Udayavni Special

ಮಾ. 7ರಂದು ವಿಶ್ವ ಮಹಿಳಾ ದಿನಾಚರಣೆ


Team Udayavani, Mar 6, 2021, 7:40 PM IST

ಮಾ. 7ರಂದು ವಿಶ್ವ ಮಹಿಳಾ ದಿನಾಚರಣೆ

ಟೊರೊಂಟೊ: ಕನ್ನಡ ಸಂಘದ ವತಿಯಿಂದ ಮಾ. 7ರಂದು ಬೆಳಗ್ಗೆ 10ರಿಂದ ವಿಶ್ವ ಮಹಿಳಾ ದಿನಾಚರಣೆ ನಡೆಯಲಿದೆ.

ಮಿಸ್ಸಿಸ್ಸಾಗ ಮೇಯರ್‌ ಬೋನಿ ಕ್ರಾಂಬಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಚಂದ್ರ ಆರ್ಯ ಉಪಸ್ಥಿತರಿರುವರು. ಪ್ರಸಿದ್ಧ ಕಲಾವಿದರಾದ ಮಾಳವಿಕಾ ಅವಿನಾಶ್‌, ಕೆನಡಾದ ಆರ್ಡರ್‌ ಆಫ್ ಕೆನಡಾ ಪ್ರಶಸ್ತಿ ವಿಜೇತ ಕನ್ನಡಿಗರಾದ ಲತಾ ಪಾದ ಹಾಗೂ ಕನ್ನಡ ಬ್ಲಾಗ್‌ ಖ್ಯಾತಿಯ ಪ್ರಜ್ಞಾ  ಜೈನ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಜೂಮ್‌, ಫೇಸ್‌ಬುಕ್‌ ಹಾಗೂ @kstoronto ನಲ್ಲಿ ನೇರಪ್ರಸಾರ ಮಾಡಲಾಗುವುದು.

ಮಾ. 13: ಗಮಕ  ಕಲಾ ವೇದಿಕೆಯಿಂದ  ಕಾವ್ಯ ವಾಚನ  :

ಉತ್ತರ ಅಮೆರಿಕ: ಗಮಕ ಕಲಾ ವೇದಿಕೆ ವತಿಯಿಂದ ಮಾ. 13ರಂದು ಕಾವ್ಯ ವಾಚನ ಕಾರ್ಯಕ್ರಮ ನಡೆಯಲಿದೆ. ಕ್ಯಾಲಿಫೋರ್ನಿಯಾದಲ್ಲಿ ಅಪರಾಹ್ನ 4 ಗಂಟೆಗೆ ಪಾಶುಪತಾಸ್ತ್ರ ಪ್ರದಾನ ಕಾವ್ಯವಾಚನದಲ್ಲಿ ಗಮಕಿ ರಾಮಪ್ರಸಾದ್‌ ಕೆ.ವಿ., ವ್ಯಾಖ್ಯಾನಕಾರರಾದ ಗಣೇಶ್‌ ಶರ್ಮಾ ತ್ಯಾಗಲಿ ಪಾಲ್ಗೊಳ್ಳಲಿದ್ದಾರೆ. ಟೊರೊಂಟೊದಲ್ಲಿ  ರಾತ್ರಿ 7 ಗಂಟೆಗೆ ಕರ್ಣಾಟಭಾರತ ಕಥಾಮಂಜರಿಯ ಕಿರಾತಾರ್ಜುನೀಯ ಕಾವ್ಯ ವಾಚನದಲ್ಲಿ ಗಮಕಿ ಗೀತಾ ದತ್ತಾತ್ರಿ, ವ್ಯಾಖ್ಯಾನಕಾರರಾದ ಯಲ್ಲೇಶ್‌ಪುರ ದತ್ತಾತ್ರಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಫೇಸ್‌ಬುಕ್‌ bit.ly/gamakafb , ಯುಟ್ಯೂಬ್‌ ಚಾನೆಲ್‌ bit.ly/gamaka ನಲ್ಲಿ ನೇರ ಪ್ರಸಾರವಾಗಲಿದೆ.

