ಮೆಲ್ಬೋರ್ನ್ ಕನ್ನಡ ಸಂಘದಿಂದ ಸುಗಮ ಸಂಗೀತ ಕಾರ್ಯಕ್ರಮ
Team Udayavani, Mar 8, 2021, 5:02 PM IST
ಮೆಲ್ಬೋರ್ನ್ :ಇಲ್ಲಿನ ಕನ್ನಡ ಸಂಘದ ವತಿಯಿಂದ ಸಿಜಿ 99 ಪ್ರಾಯೋಜಕತ್ವದಲ್ಲಿ ಫೆ.27ರಂದು ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ ಮತ್ತು ಕೀರ್ತನ್ ಹೊಳ್ಳ ಸುಗಮ ಸಂಗೀತ ಕಾರ್ಯಕ್ರಮ ಫೇಸ್ಬುಕ್ ಲೈವ್ ಮೂಲಕ ನಡೆಯಿತು.
ಗಾಯಕರು ದೇವರ ನಾಮದೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಭಾವಗೀತೆ, ಜಾನಪದ ಗೀತೆ, ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರು.
ಪೂರ್ಣಿಮಾ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರಿಗೆ ಭವ್ಯಾ ವಿನಯ್ ಅವರು ಸಂಘದ ವತಿಯಿಂದ ಕಿರುಕಾಣಿಕೆ ನೀಡಿ ಗೌರವಿಸಿದರು.
ಚಂದ್ರ ಬೆಂಗಳೂರು ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.