೆ, ಸಂಪುಟ ಸಭೆಯ ಟಿಪ್ಪಣಿ ಹಾಗೂ ಕತಡಗಳು ಸಹ ಕನ್ನಡದಲ್ಲೇ ಇರಬೇಕು. ಆ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳಿಗೂ ನಿರ್ದೇಶನ ನೀಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಜತೆ ಪತ್ರ ವ್ಯವಹಾರ ನಡೆಸುವ ಸಂದರ್ಭದಲ್ಲಿ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಪತ್ರ ರವಾನಿಸುವ ಸಂದರ್ಭದಲ್ಲಿ ಮಾತ್ರ ಇಂಗ್ಲೀಷ್‌ ಇರಲಿ. ಉಳಿದಂತೆ ಎಲ್ಲ ಕಡತಗಳು ಕನ್ನಡದಲ್ಲೇ ಇರಲಿ ಎಂದು ಸೂಚನೆ ನೀಡಿದ್ದಾರೆ.  ಕನ್ನಡ ಬಳಕೆ ತಮ್ಮ ಕಚೇರಿಯಿಂದಲೇ ಪ್ರಾರಂಭ ವಾಗಬೇಕು ಎಂಬ ನಿಟ್ಟಿನಲ್ಲಿ ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿ ಯವರ ಕಚೇರಿ, ಗೃಹ ಕಚೇರಿ ಕೃಷ್ಣಾದಿಂದ ಬೇರೆ ಬೇರೆ ಇಲಾಖೆಗಳಿಗೆ ರವಾನೆಯಾಗುವ ಎಲ್ಲ ಪತ್ರ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು ಸೂಚನೆ ನೀಡಿದ್ದಾರೆ. ಅಧಿಕಾರಿ ವರ್ಗ ಸಿಎಂ ಆಶಯಕ್ಕೆ ಹೇಗೆ ಸ್ಪಂದಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಗಳ ಸಹಿತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕನ್ನಡ ಅನುಷ್ಟಾನ, ಬಳಕೆಗೆ ಸಾಕಷ್ಟು ಸುತ್ತೋಲೆಗಳನ್ನು ಹೊರಡಿಸಿ ಕೆಲವೊಮ್ಮೆ ತಪಾಸಣೆ ಸಹ ಮಾಡಿದೆ. ಆಗ, ಕನ್ನಡ ಬಳಕೆಯಲ್ಲಿ ಸ್ಥಳೀಯ ಅಧಿಕಾರಿಗಳೇ ಹಿಂದೇಟು ಹಾಕುತ್ತಿರುವುದು ಪತ್ತೆಯಾಗಿದೆ.   ಇಂಗ್ಲೀಷ್‌ನಲ್ಲಿ ಆದೇಶ ಹೊರಡಿ ಸುತ್ತಿದ್ದ ಐಎಎಸ್‌ ಅಧಿಕಾರಿಯೊಬ್ಬರ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಸಂಘರ್ಷಕ್ಕೆ ಇಳಿದ ಉದಾಹರಣೆ  ಉಂಟು. 

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಆಂಗ್ಲ ಭಾಷೆಯ ಕಡತಗಳಿಗೆ ಸಹಿ ಮಾಡುವುದಿಲ್ಲ ಎಂಬ ದಿಟ್ಟ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಇದಕ್ಕಾಗಿ ಅಭಿನಂದಿಸುತ್ತೇವೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ತಾಕೀತು ಮಾಡಬೇಕು. ಬೇಸರದ ಸಂಗತಿ ಎಂದರೆ ನಮ್ಮಲ್ಲಿನ ಕೆಲವು ಐಎಎಸ್‌-ಐಪಿಎಸ್‌ ಅಧಿಕಾರಿಗಳಿಗೆ ಕನ್ನಡದ ವಿಚಾರದಲ್ಲಿ ಇಚ್ಛಾಶಕ್ತಿ ಇರುವುದಿಲ್ಲ.
ಟಿ.ಎ.ನಾರಾಯಣಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ 

ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

ಸರಕಾರ ನಿಮ್ಮ ಜೊತೆಗಿದೆ, ಅಂಗನವಾಡಿ ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ: ಸಚಿವ ಈಶ್ವರ ಖಂಡ್ರೆ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಪೆಟ್ರೋಲ್ ಪಂಪ್‌ನಲ್ಲಿ ಅಗ್ನಿ ಅವಘಡ… ಕಾರ್ಮಿಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Udupi: ಸೆಲೂನ್‌ ಸಿಬಂದಿಯ ಕೊಲೆ ಯತ್ನ ಪ್ರಕರಣ… ಮೂವರು ಅರೆಸ್ಟ್

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

Share Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ಜಿಗಿತ; ಲಾಭ ಗಳಿಸಿದ ಷೇರು ಯಾವುದು?

7-chitradurga

ಒತ್ತಡಕ್ಕೆ ಮಣಿಯದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಾಗಲಿ; ಬಿ.ವೈ.ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-

ಗ್ರಾಮದ ಸಮಸ್ಯೆ ಪರಿಹಾರಕ್ಕೆ 100% ಮತ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

Fathers day 2024: ಅಪ್ಪ ಯಾಕೋ ಹಿಂದೆ ಉಳಿದುಬಿಟ್ಟ !

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

Father’s day 2024: ಜೂ.16: ಅಪ್ಪಂದಿರ ದಿನ-ಅಪ್ಪ ಅನ್ನುವ ಭರವಸೆಯ ಹೆಗಲು

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

12

Online ಗೇಮ್‌ ಚಟಕ್ಕೆ ಬಿಎಸ್‌ಸಿ ಮೊದಲ ವರ್ಷದ ವಿದ್ಯಾರ್ಥಿನಿ ಬಲಿ

11-

Yadagiri: ಬಾಲ್ಯ ವಿವಾಹ ವಿರುದ್ಧ ಹೋರಾಡೋಣ: ಶಾಸಕ ಕಂದಕೂರು ಕರೆ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

Panaji: ಗೋವಾದ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಜಲಪಾತಗಳಿಗೆ ಪ್ರವೇಶ ನಿಷೇಧ

10-

Chikkamagaluru: ಪೆಟ್ರೋಲ್-ಡಿಸೇಲ್ ಬೆಲೆಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Assam: ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 48 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.