ಮಾ. 20ರಂದು ಕೆಎಸ್‌ಟಿ ಚೆಸ್‌ ಚಾಂಪಿಯನ್‌ಶಿಪ್‌ :

ಟೊರೊಂಟೊ: ಕನ್ನಡ ಸಂಘದ ವತಿಯಿಂದ ಕೆಎಸ್‌ಟಿ ಚೆಸ್‌ ಚಾಂಪಿಯನ್‌ಶಿಪ್‌ ಮಾ. 20ರಂದು ಶನಿವಾರ ಬೆಳಗ್ಗೆ 10.30(ಇಎಸ್‌ಟಿ)ರ ಅನಂತರ ಆನ್‌ಲೈನ್‌ನಲ್ಲಿ ನಡೆಯಲಿದೆ. ಮೂರು ವಿಭಾಗಗಳಲ್ಲಿ ಅಂದರೆ 11 ವರ್ಷದೊಳಗಿನ, 11- 15ವರ್ಷದೊಳಗಿನ ಮತ್ತು 16 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಮಾ. 13ರೊಳಗೆ ನೋಂದಣಿ ಮಾಡಿಕೊಳ್ಳಬಹುದು. ಸಂಘದ ಸದಸ್ಯರಿಗೆ ಉಚಿತ ನೋಂದಣಿಯಾಗಿದ್ದು, ಉಳಿದವರಿಗೆ 5 ಡಾಲರ್‌ ಶುಲ್ಕ ವಿಧಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲೂ ಮೂರು ಪ್ರಶಸ್ತಿಗಳಿದ್ದು ಇದು ಸರ್ಟಿಫಿಕೇಟ್‌, ಟ್ರೋಫಿ ಅಥವಾ ಮೆಡಲ್‌ ಮತ್ತು ಅಸ್ಟ್ರೋ ಚೆಸ್‌ನಿಂದ ಎಲ್ಲ ವಯೋಮಾನದವರಿಗೆ ಮೂರು ಉಚಿತ ತರಗತಿಗಳು ನಡೆಯಲಿವೆ. ನೋಂದಣಿ ಮಾಡಿದ ಎಲ್ಲರಿಗೂ ಮಾ. 14ರಂದು ಬೆಳಗ್ಗೆ 10.30 (ಇಎಸ್‌ಟಿ)ಕ್ಕೆ  ಪ್ರಾತ್ಯಕ್ಷಿಕೆ ನಡೆಸಲಾಗುವುದು. ಆನ್‌ಲೈನ್‌ ಚೆಸ್‌ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲಿಚ್ಛಿಸುವ ಅಭ್ಯರ್ಥಿಗಳು ನೋಂದಣಿ ಮತ್ತು ಇತರ ಮಾಹಿತಿಗಾಗಿ ಸಂಘದ ವೆಬ್‌ಸೈಟ್‌ http://www.kannadasanghatotonto.org/upcoming-events/ ಅನ್ನು ನೋಡಬಹುದು.

 ಮಾ. 20ರಂದು  ಸಾಂಸ್ಕೃತಿಕ ಸಂಜೆ ;

ಕ್ವೀನ್ಸ್‌ಲ್ಯಾಂಡ್‌: ಇಲ್ಲಿನ ಕನ್ನಡ ಸಂಘವು ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಮಾ. 20ರಂದು ಸಂಜೆ 5 ಗಂಟೆಗೆ ಕೂರ್ಪಾರೊ ಸೆಕೆಂಡರಿ ಕಾಲೇಜಿನಲ್ಲಿ  ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಕೇವಲ ಮನರಂಜನೆಯ ಉದ್ದೇಶದಿಂದ ಸಂಗೀತ, ನೃತ್ಯ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಾ. 13ರಂದು “ಶ್ರೀ ರಾಮ ಪ್ರತೀಕ್ಷೆ’ ನೃತ್ಯರೂಪಕ ಪ್ರದರ್ಶನ :

