ಲೂನಾರ್ ವಾಕ್ಮೇಟ್ ಪೋರ್ಟಲ್ಗೆ ನಟ ಉಪೇಂದ್ರ ಚಾಲನೆ
Team Udayavani, Nov 18, 2021, 10:14 AM IST
ಬೆಂಗಳೂರು: ಲೂನಾರ್ ವಾಕ್ ಮೇಟ್ ಮೊದಲ ಬಾರಿಗೆ ತನ್ನ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಇದರನ್ವಯ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಲೂನಾರ್ ವಾಕ್ವೆುàಟ್ನ ನೂತನ ಆನ್ಲೈನ್ ಪೋರ್ಟಲ್ (ವೆಬ್ ಸೈಟ್)ಗೆ ಚಾಲನೆ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಲೂನಾರ್ ವಾಕ್ ಮೇಟ್ ಕಂಪನಿಯವರು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ವಾಕ್ ಮೇಟ್ ಉತ್ಪಾದಿಸಿದ ಆತ್ಯಾಕರ್ಷದ ಹೊಸ ಡಿಸೈನ್ ಫುಟ್ವೇರ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಮಾತನಾಡಿದರು. ಸುಮಾರು 15 ವರ್ಷಗಳಿಂದ ಲೂನಾರ್ ವಾಕ್ ಮೇಟ್ ಕಂಪನಿ ಜತೆಗೆ ಅವಿನಾಭಾವ ಸಂಬಂಧವಿದೆ. ಉತ್ತಮ ಗುಣಮಟ್ಟದ ಫುಟ್ವೇರ್ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:- ಕೇಂದ್ರ ಸರ್ಕಾರವು ಉಗ್ರರ ಹೆಸರಿನಲ್ಲಿ ನಾಗರಿಕರನ್ನು ಕೊಲ್ಲುತ್ತಿದೆ: ಮೆಹಬೂಬಾ ಮುಫ್ತಿ
ಇದೇ ವೇಳೆ ಉಪೇಂದ್ರ ಅವರು ನಟಿಸಿದ ನೂತನ ಲೂನಾರ್ ವಾಕ್ವೆುàಟ್ ಫುಟ್ವೇರ್ ಜಾಹಿರಾತು ಬಿಡುಗಡೆಗೊಳಿಸಿದರು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಆನ್ಲೈನ್ ಮಯವಾಗಿದೆ. ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅನ್ಲೈನ್ ಬುಕ್ಕಿಂಗ್ ಮಾಡಿ, ಫುಟ್ವೇರ್ ಖರೀದಿಸಲು www.walkmate.co.in ಎಂಬ ಇ ಕಾಮರ್ಸ್ ಜಾಲತಾಣ ಅನಾವರಣ ಗೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು. ಲೂನಾರ್ ವಾಕ್ವೆುàಟ್ ಸಂಸ್ಥೆಯ ನಿರ್ದೇಶಕ ರೋಶನ್ ಬಾಸ್ಟಿಯನ್ ಸೇರಿದಂತೆ ಸದಸ್ಯರು ಹಾಜರಿದ್ದರು.
“ನಾನು ಲೂನಾರ್ ವಾಕ್ ಮೇಟ್ ಬ್ರ್ಯಾಂಡ್ ಅಂಬಾಸಿಡರ್ ಆದ ಆರಂಭದಲ್ಲಿ ಕೇವಲ 4-5 ವಿಧದ ಫುಟ್ವೇರ್ಗಳು ಇದ್ದವು. ಆದರೆ ಈಗ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಫುಟ್ವೇರ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಬಗೆ ಬಗೆಯ ಬಟ್ಟೆಗಳಿಗೆ ಸರಿಹೊಂದುವ ಡಿಸೈನ್ ಗಳನ್ನು ಉತ್ಪಾದಿಸಿದ್ದಾರೆ. ಇದು ಒಂದು ದೇಶಿಯ ಉತ್ಸನ್ನವಾಗಿದ್ದು, ಉತ್ತಮ ಗುಣಮಟ್ಟವನ್ನು ನೀಡುವುದರಿಂದ ನಾನು ಈ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದೇನೆ. ಈ ಸಂಸ್ಥೆ ಭಾರತದಲ್ಲಿ ಅಲ್ಲದೆ ಜಗತ್ತಿನಾಂದ್ಯಂತ ಹೆಸರು ಮಾಡಲಿ.” – ಉಪೇಂದ್ರ, ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