- Saturday 14 Dec 2019
ಮಾರ್ಚ್ 3ಕ್ಕೆ ಅಂಬಿ ನಮನ
Team Udayavani, Jan 29, 2019, 5:43 AM IST
ಅಂಬರೀಶ್ ಅಗಲಿ ಎರಡು ತಿಂಗಳು ಕಳೆದಿದೆ. ಅವರ ಅಭಿಮಾನಿಗಳಲ್ಲಿ ಇನ್ನೂ ಆ ನೆನಪು ಮಾಸಿಲ್ಲ. ಹಲವು ಕಡೆಗಳಲ್ಲಿ ಅಂಬರೀಶ್ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಾಯಕನಿಗಾಗಿ ಒಂದಷ್ಟು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ. ಈಗ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲೂ ಸಹ ಅವರನ್ನು ನೆನಪಿಸಿಕೊಳ್ಳುವಂತಹ ದೊಡ್ಡ ಕಾರ್ಯಕ್ರಮ ನಡೆಸಲು ತಯಾರಿ ನಡೆಸಲಾಗುತ್ತಿದೆ.
ಹೌದು, ಅಂಬರೀಶ್ ಅವರ ಸ್ಮರಣಾರ್ಥ ಮಾರ್ಚ್ 3ರ ಭಾನುವಾರ ಸಂಜೆ 5.30ಕ್ಕೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ “ಅಂಬಿ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅಂಬರೀಶ್ ಅಭಿನಯದ ಆಯ್ದ ಜನಪ್ರಿಯ ಗೀತೆಗಳನ್ನು ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ನೇತೃತ್ವದಲ್ಲಿ ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ, ಗುರುಕಿರಣ್, ಮಂಜುಳಾ ಗುರುರಾಜ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದು, ಅಂಬರೀಶ್ ಅಭಿನಯದ ಆಯ್ದ ಗೀತೆಗಳಿಗೆ ಯುವ ಕಲಾವಿದರು ನೃತ್ಯ ಪ್ರದರ್ಶನವನ್ನು ಸಹ ನೀಡಲಿದ್ದಾರೆ.
ಸದ್ಯ ಈ ಕಾರ್ಯಕ್ರಮದ ರೂಪುರೇಷೆ ಮತ್ತು ತಯಾರಿಗೆ ಚಾಲನೆ ದೊರೆತಿದ್ದು, ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಮೂಡಿಬಂದಿರದ ರೀತಿಯಲ್ಲಿ ಅದ್ಧೂರಿಯಾಗಿ “ಅಂಬಿ ನಮನ’ ಕಾರ್ಯಕ್ರಮವನ್ನು ಆಯೋಜಿಸಲು “ಸಮರ್ಥನಂ ಅಂಗವಿಕಲರ ಸಂಸ್ಥೆ’ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ಶಿವರಾಮ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದು, ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಅಂಗವಿಕಲರ ಶ್ರೇಯೋಭಿವೃದ್ದಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಈ ಕುರಿತಂತೆ ವಿವರ ಕೊಡುವ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಹಿರಿಯ ನಟ ಶಿವರಾಮ್, “ಮೊದಲಿನಿಂದಲೂ ಅಂಬರೀಶ್ ಅವರು ಸಮರ್ಥನಂ ಸಂಸ್ಥೆಯ ಅನೇಕ ಕಾರ್ಯಗಳಲ್ಲಿ ನೆರವಾಗುತ್ತಿದ್ದರು. ಹಾಗಾಗಿ ಈಗ ಅವರ ಹೆಸರಿನಲ್ಲಿ “ಅಂಬಿ ನಮನ’ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಂಬರೀಶ್ ಅವರ ಕುಟುಂಬ ವರ್ಗ, ಅವರ ಅಭಿಮಾನಿಗಳು, ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಭಾಗವಹಿಸಲಿದ್ದಾರೆ.
ಮೊದಲು ಈ ಕಾರ್ಯಕ್ರಮವನ್ನು ಬೇರೆ ಕಡೆ ಮಾಡುವ ಯೋಜನೆಯಿತ್ತು. ಆದರೆ ಹೆಚ್ಚು ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಅಂತಿಮವಾಗಿ ಇದನ್ನು ಬೆಂಗಳೂರಿನಲ್ಲೇ ನಡೆಸಲು ಯೋಜಿಸಲಾಗಿದೆ’ ಎಂಬ ಮಾಹಿತಿ ಕೊಡುತ್ತಾರೆ ಅವರು. ಅಂದಹಾಗೆ, “ಅಂಬಿ ನಮನ’ ಕಾರ್ಯಕ್ರಮದ ಸ್ವರೂಪ ಕುರಿತಂತೆ ಇಷ್ಟರಲ್ಲೇ ಇನ್ನಷ್ಟು ಮಾಹಿತಿ ನೀಡುವುದಾಗಿ ಹೇಳುತ್ತಾರೆ ಅವರು.
ಈ ವಿಭಾಗದಿಂದ ಇನ್ನಷ್ಟು
-
ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ...
-
ಬೆಂಗಳೂರು: ಸ್ಯಾಂಡಲ್ ವುಡ್ ನ ಬ್ಲಾಕ್ ಬಾಸ್ಟರ್ ಚಿತ್ರ ಕೆಜಿಎಫ್ ನ ಎರಡನೇ ಭಾಗಕ್ಕೆ ದೇಶದ ಜನ ಕಾತರಿಸುತ್ತಿದ್ದಾರೆ. ಕೆಜಿಎಫ್ ನ ಮೊದಲ ಭಾಗ ಬಿಡುಗಡೆಯಾಗಿ ಒಂದು...
-
ಸಲ್ಮಾನ್ ಖಾನ್ ನಾಯಕರಾಗಿರುವ "ದಬಾಂಗ್-3' ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿರೋದು ಗೊತ್ತೇ ಇದೆ. ಚಿತ್ರದಲ್ಲಿ ಬಲ್ಲಿ ಸಿಂಗ್ ಎಂಬ ಪಾತ್ರದಲ್ಲಿ...
-
"ದುನಿಯಾ' ವಿಜಯ್ ಇದೇ ಮೊದಲ ಬಾರಿಗೆ "ಸಲಗ' ಚಿತ್ರ ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಅವರ ಮೊದಲ ನಿರ್ದೇಶನದ ಚಿತ್ರ ಆಗಿರುವುದರಿಂದ ಎಲ್ಲರಿಗೂ ನಿರೀಕ್ಷೆ...
-
ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ "ಲಕ್ಷ್ಯ' ಚಿತ್ರದ ಎರಡು ಲಿರಿಕಲ್ ಹಾಡುಗಳು ಮತ್ತು ಮೋಶನ್ ಪೋಸ್ಟರ್ ಅನ್ನು ನಟ ಅನಿರುದ್ಧ್ ಇತ್ತೀಚೆಗೆ...
ಹೊಸ ಸೇರ್ಪಡೆ
-
ಬಾಗಲಕೋಟೆ: ನಮ್ಮದು ರಾಷ್ಟ್ರೀಯ ಪಕ್ಷ. ನಿಂತ ನೀರಲ್ಲ. ಹರಿಯುವ ನೀರು. ಹರಿಯುವ ನೀರಿನಲ್ಲಿ ಹೊಸ ನೀರು ಸೇರುವುದು ಸ್ವಾಭಾವಿಕ. ಶೀಘ್ರವೇ ಇನ್ನೂ ಹಲವು ಶಾಸಕರು ಬಿಜೆಪಿಗೆ...
-
ತಿರುಮಲ: ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಸಮೀಪ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದೆ. ದೇಗುಲ ಬಳಿ...
-
ಬೆಂಗಳೂರು: ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಜನರ ಬೇಡಿಕೆಯೇ ಹೊರತು ನಾನು ಎಲ್ಲಿಯೂ ಈ ಬಗ್ಗೆ ಮಾತನಾಡಿಲ್ಲ. ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಯಾರಿಗೆ...
-
ರಾಯಚೂರು: ಮುಂದಿನ ಐದು ವರ್ಷಗಳಲ್ಲಿ ಕಲ್ಲಿದ್ದಲು ಆಮದು ಸಂಪೂರ್ಣ ನಿಲ್ಲಿಸಿ ಸ್ವಾವಲಂಬನೆ ಸಾ ಧಿಸಲಾಗುವುದು ಎಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ಪತ್ರಕರ್ತರೊಂದಿಗೆ...
-
ಹೊಸದಿಲ್ಲಿ: ನೀವು ತಿನ್ನುವ, ಖರೀದಿಸಿದ ಆಹಾರದ ಮೇಲೆ ಸಂಶಯವಿದೆಯೇ? ಹಾಗಿದ್ದರೆ ತಡ ಬೇಡ. ಇನ್ನು ಅಧಿಕೃತ ಆಹಾರ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಖರ್ಚು ವೆಚ್ಚಗಳಿಲ್ಲದೇ...