ವಾಷಿಂಗ್ಟನ್‌:  ಅಟ್ಲಾಂಟ ಅನಂತಾಡಿ ರಾಯರ ಮಠದ  ನೇತೃತ್ವದಲ್ಲಿ ಕರ್ನಾಟಕದ ಕಲಾವಿದರನ್ನು ಬೆಂಬಲಿಸುವ ಸಲುವಾಗಿ  ಅಮೆರಿಕದ ವಿವಿಧ ಸಂಸ್ಥೆಗಳೊಂದಿಗೆ ಕಾವೇರಿ ಕನ್ನಡ ಸಂಘದ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಪ್ರಭಾತ್‌ ಕಲಾವಿದರಿಂದ “ಶ್ರೀ ರಾಮ ಪ್ರತೀಕ್ಷೆ’ ನೃತ್ಯ ರೂಪಕ ಪ್ರದರ್ಶನ ಮಾ. 13ರಂದು ರಾತ್ರಿ 8 ಗಂಟೆಗೆ ವರ್ಚುವಲ್‌ ಮೂಲಕ ನಡೆಯಲಿದೆ.

ಮಾ. 21: ಧರ್ಮೇಂದ್ರ ಕುಮಾರ್‌ ಅವರೊಂದಿಗೆ ಸಂವಾದ :

ಇಂಗ್ಲೆಂಡ್‌:  ಕನ್ನಡಿಗರು ಯುಕೆ ವತಿಯಿಂದ ಧರ್ಮೇಂದ್ರ ಕುಮಾರ್‌ ಅವರೊಂದಿಗೆ ಸಂವಾದ ಕಾರ್ಯಕ್ರಮ ಮಾ. 21ರಂದು  ಬೆಳಗ್ಗೆ 11.30 (ಬಿಎಸ್‌ಟಿ), ಸಂಜೆ 5 (ಐಎಸ್‌ಟಿ) ಗಂಟೆಗೆ ವರ್ಚುವಲ್‌ ಮೂಲಕ ನಡೆಯಲಿದೆ. ಈ ಸಂದರ್ಭ ದಲ್ಲಿ  ಮೈಸೂರಿನ ಕಥೆಗಳು  ಕುರಿತು ಅವರು ಮಾತನಾಡಲಿದ್ದಾರೆ. ಜೂಮ್‌ ಮೂಲಕ ನಡೆಯುವ ಕಾರ್ಯಕ್ರಮವನ್ನು ಫೇಸ್‌ಬುಕ್‌, ಯುಟ್ಯೂಬ್‌ನಲ್ಲಿ ನೇರಪ್ರಸಾರ  ಮಾಡಲಾಗುವುದು.

ನಾಳೆ ಚಿಣ್ಣರ  ಪ್ರತಿಭಾ ಕಾರಂಜಿ :

ಫ್ರಾಂಕ್‌ಫ‌ರ್ಟ್‌:  ರೈನ್‌ಮೈನ್‌ ಕನ್ನಡ ಸಂಘ, ಇ.ವಿ. ಫ್ರಾಂಕ್‌ಫ‌ರ್ಟ್‌ ವತಿಯಿಂದ ಕನ್ನಡ ಕಲಿ 25ನೇ ಸಪ್ತಾಹದ ಸಂಭ್ರಮ ಮಾ. 7ರಂದು 10.30 (ಸಿಇಟಿ) ಕ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಕಲಿ 2ರಿಂದ 5 ವರ್ಷದ ಚಿಣ್ಣರ ಪ್ರತಿಭಾ ಕಾರಂಜಿಯನ್ನು ವರ್ಚುವಲ್‌ ಮೂಲಕ ಆಯೋಜಿಸಲಾಗಿದೆ.

