ನಕಲಿ ರಿವ್ಯೂಗೆ ಅಂಕುಶ; ಕೇಂದ್ರ ಸರ್ಕಾರವೇನು ಮಾಡಿದೆ?
Team Udayavani, Nov 23, 2022, 7:55 AM IST
ಫ್ಲಿಪ್‌ಕಾರ್ಟ್, ಅಮೆಜಾನ್ ಸೇರಿದಂತೆ ದೇಶಾದ್ಯಂತ ಇರುವ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿನ ನಕಲಿ ರಿವ್ಯೂಗಳಿಗೆ ಕೇಂದ್ರ ಸರಕಾರ ಕಡಿವಾಣ ಹಾಕಲು ಹೊರಟಿದೆ. ಇನ್ನು ಮುಂದೆ ಯಾರ್ಯಾರು ಹಣ ಪಡೆದು, ರಿವ್ಯೂ ಹಾಕಿದ್ದಾರೆ ಎಂಬುದನ್ನೂ ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕಾಗಿದೆ.
ರಿವ್ಯೂಗಳೇಕೆ ಮಹತ್ವ?
ಆನ್‌ಲೈನ್ ವೇದಿಕೆಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್, ಝೋಮ್ಯಾಟೋ, ಸ್ವಿಗ್ಗಿ, ಪ್ರವಾಸಿ ನೆರವಿನ ತಾಣಗಳು ಸೇರಿದಂತೆ ಹಲವಾರು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಗ್ರಾಹಕರು ಯಾವುದೇ ವಸ್ತು ಖರೀದಿಗೂ ಮುನ್ನ ಒಮ್ಮೆ ಆ ವಸ್ತುವಿನ ಬಗ್ಗೆ ಇತರ ಗ್ರಾಹಕರು ಏನು ಬರೆದಿದ್ದಾರೆ ಎಂಬುದನ್ನು ನೋಡುತ್ತಾರೆ. ಸಾಮಾನ್ಯವಾಗಿ ಇದು ಈ ವಸ್ತುವಿನ ವಿವರದ ಕೆಳಗೆ ಇರುತ್ತದೆ. ಅಲ್ಲದೆ ಆ ವಸ್ತುವಿಗೆ ಸ್ಟಾರ್‌ಗಳನ್ನೂ ನೀಡಲಾಗಿರುತ್ತದೆ. ಹೆಚ್ಚು ಸ್ಟಾರ್ ಬಂದ ವಸ್ತುಗಳಿಗೆ ಬೇಡಿಕೆ ಹೆಚ್ಚು.
ಇ-ಕಾಮರ್ಸ್ ಕಂಪೆನಿಗಳು ಏನು ಮಾಡಬೇಕು?
ರಿವ್ಯೂ ಮಾಡಲಿರುವ ಗ್ರಾಹಕರ ಬಗ್ಗೆ ಇಮೇಲ್, ದೂರವಾಣಿ ಕರೆ ಅಥವಾ ಎಸ್‌ಎಂಎಸ್‌ಗಳ ಮೂಲಕ ದೃಢೀಕರಿಸಿಕೊಳ್ಳಬೇಕು. ಜತೆಗೆ ತಾವು ಯಾವ ಮೆಥೆಡಾಲಜಿಯನ್ನು ಬಳಸಿಕೊಂಡು ಗ್ರಾಹಕರಿಂದ ರಿವ್ಯೂ ಮಾಡಿಸುತ್ತಿದ್ದೇವೆ ಎಂಬ ಬಗ್ಗೆ ಕೇಂದ್ರ ಗ್ರಾಹಕರ ವ್ಯವಹಾರಗಳ ಇಲಾಖೆಗೆ ಮಾಹಿತಿ ನೀಡಬೇಕು. ಪಬ್ಲಿಶ್ ಮಾಡುವ ಮುನ್ನ ಅವುಗಳನ್ನು ತಿದ್ದುಪಡಿ ಮಾಡಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಎಲ್ಲ ರಿವ್ಯೂಗಳನ್ನೂ ಪ್ರಕಟಿಸಬೇಕು.
ಕೇಂದ್ರ ಸರ್ಕಾರವೇನು ಮಾಡಿದೆ?
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೋಮವಾರ “ಇಂಡಿಯನ್ ಸ್ಟಾಂಡರ್ಡ್ 19000:2022, ಆನ್‌ಲೈನ್ ಕನ್ಸೂಮರ್ಸ್ ರಿವ್ಯೂಸ್-ಪ್ರಿನ್ಸಿಪಲ್ಸ್ ಆ್ಯಂಡ್ ರಿಕ್ವೆ„ರಿಮೆಂಟ್ಸ್ ಫಾರ್ ದೇರ್ ಕಲೆಕ್ಷನ್, ಮಾಡರೇಶನ್ ಆ್ಯಂಡ್ ಪಬ್ಲಿಕೇಶನ್ ಎಂಬ ಫ್ರೆàಮ್‌ವರ್ಕ್ ರೂಪಿಸಿದೆ. ಸದ್ಯ ಇದು ಕಂಪೆನಿಗಳಿಗೆ ಐಚ್ಚಿಕವಾಗಿದೆ. ಮುಂದಿನ ದಿನಗಳಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ.