ಅದ್ಧೂರಿ ಸೆಟ್ ನಲ್ಲಿ ‘ಭೀಮ’ನ ಆಟ
Team Udayavani, May 13, 2023, 5:19 PM IST
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ “ಭೀಮ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಈಗ ವಿಶೇಷವಾದ ಸೆಟ್ ಹಾಕಿ ಚಿತ್ರೀಕರಿಸುತ್ತಿದೆ.
ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾದ ಸೆಟ್ ನಿರ್ಮಾಣ ಮಾಡಲಾಗಿದ್ದು, ಸಿನಿಮಾದ ಪ್ರಮುಖ ಆಕರ್ಷಣೆಯಲ್ಲಿ ಈ ಸೆಟ್ ಕೂಡಾ ಒಂದು. ಪಬ್ ಸೆಟ್ ಕೂಡಾ ಹಾಕಲಾಗಿದ್ದು, ಇಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ಇನ್ನು, ಚಿತ್ರದಲ್ಲಿ ರಂಗಾಯಣ ರಘು ಕೂಡಾ ನಟಿಸುತ್ತಿದ್ದು, “ಭೀಮ’ನಲ್ಲಿ ಈ ಇಬ್ಬರ ಕಾಂಬಿನೇಶನ್ ಹಿಟ್ ಆಗಲಿದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ. ಇನ್ನು, ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಚಿತ್ರದ ಫಸ್ಟ್‌ಲುಕ್ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.
ಇದನ್ನೂ ಓದಿ:ಕೊನೆಗೂ ಫಲಿಸದ ತಂತ್ರಗಾರಿಕೆ: ಲಿಂಗಾಯತ ಮತ ಗಳಿಕೆಯಲ್ಲಿ BJPಗೆ ನಷ್ಟ, ಕಾಂಗ್ರೆಸ್ ಗೆ ಲಾಭ…
ಅದರಲ್ಲೂ ಟೀಸರ್‌ನಲ್ಲಿರುವ ಮಾಸ್ ಡೈಲಾಗ್, ವಿಜಯ್ ಶೈಲಿ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿರುವುದು ಸುಳ್ಳಲ್ಲ.
ಅಂದಹಾಗೆ, “ಭೀಮ’ ಇದು ಕೂಡಾ ಒಂದು ಗಂಭೀರ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವಿಷಯವನ್ನಿಟ್ಟುಕೊಂಡು ಮಾಡುತ್ತಿದ್ದಾರೆ. ಈ ಕಥೆಗಾಗಿ ಸುಮಾರು ಎಂಟು ತಿಂಗಳಿಗೂ ಹೆಚ್ಚು ತಮ್ಮನ್ನು ವಿಜಯ್ ತೊಡಗಿಸಿಕೊಂಡು, ಎಲ್ಲವನ್ನು ಪಕ್ಕಾ ಮಾಡಿಕೊಂಡಿದ್ದಾರೆ. “ಸಲಗ’ದಲ್ಲಿ ಸಿಕ್ಕ ದೊಡ್ಡ ಯಶಸ್ಸು “ಭೀಮ’ನಲ್ಲಿ ಮುಂದುವರೆಯುವ ವಿಶ್ವಾಸ ವಿಜಯ್ ಅವರಿಗಿದೆ.
ಇನ್ನು, ಇತ್ತೀಚೆಗೆ ಬಿಡುಗಡೆಯಾಗಿರುವ “ಭೀಮ’ ಚಿತ್ರದ ಮೇಕಿಂಗ್ ವಿಡಿ ಯೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…