ಟಾಪ್ ನ್ಯೂಸ್

Article on School days memories – College Campus

ಮಳೆಯ ದಿನಗಳ ಶಾಲಾ ನೆನಪುಗಳು ಮಜಬೂತಾಗಿದ್ದವು..!

tried to smuggle gold by concealing in his worn socks

ಮಂಗಳೂರು: ಸಾಕ್ಸ್ ಒಳಗೆ ಅರ್ಧ ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿದ ಪ್ರಯಾಣಿಕ ವಶಕ್ಕೆ

india/7th-pay-commission-central-govt-employees-salary-da

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ದೊಡ್ಡ ಪ್ರಮಾಣದಲ್ಲಿ ಡಿಎ ಏರಿಕೆ ಮಾಡಿದ ಸರ್ಕಾರ

Tulu film director Raghu shetty passed away

ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ನಿಧನ

Rahul appeals to state govt to provide all help to bereaved families

ರಾಯ್ ಪುರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : ಮೃತರ ಕುಟುಂಬಗಳಿಗೆ ರಾಹುಲ್ ಸಂತಾಪ

ಮತ್ತೊಂದು ಪ್ರತಿಷ್ಠಿತ ಕಂಪೆನಿಗೆ ರಶ್ಮಿಕಾ ಮಂದಣ್ಣ ರಾಯಭಾರಿ

ಮತ್ತೊಂದು ಪ್ರತಿಷ್ಠಿತ ಕಂಪೆನಿಗೆ ರಶ್ಮಿಕಾ ಮಂದಣ್ಣ ರಾಯಭಾರಿ

ಕೋವಿಡ್ ಸೋಂಕು ಸಮುದಾಯಕ್ಕೆ ಹರಿಡಿದೆ, ವಿಶೇಷ ಕ್ರಮದ ಅವಶ್ಯಕತೆಯಿದೆ: ಸುಧಾಕರ್

ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿದೆ, ವಿಶೇಷ ಕ್ರಮದ ಅವಶ್ಯಕತೆಯಿದೆ: ಸುಧಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajesh Bangera, a state-level footballer, has passed away

ರಾಜ್ಯಮಟ್ಟದ ಫುಟ್‌ಬಾಲ್‌ ಆಟಗಾರ ರಾಜೇಶ್‌ ಬಂಗೇರ ನಿಧನ

“Guidelines for the Control of covid Needed”

“ಕೋವಿಡ್‌ ನಿಯಂತ್ರಣಕ್ಕೆ ಮಾರ್ಗಸೂಚಿಗಳ ಪಾಲನೆ ಅಗತ್ಯ’

Each festival has its own essence

ಪ್ರತಿಯೊಂದು ಹಬ್ಬದಲ್ಲೂ ತುಳುನಾಡಿನ ಸಾರವಿದೆ: ಮಹೇಶ್‌ ಎಸ್‌. ಶೆಟ್ಟಿ

Utilize auto, taxi driver service

ಆಟೋ, ಟ್ಯಾಕ್ಸಿ ಚಾಲಕರ ಸೇವೆ ಬಳಸಿಕೊಳ್ಳಿ

Shree Shanishwara Mandir

ಮೀರಾರೋಡ್‌ ಶ್ರೀ ಶನೀಶ್ವರ ಮಂದಿರ: ವಿಶೇಷ ಪೂಜೆ, ಗೌರವಾರ್ಪಣೆ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

Robbery

ಖಾರದ ಪುಡಿ ಎರಚಿ, 16 ಲಕ್ಷ ದರೋಡೆ: ಸೆರೆ

School for doorstep

ಮನೆ ಬಾಗಿಲಿಗೆ ಶಾಲೆ ಯೋಜನೆಗೆ ಚಾಲನೆ

Outrage of private buses for KSARTC traffic

ಕೆಎಸ್ಸಾರ್ಟಿಸಿ ಓಡಾಟಕ್ಕೆ ಖಾಸಗಿ ಬಸ್‌ಗಳ ಆಕ್ರೋಶ

ಕಾಂಗ್ರೆಸ್ ಪಕ್ಷ ಸೇರಿದ ಜೆಡಿಎಸ್ ಮಾಜಿ ಶಾಸಕ ಕೆ.ರಾಜು

ಕಾಂಗ್ರೆಸ್ ಪಕ್ಷ ಸೇರಿದ ಜೆಡಿಎಸ್ ಮಾಜಿ ಶಾಸಕ ಕೆ.ರಾಜು

Article on School days memories – College Campus

ಮಳೆಯ ದಿನಗಳ ಶಾಲಾ ನೆನಪುಗಳು ಮಜಬೂತಾಗಿದ್ದವು..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.