ತಾರಕಾಸುರನಿಗೆ ಅಂಬರೀಶ್ ಸಾಥ್
Team Udayavani, Sep 4, 2018, 11:34 AM IST
ಕೆಲವು ದಿನಗಳ ಹಿಂದೆ “ತಾರಕಾಸುರ’ ಚಿತ್ರತಂಡ ತಮ್ಮ ಚಿತ್ರದ ಮೊದಲ ಹಾಡನ್ನು ಕರ್ನಾಟಕದ ಗಣ್ಯವ್ಯಕ್ತಿಯೊಬ್ಬರು ಬಿಡುಗಡೆ ಮಾಡುತ್ತಾರೆಂದು ಹೇಳಿತ್ತು. ಯಾರು ಎಂಬ ಪ್ರಶ್ನೆಗೆ ಉತ್ತರಿಸಿದೇ ಕುತೂಹಲ ಕಾಯ್ದಿರಿಸಿತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಅದು ಹಿರಿಯ ನಟ ಅಂಬರೀಶ್. ಹೌದು, “ತಾರಕಾಸುರ’ ಚಿತ್ರದ ಮೊದಲ ಹಾಡನ್ನು ಅಂಬರೀಶ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದು ನಾಯಕನ ಇಂಟ್ರೋಡಕ್ಷನ್ ಹಾಡಾಗಿದ್ದು, ಶಿವರಾಜಕುಮಾರ್ ಹಾಡಿದ್ದಾರೆ.
ಕವಿರಾಜ್ ಬರೆದ “ಕನ್ನಡ ಕಲಿಯೋ..’ ಎಂದು ಈ ಹಾಡನ್ನು ಆರಂಭವಾಗುತ್ತದೆ. ಚಿತ್ರವನ್ನು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸಿದ್ದು, ವೈಭವ್ ನಾಯಕರರಾಗಿದ್ದಾರೆ. ಧರ್ಮವಿಶ್ ಸಂಗೀತ ಚಿತ್ರಕ್ಕಿದೆ. ನರಸಿಂಹಲು ಈ ಚಿತ್ರದ ನಿರ್ಮಾಪಕರು.