ಪುಸ್ತಕ ಓದುವ ಮೂಲಕ ಕ್ರೇಜಿ ಸ್ಟಾರ್ ಹುಟ್ಟುಹಬ್ಬ ಆಚರಿಸಿ
Team Udayavani, May 30, 2018, 10:55 AM IST
ಇವತ್ತು ರವಿಚಂದ್ರನ್ ಅವರ ಹುಟ್ಟುಹಬ್ಬ. ಅವರ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ “ಪಡ್ಡೆಹುಲಿ’ ಚಿತ್ರತಂಡವು ಸಜ್ಜಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಅವರು ಮೊದಲ ಬಾರಿಗೆ ಕನ್ನಡ ಸಾಹಿತ್ಯಾಭಿಮಾನಿ ಹಾಗೂ ಕನ್ನಡ ಪ್ರೊಫೆಸರ್ ಮಾತ್ರ ನಿರ್ವಹಿಸುತ್ತಿದ್ದಾರೆ.
ಪುಸ್ತಕ ಓದುವ ಹವ್ಯಾಸವನ್ನೇ ಕೈಬಿಟ್ಟಿರುವ ಯುವ ಜನತೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಜೊತೆಗೆ ಈ ಸಾರಿಯ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಒಂದು ಪುಸ್ತಕ ಓದುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಿ ಎಂದು “ಪಡ್ಡೆಹುಲಿ’ ಚಿತ್ರತಂಡವು, ರವಿಚಂದ್ರನ್ ಅವರ ಅಭಿಮಾನಿಗಳಿಗೆ ಕರೆ ನೀಡಿದೆ.
ಅಷ್ಟೇ ಅಲ್ಲ, ರವಿಚಂದ್ರನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆ 10 ಗಂಟೆಗೆ ರವಿಚಂದ್ರನ್ ಅವರ ಫಸ್ಟ್ಲುಕ್ ಟೀಸರ್ ಬಿಡುಗಡೆ ಮಾಡುತ್ತಿದೆ. “ಪಡ್ಡೆಹುಲಿ’ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಿಸಿದರೆ, ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೇಯಸ್, ನಿಶ್ವಿಕಾ ನಾಯ್ಡು, ರವಿಚಂದ್ರನ್, ಸುಧಾರಾಣಿ ಮುಂತಾದವರು ನಟಿಸುತ್ತಿದ್ದಾರೆ.